ಬಹುನೀರಿಕ್ಷಿತ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಈಗಷ್ಟೇ ಮುಗಿಗಿದೆ. ಫಲಿತಾಂಶಕ್ಕೆ ತಿಂಗಳು ಬಾಕಿಯಿದೆ. ರಾಜಕೀಯ ಪಂಡಿತರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ 15 ರಿಂದ 20 ಸ್ಥಾನ ಗೆಲ್ಲುವ ನೀರಿಕ್ಷೆಯಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದ ಬಿಜೆಪಿ ಈಗ ಈ ನೀರಿಕ್ಷೆಯಿಂದ ಉಸಿರಾಡುತ್ತಿದೆ. ಈ ಬದಲಾವಣೆಯಲ್ಲಿ ನಮೋ ಬ್ರಿಗೇಡ್ ಎಂಬ ಸಂಘಟನೆಯ ಪಾಲು ಬಹಳಷ್ಟಿದೆ ಎಂಬ ಮಾತನ್ನು ಬೌದ್ದಿಕವಾಗಿ ಬಲಾಡ್ಯರಾಗಿರುವರು ಒಪ್ಪಲೇ ಬೇಕಾದ ವಿಚಾರ.
ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂಬ ಗುರಿಯಿಟ್ಟು ಕೊಂಡು ಆರಂಭವಾದ ನಮೋ ಬ್ರಿಗೇಡ್ ತನ್ನ ನಿಸ್ವಾರ್ಥ ಸೇವೆಯಿಂದ ಕರ್ನಾಟಕದಲ್ಲಿ ನರೇಂದ್ರ ಮೋದಿ ಆಲೆಯನ್ನು ಸೃಷ್ಟಿ ಮಾಡಿತು ಎಂದರೆ ಅತಿಶಯೋಕ್ತಿಯಲ್ಲ. ಯಾವುದೇ ಸಂಘಟನೆಗೆ ಆದಿ ಇರುತ್ತದೆ. ಆದರೆ ಆದಿ ಮತ್ತು ಅಂತ್ಯ ಎರಡನ್ನು ಹೊಂದಿರುವ ವಿಶಿಷ್ಟ ಸಂಘಟನೆಯೆಂದರೆ ಅದು ನಮೋ ಬ್ರಿಗೇಡ್ ಮಾತ್ರ. ನಮೋ ಬ್ರಿಗೇಡ್ ನ ಅಂತ್ಯದ ಪರಿಕಲ್ಪನೆ ಬಹಳಷ್ಟು ಮಂದಿಗೆ ತಿಳಿದಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ನಮೋ ಬ್ರಿಗೇಡ್ ವಿಸರ್ಜಿತವಾಗುತ್ತದೆ. ಆದರೆ ನಮೋ ಬ್ರಿಗೇಡ್ ಆದಿಯ ನೈಜ ಸತ್ಯಗಳು ಮರೀಚಿಕೆಯಾಗಿಯೇ ಉಳಿದಿದೆ. ಕೆಲವರು ಮಿಥ್(ಕಟ್ಟು ಕತೆ) ಗಳನ್ನೇ ಸತ್ಯವೆಂದು ಭಾವಿಸಿದ್ದಾರೆ. ಆ ಅಸತ್ಯಗಳನ್ನು ಮರೆಮಾಚಿ ನೈಜ ಕತೆಯನ್ನು ಅನಾವರಣಗೊಳಿಸುವುದೇ ಈ ಲೇಖನದ ಆಶಯ.
ನಮೋ ಬ್ರಿಗೇಡ್ ಎಂಬ ವೃಕ್ಷದ ಬೇರು “Narendra Modi Fans from Karnataka” ಎಂಬ ಹೆಸರಿನ ಬೆಂಗಳೂರಿನ ಮೂಲದ ಫೇಸ್ಬುಕ್ ಪೇಜ್. ಅಂತರ್ಜಾಲದಲ್ಲಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಮಾಡಿದ ಅಭಿವೃದ್ದಿ, ಅವರ ನಾಯಕತ್ವ ಮುಂತಾದ ವಿಷಯಗಳನ್ನು ಕರ್ನಾಟಕದ ಜನರಿಗೇ ತಿಳಿಸಿಕೊಡುವುದು ಈ ಪೇಜ್ ನ ಉದ್ದೇಶವಾಗಿತ್ತು. ಈ ಪೇಜ್ ಮೊದಲು ಆರಂಭವಾಗಿದ್ದು ನವೆಂಬರ್ 17 2012 ರಂದು. ಪೇಜ್ ಆರಂಭಿಸಿದವರು ಚೇತನ್ ಕುಮಾರ್ ಎಂಬ ತರುಣ. ನಂತರ ಚೇತನ್ ಸ್ನೇಹಿತರಾದ ಅಜಿತ್ ಶೆಟ್ಟಿ ಮತ್ತು ಶ್ರೀಕಾಂತ್ ಹುದ್ದರ್ ಇದಕ್ಕೆ
ಕೈ ಜೋಡಿಸಿದರು.
ತಳಮಟ್ಟದಲ್ಲಿ ನರೇಂದ್ರ
ಮೋದಿಯವರ ಕುರಿತು ಜಾಗೃತಿ ಮೂಡಿಸಬೇಕೆಂಬ ಕಲ್ಪನೆ ಮೊದಲು ಈ ಪೇಜ್ ಗೆ ಇರಲಿಲ್ಲ. ಆದರೆ ಕರ್ನಾಟಕದ
ವಿಧಾನಸಭೆಯ ಫಲಿತಾಂಶ ಈ ಚಿಂತನೆ ಗೆ ರೆಕ್ಕೆ ಪುಕ್ಕ ನೀಡಿತು. ವಿಧಾನಸಭೆಯ ಫಲಿತಾಂಶ ನಮೋ
ಬ್ರಿಗೇಡ್ ಹುಟ್ಟಲು ದಿಕ್ಸೂಚಿಯೆಂದೇ ವ್ಯಾಖ್ಯಾನಿಸಬಹುದು. 2013 ರ ಚುನಾವಣೆಯಲ್ಲಿ ಬಿಜೆಪಿ 60-70 ಸ್ಥಾನ
ಗಳಿಸಬಹುದೆಂಬ ನೀರಿಕ್ಷೆಯಿತ್ತು. ಆದರೆ ಎಲ್ಲರ ನೀರಿಕ್ಷೆ ತಲೆಕೆಳಗಾಯಿತು. ಬಿಜೆಪಿ ಹೀನಾಯವಾಗಿ
ಸೋತು ಕೇವಲ 40 ಸ್ಥಾನಗಳಿಸುವುದಕ್ಕೆ ಮಾತ್ರ ಸಾಧ್ಯವಾಯಿತು. ಈ
ಫಲಿತಾಂಶ ಆಧರಿಸಿ ವಿಶ್ಲೇಷಣೆ ಮಾಡಿದಾಗ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 3-4
ಸ್ಥಾನ ಗಳಿಸುವ ಸಾಧ್ಯತೆಯಿತ್ತು. ಬಿಜೆಪಿಯ ಒಳಜಗಳ, ಕಚ್ಚಾಟ ಮುಂತಾದವುಗಳಿಂದ ಜನ ಬೇಸತ್ತಿದ್ದರು.
ಇದನ್ನು ಅರಿತ Narendra Modi Fans from Karnataka ಪೇಜ್ ಸೃಷ್ಟಿಸಿದ ತಂಡ ಬಿಜೆಪಿ ಗೆ
ಪರ್ಯಾಯವಾಗಿ ಅಂತರ್ಜಾಲವನ್ನು ಬಿಟ್ಟು ತಳಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಯುವಕರನ್ನು
ಸಂಘಟಿಸಿಬೇಕೆಂದು ನಿಶ್ಚಯಿಸಿದರು. ಇದಕ್ಕೆ ನರೇಂದ್ರ ಮೋದಿವರನ್ನು ಪ್ರಧಾನಿಯಾಗಿಸಬೇಕೆಂದು ಸ್ಥಾಪಿತವಾಗಿದ್ದ ತೇಜಿಂದರ್
ಪಾಲ್ ಸಿಂಗ್ ಬಗ್ಗ ನೇತೃತ್ವದ ‘Modi’fied
India’, ‘ಶಂಖನಾದ’, ಮುಂತಾದ ಸಂಘಟನೆಗಳು ಬೆಂಬಲ ನೀಡಿದವು.
ಕರ್ನಾಟಕ
ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ದಿನವೇ(ಮೇ 8 2013) Narendra Modi Fans from Karnataka
ಫೇಸ್ಬುಕ್ ಪೇಜ್ ನಲ್ಲಿ “ ದೇಶಕ್ಕಾಗಿ ಕಾರ್ಯನಿರ್ವಹಿಸಲು ಪ್ರತಿ ಜಿಲ್ಲೆ, ತಾಲೂಕಗಳಿಂದ
ಸ್ವಯಂಸೇವಕರು ಬೇಕಾಗಿದ್ದಾರೆ. ಅಭಿವೃದ್ದಿಯಾದ ಮತ್ತು ಸುರಕ್ಷಿತ ಭಾರತವನ್ನು ಕಾಣಬಯಸುವರು
ನಮ್ಮೊಡನೆ ಕೈ ಜೋಡಿಸಿ” ಎಂಬ ಪೋಸ್ಟ್ ಹಾಕಲಾಯಿತು. ಈ ಪೋಸ್ಟ್ ಗೆ ನೀರಿಕ್ಷೆಗೂ ಮೀರಿ
ಪ್ರತಿಕ್ರಿಯೆಗಳು ಬಂದವು. ಕರ್ನಾಟಕದ ಪ್ರತಿ ಜಿಲ್ಲೆಯು ಸೇರಿ ಸುಮಾರು 300ಕ್ಕೂ ಹೆಚ್ಚು ಸಂದೇಶಗಳು ಬಂದವು. ಈ ಎಲ್ಲ
ಬೆಳವಣಿಗೆಗಳು ನಡೆದಾಗ ಇದರ ಹಿಂದೆ ಇದ್ದವರು ಮೂರು ಜನ ಮಾತ್ರ!
ಮೋದಿಯವರ
ಕೆಲಸ ಮಾಡಲು ನಮ್ಮಿಂದ ಯಾವುದೇ ಹಣ ಮುಂತಾದ ಸಹಾಯ ನೀವು ನೀರಿಕ್ಷಿಸಬಾರದು ಎಂಬ ಸಂದೇಶ ನೀಡಿದ
ನಂತರವೂ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಿಂದ ಪ್ರೇರಿತರಾದ ಚೇತನ್ ಮತ್ತು ಗೆಳಯರಿಗೆ
ಬೆಂಗಳೂರಿನಲ್ಲಿ ಇದೇ ರೀತಿ ತಳಮಟ್ಟದಲ್ಲಿ ಮೋದಿಯವರ ಕೆಲಸ ಮಾಡಲು ಉತ್ಸುಕರಾಗಿದ್ದ ರಾಮಕೃಷ್ಣ ಕುಲಕರ್ಣಿ
ಮತ್ತು ಆತನ ತಂಡದ ಪರಿಚಯವಾಯಿತು. ಇವರೆಲ್ಲ ಒಂದೆಡೆ ಸೇರಿ ಮುಂದಿನ ಯೋಜನೆಯ ಕುರಿತು ಚರ್ಚಿಸಲು
ಸಭೆ ಕರೆದರು. ಮೇ 12 2013 ರಂದು ನಡೆದ ಸಭೆಗೆ ಸೇರಿದ ಯುವಕರ ಸಂಖ್ಯೆ ಕೇವಲ ಐದು ಮಂದಿ ಮಾತ್ರ.
“ನಮೋ ಆರ್ಮಿ” ಎಂಬ ಹೆಸರಿಟ್ಟುಕೊಂಡು ಸಂಘಟನೆ ಹುಟ್ಟು ಹಾಕಬೇಕೆಂದು ಸಭೆಯಲ್ಲಿ
ನಿಶ್ಚಯಿಸಲಾಯಿತು. ಅದೇ ದಿನ ಒಂದು ಬ್ಲಾಗ್ ಆರಂಭಿಸಿ ನಮೋ ಆರ್ಮಿ ಯ ನೋಂದಣಿಯನ್ನು ಸಾಮಾಜಿಕ
ತಾಣಗಳಾದ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಆರಂಭಿಸಲಾಯಿತು.
ಈ ತಂಡ ಸಹಾಯ ಬಯಸಿ ರಾಜ್ಯದ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳನ್ನು ಭೇಟಿಯಾದರು ಆದರೆ ಅವರಿಂದ
ಯಾವುದೇ ಸಹಾಯ ದೊರಕಲಿಲ್ಲ. ಆದರೆ ವಿಚಲಿತರಾಗದೇ ಮುಂದಿನ ನಮೋ ಆರ್ಮಿಯ ಸಭೆ ಕರೆಯಲಾಯಿತು. ಮುಂದಿನ
ನಮೋ ಆರ್ಮಿ ಯ ಸಭೆಗೆ 20ಕ್ಕೂ ಹೆಚ್ಚು ಜನರು
ಸೇರಿದರು. ಈ ಸಭೆಯಲ್ಲಿ ಸಂಘಟನೆಯ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ನರೇಂದ್ರ ಮೋದಿಯವರನ್ನು
ಪ್ರಧಾನಿ ಮಾಡಬೇಕೆಂಬ ಆಶಯ ಹೊಂದಿದ್ದ ಬಹಳಷ್ಟು ತಂಡಗಳು ರಾಜ್ಯದ ವಿವಿದೆಡೆ ಹುಟ್ಟು
ಕೊಂಡಿದ್ದವು. ಉಡುಪಿ, ತುಮಕೂರು ಮುಂತಾದ ಕಡೆ
ತಂಡಗಳಿದ್ದವು. ಈ ತಂಡಗಳನ್ನು ಒಂದೆಡೆ ಸೇರಿಸಿ ನಮೋ ಆರ್ಮಿ ಎಂಬ
ಹೆಸರನ್ನು ಕೈ ಬಿಟ್ಟು ‘ನಮೋ ಬ್ರಿಗೇಡ್’ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು. Namobrigade.in ಎಂಬ ಅಧಿಕೃತ ವೆಬ್ ಸೈಟ್ ನನ್ನು ಪ್ರಾರಂಭಿಸಲಾಯಿತು.
2013 ರ ಜೂನ್ ತಿಂಗಳಲ್ಲಿ ನಮೋ ಬ್ರಿಗೇಡ್ ಅಧಿಕೃತವಾಗಿ ಆರಂಭಿಸಬೇಕೆಂದು ನಿರ್ಧರಿಸಲಾಯಿತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ವೇಳೆಗೆ ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಉದ್ಯಮಿ ನರೇಶ್ ಶೆಣೈ ನೇತೃತ್ವದ ತಂಡ ನಮೋ ಬ್ರಿಗೇಡ್ ಕೂಡಿಕೊಂಡಿದ್ದು ನಮೋ ಬ್ರಿಗೇಡ್ ಗೆ ಮತ್ತಷ್ಟು ಬಲ ಬಂದಿತು. ಜುಲೈ 14 ರಂದು ಬೆಂಗಳೂರಿನ ಜಯನಗರದ ರಾಷ್ಟ್ರೋತ್ತಾನ ಪರಿಷತ್ತು ಸಭಾಂಗಣದಲ್ಲಿ ಅಧಿಕೃತವಾಗಿ ನಮೋ ಬ್ರಿಗೇಡ್ ಉದ್ಘಾಟನೆಯಾಯಿತು. ಅದೇ ದಿನ ಮಿಸ್ ಕಾಲ್ ಮೂಲಕ ನಮೋ ಬ್ರಿಗೇಡ್ ನೋಂದಣಿ ಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ನೀರಿಕ್ಷೆಗೂ ಮೀರಿ 3 ಲಕ್ಷಕ್ಕೂ ಆಧಿಕ ಜನರು ಮಿಸ್ ಕಾಲ್ ನೀಡುವ ಮೂಲಕ ನಮೋ ಬ್ರಿಗೇಡ್ ಸದಸ್ಯರಾದರು.

ನಮೋ
ಬ್ರಿಗೇಡ್ ಅಧಿಕೃತವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾದ ನಂತರ ಜಮಖಂಡಿ, ಕೋಲಾರದಲ್ಲಿ ನಮೋ
ಬ್ರಿಗೇಡ್ ಶಾಖೆಗಳು ಆರಂಭವಾಯಿತು ಮೊದಲೇ ನಿರ್ಣಯಿಸಿದಂತೆ ನಮೋ
ಬ್ರಿಗೇಡ್ ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮುಂತಾದ ಹುದ್ದೆಗಳಿಗೆ ಅವಕಾಶವಿರಲಿಲ್ಲ. ಇಲ್ಲಿ ನರೇಂದ್ರ ಮೋದಿಯೋಬ್ಬರೇ
ಎಲ್ಲರಿಗೂ ನಾಯಕ . ಇದರ ಸಮಾನಮನಸ್ಕ ಸದಸ್ಯರ ಗುರಿ ಕೇವಲ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು.
ನಮೋ ಬ್ರಿಗೇಡ್ ಚಟುವಟಿಕೆಗಳ ಸಂವಹನಕ್ಕಾಗಿ ಒಂದು ಕಾರ್ಯಕಾರಿ ಸಮಿತಿ ರಚಿಸಲಾಯಿತು. ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಯವರು ನಮೋ ಬ್ರಿಗೇಡ್ ತಂಡದ ಕೋರಿಕೆಯ ಮೇರೆಗೆ ನಮೋ ಬ್ರಿಗೇಡ್ ಮಾರ್ಗದರ್ಶಕರಾದರು. ಹಿರಿಯರಾದ ನರೇಶ್ ಶೆಣೈ ನಮೋ ಬ್ರಿಗೇಡ್ ಸಂಚಾಲಕರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಚೇತನ್ ಕುಮಾರ್ ಮತ್ತು ರಾಮಕೃಷ್ಣ ಕುಲಕರ್ಣಿ ಸಹ ಸಂಚಾಲಕರಾದರು. ನೀರಜ್ ಕಾಮತ್, ಶಕುಂತಲಾ ಐಯ್ಯರ್, ಭರತ್ ಸೂರ್ಯಪ್ರಕಾಶ್, ವಿನಯ್ ಕೊಪ್ಪದ್, ಲಕ್ಷ್ಮೀಶ ಕೆ.ಎಸ್, ರಾಜೇಶ್ ರಾವ್, ಶ್ರೀಕಾಂತ್ ಹುದ್ದರ್ ನಮೋ ಬ್ರಿಗೇಡ್ ಕಾರ್ಯಕಾರಿ ಸಮಿತಿಯ ಸದಸ್ಯರಾದರು.
Narendra Modi Fans from Karnataka ಎಂಬ ಫೇಸ್ಬುಕ್ ಪೇಜ್ ನಿಂದ ಆರಂಭವಾದ ನಮೋ ಬ್ರಿಗೇಡ್ ಇಂದು ಹೆಮ್ಮರವಾಗಿ ಬೆಳೆದಿದೆ. 300 ಕ್ಕೂ ಹೆಚ್ಚು ನಮೋ ಬ್ರಿಗೇಡ್ ಶಾಖೆಗಳು ಭಾರತದಲ್ಲಿದೆ. ನಮೋ ಬ್ರಿಗೇಡ್ ಸಂಘಟನೆ ಎಂದು ಕರೆಯುವುದಕ್ಕಿಂತ ಅದನ್ನು ಆಂದೋಲನವೆಂದು ಕರೆಯುವುದು ಸೂಕ್ತವೆನಿಸುತ್ತದೆ. ರಾಜ್ಯದಲ್ಲಿ ನಮೋ ಬ್ರಿಗೇಡ್ ಯಶಸ್ವಿಯಾಗಲು ಕಾರಣ ನರೇಂದ್ರ ಮೋದಿಯವರು. ನರೇಂದ್ರ ಮೋದಿಯೇ ನಮೋ ಬ್ರಿಗೇಡ್ ನ ನಿಜವಾದ ಹೀರೋ. ನಮೋ ಪ್ರಧಾನಿಯಾಗಬೇಕೆಂಬ ಕನಸು ಕಂಡಿದ್ದ ಸಾವಿರಾರು ದೇಶಭಕ್ತರು ನಮೋ ಬ್ರಿಗೇಡ್ ಬೆಂಬಲಿಸಿದರು. ಯಾವುದೇ ಒಬ್ಬ ವ್ಯಕ್ತಿಯಿಂದ ಆಕರ್ಷಿತರಾಗಿ ಯಾರು ನಮೋ ಬ್ರಿಗೇಡ್ ಬೆಂಬಲಿಸಲಿಲ್ಲ. ನಮೋ ಬ್ರಿಗೇಡ್ ನ ಸಾವಿರಾರು ಕಾರ್ಯಕರ್ತರ ಆಕರ್ಷಣೆ ನರೇಂದ್ರ ಮೋದಿಯೆಂಬ ಅಪ್ರತಿಮ ದೇಶ ಭಕ್ತನೇ ಹೊರತು ಬೇರಾರು ಅಲ್ಲ.

ಬ್ರಿಗೇಡ್ ಕಾರ್ಯಕ್ಕಾಗಿ ಕೆಲಸ ತೊರೆದು ಬಹಳಷ್ಟು ಮಂದಿ ಹಗಲು ರಾತ್ರಿ ಅವಿರತವಾಗಿ
ದುಡಿದಿದ್ದಾರೆ. ನಮೋ ಬ್ರಿಗೇಡ್ ಗಾಗಿ ಸಾಲ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿದವರಿದ್ದಾರೆ. ಆದರೆ
ಬೀಸೋ ಗಾಳಿಯಲ್ಲಿ ತೂರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ನಮೋ ಬ್ರಿಗೇಡ್ ಗೆ ಅಂಟಿಕೊಂಡರು.
ಅವಕಾಶವಾದಿಗಳು ನಮೋ ಬ್ರಿಗೇಡ್ ಒಳಹೊಕ್ಕಿ ತಮ್ಮ ಸ್ವಾರ್ಥ ಸಾಧನೆಯ ಗುರಿಯನ್ನು ಈಡೇರಿಕೊಂಡರು. ಕೆಲವರು
ನಿಷ್ಠಾವಂತರನ್ನು ತುಳಿದರು. ಇನ್ನು ಕೆಲವರು ಮಿಥ್ ಗಳನ್ನು ಹುಟ್ಟುಹಾಕಿ ಅದನ್ನೇ ಸತ್ಯವೆಂದು
ಬಿಂಬಿಸಿದರು. ಭಾರತದ ಇತಿಹಾಸವೇ ಹಾಗೇ. ನಮಗೆ ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ನೇತಾಜಿ ಮತ್ತು
ಸಾವರ್ಕರ್ ರಂತ ಅಪ್ರತಿಮ ಹೋರಾಟಗಾರರಿಂದ. ಆದರೆ ನೆಹರು ಮತ್ತು ಗಾಂಧಿ ತಾವೇ ಭಾರತಕ್ಕೆ
ಸ್ವಾತಂತ್ರ್ಯ ಬರಲು ಕಾರಣವೆಂಬಂತೆ ಬಿಂಬಿಸಿಕೊಂಡರು. ಇದೇ ರೀತಿ ನಮೋ ಬ್ರಿಗೇಡ್ ತಂಡದ
ಯಶಸ್ಸನ್ನು ಕೆಲವರು ತಮ್ಮ ಹೆಸರಿಗೆ ಬರೆದುಕೊಂಡರು. ಆದರೂ ನಮೋ ಬ್ರಿಗೇಡ್ ಹಿಂದೆಬೀಳದೆ ತಾಯಿ
ಭಾರತೀಯ ಸೇವೆ ಸಲ್ಲಿಸಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ಖಚಿತವೆಂದು ಬಹಳಷ್ಟು
ಸಮೀಕ್ಷೆಗಳು ನುಡಿದಿವೆ. ನಮೋ ಬ್ರಿಗೇಡ್ ನ ಗುರಿ ಸಾಕಾರವಾಗುವ ದಿನಗಳು ಸನಿಹದಲ್ಲಿದೆ. ಮಿಥ್ ಗಳ
ಎದುರು ಸತ್ಯಕ್ಕೆ ಎಂದಿಗೂ ಜಯ. ಸತ್ಯದ ಅನಾವರಣ
ಆಗಬೇಕೆಲ್ಲವೇ? ಆ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿದ್ದೇನೆ.
ನರೇಂದ್ರ
ಮೋದಿ ಪ್ರಧಾನಿಯಾಗಲಿ..
ಭಾರತ
ಜಗದ್ಗುರುವಾಗಲಿ...
ವಂದೇಮಾತರಂ.
ರವಿತೇಜ ಶಾಸ್ತ್ರೀ
ರವಿತೇಜ ಶಾಸ್ತ್ರೀ
ವಿಶೇಷ ಸೂಚನೆ: ಈ ಎಲ್ಲವನ್ನು ಮೊದಲಿನಿಂದ ನೋಡಿ, ಅವಲೋಕಿಸಿ ಲೇಖನವನ್ನು ನಾನು ಬರೆದಿದ್ದೇನೆ. ಅಸತ್ಯ ಗಳಿಂತ ಸತ್ಯಕ್ಕೆ ಪ್ರಾಮುಖ್ಯತೆ ನೀಡಿದ್ದೇನೆ.
Gud wrk ravi...
ReplyDelete:) Good one Ravi :)
ReplyDeleteGood Warks
ReplyDeleteGood work ravi for bringing out the truth. Am proud to be part of this group.
ReplyDeletethank you Sandesh Bro
Deletenice
ReplyDeleteGood info
ReplyDeletegood work bro
ReplyDeletelike it bro...
ReplyDelete