Tuesday, April 15, 2014

ನಿಸ್ವಾರ್ಥ ಸೇವೆಯ ಅನುಭವಗಾಥೆ

ಬದುಕಿನ ಜಂಜಾಟದಲ್ಲಿ ಇನ್ ಮತ್ತು ಔಟ್ ಗಳದ್ದೇ ಕಾರುಬಾರು. ಬಹಳಷ್ಟು ಜನ ನಮ್ಮ ಬದುಕಿನೊಳಕ್ಕೆ ಪ್ರವೇಶಿಸುತ್ತಾರೆ, ಹೊರ ಹೊಗುತ್ತಾರೆ ಆದರೆ ನಮಗೆ ಹೊಂದುವ ಮತ್ತು ನಮ್ಮದೇ ಚಿಂತನೆ ಇರುವ ಜನರು ಬದುಕಿನಲ್ಲಿ ಸಿಗುವುದು ಬೆರಳಣಿಕೆಯಷ್ಟು ಜನ ಮಾತ್ರ. ನಾನು ಬಹಳಷ್ಟು ಸ್ನೇಹಿತರನ್ನು  ಕಂಡಿದ್ದೇನೆ ಆದರೆ ನನಗೆ ಸರಿಹೊಂದುವ ಸ್ನೇಹಿತರು ಸಿಕ್ಕಿದ್ದು ಅತಿ ವಿರಳ. ನಮೋ ಬ್ರಿಗೇಡ್ ಎಂಬ ಸಂಘಟನೆ ಕೊರತೆ ನೀಗಿಸಿತು ಎನ್ನಬಹುದು.
2012 ರಲ್ಲಿ ಮಾಯಾನಗರಿ ಬೆಂಗಳೂರಿಗೆ ನನ್ನ ಪ್ರವೇಶವಾಯಿತು. ಚಾರ್ಟರ್ಡ್ ಅಕೌಂಟೆನ್ಸಿ ಕೋರ್ಸ್ ಮಾಡಬೇಕೆಂಬ ಹಂಬಲ ನನ್ನನ್ನು ಬೆಂಗಳೂರಿಗೆ ಕರೆತಂದಿತು. ಕಚೇರಿ, ಕೋಚಿಂಗ್ ಕ್ಲಾಸ್ ಹೀಗೆ  ಮುಂತಾದ ಚಟುವಟಿಕೆಗಳು ನನ್ನ ಜೀವನವನ್ನು ಯಾಂತ್ರಿಕವಾಗಿ ಮಾಡಿಬಿಟ್ಟಿತು. ಬೆಳಿಗ್ಗೆ ಸೂರ್ಯ ಹುಟ್ಟುವ ಮುಂಚೆ ನನ್ನ ಕೊಟಡಿಯನ್ನು ಬಿಟ್ಟು ಹೊರಟರೇ ಮತ್ತೆ ಹಿಂದಿರುಗುವುದು ಸೂರ್ಯ ಮುಳುಗಿ ಬೆಂಗಳೂರಿನ ಅರ್ಧ ಜನ ಮಲಗಿದ ನಂತರವೇ. ಬಹುಮುಂದಿ ಬೆಂಗಳೂರಿಗರ  ಜೀವನವೇ ಹೀಗೆ. ಬದಲಾವಣೆ ಜಗದ ನಿಯಮವಲ್ಲವೇ. ಪರಿಸ್ಥಿತಿ ಅನುಗುಣವಾಗಿ ಬದಲಾಗಿ ಬದುಕುವುದು ಅವಶ್ಯಕ. ಇದರಂತೆ ನಾನು ಬದಲಾದೆ. ಒಂಟಿ ಜೀವನವೇ ಅಭ್ಯಾಸ ವಾಯಿತು.
ಆದರೆ ಈ ಜೀವನದಲ್ಲಿ ಕೃತಕ ಸುಖವಷ್ಟೇ ಸಿಗಲು ಸಾಧ್ಯ. ನಮೋ ಬ್ರಿಗೇಡ್ ಸಂಪರ್ಕ ಈ ಜೀವನವನ್ನು ಬದಲಿಸಿತು. ಆಗ ತಾನೇ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿತ್ತು. ಸ್ವಾಭಿಮಾನವೇ ಸತ್ತುಹೋಗಿ ಸೊರಗಿಹೋಗಿದ್ದ ಭಾರತಕ್ಕೆ ನರೇಂದ್ರ ಮೋದಿಯಂತಹ ಆಶಾಕಿರಣ ದ ಅವಶ್ಯಕತೆಯಿತ್ತು. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲೇಬೇಕೆಂದು ಟೊಂಕಕಟ್ಟಿ ನಿಂತಿದ್ದ ಯುವಪಡೆ ನಮೋ ಬ್ರಿಗೇಡ್ ನನ್ನನ್ನು ಆಕರ್ಷಿಸಿತು. ದೇಶಕ್ಕೆ ಏನಾದರೂ ಮಾಡಬೇಕೆಂಬ ಹಂಬಲ ಇದಕ್ಕೆ ಪುಷ್ಟಿ ನೀಡಿತು. ನಮೋ ಬ್ರಿಗೇಡ್ ಆರಂಭವಾಗಿದ್ದು ಜುಲೈ ೨೦೧೩ರಲ್ಲಿ. ಸಾಮಾಜಿಕ ತಾಣಗಳ ಮೂಲಕ ನಮೋ ಬ್ರಿಗೇಡ್ ಪರಿಚಯವಿತ್ತು. ಜುಲೈ ನಿಂದ ಅಕ್ಟೋಬರ್ ಆಡಿಟ್ ಪಿರಿಯಡ್ ಆಗಾಗಿ ಕಚೇರಿಯಲ್ಲಿ ಬಹಳಷ್ಟು ಕೆಲಸವಿತ್ತು. ನವೆಂಬರ್ ನಲ್ಲಿ ಪರೀಕ್ಷೆಯಿತ್ತು. ಆಗಾಗಿ ನಮೋ ಬ್ರಿಗೇಡ್ ಚಟುವಟಿಕೆಗಳಲ್ಲಿ ಭಾಗವಹಿಸಲು ಸಮಯ ಸಿಗಲಿಲ್ಲ.
ಡಿಸೆಂಬರ್ ನಲ್ಲಿ ಮೊದಲ ಬಾರಿ ನಮೋ ಭಾರತ್ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ಸಿಕ್ಕಿತು. ಚಕ್ರವರ್ತಿ ಸೂಲಿಬೆಲೆಯವರ ಬಹಳಷ್ಟು ಭಾಷಣಗಳನ್ನು ಕೇಳಿದ್ದೆ ಆದರೆ ನಮೋ ಭಾರತ್ ಭಾಷಣ ವಿಶೇಷವಾಗಿತ್ತು. ನಮೋ ಬ್ರಿಗೇಡ್ ನಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಅವರ ಭಾಷಣ ಕೇಳಿದ ಮೇಲೆ  ಮತ್ತಷ್ಟು ಗಟ್ಟಿಯಾಯಿತು. ಜನವರಿಯಲ್ಲಿ ಆರಂಭವಾದ ಕಮಿಟ್ಮೆಂಟ್ ಕಾರ್ಡ್ ವಿತರಣ ಅಭಿಯಾನದಲ್ಲಿ ಭಾಗವಹಿಸಿದೆ.
ಒಂಟಿ ಜೀವನದಿಂದ ರೋಸಿದ್ದ  ಮನಸ್ಸಿಗೆ ನಮೋ ಬ್ರಿಗೇಡ್ ಚಟುವಟಿಕೆಗಳು ಆನಂದ ನೀಡಿತು. ಶನಿವಾರ ಮತ್ತು ಭಾನುವಾರ ನಡೆಯುತ್ತಿದ್ದ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತಿತ್ತು. ನನಗೆ ಸಾಧ್ಯವಾದಷ್ಟು ದೇಶ ಸೇವೆ ಮಾಡುತ್ತಿದ್ದೇನೆಂಬ ಸಂತೃಪ್ತಿ ಮತ್ತಷ್ಟು ಸಂತಸ ನೀಡಿತು. ಯಾವುದೇ ಪಲಾಪಕ್ಷೆ ಇಲ್ಲದೇ ಮಾಡುವ ಕೆಲಸ ಮನಸ್ಸಿಗೆ ಅತೀವ ಸಂತೋಷವನ್ನು ನೀಡುತ್ತದೆ. ನಿಸ್ವಾರ್ಥ ಸೇವೆಯಲ್ಲಿರುವ ಸಂತೃಪ್ತಿ ಎಷ್ಟು ಹಣ ಸಿಕ್ಕರೂ ಸಿಗಲಾರದು. ಇದಕ್ಕೆ ನಮೋ ಬ್ರಿಗೇಡ್ ಸೇವೆಯೇ ಜ್ವಲಂತ ಉದಾಹರಣೆ. ನಮೋ ಬ್ರಿಗೇಡ್ ನ ಸಂಪರ್ಕಕ್ಕೆ ಬರುವ ಮುಂಚೆ ನನಗೆ ನನ್ನದೇ ಚಿಂತನೆಯಿರುವ ಸ್ನೇಹಿತರು ಯಾರು ಸಿಕ್ಕಿರಲಿಲ್ಲ. ಬಹಳಷ್ಟು ಸಿ.ಎ ವಿಧ್ಯಾರ್ಥಿಗಳು ಪರಿಚಯವಾದರೂ ಅವರ ಸ್ನೇಹ ಸಮಯ ಕಳೆಯುವುದಕ್ಕೆ ಸೀಮಿತವಾಗಿತ್ತು. ನಮೋ ಬ್ರಿಗೇಡ್ ಈ ಕೊರತೆ ನೀಗಿಸಿತು. ಬಹಳಷ್ಟು ಸ್ನೇಹಿತರ ಪರಿಚಯವಾಯಿತು. ಒಂದೇ ಸ್ಪಷ್ಟ ಗುರಿಗಾಗಿ ಅಸಂಖ್ಯಾತ ಯುವಕರನ್ನು ಒಟ್ಟುಗೂಡಿಸಿದ ಶ್ರೇಯ ನಮೋ ಬ್ರಿಗೇಡ್ ಗೆ ಸಲ್ಲಬೇಕು.ನಮೋ ಬ್ರಿಗೇಡ್ ನ ನಿಸ್ವಾರ್ಥ ಸೇವೆಯ ಅನುಭವದ ನೆನಪುಗಳು ಜೀವನವೆಂಬ ಪುಸ್ತಕದಲ್ಲಿ  ಮರೆಯಲಾರದ ಪುಟ ಸೇರಿದೆ.  ನಮೋ ಬ್ರಿಗೇಡ್ ಗುರಿ ಈಡೇರುವುದರಲ್ಲಿ ಸಂಶಯವಿಲ್ಲ. ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆಂಬ ಆಸೆಯಾಯಿತು. ಮನದಾಳದ ಸಂಗತಿಗಳು ಬರವಣಿಗೆಯ ರೂಪದಲ್ಲಿ ವ್ಯಕ್ತಪಡಿಸಿದಾಗ ನನಗೆ ಅತೀವ ಸಂತೋಷವಾಗುತ್ತದೆ. ಆಗಾಗಿ  ನಿಮ್ಮೊಡನೆ ಹಂಚಿಕೊಂಡೆ.
ತಾಳ್ಮೆಯಿಂದ ಓದಿದವರಿಗೆ ಧನ್ಯವಾದಗಳು.
ತಾಯಿ ಭಾರತೀಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲ ನಮೋ ಬ್ರಿಗೇಡ್ ಗೆಳಯರಿಗೂ ಧನ್ಯವಾದಗಳು.


ರವಿತೇಜ ಶಾಸ್ತ್ರೀ       

1 comment: