ಕೆಲವು ನಿಸ್ವಾರ್ಥಿ ಬಿಜೆಪಿ ಕಾರ್ಯಕರ್ತರ ಹಾಗೂ ನಮೋ ಅಭಿಮಾನಿಗಳ ಮನಸ್ಸಿನ
ತುಮುಲಗಳನ್ನು ನೋಡಿ ಒಂದು Management story ಯನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಮನಸ್ಸಾಗಿದೆ...
ಒಂದು ಊರಿನಲ್ಲಿ ತುಂಬಾ ಧನದಾಹಿಗಳಿದ್ದರು. ಒಂದು ದಿನ ದೇವಸ್ಥಾನಕ್ಕೆ ಅಭಿಷೇಕ
ಮಾಡಲು ಊರಿನ ಹಿರಿಯರ ಸಮ್ಮುಖದಲ್ಲಿ ನಿರ್ಧರಿಸಲಾಯಿತು. ಆ ಊರಿನ ಪ್ರತಿ ಮನೆಯಲ್ಲಿಯೂ ಹಸು ಇತ್ತು.
ಹಾಗಾಗಿ ಒಂದೊಂದು ಮನೆಯಿಂದ ಒಂದೊಂದು ಲೀಟರ್ ಹಾಲನ್ನು ಸಂಗ್ರಹಿಸಿ ಅಭಿಷೇಕ ಮಾಡಬೇಕೆಂದು
ನಿರ್ಧಾರ ಮಾಡಿದರು. ಹಾಗೂ ಊರ ದೇವಸ್ಥಾನದ ಮುಂದೆ ಹಾಲಿನ ಹಂಡೆ ಇಟ್ಟು ಎಲ್ಲರೂ ಹಾಲು ತಂದು
ಸುರಿಯಿರಿ ಎಂದು ಡಂಗೂರ ಸಾರಲಾಯಿತು.
ಮರು ದಿನ ಹಾಲಿನ ಹಂಡೆ ನೋಡಿದಾಗ ಹಂಡೆ ತುಂಬಾ ಬರಿ ನೀರೆ ತುಂಬಿಕೊಂಡಿತ್ತು!!
ಪ್ರತಿಯೊಬ್ಬರೂ ಮಾಡಿದ ಕೆಲಸ ಏನು ಗೊತ್ತಾ? ಎಲ್ಲರೂ ಹಾಲು ಸುರಿದಿರುತ್ತಾರೆ ನಾನೊಬ್ಬ ನೀರು
ಹಾಕಿದ್ರೆ ಏನು ಆಗಲ್ಲ.. ಹಾಲಿನ ಜೊತೆ ನೀರು ಮಿಶ್ರಣ ಆಗುತ್ತೆ ಅಂತ ಭಾವಿಸಿದ್ದರು.
ಗೆಳಯರೇ... ಈಗ ನಾವು ಮಾಡುತ್ತಿರುವ ಕೆಲಸವೂ ಆ ರೀತಿ ಆಗಬಾರದು. ಹೇಗೂ ನಮೋ
ಪ್ರಧಾನಿ ಆಗೋದು ಪಕ್ಕ ಆಗಿದೆ. ಮೀಡಿಯಾಗಳು ಸಮೀಕ್ಷೆಯ ಮೂಲಕ ಖಾತರಿಪಡಿಸಿವೆ. ನಾವು ......
ಕುಮಾರ್ ಅವರನ್ನೋ, ...... ಹೆಗಡೆಯನ್ನೋ, ........
ಕಟೀಲ್ ನನ್ನೋ, ..... ಸಿಂಹನನ್ನೋ ಸೋಲಿಸಿದ್ರೆ ನಮಗೆ ಏನು ನಷ್ಟ ಇಲ್ಲ.... ಈ ರೀತಿ ಯೋಚನೆ
ಮಾಡುವ ತುಂಬಾ ಜನರನ್ನು ನಾನು ನೋಡಿದ್ದೇನೆ. “ನನ್ನ ವೋಟ್ ನಿಂದ ಬಿಜೆಪಿ ಸೋಲಲ್ಲ” ಅನ್ನೋ ಎಷ್ಟೋ ಜನರನ್ನು ನಾನು ಮಾತನಾಡಿಸಿದ್ದೇನೆ.
ಅವರಿಗೆಲ್ಲ ಈ ಕತೆ ಹೇಳಿದ್ದೇನೆ. ಅದ್ದರಿಂದ ಗೆಳೆಯರೇ ನಾವು ಶುದ್ದ ಹಾಲನ್ನೇ ಹಾಕೋಣ..
ಜೈ ಹಿಂದ್..ಕೇಶವ್
ಸೂಚನೆ: ಈ ಕತೆ ಬರೆದವರು ಸ್ನೇಹಿತರಾದ ಕೇಶವ್. ನಾನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇನೆ ಅಷ್ಟೇ. ಇದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲ ಬೇಕು.
No comments:
Post a Comment