ಡಿಸೆಂಬರ್ 8 ರಂದು ಪ್ರಕಟವಾದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ದೇಶದಲ್ಲಿ ಬದಲಾವಣೆಯ ಗಾಳಿಬೀಸಿತು. 4 ರಾಜ್ಯಗಳಲ್ಲಿ ಬಿ.ಜೆ.ಪಿ ಪ್ರಚಂಡ ವಿಜಯ ಸಾಧಿಸಿದರೆ, ದಿಲ್ಲಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತಸಿಗದೇ ಅತಂತ್ರ ವಿಧಾನ ಸಭೆ ಸೃಷ್ಟಿಯಾಯಿತು. 70 ಕ್ಷೇತ್ರಗಳಲ್ಲಿ ಬಿ.ಜೆ.ಪಿ 32, ಎ.ಎ,ಪಿ 28 ಮತ್ತು ಇತರರು 2 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಆಡಳಿತರೂಢ ಕಾಂಗ್ರೆಸ್ ಕೇವಲ 8 ಕ್ಷೇತ್ರಗಳನ್ನು ಗಳಿಸಿ ಹೀನಾಯವಾಗಿ ಸೋತಿತು. ಬಿ.ಜೆ.ಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಮಧ್ಯಮಗಳು ಇದು ಆಮ್ ಆದ್ಮಿ ಪಕ್ಷದ ಗೆಲವು ಎಂದು ಎ.ಎ.ಪಿ ಮತ್ತು ಅರವಿಂದ್ ಕೆಜ್ರಿವಾಲ್ ನನ್ನು ಕೊಂಡಾಡಿತು. ಕೆಜ್ರಿವಾಲ್ ನಾನು ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಘೋಷಿಸಿದರು. ಆದರೆ ಮುಂದೆ ಅಧಿಕಾರದ ಆಸೆಗೆ ಮರುಳಾದ ಕೆಜ್ರಿವಾಲ್ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದರು. ದೇಶದಲ್ಲಿ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆಂದು ಪೊರಕೆ ಹಿಡಿದು ರಾಜಕೀಯಕ್ಕೆ ಬಂದ ಅರವಿಂದ್ ಕೆಜ್ರಿವಾಲ್ ತಮ್ಮ ಆದರ್ಶಗಳನ್ನು ಗಾಳಿಗೆ ತೂರಿದರು. ಆದರೆ ಮಾಧ್ಯಮಗಳು ಎ.ಎ.ಪಿ ಗುಣಗಾನ ಮಾಡುವುದನ್ನು ನಿಲ್ಲಿಸಲಿಲ್ಲ. ಎ.ಎ.ಪಿ ಸರ್ಕಾರ ರಚಿಸಿದ್ದು ದೇಶದ ರಾಜಕೀಯ ಕ್ರಾಂತಿಯೆಂದು ಪುಟ ಗಟ್ಟಲೇ ಬರೆದವು. ಭ್ರಷ್ಟ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದ ಕೆಜ್ರಿವಾಲ್ ರ ನಿರ್ಧಾರವನ್ನು ಯಾವುದೇ ಮಾಧ್ಯಮಗಳು ಪ್ರಶ್ನಿಸಲಿಲ್ಲ, ಅದರ ಕುರಿತು ಗಂಟೆಗಟ್ಟಲೆ ಚರ್ಚಿಸಲಿಲ್ಲ. ಎ.ಎ,ಪಿ – ಕಾಂಗ್ರೆಸ್ ಅನೈತಿಕ ಸಂಬಂಧವನ್ನು ಪ್ರಶ್ನಿಸುವ ಗೋಜಿಗೆ ಯಾವ ಮಾಧ್ಯಮಗಳು ಮುಂದಾಗಲಿಲ್ಲ. ಅಣ್ಣ ಹಜಾರೆಯವರ ಭ್ರಷ್ಟಾಚಾರ ಆಂದೋಲನದಿಂದ ಪ್ರಸಿದ್ದಿ ಪಡೆದು ಚುನಾವಣೆ ಗೆದ್ದ ಅರವಿಂದ್ ಕೆಜ್ರಿವಾಲ್, ಭ್ರಷ್ಟ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಜನರಿಗೆ ಮೋಸ ಮಾಡಿದರು.
ಅಧಿಕಾರ ಹಿಡಿದ ಹತ್ತೇ ದಿನದಲ್ಲಿ ಚುನಾವಣ ಪೂರ್ವದಲ್ಲಿ ಘೋಸಿಸಿದ ಎಲ್ಲ ಆಶ್ವಾಸನೆಗಳನ್ನು ಪೂರೈಸುತ್ತೆನೆಂದ ಕೆಜ್ರಿವಾಲ್, ಉಚಿತ ನೀರಿನ ಯೋಜನೆಯನ್ನು ಘೋಷಿಸಿದರು. ಮೊದಲು ಪ್ರತಿ ದಿನ 700 ಲೀಟರ್ ಉಚಿತ ನೀರು ನೀಡುತ್ತೇನೆಂದ ಕೆಜ್ರಿವಾಲ್ ನಂತರ ಯೋಜನೆ ಘೋಸಿಸುವ ವೇಳೆಗೆ 666 ಲೀಟರ್ ಗೆ ಇಳಿಸಿದರು. ಆದರೆ ಈ ಯೋಜನೆಯ ಪಲಾನುಭಾವಿಗಳು ಯಾರು ಗೊತ್ತೇ? ದೆಹಲಿಯ 38% ಕುಟುಂಬಗಳಿಗೆ ಜಲಮಂಡಳಿಯಿಂದ ಬರುವ ನೀರಿನ ಸಂಪರ್ಕವೇ ಇಲ್ಲ. 17.3% ರಷ್ಟು ಅನಧಿಕೃತ ಕಾಲೊನಿಗಳು ದೆಹಲಿಯಲ್ಲಿವೆ. 666 ಲೀಟರ್ ಯೋಜನೆ ಈ ಪ್ರದೇಶಗಳನ್ನು ಒಳಗೊಂಡಿಲ್ಲ. ಉಳಿದ 48.6% ಕುಟುಂಬಗಳು ಶ್ರೀಮಂತ ಕುಟುಂಬಗಳು, ಅಧಿಕಾರಿಗಳುಮತ್ತು ಮಧ್ಯಮ ವರ್ಗವನ್ನು ಒಳಗೊಂಡ ಕುಟುಂಬಗಳು. ಈ ಕುಟುಂಬಗಳೇ ಉಚಿತ ನೀರಿನ ಯೋಜನೆಯ ಪಲಾನುಭಾವಿಗಳು. ಆದರೆ ಶ್ರೀ ಸಾಮಾನ್ಯನಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಜನರ ಕಣ್ಣೊರೆಸುವ ತಂತ್ರವಷ್ಟೇ.
ಅಧಿಕಾರ ಹಿಡಿದ ಹತ್ತೇ ದಿನದಲ್ಲಿ ಚುನಾವಣ ಪೂರ್ವದಲ್ಲಿ ಘೋಸಿಸಿದ ಎಲ್ಲ ಆಶ್ವಾಸನೆಗಳನ್ನು ಪೂರೈಸುತ್ತೆನೆಂದ ಕೆಜ್ರಿವಾಲ್, ಉಚಿತ ನೀರಿನ ಯೋಜನೆಯನ್ನು ಘೋಷಿಸಿದರು. ಮೊದಲು ಪ್ರತಿ ದಿನ 700 ಲೀಟರ್ ಉಚಿತ ನೀರು ನೀಡುತ್ತೇನೆಂದ ಕೆಜ್ರಿವಾಲ್ ನಂತರ ಯೋಜನೆ ಘೋಸಿಸುವ ವೇಳೆಗೆ 666 ಲೀಟರ್ ಗೆ ಇಳಿಸಿದರು. ಆದರೆ ಈ ಯೋಜನೆಯ ಪಲಾನುಭಾವಿಗಳು ಯಾರು ಗೊತ್ತೇ? ದೆಹಲಿಯ 38% ಕುಟುಂಬಗಳಿಗೆ ಜಲಮಂಡಳಿಯಿಂದ ಬರುವ ನೀರಿನ ಸಂಪರ್ಕವೇ ಇಲ್ಲ. 17.3% ರಷ್ಟು ಅನಧಿಕೃತ ಕಾಲೊನಿಗಳು ದೆಹಲಿಯಲ್ಲಿವೆ. 666 ಲೀಟರ್ ಯೋಜನೆ ಈ ಪ್ರದೇಶಗಳನ್ನು ಒಳಗೊಂಡಿಲ್ಲ. ಉಳಿದ 48.6% ಕುಟುಂಬಗಳು ಶ್ರೀಮಂತ ಕುಟುಂಬಗಳು, ಅಧಿಕಾರಿಗಳುಮತ್ತು ಮಧ್ಯಮ ವರ್ಗವನ್ನು ಒಳಗೊಂಡ ಕುಟುಂಬಗಳು. ಈ ಕುಟುಂಬಗಳೇ ಉಚಿತ ನೀರಿನ ಯೋಜನೆಯ ಪಲಾನುಭಾವಿಗಳು. ಆದರೆ ಶ್ರೀ ಸಾಮಾನ್ಯನಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಜನರ ಕಣ್ಣೊರೆಸುವ ತಂತ್ರವಷ್ಟೇ.
ಇನ್ನು ಅರವಿಂದ್ ಕೆಜ್ರಿವಾಲ್ ನ ಆಡಳಿತ ವೈಖರಿಯನ್ನು ಒಮ್ಮೆ ಗಮನಿಸಿದರೆ, ಕರ್ತವ್ಯವೆಸಗುವ ವೇಳೆಯಲ್ಲಿ ನಿಧನ ಹೊಂದಿದ ಪೇದೆಗೆ ಕೆಜ್ರಿವಾಲ್ ಸರ್ಕಾರ ಒಂದು ಕೋಟಿ ಪರಿಹಾರವನ್ನು ಘೋಷಿಸಿತು, ಈ ಮೊತ್ತ ಮುಂಬೈ ದಾಳಿಗೆ ಬಲಿಯಾದವರಿಗೆ ನೀಡಿದ ಪರಿಹಾರಕ್ಕಿಂತಲೂ ಹೆಚ್ಚು. ಇಷ್ಟು ಹಣವನ್ನು ಪರಿಹಾರವೆಂದು ಘೋಷಿಸುವ ಅವಶ್ಯಕತೆಯೇನಿತ್ತು? ಹೋದ ಜೀವವನ್ನು ಮರಳಿ ಕೊಡುವುದು ಅಸಾಧ್ಯದ ಮಾತು. ಆದರೆ ಸುಖಾಸುಮ್ಮನೆ ಜನರ ತೆರಿಗೆ ಹಣವನ್ನು ಪೋಲು ಮಾಡಿ ತಾನು ದಾನ ವೀರ ಶೂರ ಕರ್ಣನೆಂದು ಬಿಂಬಿಸಿಕೊಂಡರು ಅರವಿಂದ ಕೆಜ್ರಿವಾಲ್. ಖಂಡಿತ ನೊಂದ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಆದರೆ ವಿನಾಕಾರಣ ಜನರ ಹಣವನ್ನು ಪೋಲು ಮಾಡುವ ಅವಶ್ಯಕತೆ ಇರಲಿಲ್ಲ.ಅಧಿಕಾರ ವಹಿಸಿಕೊಂಡ ಕೊಂಡ ದಿನವೇ ಸರ್ಕಾರಿ ಬಂಗಲೆ, ಕೆಂಪು ಗೂಟದ ಕಾರನ್ನು ಉಪಯೋಗಿಸುವುದಿಲ್ಲವೆಂದ ಕೆಜ್ರಿವಾಲ್ ವಾರದಲ್ಲೇ 10 ಮಲಗುವ ಕೋಣೆ ಇರುವ ಐಷಾರಾಮಿ ಬಂಗಲೆಗೆ ಹೋಗುವ ನಿರ್ಧಾರ ಮಾಡಿದರು. ಸರ್ಕಾರಿ ಸೌಲಭ್ಯ ಪಡೆಯುವ ಹಕ್ಕು ಮುಖ್ಯಮಂತ್ರಿಗೆ ಇದೆ. ಆದರೆ ನಾನು ಯಾವುದೇ ಸರ್ಕಾರಿ ಸೌಲಭ್ಯ ಪಡೆಯುವುದಿಲ್ಲವೆಂದು ಹೇಳಿ ನಂತರ ಪಡೆಯುವುದು ಜನರಿಗೇ ಮೋಸ ಮಾಡಿದಂತೆಯೇ ಆಗುತ್ತದೆ.
ನಮ್ಮ ಸರ್ಕಾರ ಬಂದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಆದೇಶ ಮಾಡುತ್ತೇನೆಂದ ಕೆಜ್ರಿವಾಲ್ ಈಗ ಶೀಲ ದೀಕ್ಷಿತ್ ಸರ್ಕಾರದ ಭ್ರಷ್ಟಾಚಾರ ಕುರಿತು ದಾಖಲೆಯಿದ್ದರೆ ಕೊಡಿ ಎಂದು ಬಿ.ಜೆ,ಪಿ ಯನ್ನು ಕೇಳುವುದು ಎಂತ ಹಾಸ್ಯಾಸ್ಪದ ವಿಚಾರ. ಆಮ್ ಆದ್ಮಿ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವೆನ್ನುವುದರಲ್ಲಿ ಸಂಶಯವೇ ಇಲ್ಲ.ಕಾಂಗ್ರೆಸ್ ಪಕ್ಷಕ್ಕೆ ತಾವು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲವೆಂಬುದು ಅವರಿಗೆ ಇಗಲೇ ಖಾತ್ರಿಯಾಗಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿ.ಜೆ,ಪಿಯ ವಿಜಯಕ್ಕೆ ಸಂಚಾಕಾರ ತಂದಿಡುವುದೇ ಕಾಂಗ್ರೆಸ್ ನ ಗುರಿ. ಬಿ.ಜೆ.ಪಿ ಯ ಸಾಂಪ್ರದಾಯಿಕ ಮತಗಳಾದ ಸುಶಿಕ್ಷಿತ, ಪ್ರಜ್ಞಾವಂತ ಮತಗಳನ್ನು ವಿಭಜಿಸಲು ಕಾಂಗ್ರೆಸ್ ಎ,ಎ,ಪಿ ಜೊತೆ ಕೈ ಜೋಡಿಸಿದೆ. ಇತಿಹಾಸವನ್ನು ಒಮ್ಮೆ ಗಮನಿಸಿದರೆ ಕಾಂಗ್ರೆಸ್ಸನ ಕುತಂತ್ರ ನೀತಿ ಬಯಲಾಗುತ್ತದೆ. 2009 ರಲ್ಲಿ ನಡೆದ ಆಂಧ್ರಪ್ರದೇಶ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿದ ಚಿರಂಜೀವಿ 18 ಸ್ಥಾನಗಳನ್ನು ಗೆದ್ದರು ಆದರೆ ಅಧಿಕಾರದ ಆಸೆಗೆ ಬಲಿಯಾದ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ ಜನತೆಗೆ ದ್ರೋಹ ಬಗೆದರು. ಕಾಂಗ್ರೆಸ್ ನಿಂದ ಸಿಡಿದೆದ್ದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ( N,C,P) ರಚಿಸಿದ ಶರದ್ ಪವಾರ್ ಇಂದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದೆ ಹಾದಿಯಲ್ಲಿ ಇಂದು ಎ.ಎ,ಪಿ ಪಕ್ಷ ಸಾಗುತ್ತಿದೆ.
ನರೇಂದ್ರ ಮೋದಿ ಪ್ರಧಾನಿಯಾದರೆ, ತಮಗೆ ಅಧಿಕಾರ ಸಿಗುವುದು ಕನಸಿನ ಮಾತು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಕಾಂಗ್ರೆಸ್, ನರೇಂದ್ರ ಮೋದಿಯವರನ್ನು ಅಧಿಕಾರದಿಂದ ದೂರವಿಡಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನದ ಸಲುವಾಗಿಯೇ ಎ.ಎ.ಪಿ ಯನ್ನು ಅಖಾಡಕ್ಕೆ ಇಳಿಸಿದೆ. ಕಾಂಗ್ರೆಸ್ ಪಕ್ಷ ದೇಶ ಅಭಿವೃದ್ದಿಯನ್ನು ಮಾಡುವುದಿಲ್ಲ ಮತ್ತು ಅಭಿವೃದ್ದಿ ಮಾಡುವವರನ್ನು ಅಭಿವೃದ್ದಿ ಮಾಡಲು ಬಿಡುವುದಿಲ್ಲ ಅದು ಕಾಂಗ್ರೆಸ್ ನ ವಿಕೃತಿ. ಬಿ.ಜೆ .ಪಿ ಯಲ್ಲದೆ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೆ ಅದು ಕೊನೆಗೆ ಸೇರುವುದು ಕಾಂಗ್ರೆಸ್ ಗೆ.ಆದರೆ ಕಾಂಗ್ರೆಸ್ ಪಕ್ಷದ ಮುಖವಾಡ ಧರಿಸಿರುವ ಎ.ಎ.ಪಿಯ ಕುರಿತು ಜನ ಜಾಗೃತವಾಗಬೇಕು, ನರೇಂದ್ರ ಮೋದಿ ಯೋಬ್ಬರೇ ಈ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ತಾಕತ್ತು ಇರುವ ನಾಯಕ ನಮೋ ಮಾತ್ರ. ಎ.ಎ.ಪಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಗಳೆರಡು ಒಂದೇ ನಾಣ್ಯದ ಎರಡು ಮುಖಗಳು. ಈ ಎರಡು ಪಕ್ಷಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಎ.ಎ.ಪಿ ನಿಜ ಬಣ್ಣ ಈಗಾಗಲೇ ಬಯಲಾಗಿದೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಬಗ್ಗೆ ಜನರಿಗೇ ಅಸಡ್ಡೆ ಉಂಟಾಗುವ ಕಾಲ ಬಹಳ ದೂರವಿಲ್ಲ.
ರವಿತೇಜ ಶಾಸ್ತ್ರೀ
No comments:
Post a Comment