ಆ ಇಡೀ ಕುಟುಂಬವೇ ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸಿತ್ತು. ಆ ಕುಟುಂಬವೇ ಸಾವರ್ಕರ್ ಕುಟುಂಬ. ಗಣೇಶ ದಾಮೋದರ್ ಸಾವರ್ಕರ್, ವಿನಾಯಕ ದಾಮೋದರ್ ಸಾವರ್ಕರ್ ಮತ್ತು ನಾರಾಯಣ ದಾಮೋದರ್ ಸಾವರ್ಕರ್. ಈ ಮೂವರು ಸೋದರರ ಕುಟುಂಬ. ಮನೆಯಲ್ಲಿ ಪ್ರೀತಿಯಿಂದ ಬಾಬಾ, ತಾತ್ಯ ಮತ್ತು ಬಾಳ ಎಂದು ಕರೆಯುತ್ತಿದ್ದರು.
ತಂದೆ ದಾಮೋದರ್ ಸಾವರ್ಕರ್ ವಿಧಿವಶರಾದ ನಂತರ ಬಾಬಾ ಸಾವರ್ಕರ್ ಇಡೀ ಕುಟುಂಬದ ಜವಾಬ್ದಾರಿ ಹೊತ್ತರು. ಸೋದರ ಕ್ರಾಂತಿ ಪುರುಷ ವೀರ ಸಾವರ್ಕರ್ ಅವರ ಎಲ್ಲಾ ದೇಶಸೇವಾ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತರು ಬಾಬಾ ಸಾವರ್ಕರ್. ಸಾವರ್ಕರ್ ರ ಮಿತ್ರ ಮೇಳ, ಅಭಿನವ ಭಾರತಕ್ಕೆ ದೇಶಪ್ರೇಮಿ ಯುವಕರನ್ನು ಸಂಘಟಿಸಿದರು. ವೀರ ಸಾವರ್ಕರ್ ಇಂಗ್ಲೆಂಡಿಗೆ ಹೊರಟಾಗ ಪ್ರಯಾಣದ ಖರ್ಚಿನ ವ್ಯವಸ್ಥೆಯನ್ನು ಮಾಡಿ ಇಂಗ್ಲೆಂಡಿನಲ್ಲಿ ಸಾವರ್ಕರ್ ಸ್ವಾತಂತ್ರ್ಯ ಜ್ವಾಲೆಯನ್ನು ಹರಡುವಂತೆ ಮಾಡಿದವರು ಬಾಬಾ ರಾವ್ ಸಾವರ್ಕರ್.
ಭಾರತದಲ್ಲಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಸಲು ವೀರ ಸಾವರ್ಕರ್ ಇಟಲಿಯ ಕ್ರಾಂತಿಕಾರಿ ಮ್ಯಾಜಿನಿ ಕುರಿತು ಪುಸ್ತಕವನ್ನು ಬರೆದರು. ಈ ಪುಸ್ತಕವನ್ನು ಪ್ರಕಟಿಸಿದ್ದು. ಬಾಬಾ ಸಾವರ್ಕರ್. ಪುಸ್ತಕವನ್ನು ಪ್ರಕಟಿಸಲು ಹಣದ ಕೊರತೆ ಉಂಟಾದಾಗ ತನ್ನ ಹೆಂಡತಿಯ ಒಡವೆಗಳನ್ನು ಮಾರಿ ಪುಸ್ತಕ ಪ್ರಕಟಿಸಿದ ಮಹಾನ್ ದೇಶಭಕ್ತ ಬಾಬಾ ಸಾವರ್ಕರ್.
Baba Savrakar and Veer Savarkar |
ಪುಸ್ತಕ ಪ್ರಕಟಿಸಿದಕ್ಕೆ ಬ್ರಿಟಿಷ್ ಸರ್ಕಾರ ಬಾಬಾ ಸಾವರ್ಕರ್ ಅವರಿಗೆ ಕರೀ ನೀರಿನ ಶಿಕ್ಷೆ ನೀಡಿ ಅಂಡಮಾನ್ ಜೈಲ್ ಗೆ ಕಳುಹಿಸಿತು. ಕರೀ ನೀರಿನ ಶಿಕ್ಷೆ ಅತ್ಯಂತ ಕಠೋರ ಶಿಕ್ಷೆಯಾಗಿತ್ತು. ಆ ಜೈಲಿನ ಅಧಿಕಾರಿಯಾಗಿದ್ದ ಬಾಲಿ ಎಂಬುವವನು ಚಿತ್ರ ಹಿಂಸೆ ನೀಡುತ್ತಿದ್ದ. ಜೈಲಿನಲ್ಲಿ ಬಾಬಾ ಸಾವರ್ಕರ್ ಅನಾರೋಗ್ಯದಿಂದ ನರಳಿದರು. ಸೂಕ್ತ ಚಿಕಿತ್ಸೆ ದೊರಕದ ಕಾರಣ ಬಾಬಾ ಸಾವರ್ಕರ್ ಬಹಳ ನೋವನ್ನು ಅನುಭವಿಸಿದರು. ಆದರೂ ಅವರ ದೇಶಭಕ್ತಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ.
ಬಾಬಾ ಸಾವರ್ಕರ್ ಉತ್ತಮ ಕವಿಯೂ ಹೌದು ಹಲವು ದೇಶಭಕ್ತಿಯ ಪದ್ಯಗಳನ್ನು ಅವರು ರಚಿಸಿದ್ದಾರೆ.
ಇಂದು ಬಾಬಾ ಸಾವರ್ಕರ್ ಅವರ ಜನ್ಮದಿನ. ಮಹಾನ್ ದೇಶಭಕ್ತನಿಗೆ ನಮನಗಳು.
ವಂದೇ ಮಾತರಂ
ಸ್ವಾತಂತ್ರ್ಯ ಲಕ್ಷ್ಮಿ ಗೆ ಜಯವಾಗಲಿ.
No comments:
Post a Comment