ಭಾರತದ ರಾಷ್ಟ್ರಪಿತ ಯಾರು? ಎಂದು ಯಾರಿಗಾದರೂ ಪ್ರಶ್ನೆ ಕೇಳಿ ಉತ್ತರ ಸಿದ್ದ ಮಹಾತ್ಮಾ
ಗಾಂಧೀಜಿ ಎಂದು ತಟ್ಟನೆ ಉತ್ತರ ಕೊಟ್ಟುಬಿಡುತ್ತಾರೆ. ಆದರೆ ಒಮ್ಮೆ ನಾವು ಏಕೆ ಗಾಂಧೀಜಿಯನ್ನು
ಭಾರತದ ರಾಷ್ಟ್ರಪಿತ ಎಂದು ಕರೆಯುತ್ತೇವೆ?, ರಾಷ್ಟ್ರಪಿತ ಎಂದರೆ ಅರ್ಥವೇನು?, ಬಿರುದು ಗಳಿಸಲು ಇರುವ
ಯೋಗ್ಯತೆಯೇನು? ಆ ಸ್ಥಾನಕ್ಕೆ ಗಾಂಧೀಜಿ ಯೋಗ್ಯರಾಗಿದ್ದರೆ? ಎಂಬ ಪ್ರಶ್ನೆಗಳ ಬಗ್ಗೆ ಯೋಚಿಸುವ
ಗೋಜಿಗೆ ನಾವು ಹೋಗುವುದಿಲ್ಲ. ಹಾಗಾದರೆ ರಾಷ್ಟ್ರಪಿತ ಅಂದರೆ ಏನು? ತನ್ನ ದೇಶದ, ರಾಜ್ಯದ ಅಥವಾ
ರಾಷ್ಟ್ರದ ಸ್ಥಾಪನೆಗೆ ಪ್ರೇರಕ ಶಕ್ತಿಯಾದ ವ್ಯಕ್ತಿಗೆ ನೀಡುವ ಬಿರುದೇ ರಾಷ್ಟ್ರಪಿತ.(ವಿಕಿಪೀಡಿಯದ
ಪ್ರಕಾರ). ಹಾಗಾದರೆ ಗಾಂಧೀಜಿಯನ್ನು ಏಕೆ ರಾಷ್ಟ್ರಪಿತ ಎಂದು ಕರೆಯುತ್ತಾರೆ? ಈ ಕುರಿತು ಐಶ್ವರ್ಯ
ಎಂಬ ಬಾಲಕಿ R.T.I ಅರ್ಜಿ ಸಲ್ಲಿಸಿದಾಗ ಇದರ ಬಗ್ಗೆ ತಿಳಿಸಲು ನಮ್ಮಲ್ಲಿ ಯಾವುದೇ ಕಡಕವಿಲ್ಲವೆಂದು ಸರ್ಕಾರ
ತಿಳಿಸಿತು. ಈ ವಿಷಯದ ಬಗ್ಗೆ ನಾನು ಇಂಟರ್ನೆಟ್ನಲ್ಲಿ ಹುಡುಕಿದಾಗ ಸಿಕ್ಕ ಮಾಹಿತಿ ಪ್ರಕಾರ 1944 ರಲ್ಲಿ ನೇತಾಜಿ ಸಿಂಗಾಪುರದಿಂದ ರೇಡಿಯೋದಲ್ಲಿ ದೇಶವನ್ನು
ಕುರಿತು ಮಾತನಾಡುವಾಗ ಅವರು ಮೊದಲ ಬಾರಿಗೆ ಗಾಂಧಿಯನ್ನು Father of the Nation ಎಂದು ಸಂಬೋದಿಸಿದರಂತೆ. ಮತ್ತೆ ಗಾಂಧಿ ಸತ್ತಾಗ ನೆಹರೂ “ Our Father of
the Nation is no more “ ಎಂದು ಹೇಳಿದರಂತೆ. ತಮ್ಮನ್ನು ರಾಷ್ಟ್ರಪಿತ ಎಂದು ಕರೆದ ಮಹಾನ್
ಚೇತನಕ್ಕೆ ದ್ರೋಹ ಬಗೆದ ಗಾಂಧಿ ಹೇಗೆ ಭಾರತದ ರಾಷ್ಟ್ರಪಿತನಾಗುತ್ತಾರೆ. ಅಷ್ಟಕ್ಕೂ ಮೇಲೆ ಹೇಳಿದ
ವಾಖ್ಯಾನದಂತೆ( ವಿಕಿಪೀಡಿಯ) ಗಾಂಧಿ ಭಾರತದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದರೆ, ಖಂಡಿತ ಇಲ್ಲ. ಭಾರತಕ್ಕೆ
ಸ್ವಾತಂತ್ರ್ಯ ಬಂದದ್ದು ಗಾಂಧಿಯಿಂದ ಅಲ್ಲ. ಎರಡನೇ ಮಹಾಯುದ್ದದ ನಂತರ ನೇತಾಜಿಯವರ I.N.A ಪ್ರಭಾವ ದೇಶದಲ್ಲಿ ಹೆಚ್ಚಾಗಿ ಸೇನೆಯಲ್ಲಿ ಬಂಡಾಯದ ಕಾವು
ಹರಡಿತು. ಇದರಿಂದ ಬ್ರಿಟಿಷರು ಇನ್ನು ನಮಗೆ ದೇಶವಾಳುವುದು ಕಷ್ಟ ಎಂದು ಭಾರತಕ್ಕೆ ಸ್ವಾತಂತ್ರ್ಯ
ಕೊಟ್ಟರು.ಹೀಗೆ ನೇತಾಜಿ ಬ್ರಿಟಿಷರಿಗೆ ಪ್ರತಿ ಹಂತದಲ್ಲೂ ನಡುಕ ಹುಟ್ಟಿಸಿದ್ದರು.
ಭಾರತದಲ್ಲಿರುವಾಗ ಬ್ರಿಟಿಷರು ಅತಿ ಹೆಚ್ಚು ಹೆದರಿದ್ದು ಇಬ್ಬರಿಗೆ ಮಾತ್ರ. ಒಬ್ಬರು ಸಾವರ್ಕರ್
ಮತ್ತೊಬ್ಬರು ಸುಭಾಷ್ ಚಂದ್ರ ಬೋಸ್. ಹೀಗೆ ನೇತಾಜಿ ಭಾರತದ ಸ್ಥಾಪನೆಗೆ ಪರೋಕ್ಷವಾಗಿ ಪ್ರೇರಕ
ಶಕ್ತಿಯಾಗಿದ್ದರು. ಭಾರತದ ರಾಷ್ಟ್ರಪಿತನೆಂದು ಕರೆಸಿಕೊಳ್ಳಲು ಯೋಗ್ಯರಾಗಿದ್ದರು. ಗಾಂಧೀಜಿ
ಮತ್ತು ನೇತಾಜಿ ಇಬ್ಬರ ಬದುಕನ್ನು ತುಲನೆಮಾಡಿದಾಗ ನೇತಾಜಿ ಗಾಂಧೀಜಿಗಿಂತ ಉಚ್ಚ ಸ್ಥಾನದಲ್ಲಿ
ನಿಲ್ಲುತ್ತಾರೆ.
ನೇತಾಜಿ Vs ಗಾಂಧೀಜಿ
ನೇತಾಜಿ ಮತ್ತು ಗಾಂಧೀಜಿ ನಡುವಿನ ಹೋಲಿಕೆ ಮಾಡುವುದು ಹೆಚ್ಚು ಸೂಕ್ತವೆನಿಸಿತು.
·
ಸುಭಾಷ್ ಚಂದ್ರ ಬೋಸರು ಹುಟ್ಟಿನಿಂದಲೇ ಪರಮ ದೇಶಭಕ್ತರಾಗಿದ್ದರು.
ಸುಭಾಷರು ತಾರುಣ್ಯದಲ್ಲಿ ಬಂಗಾಳದ ವಿಭಜನೆಯ ಚಳುವಳಿ “ವಂಗಬಂಗ” ದಿಂದ ಪ್ರೆರಿತರಾಗಿದ್ದರು. ಈ
ಸಮಯದಲ್ಲಿ ನೇತಾಜಿ ಆಟೋಟಗಳಿಗಿಂತ ಓದಿನಲ್ಲಿ ಆಸಕ್ತರಾಗಿದ್ದರು. ಧಾರ್ಮಿಕ ವಿಷಯಗಳ ಬಗ್ಗೆ
ಅವರಿಗೆ ಆಸಕ್ತಿಯಿತ್ತು. ನೇತಾಜಿ ಭಗವದ್ಗೀತೆ, ಯೋಗ, ಆತ್ಮ ಸಂಯಮ, ಮನೋನಿಗ್ರಹಗಳ ಬಗ್ಗೆ
ತಿಳಿದಿದ್ದರು. ರಾಮಕೃಷ್ಣ, ವಿವೇಕಾನಂದರತ್ತ ಆಕರ್ಷಿತರಾಗಿದ್ದರು. ಆದರೆ ಗಾಂಧೀಜಿ
ಇಂಗ್ಲೆಂಡಿನಿಂದ ಹಿಂದಿರುವತನತ ಗಾಂಧಿ ಗೀತೆಯನ್ನೇ ಓದಿರಲಿಲ್ಲ. ಇಂಗ್ಲೆಂಡಿನಲ್ಲಿ ಗಾಂಧಿ ಕಾನೂನು
ಪದವಿ ಓದುವಾಗ ಆಂಗ್ಲರ ಸಂಸ್ಕೃತಿಗೆ ಮನಸೋತು
ಪಿಟೀಲು ಕಲಿಯುತ್ತ, ಹೆಂಗಸರೊಡನೆ ನರ್ತಿಸುವ ಮೋಹದಲ್ಲಿ ತೊಡಗಿದ್ದರು. ಗಾಂಧೀಜಿ ಹುಟ್ಟಿನಿಂದಲೇ
ದೇಶಭಕ್ತರಾಗಿರಲಿಲ್ಲ. ಆದರೆ ಸುಭಾಷರು ಕೇಂಬ್ರಿಜ್ನಲ್ಲಿ I.C.S ಓದುವಾಗ ಇಂಗ್ಲಿಷರ ಸಂಸ್ಕೃತಿ ಮನಸ್ಸಿಗೆ ಒಗ್ಗದೆ
ತುಮುಲದಲ್ಲಿದ್ದರು.
·
ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೇಗೆ ಬಂದರು ಗೊತ್ತಾ? 1910 ರಲ್ಲಿ ದೇಶದಲ್ಲಿ ಹಿಂಸಾಚಾರ, ಕೊಲೆ ಹೆಚ್ಚಾಗಿ ಆಗಿನ
ವೈಸ್ ರಾಯ್ ಮಿಂಟೋ ಹೆದರಿ ಇಲ್ಲಿ ತಮಗೇ ಭದ್ರತೆವಿಲ್ಲವೆಂದು ಇಂಗ್ಲೆಂಡಿಗೆ ಪತ್ರ ಬರೆದ.
ಬ್ರಿಟಿಷ ಸರ್ಕಾರ ಮಿಂಟೋನನ್ನು ಹಿಂತೆಗೆದುಕೊಂಡು ಲಾರ್ಡ್ ಹಾರ್ಡಿ೦ಜನನನ್ನು ವೈಸ್ ರಾಯ್ ಆಗಿ
ಕಳುಹಿಸಿತು. ಅವನಿಗೂ ಭಯವಾಗಿ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ದಕ್ಷಿಣ ಆಫ್ರಿಕಾದಿಂದ
ಗಾಂಧಿಯನ್ನು ಕರೆಸುವುದು ವಾಸಿ ಎಂದ. ಇದಕ್ಕೆಂದೆ ಬ್ರಿಟಿಷರು 1912ರಲ್ಲಿ ಗೋಪಾಲಕೃಷ್ಣ ಗೋಖಲೆಯವರನ್ನು ದಕ್ಷಿಣ ಆಫ್ರಿಕಾಗೆ
ಕಳುಹಿಸಿ ಗಾಂಧಿಯನ್ನು ಕರೆಸಿಕೊಂಡರು.
( ಈ ಕುರಿತು ನಾರಾಯಣಚಾರ್ಯ ಬರೆದಿರುವ “ಸುಭಾಷರ ಕಣ್ಮರೆ
ಅನ್ಯಾಯದ ಅಧ್ಯಾಯ” ಪುಸ್ತಕದಲ್ಲಿ ಉಲ್ಲೇಖವಿದೆ.) ಆಗ ಮುಂಬೈಯಲ್ಲಿ ದಕ್ಷಿಣ ಆಫ್ರಿಕೆಯಿಂದ
ಬಂದಿಳಿದದೊಡನೆಯೇ ಗಾಂಧಿಯವರು ಬ್ರಿಟಿಷರ ಬಾಂಬೆ ಗವರ್ನರ್ ಸಾಹೇಬರಿಗೆ ಪತ್ರ ಬರೆದು “ ನಿಮ್ಮ
ಆಜ್ಞೆಯನ್ನು ಇನ್ನು ಪಾಲಿಸುವ ಮಾತು ಕೊಡುತ್ತೇನೆ “ ಎಂದರು. ನಂತರ ಒಂದು ಸಂಜೆ ನಡೆದ
ಕಾರ್ಯಕ್ರಮದಲ್ಲಿ ಗಾಂಧಿ ‘ ನಾನು ನಿಮಗೆ ವಿಧೇಯನಾಗಿರುತ್ತೇನೆ ’ ಎಂದು ಘೋಷಿಸಿದರು. ಆದರೆ
ಬೋಸರು ಕಾಲೇಜಿನಲ್ಲಿ ಓದುವಾಗ ಆಂಗ್ಲ ಪ್ರಾಧ್ಯಾಪಕನೊಬ್ಬ ಭಾರತೀಯರ ಬಗ್ಗೆ ಕೀಳು ಭಾಷೆಯಲ್ಲಿ
ವ್ಯಂಗ್ಯವಾಡಿದಾಗ ಅವನನ್ನು ಯುವ ಬೋಸ್ ಹೊಡೆದಿದ್ದರು. ಚಿನ್ನದ ಮೊಟ್ಟೆ ಇಡುವ I.C.S ಪದವಿಯನ್ನು ನಿರಾಕರಿಸಿದರು.
·
ಗಾಂಧೀಜಿಗೆ ಭಾರತ ಸ್ವಾತಂತ್ರ್ಯ ಹೋರಾಟ ಹೇಗಿರಬೇಕೆಂಬ ಸ್ಪಷ್ಟ
ನಿಲುವು ಇರಲಿಲ್ಲ. ಆದರೆ ನೇತಾಜಿ ಸ್ವಾತಂತ್ರ್ಯ ಭಾರತ ಹೋರಾಟದ ಕುರಿತು ಹೀಗೆ ಹೇಳುತ್ತಾರೆ. “ In India we
want a party that will not only strive for its freedom , but also produce a
national constitution and after winning freedom will put into operation the
whole program of national reconstruction. There can be no question of
Constitutional Assembly… Likewise there can be no question of giving up power.”
( ಭಾರತದಲ್ಲಿ ಈಗ ಬೇಕಾಗಿರುವುದು
ಬರೀ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಯತ್ನಿಸುವ ಒಂದು ಪಕ್ಷವಲ್ಲ. ಅದು ಭಾರತದ ಸಂವಿಧಾನವನ್ನು
ತಯಾರು ಮಾಡುವಂಥದ್ದಾಗಿರಬೇಕು. ಸ್ವಾತಂತ್ರ್ಯ ಬಂದ ನಂತರ ಅದನ್ನು ಚಾಲ್ತಿಯಲ್ಲಿ ತರುವಂಥದ್ದು,
ಅದರಲ್ಲಿ ಸಮಗ್ರ ಭಾರತದ ಪುನಾರಚನೆಯನ್ನು ಒಳಗೊಂಡುದ್ದು ಆಗಿರಬೇಕು. ಇದಕ್ಕೆ ಪ್ರತ್ಯೇಕ ವಿಧಾಯಕ
ಸಭೆಯ ಅವಶ್ಯಕತೆಯೇ ಏಳುವುದಿಲ್ಲ.. ಹಾಗೆಯೇ ನಮ್ಮ ಹಕ್ಕು, ಪ್ರಭುತ್ವವನ್ನು ಬಿಟ್ಟುಕೊಡುವ
ಪ್ರಶ್ನೆಯೇ ಏಳುವುದಿಲ್ಲ.)
·
ಗಾಂಧೀಜಿಯರಲ್ಲಿ ನನಗೆ ನಾಯಕತ್ವ ಗುಣವೇ ಕಾಣಿಸುವುದಿಲ್ಲ.
ನಾಯಕನಿರಬೇಕಾದ ಸ್ಪಷ್ಟ ನಿಲುವು ಅವರಿಗೆ ಇರಲಿಲ್ಲ ಅದಕ್ಕಾಗಿಯೇ ಅವರು ಅಸಹಕಾರ ಚಳುವಳಿಯನ್ನು
ಸಣ್ಣ ಕಾರಣಕ್ಕೆ ನಿಲ್ಲಿಸಿದರು. ಆದರೆ ನೇತಾಜಿಗೆ ಭಾರತ ಸ್ವಾತಂತ್ರ್ಯವಾಗಬೇಕೆಂದು ಪಣತೊಟ್ಟು
ಹೊರ ದೇಶಗಳಿಗೆ ಹೋಗಿ ಸಹಾಯ ಹಸ್ತ ಚಾಚಿ 80000 ಸೈನಿಕರಿರುವ I.N.A ಸೈನ್ಯ ಕಟ್ಟಿದರು. ಇದು ಅವರ ನಾಯಕತ್ವ ಗುಣದ ನಿದರ್ಶನ.
·
ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯಿಂದ ಮಾತ್ರ ಸ್ವಾತಂತ್ರ್ಯ ಗಳಿಸಲು
ಸದ್ಯವೆಂದು ನಂಬಿ ಮುಸ್ಲಿಮರ ಖಿಲಪತ್ ಚಳುವಳಿಗೆ ಸಹಕಾರ ಕೊಟ್ಟು ಸ್ವಾತಂತ್ಯ ಚಳುವಳಿಯ
ದಿಕ್ಕನ್ನು ತಪ್ಪಿಸಿ ಅಮಾಯಕ ಹಿಂದೂಗಳ ಸಾವಿಗೆ ಕಾರಣರಾದರು.(ಮೊಪ್ಲ ಚಳುವಳಿಯ ಪರಿಣಾಮದಿಂದ)
ಆದರೆ ನೇತಾಜಿ ಎಂದಿಗೂ ಈ ರೀತಿ ಯೋಚಿಸಿರಲಿಲ್ಲ. ಐ.ಎನ್. ಎ ದ ಸೇನಾಧಿಕಾರಿ ಷಾ ನವಾಜ್ ಖಾನ್
ದ್ರೋಹ ಬಗೆದಾಗ(ನೆಹರುವಿನ ಕುತಂತ್ರಕ್ಕೆ ಬಲಿಯಾಗಿ) ನೇತಾಜಿ ಅವರಿಗೆ ಶಿಕ್ಷೆ ಕೊಡದೆ ಈ ರೀತಿ
ಹೇಳಿದರು. “ ನೋಡಿ ನಾವು ಹಿಂದುಗಳು ಬಹುಸಂಖ್ಯಾತರೇ ಇದ್ದೇವೆ! ಆಮೇಲೆ ಈ ಮುಸ್ಲಿಮರೂ ತಾವು
ಭಾರತೀಯರೆಂದು ಚಿಂತಿಸಿ ಒಂದಾಗುವ ಕಾಲ ಬಂದೇ ಬರುತ್ತದೆ. ಮುಸ್ಲಿಮರಾಗಿ ಜೀವಿಸುವುದನ್ನು
ಬಿಟ್ಟಾರು. ಈಗ ಸಣ್ಣ ವಿಷಯಕ್ಕೆ ಅವರ ಮನಸ್ಸು ನೋಯಿಸುವುದು ಬೇಡ ” ಎಂದರು. ಆದರೆ ಗಾಂಧೀಜಿ ಮುಸ್ಲಿಮರಿಗೆ ರಾಷ್ಟ್ರೀಯತೆಯನ್ನು
ಕಲಿಸದೆ ಮತಾಂಧತೆ ಬೆಳೆಸಿ ದೇಶವನ್ನು ವಿಭಜಿಸಿದರು.
·
ನೇತಾಜಿ ಹಿಡಿದ ಕೆಲಸವನ್ನು ಮುಗಿಸದೆ ಸುಮ್ಮನಿರುವ
ಮನುಷ್ಯರಾಗಿರಲಿಲ್ಲ. ಎರಡನೆ ಮಹಾಯುದ್ದ ಮುಗಿದು ಬ್ರಿಟಿಷರಿಗೆ ಜಯವಾಗಿ ತಮಗೇ ಸಹಾಯ ಮಾಡಿದ
ಜರ್ಮನಿ, ಜಪಾನ್ ಸೋತಾಗ ನೇತಾಜಿ ಕುಗ್ಗದೆ ತಮ್ಮ ಹೋರಾಟ ಮುಂದುವರಿಸಿ ರಶಿಯಾಕ್ಕೆ ಪ್ರಯಾಣಿಸುವಾಗ
ವಿಮಾನದಲ್ಲಿ ಬಂಗಾರದ ವಸ್ತು, ನಗ, ನಾಣ್ಯ ಇತ್ತಂತೆ. ಇದರ ಅರ್ಥ ಯುದ್ದದ ನಂತರವೂ ನೇತಾಜಿ
ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಸಜ್ಜಾಗಿದ್ದರು. ಆದರೆ ಗಾಂಧೀಜಿಯ ಹೋರಾಟದಲ್ಲಿ ಇಂತಹ ಚಲವೇ
ಇರಲಿಲ್ಲ. ಅವರು ಹೆದರು ಪುಕ್ಕಲರಾಗಿದ್ದರು, ಅವರು ಸಾವರ್ಕರ್, ನೇತಾಜಿ, ಭಗತ್ ಸಿಂಗ್ ರಂತೆ
ಬ್ರಿಟಿಷರಿಗೆ ಎದೆಗೆ ಎದೆಗೊಟ್ಟು ನಿಂತವರಲ್ಲ. ಅಷ್ಟಕ್ಕೂ ಗಾಂಧಿ ಸಾವರ್ಕರ್ ರಂತೆ ಆಗಿನ
ಬಹುದೊಡ್ಡ ಶಿಕ್ಷೆ ಕರಿನೀರಿನ ಶಿಕ್ಷೆ ಅನುಭವಿಸಲಿಲ್ಲ ಬದಲಿಗೆ ಗಾಂಧಿ ಆಘಾಖಾನರ ಅರಮನೆಯಲ್ಲಿ
ಜೈಲು ಶಿಕ್ಷೆ ಅನುಭವಿಸಿದವರು.
ಹೀಗೆ
ನೇತಾಜಿ ಗಾಂಧೀಜಿಗಿಂತ ಶ್ರೇಷ್ಟ ವ್ಯಕ್ತಿ, ಹೋರಾಟಗಾರ,ದೂರದೃಷ್ಟಿತ್ವಯುಳ್ಳ ನಾಯಕರಾಗಿದ್ದರು.
ಗಾಂಧೀಜಿಗಿಂತ ಮೇರು ವ್ಯಕ್ತಿತ್ವಯುಳ್ಳ ನೇತಾಜಿಯನ್ನು “ಭಾರತದ ರಾಷ್ಟ್ರಪಿತ” ಎಂದು ಕರೆಯುವುದು
ಸೂಕ್ತವೆನಿಸುವುದಿಲ್ಲವೇ?
ನೇತಾಜಿಯ ಸಾವಿನ ಇತಿಹಾಸ ಒಂದು ನೋವಿನ ಅಧ್ಯಾಯ
ನೇತಾಜಿ ಸುಭಾಸ್ ಚಂದ್ರ ಬೋಸ್ 1945 ಅಗಸ್ಟ್ 18ರಂದು ಸಿಂಗಪುರದಿಂದ ಹೊರಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟರು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಆದರೆ ನೇತಾಜಿ ಅಂದು ಸಾಯಲಿಲ್ಲ. ಅವತ್ತು ಅಲ್ಲಿ ವಿಮಾನವೇ ಹಾರಲಿಲ್ಲ. ಅಗಸ್ಟ್ 23 1945ರಂದು ನೇತಾಜಿ ಸ್ಯೆಗಾನಿನಿಂದ ಬಾಂಬರ್ ವಿಮಾನದಲ್ಲಿ ಹೊರಟು ರಶಿಯಾ ಸೇರಿದ್ದರು. ಆದರೆ ನೆಹರು ನೇತಾಜಿ ಆಪ್ತ ಹಬೀಬುರ್ ರೆಹಮಾನ್ ಅವರಿಂದ ನೇತಾಜಿ ಸತ್ತರು ಎಂದು ಹೇಳಿಸಿದರು. ನಂತರ ನೇತಾಜಿ ರಶಿಯಾದಲ್ಲಿ ನೆಲೆಸಿದ್ದಾರೆ ಎಂದು ನೆಹರು ಬ್ರಿಟಿಷ್ ಪ್ರಧಾನಿ ಆಟ್ಲಿಗೆ ಪತ್ರ ಬರೆದರು. ಮತ್ತು ನೇತಾಜಿಯ ಸಾವಿನ ರಹಸ್ಯದ ಕಡತಗಳನ್ನು ಮರೆಮಾಚಿದರು.ಈ ಕುರಿತು ತಿಳಿದವರನ್ನು ಹೆದರಿಸಿ ಸುಳ್ಳನ್ನೇ ಸತ್ಯವೆಂದು ಜನರಿಗೇ ನಂಬಿಸಿದರು. ನೇತಾಜಿ ಏನಾದರು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ. ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ ಪುಸ್ತಕದ ಪ್ರಕಾರ 1955ರಲ್ಲಿ ನೇತಾಜಿ ಭಾರತಕ್ಕೆ ಬಂದು ಯೋಗಿಬಾಬ, ಭಗವಾನ್ ಜಿಯಾಗಿ ಕೊನೆಗೆ 1988ರಲ್ಲಿ ಮಡಿದರು.
ದೇಶಕ್ಕಾಗಿ ಪರಿತಪಿಸಿದ ಮಹಾನ್ ನಾಯಕರ ಸಾವಿನ ಇತಿಹಾಸವನ್ನು ತಿರುಚಿಸಿದ್ದು ದುರಂತವೇ ಸರಿ.
ಈಗ ನಾವು ಹೊಸ ಇತಿಹಾಸದ ಸತ್ಯವನ್ನು ಅರಿಯಬೇಕು. ಹೊಸ ಇತಿಹಾಸವನ್ನು ಬರೆಯುವಂತಾಗಬೇಕು ಅದೇ ನಾವು
ನೇತಾಜಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿ.
ಭಾರತದ ನಿಜವಾದ ರಾಷ್ಟ್ರಪಿತ ನೇತಾಜಿ ಎಂದು ಲೇಖನ ಓದಿದವರಿಗೆ ಅರಿವಾದರೆ ಲೇಖನ ಬರೆದ ನನ್ನ ಈ ಶ್ರಮ
ಸಾರ್ಥಕ.
ಜೈ ಹಿಂದ್
ರವಿತೇಜ ಶಾಸ್ತ್ರೀ
Dear Ravi,
ReplyDeleteI feel very sorry to note this article on Mahatma. I want to address some questions raised and comments made in this article. First of all, I absolutely don't believe in your words, " Mahatma was not a leader"... It was not a simple thing to lead the entire nation for a common cause, which was on a very special way of non violence. During mid 1930s, it was just Mahatma's words worked in bringing people to protest against Englishmen..be it Dandi march.. be it non cooperation movement.. be it protest against Government of India act.. be it Quit India movement... Please consider everything while you make a comment about leadership of Gandhi. He was the true ambassador of peace. Subhash was an extremely powerful nationalist... Please don't compare Mahatma with anybody else....