ನಾನು ಪ್ರಥಮ ಪಿಯುಸಿ ವಾಣಿಜ್ಯ ಓದುವಾಗ Economics ವಿಷಯದಲ್ಲಿ ಪ್ರಪಂಚದ
ಎಲ್ಲ ಆರ್ಥಿಕತೆಯ ಬಗ್ಗೆ ಪ್ರಥಮ ಅಧ್ಯಾಯದಲ್ಲಿ ಇತ್ತು. ಆರ್ಥಿಕತೆಯಲ್ಲಿ Advanced Economy ಅಥವಾ Developed Economy ಮತ್ತು Developing
Economy ಎಂಬ ವಿಂಗಡಣೆಯಿತ್ತು. ಭಾರತವನ್ನು Developing
Economy ಎಂಬುದಾಗಿ ಸೇರಿಸಲಾಗಿತ್ತು. Advanced Economyಯಲ್ಲಿ ಅಮೇರಿಕಾ, ರಶಿಯಾ, ಇಂಗ್ಲೆಂಡ್ ದೇಶಗಳ ಹೆಸರಿತ್ತು. ಇದನ್ನು
ಓದುವಾಗ ನನಗೆ ಭಾರತವೇಕೆ Advanced Economy
ಅಲ್ಲ ಎಂಬ ವಿಷಯ ಬಹಳ ಕಾಡಿತ್ತು. ಭಾರತ Advanced Economy ಆಗಬೇಕೆಂಬ ಕನಸು ನನಗೆ ಹುಟ್ಟಿಕೊಂಡಿತು ಆದರೆ ಆ ಕನಸು ನನಸಾಗುವುದು ಅಸಾಧ್ಯ
ಎಂಬ ಭಾವನೆ ನನಗಿತ್ತು. ಆದರೆ ನಾನು ಪದವಿ ವ್ಯಾಸಂಗ ಮಾಡುವಾಗ ಸಂಘದ ಪರಿಚಯವಾಗಿ ಭಾರತದ ಕುರಿತು
ಹೆಮ್ಮೆ, ಗೌರವ, ಭಕ್ತಿ ನನ್ನಲ್ಲಿ ಬೆಳೆದಾಗ ಭಾರತ ಬಲಿಷ್ಠ ಆರ್ಥಿಕತೆಯ ದೇಶವಾಗುತ್ತೆ ಮತ್ತು ನನ್ನ ಕನಸು
ನನಸಾಗುತ್ತದೆ ಎಂಬ ನಂಬಿಕೆ ಬಲವಾಯಿತು. ಈ ಕುರಿತು ನಾನು ಕಾಲೇಜಿನಲ್ಲಿ ಒಮ್ಮೆ ಸೆಮಿನಾರ್ ಮಾಡಿ
ಬಹಳ ಆತ್ಮ ವಿಶ್ವಾಸದಿಂದ ಭಾರತ 2030 ರಲ್ಲಿ ವಿಶ್ವದ ಬಲಿಷ್ಠ ದೇಶವಾಗುತ್ತೆ ಎಂದು ಹೇಳಿದ್ದೆ. ಆದರೆ
ಈ ಕುರಿತು ನನಗೆ ಸ್ಪಷ್ಟ ನಿಲುವು ಇರಲಿಲ್ಲ.
ದೇಶದ ಕುರಿತು ನನಗಿದ್ದ ಅಭಿಮಾನ ನಾನು ಆ ರೀತಿ
ಹೇಳುವ ಹಾಗೇ ಮಾಡಿತ್ತು. ಭಾರತ ಬಲಿಷ್ಠ ಅರ್ಥಿಕ ದೇಶವಾಗಬೇಕಾದರೆ ನಾವೇನು ಮಾಡಬೇಕು, ಅದು ಹೇಗೆ
ಸಾಧ್ಯ ಎಂಬ ಪ್ರಶ್ನೆಗಳಿಗೆ ನನ್ನ ಬಳಿ ಆಗ ಉತ್ತರವಿರಲಿಲ್ಲ. ಆದರೆ ಆ ಎಲ್ಲ ಪ್ರಶ್ನೆಗಳಿಗೆ ಈಗ
ನಾನು ಉತ್ತರ ಕಂಡುಕೊಂಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿ ಯಾದಾಗ ಮಾತ್ರ ಈ ದೇಶ ವಿಶ್ವದ
ಬಲಿಷ್ಠ ಆರ್ಥಿಕತೆಯಾಗಲು ಸಾಧ್ಯ. ಇದು ಮೋದಿಯವರ ಅಭಿಮಾನದಿಂದ ಬಂದ ಅತಿಶಯೋಕ್ತಿಯ ಉತ್ತರ ಅಲ್ಲ.
ಒಂದು ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಅಂಶಗಳೆಂದರೆ ಆ ದೇಶದ ಜನರ ತಲಾದಾಯ(per capita income), ಸಮಗ್ರ ದೇಶೀಯ ಉತ್ಪನ್ನ(Gross Domestic Product(G.D.P) ಮತ್ತು ವಿದೇಶಿ ವಿನಿಮಯ(Foreign Exchange). ಈ ಎಲ್ಲದರಲ್ಲೂ ಗುಜರಾತ್ ಭಾರತಕ್ಕಿಂತ ಮುಂದಿದೆ. ಗುಜರಾತಿನ ರಪ್ತಿನ ಪ್ರಮಾಣ ಭಾರತಕ್ಕಿಂತ ಹೆಚ್ಚು. ನರೇಂದ್ರ ಮೋದಿ ವಿಶ್ವ ಬಂಡವಾಳ ಹೂಡಿಕೆಯ ಸಮಾವೇಶ ಆಯೋಜಿಸಿದರೆ ಇಡೀ ವಿಶ್ವವೇ ಗುಜರಾತಿನಲ್ಲಿ ಹೂಡಿಕೆ ಮಾಡಲು ವಿಶ್ವವೇ ಮುಗಿಬೀಳುತ್ತದೆ. 12 ವರ್ಷದ ಹಿಂದೆ ಭೂಕಂಪ, ಕೋಮು ಗಲಭೆಗಳಿಂದ ತತ್ತರಿಸಿದ್ದ ಗುಜರಾತನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿದ ಮೋದಿಯ ಸಾಧನೆ ಅಮೋಘ. ನರೇಂದ್ರ ಮೋದಿಯವರ ದೂರದೃಶಿತ್ವ, ರಾಷ್ಟ್ರಭಕ್ತಿ,ಪ್ರಭಾವಿ ನಾಯಕತ್ವ , ಸದಾ ಜನರ ಯೋಗಕ್ಷೇಮ ಬಯಸುವ ಅವರ ವ್ಯಕ್ತಿತ್ವ ಅವರನ್ನು ಈ ಸ್ಥಾನದಲ್ಲಿ ಕೂರಿಸಿದೆ. ಈ ಗುಣಗಳಿಂದ ಮೋದಿ ದೇಶದ ಆಶಾಕಿರಣದಂತೆ ಭಾಸವಾಗುತ್ತಾರೆ. ದೇಶ ಕಂಡ ಮಹಾನ್ ನಾಯಕರಾದ ಶಾಸ್ತ್ರೀಜಿ, ಸರ್ದಾರ್ ಪಟೇಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಗಳನ್ನು ಅಳವಡಿಸಿಕೊಂಡಿರುವ ಮೋದಿ ಪ್ರಸ್ತುತ ಸ್ಥಿತಿಗೆ ಮಹಾನ್ ನಾಯಕರಂತೆ ಗೋಚರಿಸುತ್ತಾರೆ. ಇಂತಹ ನಾಯಕ ದೇಶವಾಳಿದರೆ ಭಾರತ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಸಂಶಯವಿಲ್ಲ. ಭಾರತ ವಿಶ್ವದ ಬಲಿಷ್ಠ ಆರ್ಥಿಕತೆಯಾಗಬೇಕೆಂಬುದು ನನ್ನ ಹೆಬ್ಬಯಕೆ. ಭಾರತ Advanced Economy ಎಂದು ಪಠ್ಯಪುಸ್ತಕದಲ್ಲಿ ಮುದ್ರಣವಾಗುವ ಕಾಲ ಬಹಳಷ್ಟು ದೂರವಿಲ್ಲ ಎಂದು ನಾನು ನಂಬಿದ್ದೇನೆ.

ವಂದೇಮಾತರಂ
ರವಿತೇಜ ಶಾಸ್ತ್ರೀ
No comments:
Post a Comment