Wednesday, January 22, 2014

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್


ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು 23, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦  ಜನರ  ‘ಆಜಾದ್ ಹಿಂದ್ ಫೌಜಎಂಬ ಸೇನೆಯನ್ನು ಕಟ್ಟಿ “ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು   ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ನೇತಾಜಿ ಸುಭಾಷ್ ಚಂದ್ರ ಬೋಸ್’.


ಸುಭಾಷರು  1897 ರ ಜನವರಿ 23ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ಸ್ವಾತಂತ್ಯ್ರ ಹೋರಾಟಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ಐ.ಸಿ.ಎಸ್ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ 4 ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

 1938ರಲ್ಲಿ ನಡೆದ 51 ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1939 ರಲ್ಲಿ  ಮತ್ತೊಮ್ಮೆ  ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ಪಟ್ಟಾಭಿ ಸೀತಾರಾಮಯ್ಯಹಾಗೂ ಸುಭಾಷ್ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.

 ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದುಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ  ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ಫಾರ್ವರ್ಡ್ ಬ್ಲಾಕ್ಸ್ಥಾಪಿಸಿದರು.
ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು 1941  ರಲ್ಲಿ , ಬ್ರಿಟಿಷ್ ಸರ್ಕಾರ 11 ನೆ  ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.. ಸ್ವಾತಂತ್ರ್ಯ ವೀರ ಸಾವರ್ಕರ್ ಮಾರ್ಗದರ್ಶನದಂತೆ ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.


ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ಐ.ಎನ್.ಎಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ಭಾರತ ಬಿಟ್ಟು ತೊಲಗಿಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .
ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು  ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು    ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ  ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ಆಜಾದ್ ಹಿಂದ್ ರೇಡಿಯೋಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ  “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.
1943 ರ ಅಕ್ಟೋಬರ್ 23 ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರವನ್ನು ಸ್ಥಾಪಿಸಿ ಮೊದಲ ಪ್ರಧಾನ ಮಂತ್ರಿಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ಜರ್ಮನಿ,ಜಪಾನ್,ಚೀನಾ,ಸಿಂಗಾಪುರಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ  ಸುಭಾಷರು ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ  ‘ಐ.ಎನ್.ಎಅಭಿಯಾನ.. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಸುಭಾಷರ ಪಡೆ  ಅಂಡಮಾನ್ ಹಾಗೂ ನಿಕೋಬಾರ್ದ್ವೀಪಗಳನ್ನು ವಶಪಡಿಸಿಕೊಂಡಿತು. ಸುಭಾಷರು ಈ ಪ್ರದೇಶಗಳಿಗೆ ಸ್ವರಾಜ್ ಹಾಗೂ ಶಹೀದ್ಎಂದು ನಾಮಕರಣ ಮಾಡಿದರು.

 ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ಐ.ಎನ್.ಎಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ಭಾರತ ಬಿಟ್ಟು ತೊಲಗಿಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ಇಂಫಾಲ್ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ  ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ಐ.ಎನ್.ಎಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು 1945 ರ ಆಗಸ್ಟ್ನಲ್ಲಿ  ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು ಅನ್ನುವ ಸುದ್ದಿಗಳು ಬಂದವು. ಬಹಳಷ್ಟು ಐ.ಎನ್ ಎ ಸೈನಿಕರನ್ನು  ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ  ‘ಕೋರ್ಟ್ ಮಾರ್ಷಲ್ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನೇತಾಜಿ ಯವರ ಐ.ಎನ್.ಎ ಮತ್ತು ಸಾವರ್ಕರ್ ರವರು ಭಾರತೀಯ ಯುವಕರನ್ನು ಪ್ರೇರೇಪಿಸಿ ಸೈನ್ಯಕ್ಕೆ ಸೇರಿಸಿದರ ಪರಿಣಾಮವಾಗಿ ಉಂಟಾದ  ನೌಕ ದಳದಬಂಡಾಯ  ಬ್ರಿಟಿಷರಿಗೆ ಚರಮ ಗೀತೆಯಾಯಿತು. ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ 1947 ರ ಆಗಸ್ಟ್ನಲ್ಲಿ  ಇಲ್ಲಿಂದ ತೊಲಗಿದರು. ಆದರೆ ಇದರ ಸಂಪೂರ್ಣ ಕ್ರೆಡಿಟನ್ನು ಅಹಿಂಸಾವಾದಿಗಳಿಗೆ ನೀಡಲಾಯಿತು. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ನೇತಾಜಿಯವರಿಗೆ ಅವಮಾನ ಮಾಡಲಾಯಿತು. ಈ ವ್ಯವಸ್ಥಿತ ಪಿತೂರಿಯ ರೂವಾರಿ ಬೇರಾರು ಅಲ್ಲ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು.

ನೇತಾಜಿಯ ಸಾವಿನ ಇತಿಹಾಸ ಒಂದು ನೋವಿನ ಅಧ್ಯಾಯ


ನೇತಾಜಿ ಸುಭಾಸ್ ಚಂದ್ರ ಬೋಸ್ 1945 ಅಗಸ್ಟ್ 23ರಂದು ಸಿಂಗಪುರದಿಂದ ಹೋರಾಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟರು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಆದರೆ ನೇತಾಜಿ ಅಂದು ಸಾಯಲಿಲ್ಲ. ಅವತ್ತು ಅಲ್ಲಿ ವಿಮಾನವೇ ಹಾರಲಿಲ್ಲ. ಅಗಸ್ಟ್ 23 1945ರಂದು ನೇತಾಜಿ ಸ್ಯೆಗಾನಿನಿಂದ ಬಾಂಬರ್ ವಿಮಾನದಲ್ಲಿ ಹೊರಟು ರಶಿಯಾ ಸೇರಿದ್ದರು. ಆದರೆ ನೆಹರು ನೇತಾಜಿ ಆಪ್ತ ಹಬೀಬುರ್ ರೆಹಮಾನ್ ಅವರಿಂದ ನೇತಾಜಿ ಸತ್ತರು ಎಂದು ಹೇಳಿಸಿದರು. ನಂತರ ನೇತಾಜಿ ರಶಿಯಾದಲ್ಲಿ ನೆಲೆಸಿದ್ದಾರೆ ಎಂದು ನೆಹರು ಬ್ರಿಟಿಷ್ ಪ್ರಧಾನಿ ಆಟ್ಲಿಗೆ ಪತ್ರ ಬರೆದರು. ಮತ್ತು ನೇತಾಜಿಯ ಸಾವಿನ ರಹಸ್ಯದ ಕಡತಗಳನ್ನು ಮರೆಮಾಚಿದರು.ಈ ಕುರಿತು ತಿಳಿದವರನ್ನು ಹೆದರಿಸಿ ಸುಳ್ಳನ್ನೇ ಸತ್ಯವೆಂದು ಜನರಿಗೇ ನಂಬಿಸಿದರು. ಜನರ ಕಣ್ಣೊರೆಸುವ ಪ್ರಯತ್ನವಾಗಿ ಕಾಂಗ್ರೆಸ್ ಸರ್ಕಾರಗಳು  ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ರಚಿಸಿದ  ಷಾ ನವಾಜ್ ಸಮಿತಿ ಮತ್ತು ಖೊಸ್ಲಾ ಸಮಿತಿಗಳು ನೇತಾಜಿ ಅವರು ವಿಮಾನಪಾಘತದಲ್ಲಿ ಮಡಿದರು ಎಂದು ವರದಿ ನೀಡಿದವು.

                   ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ಮುಖರ್ಜಿ ಸಮಿತಿಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ, ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು ನೇತಾಜಿ ನಿಗೂಡ ಅಂತ್ಯವನ್ನು  ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ನೇತಾಜಿ ಏನಾದರು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ.  ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ ಪುಸ್ತಕದ ಪ್ರಕಾರ  1955ರಲ್ಲಿ ನೇತಾಜಿ ಭಾರತಕ್ಕೆ ಬಂದು ಯೋಗಿಬಾಬ, ಭಗವಾನ್ ಜಿಯಾಗಿ ಕೊನೆಗೆ 1988ರಲ್ಲಿ ಮಡಿದರು.( ಆದರೆ 1945ರ ನಂತರ ಏನಾದರು ಎಂಬುದಕ್ಕೆ ಸ್ಪಷ್ಟ ಉತ್ತರ ಇಂದಿಗೂ ಸಿಕ್ಕಿಲ್ಲ ).      

 ಜನವರಿ 23 ನೇತಾಜಿ ಸುಭಾಷ ಚಂದ್ರಬೋಸರ ಜನ್ಮ ದಿನ. ಆದರೆ ಜನವರಿ 23ನೇ ತಾರೀಖಿನ ಮಹತ್ವ ಇವತ್ತು ನಮ್ಮ ಶಾಲೆಯ ಮಕ್ಕಳಿಗೆ ತಿಳಿದಿಲ್ಲ. ತಮ್ಮ ಹೆಸರಿಗೆ “ ಗಾಂಧಿ ” ಎಂದು ಸೇರಿಸಿಕೊಂಡಿರುವ ಡೋಂಗಿ ಗಾಂಧಿವಾದಿಗಳ ಜನ್ಮ ದಿನಾಚರಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ಅಪ್ರತಿಮ ದೇಶ ಭಕ್ತ ಸುಭಾಷರನ್ನು ಅವರ ಜನ್ಮ ದಿನದಂದು ನೆನೆಯುವ ಪ್ರಯತ್ನವನ್ನು ಮಾಡುವುದಿಲ್ಲ. ದೇಶಭಕ್ತರನ್ನು ಗೌರವಿಸದೇ ಇರುವುದು ದೇಶ ದ್ರೋಹವೇ ಸರಿ. ನೇತಾಜಿಯಂತ ದೇಶಭಕ್ತರನ್ನು ಗೌರವಿಸುವುದು ಪ್ರತಿಯೊಬ್ಬ ನಿಜವಾದ ಭಾರತೀಯನ ಕರ್ತವ್ಯ. ಇಂದು ಅವರನ್ನು ಸ್ಮರಿಸೋಣ.     

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸರೇ  
ಭಾರತಾಂಬೆಯ ಧೀರ ಪುತ್ರರೆ
ನಿಮಗಿದೋ ನನ್ನ ನಮನ  
         
ಜೈ ಹಿಂದ್

ರವಿತೇಜ ಶಾಸ್ತ್ರೀ         

4 comments:

  1. Superb Article ...great job

    ReplyDelete
  2. ದನ್ಯವಾದಗಳು, ನನಗೆ ಮೊದಲಿನಿ೦ದಲೂ ಡೌಟು ಗಾ೦ಧಿಜಿಯ ಕಪಟ ರಾಜಕೀಯಕ್ಕೆ ನೇತಾಜಿ ಬಲಿಯಾದರೆ೦ದು, ನೋಟುಗಳನ್ನು ನೋಡುವಾಗ ಅದರ ಮೇಲಿನ ಗಾ೦ಧೀನ ಕ೦ಡರೇ ನನಗೆ ಉರಿಯುತ್ತೆ,ಅದಕ್ಕೇ ಉಗಿದೇ ಒಳಗಿಟ್ಟುಕೊಳ್ಳೋದು

    ReplyDelete