ತನ್ನ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟು ಭಾರತದ
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ವಿನಾಯಕ ದಾಮೋದರ್ ಸಾವರ್ಕರ್. ತಮ್ಮ ಬದುಕಿನ ಪ್ರತಿ
ಹಂತದಲ್ಲೂ ಹಲವಾರು ಕಷ್ಟಗಳನ್ನು ಅನುಭವಿಸಿ ಭಾರತದ ಯುಗಪುರುಷರಂತೆ ಕಾಣುತ್ತಾರೆ ಸಾವರ್ಕರ್. 1883
ಮೇ 28 ರಂದು ಜನಿಸಿದ ಸಾವರ್ಕರ್ ಚಿಕ್ಕಂದಿನಲ್ಲೇ ತಂದೆತಾಯಿ ಕಳೆದುಕೊಂಡು ಅಣ್ಣ ಬಾಬಾರಾವ್ ಸಾವರ್ಕರ್ ಅವರ ಆಶ್ರಯದಲ್ಲಿ ಬೆಳೆದರು. ಅಣ್ಣ ಸಾವರ್ಕರ್
ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಸಾವರ್ಕರ್ ತಾರುಣ್ಯದಲ್ಲಿ “ಮಿತ್ರಮೇಳ” ಎಂಬ
ಗುಂಪು ಹುಟ್ಟುಹಾಕಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ನಂತರ “ಅಭಿನವ ಭಾರತ” ಎಂಬ
ಸಂಘಟನೆ ಸ್ಥಾಪಿಸಿ ವಿದೇಶೀ ವಸ್ತುಗಳನ್ನು ಸುಡುವ ಹೋಳಿ( ಗಾಂಧೀಜಿ ಮುಂದೆ ಇದೆ ವಿಧಾನ
ಅನುಸರಿಸಿದರು) ಆಚರಿಸಿದರು. ಪುಣೆಯ ಫಾರ್ಗುಸನ್ ಕಾಲೇಜಿನಲ್ಲಿ ಬಿ. ಎ ಪದವಿ ಮುಗಿಸಿ ಮುಳ್ಳನ್ನು
ಮುಳ್ಳಿನಿಂದ ತೆಗಯಬೇಕೆಂದು ನಿರ್ಧರಿಸಿ ಕಾನೂನು ಪದವಿ ಪಡೆಯಲು ಇಂಗ್ಲೆಂಡಿಗೆ ಹಾರಿದರು. ಶ್ಯಾಮ್
ಪ್ರಸಾದ್ ಮುಖರ್ಜೀಯವರ ಭಾರತ ಭವನದಲ್ಲಿ ಯುವಕರನ್ನು
ಸಂಘಟಿಸಿ ಇಂಗ್ಲೆಂಡಿನಲ್ಲಿ ಸ್ವಾತಂತ್ರ್ಯದ ಜ್ಯೋತಿ ಮೊಳಗಿಸಿದರು.1857ರ ಸ್ವಾತಂತ್ರ್ಯ
ಸಂಗ್ರಾಮದ ಕುರಿತು ಉತ್ಕೃಷ್ಟವಾದ ಗ್ರಂಥ ಬರೆದದರು. ಮದನಲಾಲ್ ಧಿಂಗ್ರಾ ಎಂಬ ಬಿಸಿ ರಕ್ತದ ಯುವಕರಲ್ಲಿ
ಭಾರತದ ಬಗ್ಗೆ ಅಭಿಮಾನ ಮೂಡಿಸಿದರು. ಮುಂದೆ ಸಾವರ್ಕರ್ ಪ್ರೇರಣೆಯಿಂದ ಧಿಂಗ್ರಾ ಇಂಗ್ಲೆಂಡಿನಲ್ಲಿ
ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತದ ಬಗ್ಗೆ ವಿಷ ಬೀಜಬಿತ್ತುತ್ತಿದ್ದ ಕರ್ಜನ್ ವಾಲಿಯಾನನ್ನು
ಗುಂಡಿಕ್ಕಿ ಕೊಂದ. ಸಾದಾ ಸಾವರ್ಕರ್ ಬಂಧಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರು ಸಾವರ್ಕರ್
ರನ್ನು ಬಂಧಿಸಿದರು.ಪೊಲೀಸರು ಹಡಗಿನಲ್ಲಿ ಸಾವರ್ಕರ್ ಅವರನ್ನು ಹಡಗಿನಲ್ಲಿ ಭಾರತಕ್ಕೆ
ಕರದೊಯ್ಯುವಾಗ ಆಶ್ಚರ್ಯಕರ ರೀತಿಯಲ್ಲಿ ಹಡಗಿನ ಕಿಟಕಿ ಹೊಡೆದು ಸಮುದ್ರಕ್ಕೆ ಹಾರಿ ಈಜಿಕೊಂಡು
ಫ್ರಾನ್ಸ್ ಸೇರಿಕೊಂಡರು. ಫ್ರಾನ್ಸ್ ನಲ್ಲಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದು ಸಾವರ್ಕರ್
ಭಾವಿಸಿದ್ದರು ಆದರೆ ಬ್ರಿಟಿಷರ ಲಂಚಕ್ಕೆ ಬಲಿಯಾದ ಫ್ರಾನ್ಸ್ ಪೊಲೀಸರು ಸಾವರ್ಕರ್ ರನ್ನು
ಬ್ರಿಟಿಷ್ ಪೋಲೀಸರ ಸುಪರ್ದಿಗೆ ವಹಿಸಿದರು. ಬ್ರಿಟಿಷ್ ಸರ್ಕಾರ ಸಾವರ್ಕರ್ ಗೆ 2 ಜೀವಾವಧಿ
ಶಿಕ್ಷೆ ವಿಧಿಸಿತು ಅಂದರೆ ಒಟ್ಟು 50 ವರ್ಷ ಕರಿನೀರಿನ ಶಿಕ್ಷೆ. ಆಗಿನ ಕಾಲದಲ್ಲಿ ಅಂಡಮಾನ್
ನಿಕೋಬಾರ್ ಜೈಲಿನಲ್ಲಿ ನೀಡಲಾಗುತ್ತಿದ್ದ ಅತ್ಯಂತ ಕಟೋರ ಶಿಕ್ಷೆಯಾಗಿತ್ತು. ಅದರೂ ಸಾವರ್ಕರ್
ಕುಗ್ಗದೆ ಜೈಲಿನಲ್ಲಿ ಕೈದಿಗಳ ಹಕ್ಕುಗಳಿಗೆ ಹೋರಾಡಿದರು. ಜೈಲಿನಲ್ಲಿ ನಡೆಯುತ್ತಿದ್ದ
ಮತಾಂತರವನ್ನು ತಡೆದರು. 11 ವರ್ಷಗಳ ನಂತರ ಕರಿನೀರಿನ ಶಿಕ್ಷೆಯಿಂದ ಮುಕ್ತಿ ಹೊಂದಿ ಭಾರತದ ಸಾಮಾನ್ಯ
ಜೈಲಿಗೆ ಸ್ಥಳಾಂತರವಾದರು. ಖಿಲಾಪತ್ ಚಳುವಳಿಯಿಂದ ನೊಂದು ಹಿಂದುತ್ವದ ಕುರಿತು ಕೃತಿ ರಚಿಸಿ ಹಿಂದೂ
ಧರ್ಮದ ಉದ್ದಾರಕ್ಕಾಗಿ ಶ್ರಮಿಸಿದರು. ಜೈಲಿನಿಂದ ಬಿಡುಗಡೆಯಾಗಿ “ಹಿಂದೂ ಮಹಾಸಭಾ” ಎಂಬ ಪಕ್ಷ ಸ್ಥಾಪಿಸಿ
ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಮಹಾರಾಷ್ಟ್ರದಲ್ಲಿ ತಾತ್ಯಾರಾವ್ ಎಂದು ಪ್ರಸಿದ್ದರಾದರು.
ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಅಸಂಖ್ಯಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.
ನೇತಾಜಿಗೆ ವಿದೇಶದಲ್ಲಿ ಸೇನೆ ಕಟ್ಟಲು ಪ್ರೇರಣೆಯಾದವರು ಸಾವರ್ಕರ್. ಸಾವರ್ಕರ್ ಭಾರತದ
ಸ್ವಾತಂತ್ರ್ಯ ಗಳಿಸಲು ಪರೋಕ್ಷವಾಗಿ ಕಾರಣರಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಭಾರತದ ವಿಭಜನೆ
ವಿರೋಧಿಸಿದ ಸಾವರ್ಕರ್ ವಿಭಜನೆಯಿಂದ ನೊಂದರು. ಆದರೆ ಇಂತಹ ಮಹಾತ್ಮನನ್ನು ನೆಹರು ವಿನಾಕಾರಣ
ಗಾಂಧಿ ಹತ್ಯೆಯಲ್ಲಿ ಅರೋಪಿಯನ್ನಾಗಿಸಿ ಅವಮಾನಿಸಿದರು. ಆರೋಪ ಸಾಬೀತಾಗದೆ ಸಾವರ್ಕರ್ ಬಿಡುಗಡೆ
ಹೊಂದಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ನೆಹರು ಸಾವರ್ಕರ್ ಶಿಕ್ಷೆ ಅನುಭವಿಸಿದ ಅಂಡಮಾನ್
ಜೈಲನ್ನು ನಾಶಮಾಡಿ ಆಸ್ಪತ್ರೆ ಕಟ್ಟಿಸಲು ಮುಂದಾದರು ಆದರೆ ಅದು ಸಾಧ್ಯವಾಗಲಿಲ್ಲ. ಮಹಾನ್
ಕುತಂತ್ರಿ ನೆಹರು ತನ್ನ ಸ್ವಾರ್ಥಕ್ಕಾಗಿ ಸಾವರ್ಕರ್ ಗೆ ನೋವು ಕೊಟ್ಟರು.ಕೊನೆಗೆ ನೆಹರು ಸತ್ತಾಗ
ಶಾಸ್ತ್ರೀಜಿ ಸಾವರ್ಕರ್ ಗೆ ಸರ್ಕಾರದಿಂದ ಪಿಂಚಣಿ ಬರುವ ವ್ಯವಸ್ಥೆ ಮಾಡಿಸಿ ಅವರಿಗೆ ಗೌರವ
ಸಲ್ಲಿಸಿದರು. 1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು.
ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ ಮಿಡಿದರು.
ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಆದರೆ ಕಾಂಗ್ರೆಸ್ ಸರ್ಕಾರ
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಈಗಲೂ ಸಹ ಕಾಂಗ್ರೇಸ್ ಸರ್ಕಾರ ಮಹಾನ್ ನಾಯಕ ಸಾವರ್ಕರ್ ರ
ಬಗ್ಗೆ ಇತಿಹಾಸ ಪುಟದಲ್ಲಿ ಸ್ಥಾನ ನೀಡದೆ ಅವರಿಗೆ ಅವಮಾನಿಸಿದೆ. ನಮ್ಮ ಶಾಲೆಯ ಇತಿಹಾಸ
ಪುಸ್ತಕದಲ್ಲಿ ಸಾವರ್ಕರ್ ಕುರಿತು ಪಾಠವೇ ಇಲ್ಲ. ಸದಾ ದೇಶಕ್ಕಾಗಿ ಪರಿತಪಿಸಿದ ಸಾವರ್ಕರ್ ಬಗ್ಗೆ
ಇಂದು ನಮ್ಮ ಯುವಕರಿಗೆ ತಿಳಿದಿಲ್ಲ. ತಿಳಿದಿದ್ದರೆ
ಅದು ಬೆರಳಣಿಕೆಯಷ್ಟು ಮಂದಿಗೆ ಮಾತ್ರ. ಇಂದಿನ ಯುವಪೀಳಿಗೆಗೆ ಇಂತಹ ಮಹಾನ್ ನಾಯಕರ ಕುರಿತು ಅರಿಯಬೇಕು. ನಿಜವಾದ
ನಾಯಕರು ಯಾರು?ಮತ್ತು ತಮ್ಮನ್ನೇ ಬಹುದೊಡ್ಡ ನಾಯಕರು
ಬಿಂಬಿಸಿಕೊಂಡ ನಾಯಕರು ಯಾರು ಗೊತ್ತಾಗಬೇಕು . ಸಾವರ್ಕರ್ ರಂತ ಮಹಾನ್ ದೇಶ ಭಕ್ತರ ನಮ್ಮ ಯುವಕರು ತಿಳಿಯಬೇಕು
ಆಗ ಮಾತ್ರ ನಾವು ಅಂತಹ ಯುಗಪುರುಷನಿಗೆ ಗೌರವ
ಸಲ್ಲಿಸಿದಂತಾಗುತ್ತದೆ.
ವಂದೇ ಮಾತರಂ
ಭಾರತ್ ಮಾತಾಕಿ ಜೈ
ರವಿತೇಜ ಶಾಸ್ತ್ರೀ
No comments:
Post a Comment