Wednesday, June 11, 2014

ಲೇಖನಿಯಿಂದ ಕ್ರಾಂತಿಯನ್ನೆಬ್ಬಿಸಿದ ವೀರನನ್ನು ನೆನೆಯುತ್ತ

ಇಂದು ಕ್ರಾಂತಿಕಾರಿ ಶ್ರೀ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ರ ಜನ್ಮ ದಿನ. 

ನಾವೆಲ್ಲರೂ ಚಂದ್ರ ಶೇಖರ್ ಅಜಾದ್ ರ ಹೆಸರನ್ನು ಕೇಳಿದ್ದೇವೆ ಆದರೆ ಅಜಾದ್ ರ ಗುರು ರಾಮ್ ಪ್ರಸಾದ್ ಬಿಸ್ಮಿಲ್ ರ ಕುರಿತು ನಾವು ಕೇಳಿಲ್ಲ. ಅಜಾದ್ ರನ್ನು ಶ್ರೇಷ್ಠ ಕ್ರಾಂತಿಕಾರಿಯಾಗಿ ರೂಪಿಸಿದವರು ರಾಮ್ ಪ್ರಸಾದ್ ಬಿಸ್ಮಿಲ್. ಕಾಕೋರಿ ದರೋಡೆಯ ರೂವಾರಿ ಶ್ರೀ ರಾಮ್ ಪ್ರಸಾದ್ ಬಿಸ್ಮಿಲರು. ಅಪ್ಪಟ ದೇಶ ಭಕ್ತರಾಗಿದ್ದ ಬಿಸ್ಮಿಲ್ ಉತ್ತಮ ಕವಿಯಾಗಿದ್ದರು. ಭಗತ್ ಸಿಂಗ್ ತಾನು ಗಲ್ಲಿಗೆ ತನ್ನ ಕೊರಳನ್ನು ನೀಡುವ ಮುಂಚೆ ಹಾಡಿದ ಹಾಡು ರಾಮ್ ಪ್ರಸಾದ್ ಬಿಸ್ಮಿಲ್ ರಚಿಸಿದ್ದು.

ರಾಮ್ ಪ್ರಸಾದ್ ಬಿಸ್ಮಿಲ್
ಕಾಕೋರಿ ದರೋಡೆ ಪ್ರಕರಣದಲ್ಲಿ ಬಂಧಿತರಾಗಿ ದೇಶಕ್ಕಾಗಿ ಪ್ರಾಣ ತೆತ್ತರು… ಆ ಬಲಿದಾನದ ದಿನದ ಸನ್ನಿವೇಶ ಮನ ಕಲಕುವಂತಿತ್ತು…ಬಿಸ್ಮಿಲ್ಲರನ್ನು ಅವರ ತಾಯಿ ನೋಡಲು ಬಂದಾಗ ಬಿಸ್ಮಿಲ್ಲರು ಗಳಗಳನೆ ಅತ್ತರಂತೆ… ಇದನ್ನು ಕಂಡ ಅವರ ತಾಯಿಗೆ ಬೇಸರವಾಗಿ ” ಸಾವಿಗೆ ಇಷ್ಟೊಂದು ಅಂಜುವವನಾಗಿದ್ದರೆ ಈ ಮಾರ್ಗವನ್ನೇಕೆ ಆರಿಸಿದಿ” ಎಂದಾಗ ಬಿಸ್ಮಿಲ್ಲರು ಹೇಳುತ್ತಾರೆ ” ಇವು ಸಾವಿನ ಬೆದರಿಕೆಯಿಂದ ತೊಟ್ಟಿಕ್ಕಿದ ಹನಿಗಳಲ್ಲಮ್ಮ.. ಒಬ್ಬ ಮಾತೃಭಕ್ತ ಪುತ್ರ ತನ್ನ ತಾಯಿಯ ದರ್ಶನವನ್ನು ಕಟ್ಟಕಡೆಯ ಸಲ ಪಡೆಯುವಾಗ ಅವನ ಪರಿಶುದ್ಧ ಪ್ರೀತಿಯ ಪ್ರತೀಕವಾದ ಕೊನೆಯ ಅಶ್ರುಬಿಂದುಗಳು”… ಅಬ್ಬಾ ಎಂಥಾ ತಾಯಿ … ಎಂಥಾ ಮಗ ಅಲ್ವಾ…ನೇಣುಗಂಬಕ್ಕೆ ಕರಕೊಂಡು ಹೋಗುವ ಮುನ್ನ ಬಿಸ್ಮಿಲ್ಲರಿಗೆ ಒಂದು ಲೋಟ ಹಾಲು ಕೊಟ್ಟರಂತೆ ಅದನ್ನು ತಿರಸ್ಕರಿಸಿ ಅವರು ನುಡಿಯುತ್ತಾರೆ…”ಹೂಂ ಈಗ ನನಗೇಕೆ ಈ ಹಾಲು? ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಮಾತೃದೇವಿಯ ಎದೆಹಾಲನ್ನೇ ಕುಡಿಯಹೊರಟಿರುವೆ… 


ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ,ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ ಎಂದರೆ ಶಿರವನಪರ್ಿಸುವ ಬಯಕೆ ಎನ್ನ ಮನದೊಳಿಹುದಿಂದು,ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು.
ಈ ಮೇಲಿನ ಸಾಲುಗಳು ಬರೀ ಸಾಲುಗಳಲ್ಲ ಕ್ರಾಂತಿಯ ಮಂತ್ರಗಳು. ಈ ಕವಿತೆಯು ಭಗತ್ ಸಿಂಗ್ ರಿಗೆ ಬಹಳ ಇಷ್ಟವಾದ ನುಡಿಗಳಾಗಿದ್ದವು. ಜೈಲಿನಲ್ಲಿ ಕುಳಿತಾಗಲು ಅವರು ನುಡಿದ ಏಕೈಕ ಗೀತೆಯಿದು.ಇಂಥ ಬೆಂಕಿಯಂಥ ಸಾಲುಗಳನ್ನು ರಚಿಸಿ ಬ್ರಿಟಿಷರ ಎದೆ ನಡುಗಿಸಿದ ಅಗ್ನಿಶಿಶುವೇ ರಾಮ್ಪ್ರಸಾದ್ ಬಿಸ್ಮಿಲ್.
1897 ರಲ್ಲಿ ಉತ್ತರ ಪ್ರದೇಶದ ಷಹಜಾನಪುರ ದಲ್ಲಿ ಜನಿಸಿದ ಬಿಸ್ಮಿಲ್ರು ಶಂತಿಯಿಂದ ಮಾಡುತ್ತಿರುವ ಸ್ವಾತಂತ್ರ ಹೋರಾಟವನ್ನು ಬ್ರಿಟಿಷರು ಹೇಗೆ ಕಾಲಿನಿಂದ ಹೊಸಕಿ ಹಾಕುತ್ತಿದ್ದರು ಎಂಬುದನ್ನು ಮನಗಂಡ ಅವರು ಕ್ರಾಂತಿಕಾರಿಯಾಗಿ ಸಶಸ್ತ್ರ ಹೋರಾಟದ ಕಡೆಗೆ ಒಲವು ತೋರಿದರು.ಆರ್ಯ ಸಮಾಜದ ಚಿಂತನೆಗೊಳತ್ತ ಒಲವಿಟ್ಟುಕೊಂಡಿದ್ದರೂ ಸಹ ನನ್ನಧರ್ಮ ಎಂದು ಅಂಟಿಕೊಂಡವರಲ್ಲ. ಎಲ್ಲರಲ್ಲಿಯೂ ಸಮಾನತೆ ತರಬೇಕು ಎಂಬುದೆ ಅವರ ಉದ್ದೇಶವಾಗಿತ್ತು.

*ಭಾವೈಕ್ಯತೆ ಮೆರೆದ ಬಿಸ್ಮಿಲ್

ರಾಮ್ ಪ್ರಸಾದರು ಹಿಂದೂ ಆಗಿದ್ದರು ಕೂಡ ಬಿಸ್ಮಿಲ್ ಎಂಬುದು ಅವರಿಗೆ ಸಿಕ್ಕ ಬಿರುದು. ಭಾವೈಕ್ಯತೆಯ ಪ್ರತೀಕವಾಗಿದ್ದ ಬಿಸ್ಮಿಲ್ರು ಅಶ್ಫಾಕುಲ್ಲಾರನ್ನು ದೇಶಸೇವೆಗೆ ಕರೆತಂದ ಮಹಾನ್ ನೇತಾರರಾಗಿದ್ದಾರೆ. ಬ್ರಿಟಿಷರು ಅಶ್ಫಾಕುಲ್ಲಾನನ್ನು ರಾಮ್ಪ್ರಸಾದರ ಬಲಗೈ ಎಂದು ಕರೆಯುತ್ತಿರುವಾಗ ಕ್ಷುಲ್ಲಕ ಕಾರಣಕ್ಕಾಗಿ ಧರ್ಮ ಧರ್ಮ ಎಂದು ಹೊಡೆದಾಡುವುದಕ್ಕಿಂತ ಮುಸ್ಲಿಂಮರೆಲ್ಲರ ಕೈ ಒಂದಾದರೆ ಇಡೀ ಬಿಟಿಷ್ ಸಕರ್ಾರದ ವಿನಾಶ ಶತಸಿದ್ಧ ಎಮದು ಹೇಳುತ್ತಿದ್ದರು.
ಹೀಗೆ ವಿವರ್ಿಧ ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಂದು ಗೂಡಿಸಿ ಸ್ವತಂತ್ರ ಭಾರತವನ್ನು ನಿಮರ್ಾಣ ಮಾಡಲು ಫಣತೊಟ್ಟ ಮಹಾನ್ ನೇತಾರನಾಗಿದ್ದರು. ಲೇಖನಿಯನ್ನು ಹಿಡಿಯುವ ಕೈಯಲ್ಲಿಯೇ ಬಂದುಕನ್ನು ಹಿಡಿದು ಸಶಸ್ತ್ರ ಹೋರಾಟಕ್ಕೆ ಅಣಿಯಾದರು. ತಾವೇ ಬರೆದ ಕವನದಮತೆ ಒಂದು ಬಾರಿ ಬ್ರಿಟಿಷರ ತೋಳ್ಬಲವನ್ನು ಪರೀಕ್ಷಿಸಿಒಬಿಟ್ಟರು.
ಕಾಕೊರಿ ರೈಲು ದರೋಡೆ ಎಂಬ ಐತಿಹಾಸಿಕ ಘಟನೆಯ ರೂವಾರಿಯೇ ರಾಮ್ ಪ್ರಸಾದ ಬಿಸ್ಮಿಲ್ ರವರು. ಹಲವಾರು ರೀತಿಯ ವೇಷ ತೊಟ್ಟುಕೊಂಡುಹಲವಾರು ಹೆಸರು ಹೇಳಿಕೊಂಡು ಬಿಜ್ಪುರ್ ಡಕಾಯತಿ, ದ್ವಾರಕಪುರ್ ದರೋಡೆ ಮಾಡಿ ಬ್ರಿಟಿಷರಿಗೆ ತಲೆನೋವಾಗಿದ್ದರು.

*ನಗುನಗುತ್ತ ಸ್ವರ್ಗಕ್ಕೆ ನೆಗೆದ ಸಿಂಹ
1925ರ ಆಗಷ್ಟ 9ರ ಸಂಜೆ ನಡೆದ ಕಾಕೊರಿ ರೈಲು ಧರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ 25 ಮಂದಿ ಕ್ರಾಂತಿಕಾರಿಗಳಲ್ಲಿ ರಾಜೇಂದ್ರ ಲಾಹೀರಿ,ರೋಷನ್ಸಿಂಗ್, ರಾಮ್ಪ್ರಸಾದ್ ಬಿಸ್ಮಿಲ್, ಮತ್ತು ಅಶ್ಫಾಕುಲ್ಲಾರವರಿಗೆ ಗಲ್ಲುಶಿಕ್ಷೆಯಾಯಿತು.ಗಲ್ಲಿಗೇರುವ ದಿನ ಎಂದಿನಂತೆ ವ್ಯಾಯಾಮ ಅಂಗಸಾಧನೆ ಮಾಡಿ ಹಬ್ಬಕ್ಕೆ ಹೊರಟವರಂತೆತ ತಯಾರಾಗಿ ತಿರುಗಾಡುತ್ತಿದ್ದ ಕ್ರಾಂತಿಕಾರಿಗಳನ್ನು ನೋಡಿದಮ್ಯಾಜಿಸ್ಟ್ರೇಟರ್ ಧಿಗ್ಭ್ರಾಂತರಾಗಿ ಬಿಟ್ಟಿದ್ದರು.ನೊಂದ ಸಂಬಧಿಕರಿಗೆ ಸಮಾಧಾನ ಹೇಳಿ ಇದು ನೇಣು ಕುಣಿಕೆಯಲ್ಲಾ ನನ್ನ ಹೊರಾಟಕ್ಕೆ ಬ್ರಿಟಿಷ ಅಧಿಕಾರಿಗಳು ಮಾಡುತ್ತಿರುವ ಸನ್ಮಾನದ ಪ್ರತೀಕವಾದ ಹೂಮಾಲೆ ಎಂದು ಕುಣಿಕೆಯನ್ನು ಚುಂಬಿಸಿ ಕೊನೆಯಬಾರಿಗೆ ಬ್ರಿಟಿಷ ಸಾಮ್ರಾಜ್ಯದ ಗುಂಡಿಗೆ ನಡುಗುವಂತೆ ಒಂದೇ ಮಾತರಂ ಎಂದು ಕೂಗಿ ಕೊನೆ ಉಸಿರು ಎಳೆಯುತ್ತಿದ್ದರು.
1927ರ ಡಿಸೆಂಬರ್ 19 ರಂದು ರಾಮ್ಪ್ರಸಾದರನ್ನು
ಪಯಜಾಬಾದಿನಲ್ಲಿ ಗಲ್ಲುಗಂಬಕ್ಕೇರಿಸಲಾಯಿತು. ಭಾರತಾಂಬೆಯ ಬಿಡುಗಡೆಗಾಗಿ ಹೋರಾಡಿದ ಮತ್ತೊಂದು ಅಗ್ನಿಶಿಶು ಸ್ವತಂತ್ರ್ಯದ ಸಿಹಿ ತಿನ್ನುವ ಮೊದಲೆ ವೀರಮರಣವನ್ನಪ್ಪಿಕೊಂಡಿದ್ದು ನಮ್ಮ ದೌರ್ಭಾಗ್ಯವೇ  ಸರಿ. 


ಈ ದಿನ ಮಹಾನ್ ವೀರನನ್ನು ನೆನೆಯೋಣ 

ವಂದೇ ಮಾತರಂ 

ಸೂಚನೆ:   ಬಿಸ್ಮಿಲ್ ರ ಕುರಿತು ನಾನು  ಸಂಗ್ರಹಿಸಿದ ಹಲವು  ಲೇಖನಗಳನ್ನು ಸೇರಿಸಿ ಒಂದು ಲೇಖನವನ್ನಾಗಿಸಿದ್ದೇನೆ.

No comments:

Post a Comment