It was all started with a Bangalore based facebook page, “Narendra Modi fans from Karnataka”.It was just a page and never had any intension of getting into ground work. Inspired by development work of Narendra Modi, Chethan Kumar along with his friends Ajith Shetty and Srikanth Huddar has started the page in November 2012, to create awareness among the people of Karnataka about gujrath’s progress under Modi. Meanwhile, pre –poll survey of VS elections indicated that BJP may get 60-70 seats but BJP managed to get only 40 seats which were far worse than the survey results. Based on VS election result another survey was done in which BJP was expected to get only 2-3 seats in LS election. Karnataka vidhana sabha elections result was nightmare for BJP and with only an year left to Loksabha elections this was not at all a good news for anyone who wished to see modi as PM. So these guys have realized that there is much more to be done than just hitting the keyboard in order to increase the contribution of Karnataka in making Prime Minister Modi. They decided to work as an alternative to BJP in ground level. “Shankanad” and Tajindar bagga’s ‘Modi’fied India are some of the pro-modi groups which initially supported them.
Wednesday, April 23, 2014
Rise of NaMo Brigade- An Untold Story of Youth Power

Sunday, April 20, 2014
‘ನಮೋ ಬ್ರಿಗೇಡ್’ ಎಂಬ ಯುವಪಡೆ ಉದಯಿಸಿದ ನೈಜ ಕತೆ
2013 ರ ಜೂನ್ ತಿಂಗಳಲ್ಲಿ ನಮೋ ಬ್ರಿಗೇಡ್ ಅಧಿಕೃತವಾಗಿ ಆರಂಭಿಸಬೇಕೆಂದು ನಿರ್ಧರಿಸಲಾಯಿತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ವೇಳೆಗೆ ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಉದ್ಯಮಿ ನರೇಶ್ ಶೆಣೈ ನೇತೃತ್ವದ ತಂಡ ನಮೋ ಬ್ರಿಗೇಡ್ ಕೂಡಿಕೊಂಡಿದ್ದು ನಮೋ ಬ್ರಿಗೇಡ್ ಗೆ ಮತ್ತಷ್ಟು ಬಲ ಬಂದಿತು. ಜುಲೈ 14 ರಂದು ಬೆಂಗಳೂರಿನ ಜಯನಗರದ ರಾಷ್ಟ್ರೋತ್ತಾನ ಪರಿಷತ್ತು ಸಭಾಂಗಣದಲ್ಲಿ ಅಧಿಕೃತವಾಗಿ ನಮೋ ಬ್ರಿಗೇಡ್ ಉದ್ಘಾಟನೆಯಾಯಿತು. ಅದೇ ದಿನ ಮಿಸ್ ಕಾಲ್ ಮೂಲಕ ನಮೋ ಬ್ರಿಗೇಡ್ ನೋಂದಣಿ ಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ನೀರಿಕ್ಷೆಗೂ ಮೀರಿ 3 ಲಕ್ಷಕ್ಕೂ ಆಧಿಕ ಜನರು ಮಿಸ್ ಕಾಲ್ ನೀಡುವ ಮೂಲಕ ನಮೋ ಬ್ರಿಗೇಡ್ ಸದಸ್ಯರಾದರು.
ನಮೋ ಬ್ರಿಗೇಡ್ ಚಟುವಟಿಕೆಗಳ ಸಂವಹನಕ್ಕಾಗಿ ಒಂದು ಕಾರ್ಯಕಾರಿ ಸಮಿತಿ ರಚಿಸಲಾಯಿತು. ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಯವರು ನಮೋ ಬ್ರಿಗೇಡ್ ತಂಡದ ಕೋರಿಕೆಯ ಮೇರೆಗೆ ನಮೋ ಬ್ರಿಗೇಡ್ ಮಾರ್ಗದರ್ಶಕರಾದರು. ಹಿರಿಯರಾದ ನರೇಶ್ ಶೆಣೈ ನಮೋ ಬ್ರಿಗೇಡ್ ಸಂಚಾಲಕರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ಚೇತನ್ ಕುಮಾರ್ ಮತ್ತು ರಾಮಕೃಷ್ಣ ಕುಲಕರ್ಣಿ ಸಹ ಸಂಚಾಲಕರಾದರು. ನೀರಜ್ ಕಾಮತ್, ಶಕುಂತಲಾ ಐಯ್ಯರ್, ಭರತ್ ಸೂರ್ಯಪ್ರಕಾಶ್, ವಿನಯ್ ಕೊಪ್ಪದ್, ಲಕ್ಷ್ಮೀಶ ಕೆ.ಎಸ್, ರಾಜೇಶ್ ರಾವ್, ಶ್ರೀಕಾಂತ್ ಹುದ್ದರ್ ನಮೋ ಬ್ರಿಗೇಡ್ ಕಾರ್ಯಕಾರಿ ಸಮಿತಿಯ ಸದಸ್ಯರಾದರು.
Narendra Modi Fans from Karnataka ಎಂಬ ಫೇಸ್ಬುಕ್ ಪೇಜ್ ನಿಂದ ಆರಂಭವಾದ ನಮೋ ಬ್ರಿಗೇಡ್ ಇಂದು ಹೆಮ್ಮರವಾಗಿ ಬೆಳೆದಿದೆ. 300 ಕ್ಕೂ ಹೆಚ್ಚು ನಮೋ ಬ್ರಿಗೇಡ್ ಶಾಖೆಗಳು ಭಾರತದಲ್ಲಿದೆ. ನಮೋ ಬ್ರಿಗೇಡ್ ಸಂಘಟನೆ ಎಂದು ಕರೆಯುವುದಕ್ಕಿಂತ ಅದನ್ನು ಆಂದೋಲನವೆಂದು ಕರೆಯುವುದು ಸೂಕ್ತವೆನಿಸುತ್ತದೆ. ರಾಜ್ಯದಲ್ಲಿ ನಮೋ ಬ್ರಿಗೇಡ್ ಯಶಸ್ವಿಯಾಗಲು ಕಾರಣ ನರೇಂದ್ರ ಮೋದಿಯವರು. ನರೇಂದ್ರ ಮೋದಿಯೇ ನಮೋ ಬ್ರಿಗೇಡ್ ನ ನಿಜವಾದ ಹೀರೋ. ನಮೋ ಪ್ರಧಾನಿಯಾಗಬೇಕೆಂಬ ಕನಸು ಕಂಡಿದ್ದ ಸಾವಿರಾರು ದೇಶಭಕ್ತರು ನಮೋ ಬ್ರಿಗೇಡ್ ಬೆಂಬಲಿಸಿದರು. ಯಾವುದೇ ಒಬ್ಬ ವ್ಯಕ್ತಿಯಿಂದ ಆಕರ್ಷಿತರಾಗಿ ಯಾರು ನಮೋ ಬ್ರಿಗೇಡ್ ಬೆಂಬಲಿಸಲಿಲ್ಲ. ನಮೋ ಬ್ರಿಗೇಡ್ ನ ಸಾವಿರಾರು ಕಾರ್ಯಕರ್ತರ ಆಕರ್ಷಣೆ ನರೇಂದ್ರ ಮೋದಿಯೆಂಬ ಅಪ್ರತಿಮ ದೇಶ ಭಕ್ತನೇ ಹೊರತು ಬೇರಾರು ಅಲ್ಲ.
ರವಿತೇಜ ಶಾಸ್ತ್ರೀ
ವಿಶೇಷ ಸೂಚನೆ: ಈ ಎಲ್ಲವನ್ನು ಮೊದಲಿನಿಂದ ನೋಡಿ, ಅವಲೋಕಿಸಿ ಲೇಖನವನ್ನು ನಾನು ಬರೆದಿದ್ದೇನೆ. ಅಸತ್ಯ ಗಳಿಂತ ಸತ್ಯಕ್ಕೆ ಪ್ರಾಮುಖ್ಯತೆ ನೀಡಿದ್ದೇನೆ.
Tuesday, April 15, 2014
ನಿಸ್ವಾರ್ಥ ಸೇವೆಯ ಅನುಭವಗಾಥೆ
Friday, April 4, 2014
ನಾ ಕಂಡಂತೆ "ಉಳಿದವರು ಕಂಡಂತೆ"
ಉಳಿದವರು ಕಂಡಂತೆ ಕನ್ನಡ ಚಿತ್ರೋದ್ಯಮದಲ್ಲಿ ವಿನೂತನ, ವಿಶಿಷ್ಟ, ಪ್ರಯೋಗಾತ್ಮಕ ಚಿತ್ರ. ಒಳ್ಳೆಯ ಚಿತ್ರವನ್ನು ಚಿತ್ರ ರಸಿಕರಿಗೆ ನೀಡಿದ ರಕ್ಷಿತ್ ಶೆಟ್ಟಿ ಮತ್ತು ತಂಡಕ್ಕೆ ಧನ್ಯವಾದಗಳು. ಚಿತ್ರದಲ್ಲಿ ಹೊಸತನವನ್ನು ಬಯಸುವ ನನ್ನಂತವರಿಗೆ ಸಿನಿಮಾ ಬಹಳ ಇಷ್ಟವಾಗುತ್ತದೆ. ಬರಿ ಹೊಡೆದಾಟ, ಎಳಸು ಪ್ರೀತಿ, ಪ್ರೇಮದ ಕತೆಗಳಿರುವ ಚಿತ್ರಗಳಿಂತ ಉಳಿದವರು ಕಂಡಂತೆ ಚಿತ್ರ ವಿಭಿನ್ನ.
ಒಂದೇ ಊರಿನ ಹಲವು ಕತೆಗಳನ್ನು ಹಲವರು(ಉಳಿದವರು) ಹೇಗೆ ವಿರ್ಮರ್ಶಿಸುತ್ತಾರೆ ಎಂಬುದು ಚಿತ್ರದ ಕಥಾವಸ್ತು. ಕರಾವಳಿಯ ಸೊಬಗು, ಅಲ್ಲಿನ ಸಂಸ್ಕೃತಿ, ಕಲೆ, ಭಾಷೆ, ಜನಜೀವನ ಎಲ್ಲವನ್ನೂ ಚಿತ್ರದಲ್ಲಿ ಕಾಣಬಹುದು. ಕರಾವಳಿಯ ಮೀನುಗಾರರ ಕತೆ, ವ್ಯಥೆಯನ್ನು ಅಚ್ಚುಕಟ್ಟಾಗಿ ರಕ್ಷಿತ್ ಶೆಟ್ಟಿ ತೋರಿಸಿದ್ದಾರೆ. ಮಂಗಳೂರು ಕನ್ನಡ, ತುಳು, ಕುಂದಾಗನ್ನಡ (ಕುಂದಾಪುರ ಕನ್ನಡ), ಮಂಡ್ಯದ ಕನ್ನಡ ಹೀಗೆ ಹಲವು ಭಾಗದ ಭಾಷೆಗಳು ಚಿತ್ರದಲ್ಲಿದೆ. ಚಿತ್ರತಂಡದ ಶ್ರಮವನ್ನು ಚಿತ್ರದ ಮೇಕಿಂಗ್ ನಿಂದ ಗುರುತಿಸಬಹುದು.
ಚಿತ್ರದ ಸಂಗೀತ ಬಹಳ ಚೆನ್ನಾಗಿದೆ. ಮೊದಲ ಪ್ರಯತ್ನದಲ್ಲೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗೆದ್ದಿದ್ದಾರೆ. ಪೇಪರ್ ಪೇಪರ್ ಮೆಡಿಸಿನ್ ಪೇಪರ್, ಕಾಕಿಗ್ ಬಣ್ಣ ಕಾಂತ, ತಾಯಿಯ ಕುರಿತು ಇರುವ ಹಾಡು ಕಣ್ಣ ಮುಚ್ಚೆ ಮುಂತಾದ ಹಾಡುಗಳು ಕೇಳಲು ಇಂಪಾಗಿವೆ. ಚಿತ್ರದಲ್ಲಿ ಎಲ್ಲ ಕಲಾವಿದರೂ ಚೆನ್ನಾಗಿ ನಟಿಸಿದ್ದಾರೆ. ಕತೆ ಹೇಳುತ್ತಾ confuse ಮಾಡುವ ರಿಚಿ ಪಾತ್ರದ ಮೂಲಕ ರಕ್ಷಿತ್ ಶೆಟ್ಟಿ ಪ್ರೇಕ್ಷಕರನ್ನು confuse ಮಾಡುತ್ತಾರೆ. ಮುನ್ನಾ ಪಾತ್ರದಲ್ಲಿ ಕಿಶೋರ್ ಮುಗ್ದವಾಗಿ ಕಾಣುತ್ತಾರೆ. ರತ್ನಕ್ಕ ನ ಪಾತ್ರ ಮಾಡಿರುವ ತಾರ ತಮ್ಮ ನಟನೆಯ ಮೂಲಕ ಮಾತೃ ಪ್ರೇಮದ ವಾತ್ಸಲ್ಯ ಲೋಕಕ್ಕೆ ನೋಡುಗರನ್ನು ಕೊಂಡೊಯ್ಯುತ್ತಾರೆ. ಶೀತಲ್ ಶೆಟ್ಟಿ ಇಲ್ಲಿಯೂ ಸಹ ಪತ್ರಕರ್ತೆ. ಯಜ್ಞಾ ಶೆಟ್ಟಿ ನಗುವುದಕ್ಕಷ್ಟೇ ಸೀಮಿತ. ಬಾಲು ಪಾತ್ರವನ್ನು ಅಚ್ಯುತ್ ಕುಮಾರ್ ಚೆನ್ನಾಗಿ ನಿರ್ವಹಿಸಿದ್ದಾರೆ. ಡೆಮಾಕ್ರಸಿ ಪೋರ ಸೋಹನ್ ನಟನೆ ನೋಡುವುದೇ ಚೆಂದ.
ಕನ್ನಡ ಚಿತ್ರಗಳನ್ನು ಟೀಕಿಸುವ ಮಹಾಶಯರು ಒಮ್ಮೆ ಚಿತ್ರ ನೋಡಬೇಕು. ಸಿನಿಮಾ ಸುಲಭಕ್ಕೆ ಅರ್ಥವಾಗುವುದಿಲ್ಲ. ಪ್ರೇಕ್ಷಕರ ಬುದ್ದಿಯನ್ನು ಖರ್ಚು ಮಾಡಿಸುತ್ತಾರೆ ರಕ್ಷಿತ್ ಶೆಟ್ಟಿ. Innovative ಚಿತ್ರಗಳನ್ನು ಬಯಸುವರು ತಪ್ಪದೇ ಚಿತ್ರ ನೋಡಿ.
ಎಂತಾ ಸಾವೋ.. ಇನ್ನು ಫಿಲ್ಮ್ ನೋಡಿಲ್ವಾ,, ನೋಡದಿದ್ದರೆ ಶೂಟ್ ಮಾಡ್ತೇನೆ..
Thursday, April 3, 2014
ನನ್ನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರಿಯಿಲ್ಲ ಅನ್ನೋರಿಗೆ...
ಕೇಶವ್