Monday, March 31, 2014

ನಮೋ ಹಾಡು- ಯುಗಾದಿ ಪ್ರಯುಕ್ತ

ವಸಂತ ಮಾಸ ಬಂದಾಗ ಮಾವು ಚಿಗುರಲೇಬೇಕು.

ನಮೋ ಪ್ರಧಾನಿ ಅಭ್ಯರ್ಥಿಯಾದಾಗ ನಾವು ಮತಹಾಕಲೇಬೇಕು.

ಕಾಂಗ್ರೆಸ್ ಮುಕ್ತ ಭಾರತವನ್ನು ನಾವು ನಿರ್ಮಿಸಲೇಬೇಕು.

ಈ ದೇಶದ ಉದ್ದಾರ ಖಂಡಿತವಾಗಿ ಆಗಲೇಬೇಕು.

'ಸತ್ತ' ಪ್ರಜೆಗಳು ಸತ್ಪ್ರಜೆಗಳಾಗಿ ಬದಲಾಗಲೇಬೇಕು.

ತಪ್ಪದೆ ಈ ಬಾರಿ ಚುನಾವಣೆಯಲ್ಲಿ  ಮತ ಚಲಾಯಿಸಲೇಬೇಕು.

ರವಿತೇಜ ಶಾಸ್ತ್ರೀ

Thursday, March 27, 2014

ಮತ್ತೇ ತನ್ನ ಎಂದಿನ ಲಯಕ್ಕೆ ಮರಳಿದ ಹುಲಿ!

ಕಳೆದ ವರ್ಷ 2013 ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಿತು. ಭಾರತದ ಚೆಸ್ ಸಾಮ್ರಾಟ ವಿಶ್ವನಾಥನ್ ಆನಂದ್ ಮತ್ತು ಚೆಸ್ ಜಗತ್ತಿನ ಯುವ ಪ್ರತಿಭೆ 23 ವರ್ಷದ  ಮ್ಯಾಗನಸ್ ಕಾರ್ಲ್ ಸನ್ ನಡುವಿನ ಕಾದಾಟ ಎಂದೇ ಈ ಪಂದ್ಯಾವಳಿ ಬಿಂಬಿತವಾಗಿತ್ತು. ಅನುಭವ ಮತ್ತು ಯುವ ಪ್ರತಿಭೆಯ ನಡುವಿನ ಕಾಳಗದಲ್ಲಿ ಕಾರ್ಲ್ ಸನ್ ವಿಜಯಿಯಾಗಿ ನೂತನ ವಿಶ್ವ ಚಾಂಪಿಯನ್ ಯಾಗಿ ಹೊರಹೊಮ್ಮಿದರು. ಆನಂದ್ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಸಹ ಗೆಲ್ಲಲಿಲ್ಲ ತಮ್ಮ ಸ್ವಯಂ ಪ್ರೇರಿತ ತಪ್ಪಿಂದಾಗಿ ಆನಂದ್ ಪಂದ್ಯಗಳನ್ನು ಸೋತರು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ತಮ್ಮ ಘನತೆ ತಕ್ಕ ಆಟವನ್ನು ಆಡಲಿಲ್ಲ. ಆನಂದ್ ರ ತಪ್ಪುಗಳನ್ನು ಸದುಪಯೋಗ ಪಡಿಸಿಕೊಂಡ ಯುವ ಆಟಗಾರ ಕಾರ್ಲ್ ಸನ್ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಚೆಸ್ ವಿಮರ್ಶಕ ರು ಆನಂದ್ ಯುಗ ಮುಗಿದು ಕಾರ್ಲ್ ಸನ್ ಯುಗ ಆರಂಭವಾಯಿತೆಂದು ವಿಶ್ಲೇಷಣೆ ಮಾಡಿದರು. ಮಾದ್ಯಮಗಳು ಆನಂದ್ ಇನ್ನು ನಿವೃತ್ತಿ ಗೊಳ್ಳುವುದು ಒಳ್ಳೆಯದು ಎಂದು ಟೀಕಿಸಿದವು. ನಮ್ಮ ಭಾರತೀಯ ಮಾದ್ಯಮಗಳ ಮನಸ್ಥಿತಿಯೇ ಅಂತದ್ದು ಜಯಗಳಿಸಿದಾಗ ವ್ಯಕ್ತಿ ಅಥವಾ ತಂಡವನ್ನು ಅಟ್ಟಕ್ಕೇರಿಸುವುದು ಮತ್ತು ಸೋತಾಗ ಮನಸೋಇಚ್ಛೆ ಟೀಕಿಸುವುದು.ಇದು ಬಿಟ್ಟರೆ ಮತ್ಯಾವ ಕೆಲಸವನ್ನು ಅವು ಮಾಡುವುದಿಲ್ಲ. ಚೆಸ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಹಾರಿಸಿದ ಆನಂದ್ ಗೆ ಆತ್ಮ ವಿಶ್ವಾಸ ವನ್ನು ತುಂಬುವ ಪ್ರಯತ್ನವನ್ನು ಯಾರು ಮಾಡಲಿಲ್ಲ. ಸೋಲಿನ ನಂತರ ಪ್ರತಿಕ್ರಿಯಿಸಿದ ಆನಂದ್ “ ನನ್ನ ತಪ್ಪುಗಳನ್ನು ctrl+x ಮಾಡುವ ಸಮಯವಿದು” ಎಂದು ತನ್ನ ತಪ್ಪುಗಳಿಂದ ಹೊರಬರುತ್ತೆನೆಂದು ಆತ್ಮ ವಿಶ್ವಾಸದಿಂದ ನುಡಿದರು. 

ಸೋಲಿನಿಂದ ಧೃತಿಗೆಡದೆ ಅಭ್ಯಾಸ ಮಾಡಿದ ಆನಂದ್ ಇಂದು ತನ್ನ ಎಂದಿನ ಲಯಕ್ಕೆ ಮರಳಿದ್ದಾರೆ. 2014 ರ ಕೊನೆಯಲ್ಲಿ ನಡೆಯುವ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ  ಹಾಲಿ ಚಾಂಪಿಯನ್ ಕಾರ್ಲ್ ಸನ್ ಗೆ ಎದುರಾಳಿ ಯನ್ನು ಹುಡುಕುವ ಸಲುವಾಗಿ ನಡೆಯುತ್ತಿರುವ Candidates2014 ಪಂದ್ಯಾವಳಿಯಲ್ಲಿ ಆನಂದ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಎರಡು ಗೆಲವು ಮತ್ತು ಎಂಟು ಡ್ರಾ ಸಾಧಿಸಿರುವ ಆನಂದ್ 6 ಅಂಕಗಳೊಂದಿಗೆ ಅಗ್ರ ಸ್ಥಾನಿಯಾಗಿದ್ದಾರೆ. ಉಳಿದ ಪಂದ್ಯಗಳಲ್ಲಿ  ಬಿಳಿ ಕಾಯಿಗಳಿಂದ ಆಟವಾಡುವ ಅವಕಾಶ ಆನಂದ್ ಗಿರುವುದರಿಂದ ಅವರು ಈ ಪಂದ್ಯಾವಳಿಯನ್ನು ಗೆಲ್ಲುವುದು ಬಹುತೇಕ ಖಚಿತ ಹಾಗೂ ಮತ್ತೊಮ್ಮೆ ಆನಂದ್ ಮತ್ತು ಕಾರ್ಲ್ ಸನ್ ನಡುವೆ ವಿಶ್ವ ಚಾಂಪಿಯನ್ ಶಿಪ್ ಗಾಗಿ ಕಾದಾಟ ನಡೆಯುವುದರಲ್ಲಿ ಸಂಶಯವೇ ಇಲ್ಲ. ಈ ಪಂದ್ಯಾವಳಿ ಯಲ್ಲಿ ಆನಂದ್ ಸಾಕಷ್ಟು ಕಲಿತಿದ್ದಾರೆ. ಹಿಂದಿನ ಟೂರ್ನಿ ಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡಿರುವ ಆನಂದ್ “ ಪಂದ್ಯಾವಳಿಯ ಶ್ರೇಷ್ಟ ಮತ್ತು ಅಜೇಯ ಆಟಗಾರ ”  ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ನಾನು ಕಂಡಂತೆ ಭಾರತೀಯ ಕ್ರೀಡಾ ಜಗತ್ತಿನಲ್ಲಿ ಟೀಕೆಗಳಿಗೆ ತಮ್ಮ ಪ್ರದರ್ಶನದಿಂದ ಉತ್ತರಕೊಡುವ ಶ್ರೇಷ್ಠ ಆಟಗಾರರೆಂದರೆ ಸಚಿನ್ ತೆಂಡೂಲ್ಕರ್ ಮತ್ತು ವಿಶ್ವನಾಥನ್ ಆನಂದ್. ತಮ್ಮ ಬ್ಯಾಟಿಂಗ್ ಫಾರ್ಮ್ ಕಳೆದುಕೊಂದಾಗ ಸಚಿನ್ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಆಟದತ್ತ ಗಮನಹರಿಸಿ ಫಾರ್ಮ್ ಕಂಡುಕೊಂಡು ಟೀಕಾಕಾರಿಗೆ ತಮ್ಮ ಬ್ಯಾಟ್ ನಿಂದಲೇ ಉತ್ತರಿಸಿದ್ದಾರೆ. ಅದೇ ರೀತಿ ಆನಂದ್ ಸಹ ಟೀಕೆಗಳ ಕಡೆ ಗಮನಹರಿಸದೇ ತಮ್ಮ ಪ್ರದರ್ಶನವನ್ನು ಉತ್ತಮ ಪಡಿಸಿಕೊಂಡು ಚೆಸ್ ನಲ್ಲಿ ಭಾರತಕ್ಕೆ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

ಹಣಕ್ಕಾಗಿ ಕ್ರೀಡೆಯ ಘನತೆಯನ್ನು ಹಾಳು ಮಾಡುತ್ತಿರುವ ಕ್ರಿಕೆಟ್ ಆಟಗಾರ ಮುಂದೆ ಆನಂದ್ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಚೆಸ್ ಆಡಲು ಸೂಕ್ತ ವಾತಾವರಣ ಬಯಸಿ ಆನಂದ್ ಸ್ಪೇನ್ ನಲ್ಲಿ ವಾಸಿಸುತ್ತಿದ್ದಾರೆ ಆದರೆ ಅವರು ಚೆಸ್ ನಲ್ಲಿ ಭಾರತವನ್ನೇ ಪ್ರತಿನಿಧಿಸುತ್ತಾರೆ. ಸರ್ಕಾರ ತಮಗೇ ಉತ್ತಮ ಸೌಲಭ್ಯ ಕಲ್ಪಿಸಿಲ್ಲ ಎಂಬ ನೆಪವೊಡ್ಡಿ ಆನಂದ್ ಬೇರೆ ದೇಶಕ್ಕೆ ಆಡಬಹುದಿತ್ತು ಆದರೆ ಆನಂದ್ ಹಾಗೇ ಮಾಡಲಿಲ್ಲ. ಭಾರತಕ್ಕಾಗಿ ಆಡುವುದು ನನ್ನ ಹೆಮ್ಮೆ ಎಂದು ಅವರು  ಹೇಳಿಕೊಂಡಿದ್ದಾರೆ.ಅವರ ದೇಶಭಕ್ತಿ ಗೆ ನನ್ನದೊಂದು ಸಲಾಂ. 

ಚೆಸ್ ಉಗಮವಾಗಿದ್ದು ಭಾರತದಲ್ಲಿಯೇ. ಆದರೆ ಚೆಸ್ ನ ಮೂಲಕ ಭಾರತ ಇಂದು ಜಗತ್ತಿನಲ್ಲಿ ಗುರುತಿಕೊಂಡರೆ ಅದಕ್ಕೆ ಕಾರಣ ವಿಶ್ವನಾಥನ್ ಆನಂದ್. ರಷ್ಯ, ನಾರ್ವೆ ಮುಂತಾದ ಐರೋಪ್ಯ ದೇಶಗಳು ಚೆಸ್ ನಲ್ಲಿ ಪ್ರಭುತ್ವ ಸಾಧಿಸಿದ್ದ ಸಮಯದಲ್ಲಿ ಆನಂದ್ ಚೆಸ್ ದಿಗ್ಗಜ ಆಟಗಾರರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿ ಚೆಸ್ ನಲ್ಲಿ ಭಾರತವೇನು ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು.

ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್, 1997, 1998, 2003 ಮತ್ತು 2004 ರಲ್ಲಿ ಚೆಸ್ ಆಸ್ಕರ್( ವಿಶ್ವ ಚೆಸ್ ನಲ್ಲಿ ಅತ್ಯುತ್ತಮ ಸಾಧನೆಗೆ ನೀಡುವ ಪ್ರಶಸ್ತಿ) ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದ ಚೆಸ್ ಗೆ ಆನಂದ್ ಕೊಟ್ಟಿರುವ ಕೊಡುಗೆ ಅಪಾರ. ವಯಸ್ಸು 44ಕ್ಕಾದರೂ ಆನಂದ್ ರ ಗೆಲುವಿನ ದಾಹ ಇನ್ನು ನೀಗಿಲ್ಲ. ದೇಶಕ್ಕೆ ತಮ್ಮ ಸೇವೆಯನ್ನು ಚೆಸ್ ನ ಮೂಲಕ ಅವರು ನೀಡುತ್ತಿದ್ದಾರೆ. ಈ ಎಲ್ಲಾ ಸಾಧನೆ ಮಾಡಿರುವ ಆನಂದ್ ಭಾರತದ ಅತ್ಯುನ್ನತ ಪ್ರಶಸ್ತಿ  ಭಾರತ ರತ್ನ ಪ್ರಶಸ್ತಿ ಗೆ ಅರ್ಹರು. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಕ್ರಿಕೆಟ್ ದಿಗ್ಗಜ ಸಚಿನ್ ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ನೀಡಿ ಅವರಿಂದ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶ ಸರ್ಕರದ್ದಾಗಿತ್ತು ಆದರೆ ಇದ್ದಕ್ಕೆ ಸಚಿನ್ ಸೊಪ್ಪು ಹಾಕಲಿಲ್ಲ.  ಸಚಿನ್ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದು ನಾನು ಹೇಳುತ್ತಿಲ್ಲ . ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಬುದ್ಧತೆ ಸಾಧಿಸಿರುವ ಸಚಿನ್ ಖಂಡಿತ  ಭಾರತ ರತ್ನ ಪ್ರಶಸ್ತಿ ಗೆ ಅರ್ಹರು ಆದರೆ ಸಚಿನ್ ಜೊತೆಗೆ ಆನಂದ್ ಮತ್ತು ದ್ಯಾನ್ ಚಂದ್ ಗೆ ಪ್ರಶಸ್ತಿ ನೀಡಬೇಕಿತ್ತು. ಮುಂದೆ ಬರುವ ಸರ್ಕಾರ ಈ ಬಗ್ಗೆ ಯೋಚಿಸಿ ಆನಂದ್ ಗೆ ಭಾರತ ರತ್ನ ನೀಡಿದರೆ ಅದು ಅವರ ಸಾಧನೆಗೆ ನೀಡುವ ಪುರಸ್ಕಾರ ಎಂದರೆ ತಪ್ಪಿಲ್ಲ.  

ಈ ವರ್ಷದ ಕೊನೆಯಲ್ಲಿ ವಿಶ್ವ  ಚೆಸ್ ಚಾಂಪಿಯನ್ ಶಿಪ್  ಪಂದ್ಯಾವಳಿ ಯಲ್ಲಿ  ಮತ್ತೆ ಕಾರ್ಲ್ ಸನ್ ಮತ್ತು ಆನಂದ್  ಮುಖಾಮುಖಿಯಾಗುತ್ತಿದ್ದಾರೆ. ತನ್ನ ಎಂದಿನ ಲಯಕ್ಕೆ ಮರಳಿರುವ ಹುಲಿ ಆನಂದ್ ಈ ಬಾರಿ  ಗೆದ್ದು 6 ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ನಾನು ಹಾರೈಸುತ್ತೇನೆ.

ವಿಶಿ ನಿಮಗೆ ಶುಭಾವಾಗಲಿ..

ರವಿತೇಜ ಶಾಸ್ತ್ರೀ.                                                                                              

Sunday, March 23, 2014

ನಗುನಗುತ್ತಾ ಗಲ್ಲುಗಂಬವನ್ನೇರಿದ ವೀರ ಹುತಾತ್ಮರ ನೆನಪಿಗೆ...

ಅಂದು ಮಾರ್ಚ್ 23 1931. ಭಾರತವೆಂಬ ಸಮೃದ್ದ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಿಗೊಳಿಸಬೇಕೆಂದು ಪಣತೊಟಿದ್ದ ಮೂರು ನವಉತ್ಸಾಹಿ ತರುಣರು ತಮ್ಮ ಪ್ರಾಣವನ್ನು ತಾಯಿ ಭಾರತಿಗೆ ಅರ್ಪಿಸಲು ಸಿದ್ದರಾಗಿದ್ದರು. ಮಹದಾನಂದ ಮತ್ತು ಉತ್ಸಾಹ ಆ ಮೂರು ಯುವಕರ ಮೊಗದಲ್ಲಿ ವ್ಯಕ್ತವಾಗುತ್ತಿತ್ತು. ಈ ತರುಣರನ್ನು ಗಲ್ಲಿಗೇರಿಸಲು 5 ಜನ ಪೋಲಿಸ್ ಅಧಿಕಾರಿಗಳು ಸಿದ್ದರಾಗಿದ್ದರು. ಇವರ ಹರ್ಷವನ್ನು ಗಮನಿಸಿದ ಒಬ್ಬ ಪೋಲಿಸ್ ಅಧಿಕಾರಿ ಯುವಕರನ್ನು ಪ್ರಶ್ನಿಸಿದ.

ಅಧಿಕಾರಿ:  “ ಈ ನಿಮ್ಮ ಸಂತೋಷಕ್ಕೆ ಕಾರಣವೇನು?” ಎಂದ.

ಯುವಕ:  “ ನಾವು ಮೂರು ಜನ ಗಲ್ಲಿಗೇರುವ ಸಂದರ್ಭದಲ್ಲಿ ನೀವೆಲ್ಲ ಇದ್ದಿರಲ್ಲ ಇದು ನಿಮ್ಮ ಭಾಗ್ಯವಲ್ಲವೇ?”
.
ಅಧಿಕಾರಿ: “ ಕ್ಷಣ ಮಾತ್ರದಲ್ಲಿ ಹೆಣವಾಗುವ ನೀನು ನಮ್ಮ ಅದೃಷ್ಟವನ್ನೇಕೆ ಹೊಗಳುತ್ತಿಯ?”

ಯುವಕ:  “ ನಾಡ ಮುಕ್ತಿಗಾಗಿ ಈ ದೇಶದ ಯುವಕರು ನಗುನಗುತ್ತಾ ಗಲ್ಲಿಗೇರುವುದನ್ನು ನೋಡುವ ಭಾಗ್ಯ 35 ಕೋಟಿ ಜನರಲ್ಲಿ  5 ಮಂದಿಗೆ ಮಾತ್ರ ಸಿಕ್ಕಿದೆ ಇದು ನಿಮ್ಮ ಅದೃಷ್ಟವಲ್ಲವೇ” ಎಂದು ಸಾವಿನಲ್ಲೂ ಮತ್ತೊಬ್ಬರ ಭಾಗ್ಯವನ್ನು ಹೊಗಳಿದ ಆ ಯುವಕ.

 ಹೀಗೆ ಉತ್ತರಿಸಿದ ಯುವಕನೇ ಭಗತ್ ಸಿಂಗ್. ಮತ್ತು ಆತನ ಜೊತೆ ಗಲ್ಲಿಗೇರಿದ ಮತ್ತಿಬ್ಬರು ರಾಜಗುರು ಮತ್ತು ಸುಖದೇವ್. ತಮ್ಮ ಸಾವಿನಲ್ಲೂ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿದ ಮಹಾನ್ ಪುರುಷರು ಭಗತ್ ಸಿಂಗ್, ರಾಜಗುರು, ಸುಖದೇವ್.
 ಸ್ವಾಮಿ ವಿವೇಕಾನಂದರು ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ತಮ್ಮ ಕೆಲಸ ಮಾಡಿ ಮುಗಿಸಿದರು. ಏಸು ಕ್ರಿಸ್ತನು ಮೂವತ್ಮೂರು ವರ್ಷಗಳ ವಯಸ್ಸಿನಲ್ಲಿ, ಮಹಾಪುರುಷ ಶಂಕರಾಚಾರ್ಯರು ಮೂವತ್ತೆರಡು ವರ್ಷಗಳ ವಯಸ್ಸಿನಲ್ಲಿ ತಮ್ಮ ಕೆಲಸಗಳನ್ನು ಮಾಡಿ ಮುಗಿಸಿದರು. ಆದರೆ ಇವನೋ ಹಳೆಯ ದಾಖಲೆಗಳೆಲ್ಲವನ್ನೂ ಮುರಿದ.ಇಪ್ಪತ್ಮೊರನೆ ವಯಸ್ಸಿನಲ್ಲಿಯೇ ಅವನು ತನ್ನ ಲೀಲಾವಿನೋದದ ರಂಗಭೂಮಿಯ ಪರದೆಯನ್ನು ಎತ್ತಿದ್ದೂ ಆಯಿತು, ಇಳಿಸಿದ್ದೂ ಆಯಿತು. ಜೀವನ ನಾಟಕವನ್ನೇ ಮುಗಿಸಿಬಿಟ್ಟ.
 ಅವನೇ ಭಗತ್ ಸಿಂಗ್, ಹುತಾತ್ಮ ರ ಹುತಾತ್ಮ ಭಗತ್ ಸಿಂಗ್ !
(ಯುಗದ್ರಷ್ಟ ಭಗತ್ ಸಿಂಗ್ ಕೃತಿಯಿಂದ ಆಯ್ದ ಭಾಗ). ಖಂಡಿತ ನಿಜ ಮೇಲಿನ ಸಾಲುಗಳಂತೆ ಭಗತ್ ಸಿಂಗ್ ಸಾವಿನಲ್ಲಿ ದಾಖಲೆ ಬರೆದವರು. ತನ್ನ 23 ವರ್ಷಗಳ ಜೀವಿತಾವಧಿಯಲ್ಲಿ, ಕ್ರಾಂತಿಯ ಜ್ವಾಲೆಯನ್ನು ಶರವೇಗದಂತೆ ಪಸರಿಸಿದ ಭಗತ್ ಸಿಂಗ್, ಅದೇ ವೇಗದಲ್ಲಿ ತಾಯಿ ಭಾರತಿಗೆ  ತಮ್ಮ ಪ್ರಾಣವನ್ನು ಅರ್ಪಿಸಿದರು. ತನ್ನ ಕಿಶೋರವಸ್ಥೆಯಲ್ಲಿ ಹೊಲದಲ್ಲಿ ಬಂದೂಕು ಬೆಳೆಯುತ್ತೆನೆಂದ ಗಳಿಗೆಯಿಂದ ಹಿಡಿದು, ಸ್ಯಾಂಡರ್ಸ್ ವಧೆ, ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ ಮಾಡಿದ ಘಟನೆಗಳನ್ನು  ಒಳಗೊಂಡು,   ಕೊನೆಗೆ ತಾನೂ ಸಾಯುವವರೆಗೂ ಭಗತ್ ಸಿಂಗ್ ಮಾಡಿದ್ದು ಮಾಡಿದ್ದು ಒಂದೇ ಜಪ. ಅದು ಸ್ವಾತಂತ್ರ್ಯ ಲಕ್ಷ್ಮಿಯ ಜಪ.
ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂಬ ತುಡಿತ, ಭಗತ್ ಸಿಂಗ್ ರ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿತ್ತು. ಸ್ವಾತಂತ್ರ್ಯ ಭಾರತ ಹೇಗಿರಬೇಕೆಂಬ ಕನಸನ್ನು ಅವರು ಕಂಡಿದ್ದರು. ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕೆಂದು ಪಣತೊಟ್ಟಿದ್ದ ಭಗತ್ ಸಿಂಗ್, ಕ್ರಾಂತಿಯ ವಿಚಾರಗಳನ್ನು ಅರಿಯುವ ಸಲುವಾಗಿ ಯುರೋಪ್, ರಷ್ಯನ್ ಕ್ರಾಂತಿಕಾರಿಗಳ ಇತಿಹಾಸವನ್ನು ಅಭ್ಯಸಿಸಿದ್ದರು. ಚಿಕ್ಕಪ್ಪ ಅಜಿತ್ ಸಿಂಗ್ ರ ಸಾಹಸಗಳಿಂದ ಪ್ರಭಾವಿತರಾಗಿದ್ದ ಭಗತ್, ಆರ್ಯ ಸಮಾಜದ ಸಿದ್ದಾಂತಗಳಿಂದ  ಪ್ರೆರಿತರಾಗಿದ್ದರು. ರಾಣಾ ಪ್ರತಾಪ್ ಸಿಂಹ, ಗುರುಗೋವಿಂದ್ ಸಿಂಗ್, ಶಿವಾಜಿ ಭಗತ್ ಸಿಂಗ್ ರಿಗೆ ಆದರ್ಶರಾಗಿದ್ದರು.

    ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ತನ್ನ ಸ್ವಾತಂತ್ರ್ಯ ಜೀವನ ಆರಂಭಿಸಿದ ಭಗತ್ ಸಿಂಗ್ ರನ್ನು ಜಲಿಯನ್ ವಾಲಾಭಾಗ್ ಹತ್ಯಾಕಂಡದ ಬೀಕರ ಘಟನೆ ಕ್ರಾಂತಿ ಮಾರ್ಗಕ್ಕೆ ಕರೆದುಕೊಂಡು ಹೋಯಿತು. ನೌ ಜವಾನ್ ಭಾರತ್ ಸಭಾದ ಸದಸ್ಯರಾಗಿ ಕ್ರಾಂತಿಯ ಕಿಚ್ಚನ್ನು ಲಾಹೋರದಲ್ಲಿ  ಹರಡಿದರು. ಮುಂದೆ ಅಮರ ಕ್ರಾಂತಿಕಾರಿ ಚಂದ್ರ ಶೇಖರ ಅಜಾದ್ ರ ಸಂಪರ್ಕಕ್ಕೆ ಬಂದ ಭಗತ್ ಸಿಂಗ್, ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್(HSRA) ನ ಸದಸ್ಯರಾದರು. ಲಾಲ್ ಲಜಪತ ರಾಯರ ಸಾವಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಸ್ಯಾಂಡರ್ಸ್ ಎಂಬ ಪೋಲಿಸ್ ಅಧಿಕಾರಿಯ ವಧೆಯಾಯಿತು. ಈ ವಧೆಯ ರೂವಾರಿ ಭಗತ್ ಸಿಂಗ್ ಮತ್ತು ಆತನ ಕ್ರಾಂತಿ ಸಂಸ್ಥೆ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್. ತನ್ನ ಕ್ರಾಂತಿಯ ತತ್ವಗಳನ್ನು ಇಡೀ ದೇಶಕ್ಕೆ ಸಾರಿ, ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಸುವ ಸಲುವಾಗಿ, ಭಗತ್ ಸಿಂಗ್ ಮತ್ತು ಬುಟುಕೇಶ್ವರ ದತ್ತ್ ಅಸೆಂಬ್ಲಿ ಯಲ್ಲಿ ಬಾಂಬ್ ಸ್ಪೋಟಿಸಿ, ತಾವೇ ಪೋಲಿಸರಿಗೆ ಶರಣಾದರು. ಮಲಗಿದ್ದ ಭಾರತೀಯರನ್ನು ಎಬ್ಬಿಸುವುದು ಅದರ ಉದ್ದೇಶವಾಗಿತ್ತು. ಆದರೆ ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಭಗತ್ ಸಿಂಗ್ ಸ್ನೇಹಿತ  ರಾಜ್ ಗೋಪಾಲ್, ಕ್ರಾಂತಿಕಾರಿಗಳ ವಿರುದ್ದ ಸಾಕ್ಷಿ ಹೇಳಿ ದೇಶ ದ್ರೋಹ ಬಗೆದ. ಕೋರ್ಟ್ ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಗಲ್ಲು ಶಿಕ್ಷೆ ವಿಧಿಸಿತು. ಈ ತೀರ್ಪು  ದೇಶಾದ್ಯಂತ ಸಂಚಲನವನ್ನೇ  ಮೂಡಿಸಿತು. ಸಾವಿರಾರು ಜನ ಭಗತ್ ಸಿಂಗ್ ರ ಗಲ್ಲು ಶಿಕ್ಷೆ ಯನ್ನು ತಪ್ಪಿಸಲು ಹೋರಾಡಿದರು. ಆದರೆ ಯಾವುದು ಫಲಿಸಲಿಲ್ಲ. ಮಾರ್ಚ್ 23 1931 ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮರಾದರು. 
        
   ಭಾರತ ಸ್ವಾತಂತ್ರ್ಯಗಳಿಸಬೇಕೆಂದರೆ ನಮ್ಮಂತ ಯುವಕರ ಬಲಿದಾನ ಅಗತ್ಯವೆಂದು ಭಗತ್ ಸಿಂಗ್ ಬಲವಾಗಿ ನಂಬಿದ್ದರು. ಕ್ಷಮಾದಾನ ಅರ್ಜಿ ಸಲ್ಲಿಸಲು ತಂದೆ ಕಿಶನ್ ಸಿಂಗ್ ಪ್ರಯತ್ನಿಸಿದಾಗ ಭಗತ್ ಸಿಂಗ್ ವಿರೋಧಿಸಿದ್ದರು. ಬಾಲ್ಯದಲ್ಲಿ ತಾತ ಅರ್ಜನ ಸಿಂಹರಿಗೆ ತನ್ನ ಜೀವನವನ್ನು ದೇಶದ ಸ್ವಾತಂತ್ರ್ಯ  ಮುಡುಪಾಗಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಭಗತ್ ಸಿಂಗ್,  ಅದರಂತೆ ತಮ್ಮ ಪ್ರಾಣವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದರು. ಆತನ ಜೊತೆ ಗಲ್ಲಿಗೇರಿದ ರಾಜಗುರು ಮತ್ತು ಸುಖದೇವರು ಸಹ ದೇಶಭಕ್ತಿಯ ಮೂರ್ತರೂಪದಂತಿದ್ದರು. ಸುಖದೇವ್ ಕ್ರಾಂತಿ ಚಟುವಟಿಕೆಗಳಿಗೆ ಯೋಜನೆ ರೂಪಿಸುವಲ್ಲಿ ನಿಸ್ಸೀಮನಾಗಿದ್ದನು. ಸ್ಯಾಂಡರ್ಸ್ ಹತ್ಯೆಯ ಯೋಜನೆಯ ರೂವಾರಿಯೇ  ಸುಖದೇವ್. ರಾಜಗುರು ಪಿಸ್ತೂಲು ಹಿಡಿದರೆ ಗುರಿತಪ್ಪುತ್ತಿರಲಿಲ್ಲ. ಆತ ಶಾರ್ಪ್ ಶೂಟರ್ ಆಗಿದ್ದನು.
ಕಾಲೇಜಿನಲ್ಲಿ ಭಗತ್ ಸಿಂಗ್ ಜಯಂತಿ  ಆಚರಿಸಿದಾಗ ಮಾಡಿಸಿದ ಬ್ಯಾನರ್. 

   ಭಗತ್ ಸಿಂಗ್, ರಾಜಗುರು, ಸುಖದೇವ್ ರ ಗಲ್ಲಿಗೇರಿ ಇಂದಿಗೆ 83 ವರ್ಷಗಳಾಯಿತು. ಅಂದು ತಾವು ತಮ್ಮ ಪ್ರಾಣವನ್ನು ಅರ್ಪಿಸುವಾಗ, ಮುಂದಿನ ಪೀಳಿಗೆಗೆ ನನ್ನ ಬಲಿದಾನ ಆದರ್ಶವಾಗಲಿ ಎಂದು ಭಗತ್ ಸಿಂಗ್ ಇಚ್ಚಿಸಿದ್ದರು. ಆದರೆ ಇಂದು ನಮ್ಮ ಯುವಜನತೆ ಭಗತ್ ಸಿಂಗ್ ರನ್ನೇ ಮರೆತುಬಿಟ್ಟಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಆರು ಕೋಟಿ ಹುತಾತ್ಮರು ನೀಡಿದ ಭಿಕ್ಷೆ. ಭಿಕ್ಷೆ ಕೊಟ್ಟ ಮಹಾತ್ಮರ ಸ್ಮರಣೆ ನಮ್ಮ ಕರ್ತವ್ಯ. ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಅಜಾದ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಮದನಲಾಲ್ ಧಿಂಗ್ರಾ ರಂತ ಕ್ರಾಂತಿಪುರುಷರು ನಮಗೆ ಆದರ್ಶವಾಗಲಿ.

 ಇಂದು ಮಾರ್ಚ್ 23 ಭಗತ್ ಸಿಂಗ್, ರಾಜಗುರು, ಸುಖದೇವ್ ರ ಬಲಿದಾನದ ದಿನ. ಆ ವೀರ ಹುತಾತ್ಮ ರ ಸ್ಮರಣೆಯನ್ನು ಮಾಡೋಣ.. ಅವರ ಬಲಿದಾನವನ್ನು ಸಾರ್ಥಕಗೊಳಿಸೋಣ...

ಅವರಿಗಾಗಿ ಈ ಕೆಳಗಿನ ಸಾಲುಗಳನ್ನು ಅರ್ಪಿಸುತ್ತಿದ್ದೇನೆ.

ನಗುನಗುತ್ತಾ ಗಲ್ಲುಗಂಬವೇರಿದ ಓ ವೀರ ಹುತಾತ್ಮರೇ..

ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ನೀವು ಕೊಟ್ಟ ಭಿಕ್ಷೆ..

ನಿಮ್ಮ ಬಲಿದಾನ ನಮ್ಮ ಯುವಜನತೆಗೆ ಆದರ್ಶವಾಗಲಿ..

ಬದುಕಿದ್ದು ಸತ್ತಂತಿರುವ ಯುವಜನತೆ ಎಚ್ಚರಗೊಳ್ಳಲಿ...

ನಿಮ್ಮ ಸಾಹಸ, ಹೋರಾಟ, ಬಲಿದಾನಗಳು ಸಾರ್ಥಕವಾಗಲಿ...

ನಿಮ್ಮ ಆತ್ಮ ಕ್ಕೆ ಶಾಂತಿ ಸಿಗುವಂತಾಗಲಿ...

ಭಗತ್ ಸಿಂಗ್ ರಾಜಗುರು ಸುಖದೇವ್ ಅಮರ್ ರಹೇ....

ಇಂಕ್ವಿಲಾಬ್ ಜಿಂದಾಬಾದ್...

ಕ್ರಾಂತಿ ಚಿರಾಯುವಾಗಲಿ..

ವಂದೇ ಮಾತರಂ

ರವಿತೇಜ ಶಾಸ್ತ್ರೀ       

Monday, March 17, 2014

ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ಕೆಲವು ಪ್ರಸಿದ್ದ ಪದ್ಯಗಳು.

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ ಮಂಕುತಿಮ್ಮ ।।
 
ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ ಋತವ ಬಿಡದಿರಲಿ ।।
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ ।
ಅತಿ ಬೇಡವೆಲ್ಲಿಯುಂ ಮಂಕುತಿಮ್ಮ ।।


ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ।
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ।।
ಗುಡಿಯೊಳಗೆ ಕೊಡುವ ಹೂ ದೆೃವಭಕ್ತಗೆ ಚೆಂದ ।
ಬಿಡಿಗಾಸು ಹೂವಳಗೆ ಮಂಕುತಿಮ್ಮ ।।

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||


Monday, March 10, 2014

ಎಷ್ಟೇ ಬೆಲೆ ತೆತ್ತು ಪೊರಕೆ ಕೊಂಡರೂ ಅದು ಬಳಕೆಗೆ ಸಿಗುವುದು ಕೇವಲ 49 ದಿನ ಮಾತ್ರ!

ಕಳೆದ ಕೆಲವು ದಿನಗಳಿಂದ ಈ ದೇಶ ಪುಕ್ಕಟೆ ಮನರಂಜನೆಗೆ ಸಾಕ್ಷಿಯಾಗಿದೆ. ಮನರಂಜನೆಯ ಸಂಪೂರ್ಣ ಕ್ರೆಡಿಟ್  ಅರವಿಂದ್ ಕೇಜ್ರಿವಾಲ್ ಮತ್ತು ಆತನ ಪಕ್ಷವಾದ ಆಮ್ ಆದ್ಮಿ ಪಾರ್ಟಿ ಗೆ ಸಲ್ಲುತ್ತದೆ. ಸಾಲು ಸಾಲಾಗಿ ನಡೆದ ಬೃಹನಾಟಕಗಳು ಜನರಿಗೇ ನಯಾಪೈಸೆ ಖರ್ಚಿಲ್ಲದೆ ಮನರಂಜನೆ ಕೊಟ್ಟಿತು. ಈ ನಾಟಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಹಳ ಆತಂಕಕಾರಿ ವಿಷಯಗಳು ಬಹಿರಂಗವಾಗುತ್ತದೆ.

    ಮಾರ್ಚ್ 6 ರಂದು ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗದ ಅನುಮತಿ ಪಡೆಯದೇ ಗುಜರಾತಿನಲ್ಲಿ ರೋಡ್ ಶೋ ಮಾಡಲು ಮುಂದಾದಾಗ ಅಲ್ಲಿನ ಪೊಲೀಸರು ಅರವಿಂದ್ ಕೇಜ್ರಿವಾಲ್ನನ್ನು ತಡೆದು ಪ್ರಶ್ನಿಸಿದರು. ಈ ತಡೆಯನ್ನೇ ಬಂಧನವೆಂದು ಭಾವಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನರೇಂದ್ರ ಮೋದಿಯ ಆಜ್ಞೆಯಂತೆ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆಂದು ಗುಲ್ಲೆಬ್ಬಿಸಿ ದೆಹಲಿಯ ಬಿಜೆಪಿ ಕಚೇರಿಯ ಮುಂದೆ ಜಮಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ಎಸೆದು ನಕ್ಸಲಿಯರಂತೆ ವರ್ತಿಸಿದರು. ಈ ಪ್ರತಿಭಟನೆಯ ಜಾಡು ಹಿಡಿದು ಹೊರಟಾಗ ಈ ಪ್ರತಿಭಟನೆಯ ಹಿಂದಿರುವ ಉದ್ದೇಶ ಅರಿವಾಗುತ್ತದೆ. ಇದೇ ಮಾರ್ಚ್ 6 ರಂದು ದೆಹಲಿಯ ಪ್ರೆಸ್ ಕ್ಲಬ್ನಲ್ಲಿ ಒಂದು ಸುದ್ದಿಗೋಷ್ಠಿ ನಡೆಯಿತು. ಅಲ್ಲಿ ಸುದ್ದಿಗೋಷ್ಠಿ ನಡೆಸಿದವರು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಅಶ್ವಿನಿ ಕುಮಾರ್ ಉಪಾಧ್ಯಾಯ. ಅವರು ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಕುರಿತು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದರು. ಆಮ್ ಆದ್ಮಿ ಪಕ್ಷ ಮತ್ತು ಅಮೆರಿಕಾದ ಗುಪ್ತಚರ ಸಂಸ್ಥೆ CIAಗೆ ನಂಟಿದೆ. ಭಾರತದಲ್ಲಿರುವ ಬಹುಪಾಲು ಸರ್ಕಾರೇತರ ಸಂಸ್ಥೆಗಳಿಗೆ CIA ನಿಯಂತ್ರಣದಲ್ಲಿರುವ  ಫೋರ್ಡ್ ಫೌ೦ಡೇಷನ್ ನಿಂದ ದೇಣಿಗೆಗಳು ಬರುತ್ತಿವೆ ಹಾಗೂ ಈ ಎಲ್ಲ ಸಂಸ್ಥೆಗಳು ನಕ್ಸಲೀಯರು, ಮಾವೋವಾದಿಗಳು, ಭಯೋತ್ಪಾದಕರು, ಪ್ರತ್ಯೇಕವಾದಿಗಳ ಪರವಾಗಿದೆ ಎಂಬ ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿದರು. ಅರವಿಂದ್ ಕೇಜ್ರಿವಾಲ್ ಹುಟ್ಟಿಹಾಕಿದ  “ಪರಿವರ್ತನ್” ಸಂಸ್ಥೆಯ   ಉದ್ದೇಶವು ಸಹ ಇದೇ ಆಗಿತ್ತು ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸುದ್ದಿಯನ್ನು ದಿಕ್ಕು ತಪ್ಪಿಸುವ ಸಲುವಾಗಿಯೇ  ಅರವಿಂದ್ ಕೇಜ್ರಿವಾಲ್ ಪ್ರತಿಭಟನೆಯ ನಾಟಕವಾಡಿದರು. ಸುದ್ದಿಯನ್ನು ಸಂಪೂರ್ಣವಾಗಿ ಮರೆಮಾಚುವ ಉದ್ದೇಶದಿಂದಲೇ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಯಿತು. ಇನ್ನು ಆಮ್ ಆದ್ಮಿ ಪಕ್ಷವನ್ನು ದತ್ತುತೆಗೆದುಕೊಂಡಿರುವಂತೆ ವರ್ತಿಸುವ   ಮಾಧ್ಯಮಗಳು ಪ್ರತಿಭಟನೆ ಹಿಂಸಾತ್ಮಕವಾಗಲು ಬಿಜೆಪಿ ಕಾರಣವೆಂದು ಸುದ್ದಿ ಬಿತ್ತರಿಸಿದವು. ಈ ಎಲ್ಲ ನಾಟಕಗಳ ಮುಂದೆ ಆಪ್ ನ CIA ನಂಟಿನ ಸುದ್ದಿ ಮಂಕಾಯಿತು.  

    ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ದಿಯನ್ನು ಪರಿಶೀಲಿಸುತ್ತೆಂದು ಅರವಿಂದ್ ಕೇಜ್ರಿವಾಲ್ ಗುಜರಾತಿಗೆ ಹೊರಟರು. ಇದು ಪಿ.ಎಚ್.ಡಿ ಪದವಿಧರನ್ನು ಒಂದನೇ ತರಗತಿಯ ವಿಧ್ಯಾರ್ಥಿ ಪ್ರಶ್ನಿಸಿದಂತಿತ್ತು. 2 ತಿಂಗಳು ಆಡಳಿತ ನಿರ್ವಹಿಸಲು ಆಗದ ಅರವಿಂದ್ ಕೇಜ್ರಿವಾಲ್ 12 ವರ್ಷಗಳಿಂದ ಒಂದು ರಾಜ್ಯವನ್ನು ಮುನ್ನಡೆಸುತ್ತಿರುವ ವ್ಯಕ್ತಿಯನ್ನು ಪ್ರಶ್ನಿಸುವುದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನು? 
                     
   ಇಂದು ಬೆಂಗಳೂರಿನಲ್ಲಿ ವೈದ್ಯರ ಬಳಿ ತಪಾಸಣೆಮಾಡಿಸಿಕೊಳ್ಳಬೇಕೆಂದರೆ ಮೊದಲೇ ಅಪಾಯಿಂಟ್ಮೆಂಟ್ ಪಡೆದುಕೊಳ್ಳಬೇಕು. ಅಂತದರಲ್ಲಿ ಕಳೆದ 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿಯವರನ್ನು ಅವರ ಅನುಮತಿಯಿಲ್ಲದೆ ಭೇಟಿ ಮಾಡುವುದು ಸಾಧ್ಯವೇ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗೆ ಸಾಕಷ್ಟು ಕೆಲಸಗಳಿರುತ್ತವೆ. ಇಂತಹ ಸಣ್ಣ ಸಂಗತಿಯೂ ಭಾರತೀಯ ಕಂದಾಯ ಇಲಾಖೆ( I.R.S)ಯ ಅಧಿಕಾರಿಯಾಗಿದ್ದ  ಅರವಿಂದ್ ಕೇಜ್ರಿವಾಲ್ ಅರ್ಥವಾಗುವುದಿಲ್ಲವೆಂದರೆ ನಂಬುವುದು ಕಷ್ಟ ಸಾಧ್ಯ. 16 ಅಸಂಬದ್ಧ ಪ್ರಶ್ನೆಗಳನ್ನು ಹಿಡಿದು ಹೊರಟ ಅರವಿಂದ್ ಕೇಜ್ರಿವಾಲ್ ನನ್ನು ಆತನ ನೀರಿಕ್ಷೆಯಂತೆ ಗುಜರಾತಿನ ಪೊಲೀಸರು  ದಾರಿಯ ಮಧ್ಯದಲ್ಲೇ ತಡೆದರು.ಈ ನಾಟಕದಿಂದ ನರೇಂದ್ರ ಮೋದಿ ಸಾಮಾನ್ಯ ಜನರಿಗೆ ಸಿಗುವುದಿಲ್ಲವೆಂದು ನಂಬಿಸುವುದು ಅರವಿಂದ್ ಕೇಜ್ರಿವಾಲ್ ರ ಉದ್ದೇಶವಾಗಿತ್ತು. ಆದರೆ ಅರವಿಂದ್ ಕೇಜ್ರಿವಾಲ್ ನ ಈ ನಾಟಕ ಸಂಪೂರ್ಣ ವಿಫಲವಾಯಿತು. ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅರವಿಂದ್ ಕೇಜ್ರಿವಾಲ್ ನ ನಿಜಬಣ್ಣ ಬಯಲಾಯಿತು.

 ಪದೇ ಪದೇ ಮೋದಿ ತನ್ನ ರ್ಯಾಲಿಗಳಿಗೆ ಬಳಸುವ  ಹೆಲಿಕಾಪ್ಟರ್ ನ ಕುರಿತು ಪ್ರಶ್ನಿಸುವ ಕೇಜ್ರಿವಾಲ್, ಮಾರ್ಚ್ 7 ರಂದು ಮೀಡಿಯಾ ಗ್ರೂಪ್ ಪ್ರಾಯೋಜಿಸಿದ  ಐಷಾರಾಮಿ ಖಾಸಗಿ ಜೆಟ್ ನಲ್ಲಿ ಜೈಪುರದಿಂದ ದೆಹಲಿಗೆ ಪ್ರಯಾಣಿಸಿದರು. “ ನುಡಿದಂತೆ ನಡೆ ” ಎನ್ನುವ ಒಂದು ಮಾತಿದೆ. ತಾನು ಆಮ್ ಆದ್ಮಿ ಎಂದು ಬಿಂಬಿಸಿಕೊಳ್ಳುವ ಕೇಜ್ರಿವಾಲ್ ಗೆ  ಐಷಾರಾಮಿ ಜೆಟ್ ಹತ್ತುವ ಮುನ್ನ ವಿ.ಐ.ಪಿ ಸಂಸ್ಕೃತಿಯನ್ನು ನಾನು ವಿರೋಧಿಸುತ್ತೇನೆಂದು ಹಿಂದೇ ಹೇಳಿದ ಮಾತು ನೆನಪಿಗೆ ಬರಲಿಲ್ಲವೇ? “ ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ” ಎನ್ನುವ ಮಾತು ಅರವಿಂದ್ ಕೇಜ್ರಿವಾಲ್ ಸಂಪೂರ್ಣವಾಗಿ ಅನ್ವಯಿಸುತ್ತದೆ. ಬಣ್ಣದ ಬಣ್ಣದ ಮಾತುಗಳನ್ನು ಮಾತನಾಡಿ ಜನರನ್ನು ನಂಬಿಸಿ ಕೊನೆಗೆ ಅವರನ್ನು ಮೋಸ ಮಾಡುವುದೇ ಕಪಟ ನಾಟಕ ಸೂತ್ರಧಾರಿ ಅರವಿಂದ್ ಕೇಜ್ರಿವಾಲ್ ನ ಗುರಿ.

ಭ್ರಷ್ಟಚಾರವನ್ನು ಕಿತ್ತೊಗೆಯುವುದೇ ತನ್ನ ಗುರಿಯೆಂದು ಆಮ್ ಆದ್ಮಿ ಪಕ್ಷ ಕಟ್ಟಿ, ಅಧಿಕಾರಕ್ಕೆ ಬಂದ ಕೇಜ್ರಿವಾಲ್, ಭ್ರಷ್ಟಚಾರ ತೊಲಗಿಸಲು ಮಾಡಿದ ಘನ ಕಾರ್ಯವೇನು?  ಭ್ರಷ್ಟಚಾರ ನಿಗ್ರಹ ಕಾಯ್ದೆ ಜನ ಲೋಕಪಾಲ್ ಮಸೂದೆಯನ್ನು ಕಾನೂನು ಪ್ರಕಾರ ಮಂಡಿಸದೆ ನಾಟಕವಾಡಿ, ಕೊನೆಗೆ ಅದು ಊರ್ಜಿತವಾದ ಮೇಲೆ ಪಲಾಯನವಾದಿಯಂತೆ ರಾಜೀನಾಮೆ ಕೊಟ್ಟು ಓಡಿ ಹೋಗಿದ್ದೇ ಆತನ ಸಾಧನೆ. ಲೋಕಪಾಲ್ ಮಸೂದೆಯನ್ನು ಮಂಡಿಸುವುದೇ ಆತನ ಗುರಿಯಾಗಿದ್ದರೆ, ಹೊರಟ ಮಾಡಿ ಆ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕಿತ್ತು. ಆದರೆ ಆ ಇಚ್ಛಾಶಕ್ತಿ ಅರವಿಂದ್ ಕೇಜ್ರಿವಾಲ್ಗಿರಲಿಲ್ಲ. ಆತನ ಗುರಿ ಲೋಕಸಭೆಯಾಗಿತ್ತೇ ಹೊರತು ಲೋಕಪಾಲ್ ಆಗಿರಲಿಲ್ಲ.



   ಭ್ರಷ್ಟಚಾರದ ಕುರಿತು ಮಾತನಾಡುವ ಕೇಜ್ರಿವಾಲ್, ಕಾಂಗ್ರೆಸ್ ಹಗರಣದ ಸರಮಾಲೆಗಳ ಕುರಿತು ಏಕೆ ಮಾತನಾಡುವುದಿಲ್ಲ? 2G ಸ್ಪೆಕ್ಟ್ರಮ್, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣಗಳ ಬಗ್ಗೆ ಏಕೆ ಸೋನಿಯಾ ಗಾಂಧಿ ಮತ್ತು ಆಕೆಯ ನೇತೃತ್ವದ ಕಾಂಗ್ರೆಸ್ ಗೆ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸುವುದಿಲ್ಲ? ದೆಹಲಿ ವಿಧಾನಸಭೆ ಚುನಾವಣೆಯ ಸಂಧರ್ಭದಲ್ಲಿ ಶೀಲಾ ದೀಕ್ಷಿತ್ ಮೇಲೆ ಸಮರ ಸಾರಿದ ಅರವಿಂದ್ ಕೇಜ್ರಿವಾಲ್, ಮತ್ತೇಕೆ ದೀಕ್ಷಿತ್ ಸರ್ಕಾರದ ಹಗರಣಗಳ ಕುರಿತು ದಿವ್ಯ ಮೌನ ವಹಿಸಿದರು? ಶೀಲಾ ದೀಕ್ಷಿತ್ ರನ್ನು ಕೇರಳ ರಾಜ್ಯಪಾಲೆಯಾಗಿ ನೇಮಿಸಿ ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಿದಾಗ ಅರವಿಂದ್ ಕೇಜ್ರಿವಾಲ್ ಈ ನಿರ್ಣಯವನ್ನು ವಿರೋಧಿಸಲಿಲ್ಲ. ಶೀಲಾ ದೀಕ್ಷಿತ್ ಸೋಲಿನ ಹಿಂದೆ ರಹಸ್ಯ ಒಪ್ಪಂದವಿತ್ತೇ ಎಂಬ ಅನುಮಾನ ನನಗೆ ಮೂಡುತ್ತದೆ. ಸೋನಿಯಾ ಆಜ್ಞೆಯಂತೆ ಶೀಲಾ ದೀಕ್ಷಿತ್ ಅರವಿಂದ್ ಕೇಜ್ರಿವಾಲ್ ಎದುರು ಸೋತು ನಂತರ ಕೇರಳ ರಾಜ್ಯಪಾಲೆಯಾಗುವ ಯೋಜನೆ ಮೊದಲೇ ರೂಪಿಸಿದ್ದರು ಎಂಬದನ್ನು ತಳ್ಳಿಹಾಕುವಂತಿಲ್ಲ.

   ಭಾರತದಲ್ಲಿ ರಾಜಕೀಯ ಕ್ರಾಂತಿ ಸೃಷ್ಟಿಸುತ್ತನೆಂದು ರಾಜಕೀಯಕ್ಕೆ ಬಂದ ಕೇಜ್ರಿವಾಲ್ ದೆಹಲಿ ವಿಧಾನಸಭೆಯನ್ನು ಅತಂತ್ರವಾಗಿಸಿದರು. ಮುಂದೆ ಕಾಂಗ್ರೇಸ್ ಬೆಂಬಲ ತೆಗೆದುಕೊಂಡು ಸರ್ಕಾರ ರಚಿಸಿದ ಕೇಜ್ರಿವಾಲ್, ಅಧಿಕಾರ ನಿರ್ವಹಿಸಿದ್ದು 49 ದಿನ ಮಾತ್ರ. ಆಮ್ ಆದ್ಮಿ ಪಕ್ಷ ಬೆಂಬಲಿಸಿದ ದೆಹಲಿಯ ಜನ ಇಂದು ಭ್ರಮನಿರಸನಗೊಂಡಿದ್ದಾರೆ. ದೇಶದಲ್ಲಿ ಸಾಕಷ್ಟು ಕಾಂಗ್ರೆಸ್ ವಿರೋಧಿ ಅಲೆಯಿದೆ. ದೇಶದ ಜನ ಪರ್ಯಾಯ ಸರ್ಕಾರವನ್ನು ಬಯಸುತ್ತಿದ್ದಾರೆ. ಈ ಬೆಳವಣಿಗೆ ಪ್ರತಿಪಕ್ಷ ಬಿಜೆಪಿಗೆ  ವರದಾನವಾಗಿದೆ. ನರೇಂದ್ರ ಮೋದಿ ದೇಶದ ಜನರಿಗೇ ಆಶಾಕಿರಣದಂತೆ ಪ್ರಜ್ವಲಿಸುತ್ತಿದ್ದಾರೆ, ಪ್ರಧಾನಿಗಾದಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.ನರೇಂದ್ರ ಮೋದಿಯವರನ್ನು ತಡೆಯಲು ಕಾಂಗ್ರೆಸ್ ಮತ್ತು ಎ.ಎ.ಪಿ ಹುನ್ನಾರ ಮಾಡಿದೆ. ಕಾಂಗ್ರೆಸ್ ವಿರೋಧಿ ಮತಗಳನ್ನು ಪಡೆಯುವುದು ಆಮ್ ಆದ್ಮಿ ಪಕ್ಷದ ಗುರಿ ಮತ್ತು ಇದಕ್ಕೆ ಕಾಂಗ್ರೆಸ್ ತೆರೆಮರೆಯಲ್ಲಿ ಕೈ ಜೋಡಿಸಿದೆ. ಬಿಜೆಪಿ ಮತಗಳನ್ನು ಕಸಿಯುವುದು ಮತ್ತು ಕೊನೆಗೆ ಆ ಮತಗಳನ್ನು ಕಾಂಗ್ರೆಸ್ ಗೆ  ದಯಪಾಲಿಸುವುದೇ ಆಮ್ ಆದ್ಮಿ ಪಕ್ಷದ ಅಜೆಂಡಾ.

      ಈ ಎಲ್ಲ ವಿಚಾರಗಳಿಂದ  ಜನ ಎಚ್ಚೆತ್ತುಕೊಂಡು, ಎ.ಎ.ಪಿಯ ಕಪಟ ನೀತಿಗೆ ಬಲಿಯಾಗದೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಪ್ರಗತಿಯತ್ತ ಮುನ್ನೆಡೆಸುವ ಸಮರ್ಥ ನಾಯಕನನ್ನು ಬೆಂಬಲಿಸಿದರೆ  ಒಳಿತು. ಇಲ್ಲದೇ ಹೋದರೆ ಪೊರಕೆಯ ಕಡ್ಡಿಗಳಂತೆ,  ದೇಶ ಇಬ್ಬಾಗವಾಗುವ ಪರಿಸ್ಥಿತಿಯನ್ನು  ಎದುರಿಸಬೇಕಾದಿತು! ಆಮ್ ಆದ್ಮಿ ಪಕ್ಷವನ್ನು  ಬೆಂಬಲಿಸುವ  ಮೊದಲು “ಎಷ್ಟೇ ಬೆಲೆ ತೆತ್ತು ಪೊರಕೆ ಕೊಂಡರೂ ಅದು ಬಳಕೆಗೆ ಸಿಗುವುದು ಕೇವಲ 49 ದಿನ ಮಾತ್ರ” ಎಂಬ ಮಾತು ನೆನಪಿರಲಿ.
                                                                 
ರವಿತೇಜ ಶಾಸ್ತ್ರೀ                                          

Friday, March 7, 2014

ನಮೋ ಕುರಿತು ಪದ್ಯ -ಮೊದಲ ಪ್ರಯತ್ನ

ಅಲ್ಲಿ ನೋಡು ಬರುತಿಹನು ಗುಜರಾತಿನ ಸರದಾರ..
ಅವನೇ ನಮ್ಮ  ದೇಶದ ಮುಂದಿನ ಅಭಿವೃದ್ಧಿಯ ಹರಿಕಾರ..
ಅವನಿಗೇ ಮತಹಾಕುವೆನೆಂದು ಮಾಡು ನೀ ನಿರ್ಧಾರ...
ಆಗು ಈ ದೇಶದ ಏಳಿಗೆಯಲಿ ನೀ ಪಾಲುದಾರ..
ನಮೋ... ನಮೋ... ನಮೋ... ನಮೋ...

ನಮೋ ನಮೋ ಎನ್ನದೆ ವಿಧಿಯಿಲ್ಲ...
ನಮೋ ಇಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ..
ಕಾಂಗ್ರೆಸ್ ಮುಕ್ತವಾಗದೆ ದೇಶಕ್ಕೆ ಉಳಿಗಾಲವಿಲ್ಲ..
ಇದೇ ಅಂತಿಮ ಅವಕಾಶ ಇದು ಬಿಟ್ಟರೆ ಮತ್ತೊಂದಿಲ್ಲ..
ನಮೋ.. ನಮೋ.. ನಮೋ.. ನಮೋ..

ರವಿತೇಜ ಶಾಸ್ತ್ರೀ