ನಮೋ ಬ್ರಿಗೇಡ್ ಯಶಸ್ವಿ ಪಯಣದ ಕುರಿತು ನನ್ನ ಅನಿಸಿಕೆ. ನಿಸ್ವಾರ್ಥ ಸೇವೆ ಮಾಡಿದ ನಮೋ ಬ್ರಿಗೇಡ್ ಗೆಳೆಯರಿಗೆ ಈ ಲೇಖನ ಅರ್ಪಿಸುತ್ತಿದ್ದೇನೆ.
ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದ ಐತಿಹಾಸಿಕ ಚುನಾವಣೆಗೆ ತೆರೆ. ಮೂವತ್ತು ವರ್ಷಗಳ ನಂತರ ಒಂದು ಪಕ್ಷಕ್ಕೆ ಬಹುಮತ ಪ್ರಾಪ್ತಿ. 135 ವರ್ಷಗಳ ಇತಿಹಾಸದ ಹಿನ್ನಲೆಯಿರುವ ಕಾಂಗ್ರೆಸ್ ಗೆ ಕಂಡುಕೇಳರಿಯದ ಬಾರಿ ಮುಖಭಂಗ. ಅಭಿವೃದ್ದಿಯ ಹರಿಕಾರ ನರೇಂದ್ರ ಮೋದಿಗೆ ಭರ್ಜರಿ ಗೆಲುವು. ಓಲೈಕೆ ಮತ್ತು ಮತಬ್ಯಾಂಕ್ ರಾಜಕಾರಣಕ್ಕೆ ತಕ್ಕ ಶಾಸ್ತಿ. ಅಭಿವೃದ್ದಿ ರಾಜಕಾರಣಕ್ಕೆ ಮೊರೆಹೋದ ಮತದಾರ. ಬದಲಾವಣೆಯ ಪರ್ವಕ್ಕೆ ಮುನ್ನುಡಿ. ಇದು ಲೋಕಸಭೆಯ ಚುನಾವಣೆಯ ಫಲಿತಾಂಶದ ನನ್ನ ವಿಶ್ಲೇಷಣೆ.
ಈ ಬಾರಿಯ ಚುನಾವಣೆ ಬಹಳಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ದೇಶದ ಬಹುದೊಡ್ಡ ಜನಸಂಖ್ಯೆಯ ಯುವಜನತೆ ಈ ಚುನಾವಣೆಯಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಇವರೆಗೂ Used’less ಆಗಿದ್ದ ಭಾರತದ ಯುವಶಕ್ತಿ ಈ ಚುನಾವಣೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದೆ. ಭಾರತದ ಇತಿಹಾಸದಲ್ಲೇ ಅತಿಹೆಚ್ಚು ಮತದಾನವಾಗಿರುವುದು ಇದಕ್ಕೆ ಸಾಕ್ಷಿ. ಟ್ವಿಟ್ಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಯುವಜನತೆ ಈ ಬಾರಿ ಹೊರಗಡೆ ಬಂದು ದೇಶದ ಒಳಿತಿಗೆ ಶ್ರಮಿಸಿದೆ. ರಾಜಕೀಯವನ್ನು ಹೊಲಸು ಎಂದು ಭಾವಿಸಿದ್ದ ಬಹಳಷ್ಟು ಯುವಕರು ರಾಜಕೀಯದಲ್ಲಿ ಆಸಕ್ತಿ ತೋರಿದ್ದು ಈ ಚುನಾವಣೆಯ ಅಚ್ಚರಿ. ದೇಶದ ಕಾಳಜಿಯನ್ನು ಮರೆತು ಬದುಕಿದ್ದು ಸತ್ತಂತಿದ್ದ ಯುವಜನತೆ ಬಡಿದೆಬ್ಬಿಸಿದ ಕೀರ್ತಿ ನಮೋ ಬ್ರಿಗೇಡ್ ಎಂಬ ಯುವಪಡೆಗೆ ಸಲ್ಲುತ್ತದೆ.
“The Bud of the Nation’s Future Finds a Fragrant Blooming in the its Youth” ದೇಶದ ಭವಿಷ್ಯವೆಂಬ ಮೊಗ್ಗು ಅರಳಿ ಹೂವಾಗ ಬೇಕಾದರೆ ಅದು ಆ ದೇಶದ ಯುವಜನತೆಯ ಕೈ ಸೇರಬೇಕು. ಈ ಮಾತು ಅಕ್ಷರಶಃ ಸತ್ಯ. “ಯುವ ಶಕ್ತಿಯೇ ರಾಷ್ಟ್ರಶಕ್ತಿ” ಎಂದಿದ್ದರು ಸಿಡಿಲಸಂತ ಸ್ವಾಮಿ ವಿವೇಕಾನಂದರು. ಯುವಜನತೆ ಎದ್ದರೆ ದೇಶ ಎದ್ದೀತು. ದೇಶವನ್ನು ಬದಲಿಸುವ ಶಕ್ತಿ ಯುವಜನರಲ್ಲಿದೆ. ಇಂತಹ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸಂಘಟನೆಯೇ ನಮೋ ಬ್ರಿಗೇಡ್. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಸ್ಥಾಪಿತವಾದ ನಮೋ ಬ್ರಿಗೇಡ್ ತನ್ನ ಗುರಿಯನ್ನು ತಲುಪಿದೆ. ಅಸಂಖ್ಯ ನಮೋ ಬ್ರಿಗೇಡ್ ಕಾರ್ಯಕರ್ತರ ನಿಸ್ವಾರ್ಥ ಸೇವೆ ಫಲ ನೀಡಿದೆ.
ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈ ವಿಜಯದಲ್ಲಿ ನಮೋ ಬ್ರಿಗೇಡ್ ನ ಪಾಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಬಹಳಷ್ಟು ಮುಖಭಂಗಕ್ಕೆ ಒಳಗಾಗಿತ್ತು. ಆ ಪರಿಸ್ಥಿತಿಯಲ್ಲಿ ಬಿಜೆಪಿ ಕೇವಲ 4 ಲೋಕಸಭೆಯನ್ನು ಗೆಲ್ಲುವುದಕ್ಕೆ ಶಕ್ತವಾಗಿತ್ತು. ಈ ಸಂದರ್ಭದಲ್ಲಿ ಹುಟ್ಟಿಕೊಂಡ ನಮೋ ಬ್ರಿಗೇಡ್ ನರೇಂದ್ರ ಮೋದಿಯವರ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಿ ಬಿಜೆಪಿಯ ಗೆಲುವಿಗೆ ಅಪಾರವಾದ ಕೊಡುಗೆಯನ್ನು ನೀಡಿದೆ.
“ Narendra Modi Fans From Karnataka “ ಎಂಬ ಫೇಸ್ಬುಕ್ ಪೇಜ್ ನಿಂದ ನಮೋ ಬ್ರಿಗೇಡ್ ಆರಂಭವಾಯಿತು. ಮೊದಮೊದಲು ಕೇವಲ ಅಂತರ್ಜಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಪೇಜ್ ಕರ್ನಾಟಕದ ವಿಧಾನಸಭೆಯಲ್ಲಿ ಬಿಜೆಪಿಯ ಸೋಲಿನ ನಂತರ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೂರ್ಣಪ್ರಮಾಣದ ಸಂಘಟನೆಯಾಗಿ ಮಾರ್ಪಟ್ಟಿತು. ಕರ್ನಾಟಕದ ಎಲ್ಲ ಉತ್ಸಾಹಿ ತರುಣರನ್ನು ಒಗ್ಗೂಡಿಸಿ ಒಂದು ಏಕ ಮಾತ್ರ ಉದ್ದೇಶಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೇ ತನ್ನ ನಿಸ್ವಾರ್ಥ ಸೇವೆಯನ್ನು ಮಾಡಿದೆ.
ಮತದಾರನ ನೋಂದಣಿ ಅಭಿಯಾನಯನ್ನು ಕೈಗೆತ್ತಿಕೊಂಡು ರಾಜ್ಯದಲ್ಲೆಡೆ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ಅಭಿವೃದ್ದಿಯನ್ನು ಮನೆಮನೆಗೆ ತಲುಪಿಸುವ ನಮೋ ತೇರು, ನರೇಂದ್ರ ಮೋದಿಯ ಸಾಧನೆ, ಅಭಿವೃದ್ದಿ, ನಾಯಕತ್ವ ಗುಣಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ನಡೆದ ಗೀತಕಥನ “ನಮೋ ಭಾರತ್”, ಕಮಿಟ್ಮೆಂಟ್ ಕಾರ್ಡ್ ಅಭಿಯಾನ, ನಮ್ಮ ಮನೆ ನಮೋ ಮನೆ ಮುಂತಾದ ಎಲ್ಲಾ ಯಶಸ್ವಿ ಕಾರ್ಯಕ್ರಮಗಳ ರೂವಾರಿ ನಮೋ ಬ್ರಿಗೇಡ್.
ನಮೋ ಬ್ರಿಗೇಡ್ ನ ಲಕ್ಷಾಂತರ ಕಾರ್ಯಕರ್ತರು ತಮ್ಮ ಸ್ವಾರ್ಥವನ್ನು ಬದಿಗೊತ್ತಿ, ದೇಶಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಬಹಳಷ್ಟು ಯುವಕರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಈ ಎಲ್ಲ ಯುವಕರ ಗುರಿ ಒಂದೇ ಆಗಿತ್ತು. ಅದು ಪ್ರಗತಿಯ ಭಾರತವನ್ನು ಕಾಣುವುದು. ಈ ಕನಸು ನನಸಾಗುವ ದಿನಗಳು ಹತ್ತಿರದಲ್ಲಿದೆ. ನಮೋ ಬ್ರಿಗೇಡ್ ನ ಗುರಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದಾಗಿತ್ತು. ಆ ಗುರಿ ಈಡೇರಿದೆ. ಈ ಸಂಘಟನೆಯ ಗೆಲುವು ಯುವಶಕ್ತಿಯ ಗೆಲುವು, ನಿಸ್ವಾರ್ಥ ಸೇವೆಯ ಗೆಲುವು. ಈ ವಿಜಯ ಎಲ್ಲ ನಮೋ ಬ್ರಿಗೇಡ್ ಕಾರ್ಯಕರ್ತರಿಗೆ ಸೇರಿದ್ದು. ಎಲ್ಲ ನಮೋ ನಮೋ ಬ್ರಿಗೇಡ್ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.
ಈ ನಮೋ ಬ್ರಿಗೇಡ್ ಎಂಬ ಯುವ ಪಡೆಯ ಸದಸ್ಯನಾಗಿದದ್ದು ನನ್ನ ಭಾಗ್ಯ. ನಿಸ್ವಾರ್ಥ ಸೇವೆ ಮಾಡಲು ಅವಕಾಶವನ್ನಿತ್ತ ನಮೋ ಬ್ರಿಗೇಡ್ ಗೆ ನಾನು ಚಿರಋಣಿ. ನಮೋ ಬ್ರಿಗೇಡ್ ಗಾಗಿ ಶ್ರಮಿಸಿದ ಚಕ್ರವರ್ತಿ ಸೂಲಿಬೆಲೆ, ಸಂಚಾಲಕರಾದ ನರೇಶ್ ಶೈಣೈ ರವರಿಗೆ ಧನ್ಯವಾದಗಳು.
ನಮೋ ಬ್ರಿಗೇಡ್ ನನಗೆ ಬಹಳಷ್ಟು ಸ್ನೇಹಿತರನ್ನು ನೀಡಿದೆ. ಅವರಿಗೆ ನಾನು ಧನ್ಯ. ನೇರ ಮಾತಿನ, ಮಧುರ ಹೃದಯದ ನೀರಜ್, ಸರಳ ಸ್ವಭಾವದ ಮೃದು ಹೃದಯಿ ಚೇತನ್, ಹಾಸ್ಯ ಪ್ರವೃತಿಯ ರಾಘು ಅಣ್ಣ, ಉತ್ತಮ ಬರಹಗಾರ, ಚಿಂತಕ, ಮೌನಮೂರ್ತಿ ರಾಜೇಶ್ ರಾವ್, ನಗುಮುಖದ ಭರತ್, ಕಲ್ಯಾಣ್ ಜೀ, ವಿನಯ್(ನನ್ನ ಬಗ್ಗೆ ನಿಮಗೆ ಅಸಮಾಧಾನವಿರಬಹುದು ಅದಕ್ಕೆ ಕ್ಷಮೆಯಿರಲಿ) ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.
ಹಾಗಯೇ, ವಿಜಯನಗರದಲ್ಲಿ ನಮೋ ಬ್ರಿಗೇಡ್ ಕೆಲಸ ಮಾಡುವಾಗ ಪ್ರೀತಿತೋರಿದ ವಿಜಯನಗರದ ಗೆಳಯರಾದ ಶ್ರೀನಿವಾಸ್, ಮಂಜುನಾಥ್, ಪ್ರವೀಣ್, ಬಾಲಾಜಿ, ಅಪತ್ಕಾಲದಲ್ಲಿ ನಮೋ ಬ್ರಿಗೇಡ್ ಗೆ ಸಹಕರಿಸಿದ ನಮೋ ಬ್ರಿಗೇಡ್ ನ ‘ಅನ್ನದಾತ’, ಹಿರಿಯರಾದ ಆನಂದ್ ಜೀ ಗೆ ಮತ್ತು ಆತ್ಮೀಯ ಸ್ನೇಹಿತರಾದ ಪ್ರಶಾಂತ್ ಗೆ, ಅಶ್ವಿನ್, ನಾಗಾ ನರಸಿಂಹ, ಚರಣ್ ,ಮನೋಜ್, ಹರೀಶರಿಗೆ ಪ್ರೀತಿಯ ಗೆಳೆಯರಾದ ನಿಶಿತ್, ಆದರ್ಶ್ ಗೆ, ಫೇಸ್ಬುಕ್ ಗೆಳಯ ಅಕ್ಷತ್ ಗೆ, ಹುಡುಗಿಯರು ದೇಶದ ಬಗ್ಗೆ ಕಾಳಜಿ ವಹಿಸುವುದು ವಿರಳ ಇಂತಹ ಸಂದರ್ಭದಲ್ಲಿ ದೇಶಕಾರ್ಯದಲ್ಲಿ ಕೈ ಜೋಡಿಸಿರುವ ಅರ್ಪಿತ, ಸುಶ್ಮಿತಾ,ಪ್ರಿಯ, ಸಂಜನಾ, ನಮೋ ಬ್ರಿಗೇಡ್ ಫೇಸ್ಬುಕ್ ಪೇಜ್ ನ ಯಶಸ್ಸಿನ ರೂವಾರಿ ಶ್ರೀಕಾಂತ್ ರಿಗೆ (ಅವರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿಲ್ಲ ಫೇಸ್ಬುಕ್ ಮೂಲಕ ಪರಿಚಿತರು), ಟ್ವಿಟ್ಟರ್ ನಲ್ಲಿ ನಮೋ ಬ್ರಿಗೇಡ್ ನ ಕುರಿತು ಜಾಗೃತಿ ಮೂಡಿಸಿರುವ ಹಿರಿಯರಾದ ಕಿರಣ್ ಕೆ. ಎಸ್ ರವರಿಗೆ ಮತ್ತು ಎಲ್ಲಾ ನಮೋ ಬ್ರಿಗೇಡ್ ಗೆಳೆಯರಿಗೂ ನನ್ನ ಅನಂತ ಧನ್ಯವಾದಗಳು.
ನಿಮಗಾಗಿ ಈ ಸಾಲುಗಳನ್ನು ಅರ್ಪಿಸುತ್ತಿದ್ದೇನೆ
ಓ ದೇಶಭಕ್ತ ಗೆಳೆಯರೇ
ನಿಮಗಿದೋ ನನ್ನ ವಂದನೆ
ಗುರಿ ಸಾಧಿಸಿದ್ದಕ್ಕೆ ಅಭಿನಂದನೆ
ನಿಮ್ಮ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ
ರಾಷ್ಟ್ರಕಾರ್ಯಕ್ಕೆ ನಿಮ್ಮ ಹೃದಯ ಮಿಡಿಯುತಿರಲಿ.
ಜೈ ಹಿಂದ್
ರವಿತೇಜ ಶಾಸ್ತ್ರೀ
No comments:
Post a Comment