Thursday, December 25, 2014

ಅಜಾತಶತ್ರುವಿನ ಜೀವನಗಾಥೆ


ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅವರು ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ.ಸುಮಾರು ನಾಲ್ಕು  ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದವಾದವರು ಅಟಲ್ ಬಿಹಾರಿ ವಾಜಪೇಯಿ. ಇಂತಹ ಮಹಾನ್ ನಾಯಕನ ಬಗ್ಗೆ ತಿಳಿಸುವುದೇ ಈ ಲೇಖನದ ಆಶಯ.
 


ಬಾಲ್ಯ ಮತ್ತು ಶಿಕ್ಷಣ:
 
ಭಾರತ ದೇಶದ ಮಹಾನ್ ನಾಯಕ ಅಟಲ್ ಜಿ ಹುಟ್ಟಿದ್ದು ಮಧ್ಯ ಪ್ರದೇಶದ ಗ್ವಾಲಿಯರನ ಶಿಂಧೆ ದಂಡು ಪ್ರದೇಶದಲ್ಲಿ. ಅವರು ಜನಿಸಿದ್ದು 1924 ಡಿಸೆಂಬರ್ 25 ರಂದು. ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಕೃಷ್ಣ ಬಿಹಾರಿ ವಾಜಪೇಯಿ ಅಧ್ಯಾಪಕರಾಗಿದ್ದರು. ಹಾಗಾಗಿ ಬಹಳ ಚಿಂತೆ ಮಾಡಿ ಮಗುವಿಗೆ ‘ ಅಟಲ್ ಬಿಹಾರಿ ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ ಗಟ್ಟಿ( ಕಾರ್ಯಸಾದಕ) ಎಂದರ್ಥ. ಬಿಹಾರಿ ಎಂದರೆ ವಿಚಾರ ಮಾಡುವವ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿ ಅಟಲ್ ಬಿಹಾರಿ.
ಅಟಲ್ ಜಿಗೆ ಓದಿನಲ್ಲಿ ಬಹಳ ಶ್ರದ್ದೆ. ಸ್ವತಃ ತಂದೆ ಅಧ್ಯಾಪಕರಾಗಿದ್ದರಿಂದ ಶಾಲೆಯಲ್ಲಿ ತಿಳಿಯದ ಪಾಠವನ್ನು ತಂದೆಯ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಯ ಪಾಠಗಳಲ್ಲಿ ನಿರತರಾಗಿರುತ್ತಿದ್ದರು. ಗ್ವಾಲಿಯರನ ಗೋರಖಿ ವಿದ್ಯಾಲಯದಲ್ಲಿ  ಅಟಲ್ ರವರು ಮಿಡಲ್ ಪರೀಕ್ಷೆ ಪಾಸು ಮಾಡಿದರು.ತಮ್ಮ ಶಾಲಾ ದಿನಗಳಲ್ಲೇ ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ಶಾಲೆಯಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಿದ್ದರು. ಯಾವುದೇ ಪರೀಕ್ಷೆಯೇ ಆಗಲಿ ಅಟಲ್ ಜಿ ಕ್ಲಾಸಿಗೆ ಪ್ರಥಮ ರ್ಯಾಂಕ್ ಬರುತ್ತಿದ್ದರು. ಅಟಲ್ ಜಿ ಗೆ ಶಾಲಾ ಪುಸ್ತಕಗಳಿಗಿಂತ ಆಧ್ಯಾತ್ಮಿಕ. ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕಥೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚು ಮೆಚ್ಚು. ತಂದೆ ಕೃಷ್ಣ ಬಿಹಾರಿ ವಾಜಪೇಯಿ ಕವಿತೆಗಳನ್ನು ರಚಿಸುತ್ತಿದ್ದರು.
ಆ ಕವಿತೆಗಳನ್ನು ಅಟಲ್ ಕೇಳುತ್ತಿದ್ದರು. ತಂದೆಯಿಂದ ಅಟಲ್ ಜಿ ಮಾತಿನಲ್ಲಿ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ಕಲಿತರು. ಕೃಷ್ಣ ಬಿಹಾರಿ ಅವರ ಮನೆಗೆ ಆರ್ಯ ಸಮಾಜದ ಮುಖಂಡರು, ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಬರುತ್ತಿದ್ದರು. ಈ ವಾತಾವರಣ ಅಟಲ್ ರಲ್ಲಿ ಉಜ್ವಲ ದೇಶಭಕ್ತಿ ಬೆಳೆಯಲು ಕಾರಣವಾಯಿತು ಮತ್ತು ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.
ಗ್ವಾಲಿಯರ್ ದ ವಿಕ್ಟೋರಿಯಾ ಕಾಲೇಜಿನಲ್ಲಿ ಬಿ.ಎ ಪದವಿಗೆ ಸೇರಿ ಹಿಂದಿ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ ಸಾಹಿತ್ಯ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳನ್ನು ಆರಿಸಿಕೊಂಡು ಸತತ ಅಭ್ಯಾಸದಲ್ಲಿ ತೊಡಗಿ ಬಿ.ಎ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಅಟಲ್ ರವರು ಮುಂದೆ ಕಾನಾಪುರದ ಡಿ.ಎ.ಬಿ. ಕಾಲೇಜಿನಿಂದ  ರಾಜ್ಯಶಾಸ್ತ್ರದಲ್ಲಿ ಎಂ.ಎ ಮುಗಿಸಿದರು. ಎಂ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ತಮ್ಮ ಮಗ ನ್ಯಾಯಶಾಸ್ತ್ರದಲ್ಲಿ(L.L.B) ಪದವಿ ಪಡೆದುಕೊಂಡು ವಕೀಲಿ ವೃತ್ತಿ ಮಾಡಬೇಕೆಂಬು ಅಟಲ್ ಜಿ ಅವರ ತಂದೆಯ ಆಸೆಯಾಗಿತ್ತು. ತಂದೆಯ ಒತ್ತಾಯಕ್ಕೆ ಮಣಿದು ಅಟಲ್ ಜಿ ಲಾ ಕಾಲೇಜಿಗೆ ಸೇರಿದರು. ಮಗನನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷ್ಣ ಬಿಹಾರಿ ವಾಜಪೇಯಿಯವರು ಸಹ ಲಾ ಕಾಲೇಜಿಗೆ ಸೇರಿದರು, ಆ ವೇಳೆಗೆ ಅವರು ವೃತ್ತಿಯಿಂದ ನಿವೃತ್ತರಾಗಿದ್ದರು. ಆದರೆ ಅಟಲ್ ಅವರಿಗೆ ಕಾನೂನು ಶಿಕ್ಷಣ ಹಿಡಿಸಲಿಲ್ಲ. ಮಧ್ಯ ದಲ್ಲೇ ಕಾಲೇಜನ್ನು ತ್ಯಜಿಸಿದರು. ತಂದೆ ಕೃಷ್ಣ ಬಿಹಾರಿಯವರು ಹಿಂದೆ ಬೀಳದೆ ಓದು ಮುಗಿಸಿ ಕಾನೂನು ಪದವೀಧರರಾದರು.
 
ಪತ್ರಿಕೋದ್ಯಮಿಯಾಗಿ ಅಟಲ್ ಜಿ:
 
ಕಾನೂನು ಪದವಿ ತ್ಯಜಿಸಿದ ಅಟಲ್ ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ  ಸಮಯ ನೀಡಿದರು.ಬೆಳಿಗ್ಗೆ  ಶಾಖೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನಂತರ ಬಿಡುವಿನ ವೇಳೆಯಲ್ಲಿ ಕವನ ರಚಿಸುತ್ತಿದ್ದರು. ಈ ರೀತಿ ಒಂದು ವರ್ಷ ಸಂಘದ ಸೇವೆ ಸಲ್ಲಿಸಿದರು.ಆ ಬಳಿಕ ಅವರ ಗಮನ ಪತ್ರಿಕೊದ್ಯಮದತ್ತ ಹರಿಯಿತು. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ, ವೀರ ಅರ್ಜುನ್ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅಟಲ್ ಜಿ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು.
 
ರಾಜಕೀಯ ಪ್ರವೇಶ:
 
ಅಟಲ್ ರವರಿಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯವಾಯಿತು. ಉತ್ಸಾಹಿ ತರುಣನನ್ನು ಬೇಟಿಯಾದ ಮುಖರ್ಜಿಯವರಿಗೆ ಈತ ದೇಶದ ರಾಜಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲನೆಂಬ ನಂಬಿಕೆ ಹುಟ್ಟಿತು. 1951 ರಲ್ಲಿ ಭಾರತೀಯ ಜನ ಸಂಘ ಉದಯವಾಯಿತು. ಅಟಲ್ ಜಿ ಇದರ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಜನ ಸಂಘ ಪಂಡಿತ್ ದೀನದಯಾಳ ಉಪಾಧ್ಯಾಯರ ಮಾರ್ಗ ದರ್ಶನದಲ್ಲಿ ಕಾಂಗ್ರೆಸ್ ಗೆ ಪ್ರಬಲ ವಿರೋಧ ಪಕ್ಷವಾಗಿ ಬೆಳೆಯಿತು. 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಅಟಲ್ ಜಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು. ಮುಂದೆ 1953ರಲ್ಲಿ ಲಕ್ನೋ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ಲೋಕಸಭಾ ಸದಸ್ಯೆ ವಿಜಯ ಲಕ್ಷ್ಮಿ ಪಂಡಿತ್ ರನ್ನು ಭಾರತದ ರಾಯಭಾರಿಯಾಗಿ ಸೋವಿಯತ್ ರಶಿಯಾಗೆ ಕಳುಹಿಸಲಾಯಿತು. ಆಗ ನಡೆದ ಉಪ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಸಿದಾಗ ಅವರಿಗೆ ಕೇವಲ 27 ವರ್ಷ. ಅಟಲ್ ಜಿ ವ್ಯಾಪಕ ಪ್ರಚಾರ ಮಾಡಿ 150ಕ್ಕೂ ಹೆಚ್ಚು ಕಡೆ ಭಾಷಣ ಮಾಡಿದರು ಆದರೆ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ದ ಸೋತರು. ಮತ್ತೆ 1957ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದರು. ಮಥುರಾ ಮತ್ತು ಲಕ್ನೋ ಕ್ಷೇತ್ರಗಳಲ್ಲಿ ಸೋತ ಅಟಲ್ ರವರು ಬಲರಾಮ್ ಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. 1962 ರಲ್ಲಿ ಅಟಲ್ ಜಿ ಸೋತರು ಆದರೆ ಅವರು ಕುಗ್ಗದೆ 1967 ಮತ್ತು 1971 ರಲ್ಲಿ ಪ್ರಚಂಡ ವಿಜಯ ಸಾಧಿಸಿದರು. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಆಗ ಅಟಲ್ ಜಿ ಇಂದಿರಾ ಗಾಂಧಿ ವಿರುದ್ದ ಹೋರಾಡಿ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು. 1977 ರ ಚುನಾವಣೆ ಸಂಧರ್ಭದಲ್ಲಿ ಅಟಲ್ ಜಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು. ಜನ ಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಿದರು. ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಿದರು.
 
ವಿದೇಶಾಂಗ ಮಂತ್ರಿಯಾಗಿ:
 
1977 ರಲ್ಲಿ ಇಂದಿರಾ ಸರ್ಕಾರ ಮಣ್ಣು ಮುಕ್ಕಿತು. ಮೊರಾರ್ಜಿ ದೇಸಾಯಿ ನೇತೃತ್ವದ   ಸರ್ಕಾರ ಸ್ಥಾಪನೆಯಾಯಿತು. ಅದರಲ್ಲಿ ಅಟಲ್ ಜಿ ವಿದೇಶಾಂಗ ಸಚಿವರಾದರು.
ಆ ವೇಳೆಯಲ್ಲಿ ಪಾಕಿಸ್ತಾನ. ಚೀನಾ, ರಷಿಯಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದ ಕೀರ್ತಿ ಅಟಲ್ ರಿಗೆ ಸಲ್ಲುತ್ತದೆ. ವಿದೇಶಾಂಗ ಮಂತ್ರಿಯಾಗಿ ವಾಶಿಂಗ್ಟನ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದರು.
 
ಬಿ.ಜೆ.ಪಿ ಯ ಉದಯ:
 
ಮೊರಾರ್ಜಿ ದೇಸಾಯಿಯವರ ಸರ್ಕಾರ ಕೇವಲ ಎರಡು ವರ್ಷ ಆಡಳಿತ ನಡೆಸಿತು. ನಂತರ ಸರ್ಕಾರ ಬಿದ್ದುಹೋಯಿತು. 1980ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪಕ್ಷ ತೊರೆದ ಅಟಲ್ ಜಿ ಭಾರತೀಯ ಜನತಾ ಪಕ್ಷ(ಬಿ.ಜೆ. ಪಿ) ಸ್ಥಾಪಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಅಟಲ್ ಜಿ ಗೆದ್ದರು. ಪಕ್ಷವನ್ನು ಬೆಳೆಸಲು ಶ್ರಮ ಪಟ್ಟರು. ಬಿಜೆಪಿಯನ್ನು ಪ್ರಬಲ ರಾಜಕೀಯ ಪಕ್ಷವಾಗಿ ರೂಪಿಸಿದರು. 1984 ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು. ಆದರೆ ಮುಂದೆ ಲಕ್ನೋ ಕ್ಷೇತ್ರದಲ್ಲಿ ಸ್ಪರ್ಧಿಸಿ 1991, 1996, 1998ರಲ್ಲಿ  ಸತತವಾಗಿ ಅದೇ ಕ್ಷೇತ್ರದಿಂದ ಆಯ್ಕೆಯಾದರು. 1996 ರಲ್ಲಿ ಅಟಲ್ ಜಿ ಪ್ರಧಾನಿಯಾದರು ಆದರೆ 13 ದಿನದಲ್ಲೇ  ಬಹುಮತವಿಲ್ಲದೆ ಸರ್ಕಾರ ಬಿದ್ದುಹೋಯಿತು. ಮತ್ತೆ 1998 ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ ಆ ಸರ್ಕಾರ 13 ತಿಂಗಳಿಗೆ ಅಂತ್ಯವಾಯಿತು. ಈ ಸಂದರ್ಭದಲ್ಲಿ ಅಟಲ್ ಜಿ ಕುದುರೆ ವ್ಯಾಪಾರ ಮಾಡುವ ಹೇಯ ಕೆಲಸ ಮಾಡಲಿಲ್ಲ. ಅವರು ತಮ್ಮ ತತ್ವ ಆದರ್ಶಗಳನ್ನು ಮರೆಯಲಿಲ್ಲ ಅದನ್ನು ತಪ್ಪದೆ ಪಾಲಿಸಿದರು.
 
ಪೂರ್ಣ ಪ್ರಮಾಣದ ಪ್ರಧಾನಿಯಾಗಿ :
 
1999ರಲ್ಲಿ ಮತ್ತೆ ಮೂರನೇ ಬಾರಿಗೆ ಅಟಲ್ ಜಿ ಪ್ರಧಾನಿಯಾದರು ಈ ಬಾರಿ 5 ವರ್ಷಗಳ ಕಾಲ ಸರ್ಕಾರ ನಡೆಸಿದರು. ಚಿಕ್ಕ ಚಿಕ್ಕ ಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ನಡೆಸಿದ ಸಾಧನೆ ಅಮೋಘ. 1999-2004 ಈ ಐದು ವರ್ಷ ಭಾರತದ  ಸುವರ್ಣ ಯುಗವೆಂದು ಕರೆದರೆ ಅತಿಶಯೋಕ್ತಿಯಲ್ಲ ವೆನಿಸುತ್ತದೆ.
ಅಟಲ್ ಜಿ ಅಧಿಕಾರವಾಧಿಯಲ್ಲಿ ಭಾರತ ಅಭಿವೃದ್ದಿ ಪಥದತ್ತ ಸಾಗಿತು. ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆ, ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಲಾಹೋರ್ ಬಸ್ ಸಂಚಾರ ವ್ಯವಸ್ಥೆ, ದೇಶದ ಮಹಾ ನಗರಗಳನ್ನು ಜೋಡಿಸುವ ಸಲುವಾಗಿ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆ. ಪ್ರತಿ ಹಳ್ಳಿಗೂ ರಸ್ತೆ ನಿರ್ಮಿಸಲು ತಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ,ಈ ಎಲ್ಲ ಯೋಜನೆಗಳ ರೂವಾರಿ ಅಟಲ್ ಜಿ ಯವರೇ. ಅಣ್ವಸ್ತ್ರ ಪರೀಕ್ಷೆ ನಡೆಸಿ ದೇಶದಲ್ಲಿ ವೈಜ್ಞಾನಿಕ ಕ್ರಾಂತಿಯನ್ನು ಹುಟ್ಟು ಹಾಕಿ ವಿಶ್ವದ ಗಮನ ಸೆಳೆದರು.ಪಾಕಿಸ್ತಾನ ವಿರುದ್ದ ನಡೆದ ಕಾರ್ಗಿಲ್ ಯುದ್ದದ ವಿಜಯದ ಶ್ರೇಯ ಅಟಲ್ ರಿಗೆ ಸಲ್ಲ ಬೇಕು. ಪ್ರಧಾನಿಯಾಗಿ ಅಟಲ್ ಜಿ ಭಾರತದ ಅರ್ಥಿಕ, ಸಾಮಾಜಿಕ, ಅಂತರಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ 2004 ರಲ್ಲಿ ಅಟಲ್ ಜಿ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಟಲ್ ಜಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಿದ್ದರೆ ದೇಶ ಮತ್ತಷ್ಟು ಅಭಿರುದ್ದಿಯಾಗುತ್ತಿದ್ದರಲ್ಲಿ ಸಂಶಯವಿಲ್ಲ. ಈ ದೇಶದ ದೌರ್ಭಾಗ್ಯವೋ ಅಥವಾ ಅಟಲ್ ಜಿ ಯವರ ದುರದೃಷ್ಟವೋ ಗೊತ್ತಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ. ಇದೆ ಸಂದರ್ಭದಲ್ಲಿ ಅಟಲ್ ಜಿ ಯವರ ಅರೋಗ್ಯ ಕೈ ಕೊಟ್ಟಿತು. ಅವರು ರಾಜಕೀಯದಿಂದ ಹಿಂದೆ ಸರಿದರು. ಮಹಾನ್ ನಾಯಕನ ಅನುಪಸ್ಥಿತಿ ದೇಶಕ್ಕೆ ಕಾಡಿತು.
 
ಪ್ರಖರ ವಾಗ್ಮಿ, ಉತ್ತಮ ಸಂಸದೀಯ ಪಟು:
 
ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರು. ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಒಂದು ಸಮಸ್ಯೆಯ ಕುರಿತು ಚೆನ್ನಾಗಿ ಆಲೋಚಿಸಿ ತರ್ಕಬದ್ದವಾಗಿ  ವ್ಯಾಖ್ಯಾನ ಮಾಡುತ್ತಿದ್ದರು. ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು.
ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದರು. ಕಳೆದ ನಲವತ್ತು ವರ್ಷದ ಅವಧಿಯಲ್ಲಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣ ಸುಮಾರು 500 ಪುಟಗಳಿಗಿಂತಲೂ ಅಧಿಕ. ಉದ್ರಿಕ್ತ ಅಥವಾ ಉದ್ರೇಕವಾದ ಭಾವನೆ ಅವರ ಅವರ ಮಾತುಗಳಲ್ಲಿ ಕಂಡುಬರುವುದಿಲ್ಲ. ಅವರು ಆಡಿದ ಮಾತು ಮಾತಲ್ಲ ಅದು ಮುತ್ತು. ಆ ಸರಳ ಮಾತುಗಾರಿಕೆ ಶುದ್ದ ಸ್ವಚ್ಛ ಮಧುರ ಹಾಗೂ ಕಾವ್ಯಮಯ. ನೆಹರು ಅಟಲ್ ಜಿ ಯವರ ವಾಕ್ ಚಾತುರ್ಯ ಕಂಡು ಬೆರಗಾಗಿದ್ದರು. ಒಮ್ಮೆ ನೆಹರು ಸರ್ಕಾರದ ವಿದೇಶಾಂಗ ನೀತಿಯನ್ನು ಖಂಡಿಸುತ್ತಾ ಅಟಲ್ ಜಿ  ಹಿಂದಿಯಲ್ಲಿ ಮಾತನಾಡಿದರಂತೆ. ಆಗ ಅಟಲ್ ಜಿ ಯವರ ಮಾತನ್ನು ಆಲಿಸಿದ ನೆಹರು ಹಿಂದಿಯಲ್ಲೇ ಸಮಾಧಾನ ನೀಡಿದರಂತೆ. ನೆಹರು ಅಟಲ್ ಜಿ ಯನ್ನು ಉದಯೋನ್ಮುಖ ರಾಜಕಾರಣಿ ಎಂದು ವಿದೇಶೀ ಗಣ್ಯರಿಗೆ ಪರಿಚಯ ಮಾಡಿಕೊಡುತ್ತಿದ್ದರಂತೆ. 1994 ರಲ್ಲಿ ಅಟಲ್ ಜಿಯವರಿಗೆ ಸರ್ವ ಶ್ರೇಷ್ಟ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
ಸರಳ ಮತ್ತು  ಸ್ನೇಹ ಜೀವಿ:
 
ಅಟಲ್ ಜಿ ಸರಳ ಜೀವಿಯಾಗಿದ್ದರು. ಅವರ ನೆಚ್ಚಿನ ಉಡುಪು ಕುರ್ತಾ-ಪೈಜಾಮ್ ಮತ್ತು ಕುರ್ತಾ ಧೋತಿ. ಅಪರೂಪಕೊಮ್ಮೆ ಸೂಟ್ ಧರಿಸುತ್ತಿದ್ದರು. ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿದೇಶೀ ಉಡುಪು ಧರಿಸುತ್ತಿದ್ದರು.
ಅಟಲ್ ರವರು ಬಾಲ್ಯದಿಂದಲೇ ಸ್ನೇಹ ಜೀವಿಯಾಗಿದ್ದರು.ಅವರು ಯಾರನ್ನು ದ್ವೆಷಿಸಿದವರಲ್ಲ, ಯಾರೊಂದಿಗೂ ಜಗಳವಾಡಿದವರಲ್ಲ. ಎಲ್.ಕೆ ಅಡ್ವಾಣಿ, ಜಸ್ವಂತ್ ಸಿಂಗ್, ಎನ್.ಎಂ ಘಟಾಟೆ, ಬೈರೋನ್ ಸಿಂಗ್ ಷೇಕವಾತ್, ಮುಕುಂದ ಮೋದಿ ಮುಂತಾದವರು ಅಟಲ್ ರ ಆಪ್ತಮಿತ್ರರು.
ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಟಲ್ ರವರರಿಗೆ ಸ್ನೇಹಿತರಿದ್ದಾರೆ. ವಾಜಪೇಯಿ ಅವರ ಸರಳ ವ್ಯಕ್ತಿತ್ವ ಆದರ್ಶ ವಿಚಾರಗಳಿಂದ ದೇಶ ವಿದೇಶಗಳಲ್ಲಿ ಸ್ನೇಹಜೀವಿ ಎಂದೇ ಪ್ರಸಿದ್ದರಾಗಿದ್ದಾರೆ. ಶತ್ರು ರಾಷ್ಟ್ರ ಪಾಕಿಸ್ತಾನಿಯರು ಕೂಡ ವಾಜಪೇಯಿ ಅವರ ಸ್ನೇಹಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿಯೇ ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಚಾರ ಆರಂಭಿಸಿದ್ದು. ಇದು ಅವರ ಸ್ನೇಹಕ್ಕೆ ಹಿಡಿದ ಕನ್ನಡಿಯಾಗಿದೆ.1999 ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೋತಾಗ ಪಾಕ್ ಪ್ರಧಾನಿ ನವಾಜ್ ಷರೀಫ್ ನನ್ನು ಸೇನಾಧಿಕಾರಿ ಪ್ರವೇಜ್ ಮುಷರಫ್  ಸೆರೆಯಲ್ಲಿ ಇಟ್ಟಾಗ, ಷರೀಫ್ ಮಗ ಅಟಲ್ ಜಿ ಯವರಲ್ಲಿ ತನ್ನ ತಂದೆಯನ್ನು ಉಳಿಸಿಕೊಡಿ ಎಂದು ವಿನಂತಿಸಿದಾಗ, ಮಾನವೀಯತೆ ಆಧಾರದ ಮೇಲೆ ಆತನ ಮನವಿ ಅಟಲ್ ಬಿಹಾರಿ ವಾಜಪೇಯಿಯವರ ಹೃದಯಕ್ಕೆ ನಾಟಿತು. ಇದು ಎಂತ ವಿಪರ್ಯಾಸ! ಯಾವ ವೈರಿ ದೇಶವು ತಮ್ಮ ವಿರುದ್ದ ಹೊರಡುತ್ತಿತ್ತೋ ಮತ್ತು ಯಾರು ಅದರ ಮುಂದಾಳು ಆಗಿದ್ದರೋ ಅವರ ಮಗನೇ ವಿನಂತಿಸಿಕೊಂಡಾಗ ಹಿಂದಿನದನ್ನು ಲೆಕ್ಕಿಸದೇ ಅವನ ತಂದೆಯನ್ನು ರಕ್ಷಿಸಲು ಅವರ ಮುಂದೆ ಬಂದರು.
ಇದರಿಂದಲೇ ಅವರನ್ನು ಭಾರತದ ಅಜಾತ ಶತ್ರು ಎಂದು ಕರೆಯುವುದು. ಅಟಲ್ ಜಿ ಸ್ನೇಹ ಜೀವಿಯಾಗಿದ್ದರಿಂದಲೇ ಅವರು ಬಹು ಪಕ್ಷಗಳನ್ನು ಕೂಡಿಸಿಕೊಂಡು ದಕ್ಷ ಆಡಳಿತ ನೀಡಲು ಸಾಧ್ಯವಾಗಿದ್ದು.

 
ಸ್ವಂತ ಮನೆ ಕಟ್ಟಿಕೊಳ್ಳದ ರಾಜಕಾರಣಿ :
 
ಅಟಲ್ ರವರು ಲಾಲ್ ಬಹದ್ದೂರ್ ಶಾಸ್ತ್ರೀಯವರಂತೆ ಸ್ವಂತ ಮನೆ ಹೊಂದಿರಲಿಲ್ಲ.  ಗ್ವಾಲಿಯರ್ನಲ್ಲಿ ಇದ್ದ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಈಗ ಅದು ಸಾರ್ವಜನಿಕ ಗ್ರಂಥಾಲಯ. ಇಂದಿನವರೆಗೂ ಅಟಲ್ ರವರಿಗೆ ಸ್ವಂತ ಮನೆಯಿಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕಿಯದಲ್ಲಿದ್ದು ಇನ್ನು ಸ್ವಂತ ಮನೆ ಹೊಂದದಿರುವುದು ಅಚ್ಚರಿಯ ಸಂಗತಿ. ಅಟಲ್ ರವರು ಅನೇಕ ವರ್ಷಗಳ ಕಾಲ ಪಕ್ಷದ ಕಛೇರಿಯಲ್ಲೇ ಮಲಗುತ್ತಿದ್ದರು. ಪಕ್ಷದ ಕಾರ್ಯಾಲಯವೇ ಅವರ ಮನೆಯಾಗಿತ್ತು.
 
ಅಟಲ್ ಜಿ ಬ್ರಹ್ಮಚಾರಿಯೇ, ಸಾರಾಯಿ ಪ್ರಿಯರೇ?    
  
ಅಟಲ್ ಜಿ ಬ್ರಹ್ಮಚಾರಿಯೇ?, ಅವರು ಅವಿವಾಹಿತರೇ? ಅವರು ಸಾರಾಯಿ ಕುಡಿಯುತ್ತಾರೆಯೇ? ಅನೇಕರ ಮನಸ್ಸಿನಲ್ಲಿ ಈ ಪ್ರಶ್ನೆಗಳು ಸುಳಿದಾಡಿದ್ದು ಉಂಟು. ಕೆಲವರು ಇದನ್ನೇ ದೊಡ್ಡ ವಿಷಯ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿಯವರು ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದವರು. ಅವರು ಯಾವ ಹೆಣ್ಣನ್ನೂ ಕೆಟ್ಟ ಕಣ್ಣಿನಿಂದ ನೋಡದೆ ಅವರೆಲ್ಲರೂ ನನ್ನ ಸಹೋದರಿಯರು ಎಂದು ಹೇಳುತ್ತಿದ್ದರು. ಅವರು ಜೀವನ ಪೂರ್ತಿ ಅವಿವಾಹಿತರಾಗಿ ಉಳಿದರು.
ಅಟಲ್ ರವರು ವಿದೇಶಾಂಗ ಮಂತ್ರಿಯಾಗಿದ್ದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ರಶಿಯಾಕ್ಕೆ ಹೋದಾಗ ಅಟಲ್ ರವರು ಭಾರತೀಯ ವಿದ್ಯಾರ್ಥಿಗಳಿಗೆ ಕುಡಿಯಲು ಪ್ರಚೋದಿಸಿದರು ಎಂದು ಅವರು ರಾಜಕೀಯ ವಿರೋಧಿಗಳು ಗಲಾಟೆ ಮಾಡಿದರು. ಆದರೆ ಅಂದು ಅಲ್ಲಿ ಅಟಲ್ ರವರು ವಿದ್ಯಾರ್ಥಿಗಳಿಗೆ ಕುಡಿಯಿರಿ ಕುಡಿಯಿರಿ ಮದ್ಯವಲ್ಲ, ಸ್ವಮೂತ್ರ ಎಂದು ಹೇಳಿದ್ದರು. ಅದನ್ನೇ ತಪ್ಪಾಗಿ ಅರ್ಥೈಸಲಾಗಿತ್ತು.
 
ಭಾರತ ರತ್ನ  ಅಟಲ್ ಬಿಹಾರಿ ವಾಜಪೇಯಿ
      
ಬಿ.ಜೆ.ಪಿ ಪಕ್ಷ ತಾವು 2014ರ ಚುನಾವಣೆಯಲ್ಲಿ ಗೆದ್ದರೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿಕೆ ಕೊಟ್ಟಿತು. ಆಗ ಒಬ್ಬ ಕಾಂಗ್ರೆಸ್ ನಾಯಕರು  ಈ ರೀತಿಹೇಳಿಕೆಕೊಟ್ಟರು. ಚಲೇಜಾವ್  ಚಳುವಳಿ ಸಮಯದಲ್ಲಿ ಬಂಧನವಾದಾಗ ಅಟಲ್ ಬಿಹಾರಿ ವಾಜಪೇಯಿ ‘ ನಾನು ನಿರಪರಾಧಿ ನನನ್ನು ಬಿಟ್ಟು ಬಿಡಿ ’ ಎಂದು ಪೋಲೀಸರ ಎದುರು ಬೇಡಿಕೊಂಡಿದ್ದರು ಆಗಾಗಿ ಅವರು  ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದರು. ಆದರೆ ಅಂದು ಅಟಲ್ ಜಿ ಅಪ್ಪನ ಕಣ್ಣು ತಪ್ಪಿಸಿ ಚಳುವಳಿಯಲ್ಲಿ ಭಾಗವಹಿಸಿ ಬಾಲ ಅಪರಾಧಿಯಾಗಿ 24 ದಿನ ಸೆರೆವಾಸ ಅನುಭವಿಸಿದ್ದರು. ಈ ಕುರಿತು ಅಟಲ್ ಜಿ ಒಮ್ಮೆ ತಮ್ಮ ಹಾಸ್ಯ ಮಾತಿನ ಶೈಲಿಯಿಂದ ಹೇಳಿದ್ದರು. ತನ್ನ ಇಡೀ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಅಟಲ್ ಜಿ ನಿಜವಾದ ಭಾರತ ರತ್ನ.
ದೇಶಕ್ಕೆ ಅವರ ಕೊಡುಗೆ ಅಪಾರ. ಅಟಲ್ ಜಿ ಎಂದಿಗೂ ಪ್ರಶಸ್ತಿ ಬಯಸಿದವರಲ್ಲ. ಅವರು ಎಂದಿಗೂ ಪ್ರಶಸ್ತಿ ಹಿಂದೆ ಬೀಳಲಿಲ್ಲ.  ನೆಹರು, ಇಂದಿರಾಗಾಂಧಿ ತಮಗೇ ತಾವೇ ತಮ್ಮ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿಕೊಂಡು ಪ್ರಶಸ್ತಿ ಪಡೆದುಕೊಂಡರು.ಆದರೆ ಅಟಲ್ ಜಿ ಹಾಗೇ ಮಾಡಲಿಲ್ಲ. ಇವರ ಮುಂದೆ ಅಟಲ್ ಜಿ ವಿಶಿಷ್ಟವಾಗಿ ಕಾಣುತ್ತಾರೆ.  ನರೇಂದ್ರ ಮೋದಿ ಸರ್ಕಾರ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಆದೇಶವನ್ನು ನೀಡಿದೆ. ಇದು ಅವರಿಗೆ ಸಂದ ಶ್ರೇಷ್ಠ ಗೌರವ.
 
ಉಪಸಂಹಾರ:
 
ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25 ರಂದು ಜನಿಸಿದರು. ಇಂದು ಅವರ 91ನೇ ವರ್ಷದ ಜನುಮ ದಿನ, ಈ ದೇಶಕ್ಕೆ ಅವರ ಅನುಪಸ್ಥಿತಿ ಬಹಳವಾಗಿ ಕಾಡುತ್ತಿದೆ.ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದರೆ ದೇಶ ಇಂದು ಇಂತಹ ಶೋಚನೀಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.ಇಂದು ಪ್ರತಿಯೋಬ್ಬ ಭಾರತೀಯ ಪ್ರಜೆಯೂ ಅವರನ್ನು ನೆನೆಯಬೇಕು.  ಮಹಾನ್ ನಾಯಕ, ಕವಿ, ರಾಜಕೀಯ ಮುತ್ಸದಿ, ಸ್ನೇಹ ಜೀವಿ, ಸರಳ ಜೀವಿ. ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ನನ್ನ ನಮನಗಳು.
 
ಜೈ ಹಿಂದ್
 
ರವಿತೇಜ ಶಾಸ್ತ್ರೀ.      

Friday, November 14, 2014

ಭಾರತಕ್ಕೆ ಚಾಚಾ ನೀಡಿದ ಬಳುವಳಿಗಳು!


ನಾವು ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುತ್ತೇವೆ. ಇದರ ಉದ್ದೇಶ  ನಾವು ಕಟ್ಟುವ ಮನೆ ಸದೃಢವಾಗಿ, ದೀರ್ಘ ಕಾಲ ಬಾಳಬೇಕು ಎಂದು. ಇದು ದೇಶಕ್ಕೂ ಅನ್ವಯಿಸುತ್ತದೆ. ದೇಶದ ಉನ್ನತಿ ಸದೃಢ ಮತ್ತು ಬಲಿಷ್ಠ ಅಡಿಪಾಯವನ್ನು ಅವಲಂಬಿಸಿದೆ. ಅಡಿಪಾಯ ಸರಿಯಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ ದುರದೃಷ್ಟವಶಾತ್ ಭಾರತಕ್ಕೆ ಭದ್ರವಾದ ಅಡಿಪಾಯ ದೊರಕಲೇ ಇಲ್ಲ.  ಸ್ವಾತಂತ್ರ್ಯದ ನಂತರ ನಮ್ಮನ್ನು ಆಳಿದ ನಾಯಕರಾದ ನೆಹರು ಮತ್ತು ಗಾಂಧಿ ದೇಶವನ್ನು ಸಮರ್ಪಕವಾಗಿ ಮುನ್ನಡೆಸಲಿಲ್ಲ. ಅವರು ಮಾಡಿದ ಅನಾಹುತಗಳ ಸರಮಾಲೆಗಳ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ.
ಈ ಅನಾಹುತ ಶುರುವಾಗಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ. ಅತಿಯಾದ ಹುಚ್ಚು ನೆಹರು ಪ್ರೇಮ ಅವರಿಗೆ ಆವರಿಸಿತ್ತು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾರಾಗಬೇಕೆಂದಾಗ ಆಗಿನ ಕಾಂಗ್ರೆಸ್ ನ ಬಹುಪಾಲು ಮಂದಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ರ ಪರವಾಗಿ ಮತ ಹಾಕಿದರು. ಆದರೂ ತಮ್ಮ ಪ್ರಿಯ ಶಿಷ್ಯ ನೆಹರೂವನ್ನು ಪ್ರಧಾನಿ ಗಾದಿಯಲ್ಲಿ ಕುಳ್ಳಿರಿಸಿ ಅನಾಹುತಗಳ ಸರಮಾಲೆಗೆ ಮೊದಲ ಮಣಿಯನ್ನು ಪೋಣಿಸಿದರು ಗಾಂಧೀಜಿ. ಗಾಂಧಿಯವರನ್ನು ಗೌರವಿಸುತ್ತಿದ್ದ ಪಟೇಲರು ಪ್ರತಿಭಟಿಸದೆ ತಮ್ಮ ದೊಡ್ಡತನವನ್ನು ಮೆರೆದರು. ಈಗಿನ ರಾಜಕಾರಣಿಗಳಂತೆ ಪಟೇಲರು ನಡೆದುಕೊಳ್ಳಲಿಲ್ಲ. ನೆಹರು ಪ್ರಧಾನಿಯಾದ ನಂತರ ಮಾಡಿದ್ದೆಲ್ಲವೂ ಅನಾಹುತಗಳೇ. ಅಭಿವೃದ್ದಿಯ ಕಡೆಗೆ ನುಗ್ಗಬೇಕಿದ್ದ ದೇಶವನ್ನು ಪಾತಾಳಕ್ಕೆ ನೂಕಿದ ಮಹಾನ್ ಪ್ರಧಾನಿ ನಮ್ಮ ಚಾಚ ನೆಹರು. ಅವರು ಭಾರತಕ್ಕೆ ಕೊಟ್ಟ ಬಳುವಳಿಗಳು ಅಸಂಖ್ಯ.  ಅಡಿಪಾಯ ಸರಿಯಿದ್ದರೆ ತಾನೇ  ಮನೆ ಉತ್ತಮವಾಗಿರೋದು. ನೆಹರುವಿನ ಅನಾಹುತಗಳ ಬಳುವಳಿಗಳ ಪರಿಚಯ ಇಲ್ಲಿದೆ.

ಕಾಶ್ಮೀರ ಸಮಸ್ಯೆಯ ಜನಕ :
 ಭಾರತದ ಎಲ್ಲ ಸಣ್ಣಪುಟ್ಟ ರಾಜ್ಯ, ಸಂಸ್ಥಾನಗಳನ್ನು ಏಕೀಕರಣಗೊಳಿಸುವ ಕೆಲಸವನ್ನು ಸರ್ದಾರ್ ಪಟೇಲ್ ವಹಿಸಿಕೊಂಡಿದ್ದರು. ತಮ್ಮ ದಿಟ್ಟ ನಿರ್ಧಾರ ಮತ್ತು ಅಚಲ ಇಚ್ಚಾಶಕ್ತಿಯಿಂದ ಪಟೇಲರು ಎಲ್ಲ ರಾಜ್ಯಗಳನ್ನು ಭಾರತಕ್ಕೆ ಸೇರಿಸಿ ಉಕ್ಕಿನ ಮನುಷ್ಯರೆನಿಸಿದರು. ಆದರೆ ಕಾಶ್ಮೀರದ ಏಕೀಕರಣವನ್ನು ಪಟೇಲರಿಗೆ ವಹಿಸದೆ ತಾವೇ ನಿರ್ವಹಿಸುವುದಾಗಿ ಹೇಳಿ ತಮ್ಮ ಅವಿವೇಕಿ ನಿರ್ಧಾರಗಳಿಂದ ನೆಹರು  ಕಾಶ್ಮೀರ ಸಮಸ್ಯೆಯನ್ನು ಹುಟ್ಟುಹಾಕಿದರು. ನೆಹರು ನಿರ್ಧಾರದಿಂದ ಕಾಶ್ಮೀರ ಭಾರತದ ಕೈತಪ್ಪುವ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪಟೇಲರು ಸೇನೆಯನ್ನು ನುಗ್ಗಿಸಿ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಸೇರಲು ನಿರ್ಧರಿಸಿದ್ದ ಆದರೆ ಷೇಕ್ ಅಬ್ದುಲ್ಲಾನ ಮಾತು ಕೇಳಿದ ನೆಹರು ಸಮಸ್ಯೆಗಳನ್ನು ಸೃಷ್ಟಿಸಿದರು. ಕಾಶ್ಮೀರದ ಸಮಸ್ಯೆ ಉಲ್ಬಣಗೊಂಡಾಗ ನೆಹರು ವಿಶ್ವ ಸಂಸ್ಥೆಯ ಕದ ತಟ್ಟಿದ್ದರು. ನಮ್ಮ ಮನೆಯಲ್ಲಿ ಜಗಳವಾದಾಗ ಪಕ್ಕದ ಮನೆಯವನನ್ನು ಕರೆದು ರಾಜಿ ಮಾಡಿಸುವುದು ಮೂರ್ಖತನವಲ್ಲವೇ? ಇಂತಹ ಸಣ್ಣ ಸಣ್ಣ ಸಂಗತಿಗಳೂ ನೆಹರುಗೆ ತಿಳಿಯಲಿಲ್ಲ. ತಮ್ಮ ಹಟ ಸಾಧಿಸಿದರು. ಆದರ ಪರಿಣಾಮ ಕಾಶ್ಮೀರ ಸಮಸ್ಯೆ ಇನ್ನು ಜೀವಂತ.


ಭಾರತದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ ಮಹಾನ್(?) ಪುರುಷ  ನೆಹರು :
“ ಯಾವುದೇ ಪ್ರಭುತ್ವವಾದರೂ ದೇಶದ ಆರ್ಥ ನೀತಿ ಭದ್ರವಾದ ನೆಲೆಗಟ್ಟಿನ ಮೇಲೆ ನಿಲ್ಲಬೇಕು. ನಮ್ಮ ಅರ್ಥ ನೀತಿ ನಮ್ಮ ನಾಯಕರ( ನೆಹರು ಅವರ) ಆತುರದಿಂದ ಅತಂತ್ರದಾರಿಗೆ ಹೋಗಿದೆ ಎಂದು ನಮಗೆ ಭಯವಾಗುತ್ತಿದೆ, ವೆಚ್ಚದಲ್ಲಿ ವಿತರಣೆ ಸಾಲದೇ ಹೋಗಿದೆ. ಅನಿರ್ವಾರ್ಯವಾದ ಒಂದು ಮಟ್ಟಕ್ಕಿಂತ ಹೆಚ್ಚಾಗಿ ಹಣ ಪೋಲಾಗುತ್ತಿದೆ. ಅಭಿವೃದ್ದಿ ಸಿದ್ದಿಸದೆ ನಮಗೆ ನಷ್ಟವಾಗುತ್ತಿದೆ.” ಈ ರೀತಿ ಕಳವಳ ವ್ಯಕ್ತ ಪಡಿಸಿದವರು ಕನ್ನಡದ ಆಸ್ತಿ ಮಾಸ್ತಿಯವರು.
ಭಾರತದ ಆರ್ಥಿಕತೆ ಬಲಗೊಳಿಸಬೇಕಾದರೆ ಸಣ್ಣ ಮತ್ತು ಮಧ್ಯಮ ಕೈ ಗಾರಿಕೆಗಳು ಉದ್ದಾರವಾಗಬೇಕೆಂದು  ಗಾಂಧೀಜಿ ನಂಬಿದ್ದರು ಆದರೆ ಗಾಂಧಿ ಶಿಷ್ಯ. ನೆಹರುಗೆ ಇದರ ಮೇಲೆ ನಂಬಿಕೆಯೇ ಇರಲಿಲ್ಲ. ದೊಡ್ಡ ದೊಡ್ಡ ಯಂತ್ರಗಳ ಕೈಗಾರಿಕೆಗಳಿಂದ ದೇಶ ಉದ್ದಾರವಾಗುತ್ತದೆ ಎಂದು ಅವರು ನಂಬಿದರು. ವಿದೇಶಗಳಿಂದ ಬಂಡವಾಳವನ್ನು ತಂದು ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿದರು. ಆದರೆ ಅರ್ಥಿಕ ಅಶಿಸ್ತಿನ ಪರಿಣಾಮ ಬಾರಿ ನಷ್ಟ ಉಂಟಾಯಿತು, ರಷ್ಯಾ ಮತ್ತು ಬೇರೆ ರಾಷ್ಟ್ರಗಳ ನೀತಿಗಳನ್ನು ಪಾಲಿಸಿದರ ಪರಿಣಾಮ ಭಾರತದ ಸಾಲ ಹೆಚ್ಚಾಯಿತು.
ವೆಚ್ಚದ ನಿಯಂತ್ರಣ ಪದವೇ ನೆಹರುಗೆ ತಿಳಿದಿರಲಿಲ್ಲವೇನೋ. ಕಾಂಗ್ರೆಸ್ ಅಧಿವೇಶನಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದರು. ನೆಹರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳೆಲ್ಲ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿತೆ ಹೊರತು ಏನು ಮಾಡಲಿಲ್ಲ. ಇಂದು ನಾವು ವಿತ್ತೀಯ ಕೊರತೆ (Fiscal Deficit) ಸಮಸ್ಯೆ ಎದುರಿಸುತ್ತಿದ್ದೇವೆ ಇದರ ಜನಕ ನಮ್ಮ ನೆಹರೂನೆ! ವಿಶ್ವ ಬ್ಯಾಂಕ್ ನಿಂದ ಸಾಲ ತರಿಸಿಕೊಂಡ ನೆಹರೂ ಸರ್ಕಾರ ತೀರಿಸಲು ಆಗದೆ ಮತ್ತಷ್ಟು ಸಾಲ ಮಾಡಿತು. ವೆಚ್ಚ ನಿಯಂತ್ರಣ ಶೂನ್ಯ. ಪರಿಣಾಮ ಎಲ್ಲ ಭಾರತೀಯರ  ತಲೆ ಮೇಲೆ ಸಾಲದ ಹೊರೆ. ನಮ್ಮ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ಅರ್ಥಿಕ ಪ್ರಗತಿಯನ್ನು ಸಾಧಿಸಿವೆ. ಆದರೆ ಭಾರತ ಇನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ. ಇದಕ್ಕೆ ಮೂಲ ಕಾರಣ ನೆಹರು.

ಸೆಕ್ಯುಲರಿಸಂ ಮತ್ತು ತುಷ್ಟೀಕರಣದ ಪಿತಾಮಹ :
ಸೆಕ್ಯುಲರಿಸಂ ಎಂಬ ಕೊಳಕು ಇಂದು ದೇಶದಲ್ಲಿದೆ. ಈ ಕೊಳಕನ್ನು ಸೃಷ್ಟಿಸಿದ್ದೆ ನೆಹರು. ಜಾತ್ಯತೀತ ಎಂದರೆ ಎಲ್ಲ ಧರ್ಮಗಳು ಒಂದೇ ಎಲ್ಲರೂ ಸಮಾನರು ಎಂದರ್ಥ. ಆದರೆ ನೆಹರು ಪಾಲಿಗೆ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವುದೇ ಸೆಕ್ಯುಲರಿಸಂ. ತಮ್ಮ ಗುರು ಗಾಂಧಿಯಿಂದ ವರವಂತೆ ಪಡೆದ ತುಷ್ಟೀಕರಣ ನೀತಿಯನ್ನು ಗಾಂಧಿಯ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ  ಗಾಂಧಿಗಿಂತ ಹೆಚ್ಚಾಗಿ ಪಾಲಿಸಿದರು ನಮ್ಮ ನೆಹರು. ಪರಿಣಾಮ ಪಾಕಿಸ್ಥಾನದ  ಹುಚ್ಚಾಟ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸವನ್ನು ಇಂದಿಗೂ ಎದುರಿಸುತ್ತಿದ್ದೇವೆ. ಒವೈಸಿ ಎಂಬ ಮತಾಂಧ ಇಂದು “ ಐದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ಮುಗಿಸುತ್ತೇನೆ, ಭಾರತದ ಮೇಲೆ ಪಾಕಿಸ್ತಾನ ಯುದ್ದ ಸಾರಿದರೆ ಮುಸ್ಲಿಮರು ಭಾರತದ ವಿರುದ್ದ ಹೋರಾಡಬೇಕು”  ಸಲಹೆ ನೀಡುತ್ತಾನೆ. ಇಂತಹ ಮತಾಂಧರ ಬೆಳವಣಿಗೆಗೆ ಗಾಂಧಿ ಮತ್ತು ನೆಹ್ರೂನೆ ಕಾರಣ.   
ಇವತ್ತು ಬುದ್ದಿ ಜೀವಿಗಳು ಎಂದು ಆರಚುವ, ತಲೆಯಲ್ಲಿ ಲದ್ದಿ ತುಂಬಿರುವ ಲದ್ದಿಜೀವಿಗಳು ಇದೇ ನೆಹರುವಿನ ಬಳುವಳಿಯಾದ  ಸೆಕ್ಯುಲರಿಸಂನಿಂದಲೇ ಸಮಾಜದ ಸ್ವಾಸ್ಥ್ಯವನ್ನು ಆಳು ಮಾಡುತ್ತಿರುವುದು. ಈ ಬುದ್ದಿಜೀವಿಗಳು ಎನ್ನುವ ದುರ್ಬುದ್ಧಿಜೀವಿಗಳ ಜನಕ ನೆಹರು ಅಂದರೆ ಯಾವುದೇ ತಪ್ಪಿಲ್ಲ ಎನಿಸುತ್ತದೆ.
ಹಿಮಾಲಯನ್ ಬ್ಲಂಡರ್ :
ನೆಹರುಗೆ ಕಮ್ಯುನಿಸ್ಟ್ ವಾದವೆಂದರೆ ಅದೇನೋ ಹುಚ್ಚು ಪ್ರೀತಿ. ಈ ಪ್ರೀತಿಯಿಂದಲೇ ಕೃಷ್ಣ ಮೆನನ್ ಎಂಬ ಪಕ್ಕ ಕಮ್ಯುನಿಸ್ಟ್ ಮನುಷ್ಯನನ್ನು ನೆಹರು ರಕ್ಷಣ ಸಚಿವರನ್ನಾಗಿ ಮಾಡಿದ್ದು. ಈತ ಮಂತ್ರಿಯಾಗಿದ್ದಾಗ ಭಾರತಕ್ಕಿಂತ ಹೆಚ್ಚಾಗಿ ಚೀನಾಗೆ ನಿಷ್ಠೆ ತೋರಿಸುತ್ತಿದ್ದ. ಇವನು ಮಾಡಿದ ಅನಾಹುತಗಳು ಒಂದೇ ಎರಡೆ. ಇದರ ಪರಿಣಾಮವೇ 1962 ರ ಚೀನಾ ಮತ್ತು ಭಾರತದ ನಡುವಿನ ಯುದ್ದದ ಸೋಲು .
ನೆಹರುಗೆ ತನ್ನನ್ನು ತಾನು ದೊಡ್ಡ ಶಾಂತಿ ಪ್ರಿಯ ಎಂದು ಗುರುತಿಸಿಕೊಳ್ಳಬೇಕೆಂಬ ಖಯಾಲಿ. ಅರ್ಲಿಪ್ತ ನೀತಿ ನಮ್ಮದು ಎಂದು ಭಾಷಣ ಮಾಡುತ್ತಿದ ಮಹಾನ್ ಮಾತುಗಾರ ನೆಹರು. ಇದರಿಂದ ರಕ್ಷಣ ಇಲಾಖೆಗೆ ಮಹತ್ವವೇ ಸಿಗಲಿಲ್ಲ. ಯಾವ ಸಿದ್ದತೆಗಳು ಇರಲಿಲ್ಲ. ಶಸ್ತ್ರಾಸ್ತ್ರ ಖರೀದಿಯ ಬಗ್ಗೆ ತಿರಸ್ಕಾರ ನೆಹರೂಗಿತ್ತು. ಯಾವುದೇ ಸಿದ್ದತೆಯಿಲ್ಲದೆ ಯುದ್ದ ಘೋಷಣೆ ಮಾಡಿದರು. ಆಪಾರ ಸಾವು ನೋವುಗಳು ಸಂಭವಿಸಿದವು. ಅದೆಷ್ಟೋ ನೆಲವನ್ನು ಭಾರತ ಕಳೆದುಕೊಂಡಿತು. ಕೃಷ್ಣ ಮೆನನ್ ಮತ್ತು ನೆಹರು ಮಾಡಿದ ಅನಾಹುತಗಳಿಂದ ಸಾಕಷ್ಟು ಸೈನಿಕರು ಯುದ್ದ ಉಪಕರಣವಿಲ್ಲದೆ, ನೀರು, ಆಹಾರವಿಲ್ಲದೆ ಯುದ್ದ ಮಾಡಿ ಅಪಾರ ನೋವುಗಳನ್ನು ಅನುಭವಿಸಿದರು.
ಇವಷ್ಟೇ ಅಲ್ಲ ಭಾಷಾವಾರು ಪ್ರಾಂತ್ಯ ರಚನೆಯಾದಾಗ ನೆಹರು ನೀತಿಗಳಿಂದ ಸಾಕಷ್ಟು ಅನ್ಯಾಯಗಳಾದವು. ನೆಹರು ಸಾವರ್ಕರ್, ಅಂಬೇಡ್ಕರ್ ರಂತ ಮಹಾನ್ ಪುರುಷರಿಗೆ ನಾನಾ ತೊಂದರೆಗಳನ್ನು ಕೊಟ್ಟರು. ಸಾವರ್ಕರ್ ಮೇಲೆ ಸುಖಾಸುಮ್ಮನೆ ಗಾಂಧಿ ಹತ್ಯೆಯ ಆರೋಪ ಹೊರೆಸಿ ಅವರನ್ನು ಅವಮಾನಿಸಿದರು. ದೇಶ ಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ  ನಿಷೇಧ ಹೇರಿದರು. ಹೀಗೆ ತಮಗೇ ಯಾರು ವಿರುದ್ದವಾಗಿದ್ದರೋ ಅವರೆನ್ನೆಲ್ಲ ಮುಗಿಸಬೇಕು ಎನ್ನುವುದೇ ನೆಹರುವಿನ ಸಿದ್ದಾಂತವಾಗಿತ್ತು                 
 ನೆಹರುವಿನ ಬ್ಲಂಡರ್ ಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಮೀರುತ್ತ ಹೋಗುತ್ತದೆ. ನೆಹರೂ ತನ್ನ ವಂಶವನ್ನು ಬೆಳೆಸಿದ್ದು ಸಹ ಅನಾಹುತವೇ. ಪ್ರಧಾನಿಯಾಗಿದ್ದಾಗಲೇ ತನ್ನ ಮಗಳು ಇಂದಿರಾಳನ್ನು ಪ್ರಭಾವಿಯಾಗಿ ಬೆಳೆಸಿದರು ನೆಹರು. ನೆಹರು ನಂತರ ಯಾರು ಎಂಬ ಪ್ರಶ್ನೆ ಬಂದಾಗ ನೆಹರುಗೆ “ವೈ ನಾಟ್ ಇಂದಿರಾ” ಎಂದು ನೆಹರು ಬಂಟರು ಅವರಿಗೆ ಸಲಹೆ ಕೊಟ್ಟಿದ್ದರಂತೆ. ಆಗ ನೆಹರು “ನಾಟ್ ನೌ” ಎಂದಷ್ಟೇ ಉತ್ತರಿಸಿದ್ದರು. ಅವರು ನಿರಾಕರಿಸಲಿಲ್ಲ. ನೆಹರು ಮಾಡಿದ ಅನಾಹುತಗಳನ್ನೇ ಇಂದಿರಾ ಮುಂದುವರೆಸಿದರು, ಕಾಂಗ್ರೆಸ್ ಅನ್ನು ವಿಭಜಿಸಿದರು. ಅಮ್ಮನ ನೆರಳಿನಲ್ಲೇ ನಡೆದ ರಾಜೀವ್ ಗಾಂಧಿ ಸಹ ಇದನ್ನೇ ಮುಂದುವರೆಸಿದರು. ರಾಜೀವ್ ಗಾಂಧಿಯ ನಂತರ ಕಾಂಗ್ರೆಸ್ ನಿಷ್ಟರು  ವಿದೇಶೀ ಮುಖ ಸೋನಿಯಾ ಗಾಂಧಿಯನ್ನು  ತಂದು ನಿಲ್ಲಿಸಿದರು. ಹತ್ತು ವರ್ಷ ದೇಶ ಆಳಿದ ಸೋನಿಯಾ ಮಾಡಿದ್ದು ಅನಾಹುತಗಳೇ, ದೇಶವನ್ನು ಹಳ್ಳಕ್ಕೆ ದೂಡುವ ಕೆಲಸಗಳೇ. ಈಗ ರಾಜೀವ್ ಕುಡಿ ರಾಹುಲ್ ಗೆ ಅಧಿಕಾರ ಸಿಕ್ಕರೆ ಮುಂದೆ ಆಗೋದು ಅನಾಹುತವೇ. ಒಟ್ಟಿನಲ್ಲಿ  ನೆಹರು ವಂಶ ಮಾಡಿದ್ದು ಅನಾಹುತಗಳೇ ಮಾಡೋದು ಅನಾಹುತಗಳೇ.  
ನಮ್ಮ ದೇಶದ ಯಾವುದೇ ಜ್ವಲಂತ ಸಮಸ್ಯೆಯನ್ನು ಅವಲೋಕಿಸಿ ಕಾರಣ ಹುಡುಕಿದರೆ ಅದು ನೆಹರು, ಗಾಂಧಿ ಮತ್ತು ನೆಹರು ಕುಟಂಬದ ವರವೇ ಆ ಸಮಸ್ಯೆಯಾಗಿರುತ್ತದೆ. ಅಡಿಪಾಯ ಸರಿಯಿದ್ದರೆ ತಾನೇ ಮನೆ ಚೆನ್ನಾಗಿರೋದು.

ರವಿತೇಜ ಶಾಸ್ತ್ರೀ                                                                                        
           
                                                                                  

           

Wednesday, November 12, 2014

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!

ಹೆಚ್ಚುತ್ತಿವೆ ಅತ್ಯಾಚಾರಗಳು ಕುಸಿಯುತ್ತಿವೆ ಮಾನವೀಯ ಮೌಲ್ಯಗಳು!
 
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಎಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
ಹೆಣ್ಣಿಗೆ ದೇವರ ಸ್ಥಾನವನ್ನು ನೀಡಿದ ಶ್ರೇಷ್ಠ ಪರಂಪರೆ ನಮ್ಮದು. ನದಿಗಳು, ಪರ್ವತಗಳನ್ನು ಹೆಣ್ಣಿನ ರೂಪದಲ್ಲಿ ಕಂಡು ಗೌರವಿಸಿದ ಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿ.
ಜಗದ ಜನರೆಲ್ಲ ಭೂಮಿಯನ್ನು ಜಡವಸ್ತು ಎಂದು ಭಾವಿಸಿದ್ದ ಸಂದರ್ಭದಲ್ಲಿ ಭೂವಿಗೆ ಮಾತೃ ಸ್ಥಾನ ನೀಡಿ ವಿಶ್ವದ ಕಣ್ತೆರೆಸಿದ ದೇಶ ಭಾರತ. ಹೆಣ್ಣಿಗೆ ಮಹತ್ತರ ಸ್ಥಾನ ನೀಡಿ ಗೌರವಿಸಿದ ಶ್ರೇಷ್ಠ ದೇಶ ನಮ್ಮದು.
ಆದರೆ ಇಂದು ನಡೆಯುತ್ತಿರುವುದೇನು? ಹೆಣ್ಣನ್ನು ದೇವತೆಯೆಂದು ಪೂಜಿಸಿದ ಭಾರತದಲ್ಲೇ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ,  ಅತ್ಯಾಚಾರಗಳ ಸರಮಾಲೆಗಳು. ಹಸುಳೆ, ಕಂದಮ್ಮಗಳ ಮೇಲೆ ಅತ್ಯಾಚಾರಗಳು ಕಾಮುಕರ ಅಟ್ಟಹಾಸಕ್ಕೆ ಭಾರತ ನಲುಗಿ ಹೋಗಿದೆ. ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿದ ಭಾರತದಲ್ಲಿ ಇಂದು ಹೆಣ್ಣಿಗೆ ರಕ್ಷಣೆಯೇ ಇಲ್ಲ.
ಕಳೆದ ವರ್ಷ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಜನರನ್ನು ರೊಚ್ಚಿಗೆಬ್ಬಿಸಿತ್ತು. ಈ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾದವು. ಈಗ ಈ ಪೈಚಾಚಿಕ ಕೃತ್ಯಗಳು ಕರ್ನಾಟಕದಲ್ಲೂ ವರದಿಯಾಗಿವೆ. ನಂದಿತಾಗಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಅಮಾನವೀಯ. ಹದಿಮೂರು ವರ್ಷದ ಆ ಪೋರಿಯನ್ನು ಹಿಂಸಿಸಿ, ಅತ್ಯಾಚಾರ ಮಾಡಿದ ಘೋರ ಕೃತ್ಯವನ್ನು ನೆನೆದಾಗ ದುಃಖವಾಗುತ್ತದೆ.
ಹೆಣ್ಣಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ರಾಜಕಾರಣಿಗಳಿಗೆ ಇವೆಲ್ಲ ಸಾಮಾನ್ಯ ಪ್ರಕರಣಗಳು. ಅತ್ಯಾಚಾರ ತಡೆಗಟ್ಟುವುದು ನಮ್ಮ ಕೆಲಸವಲ್ಲ ಎಂಬ ಅರ್ಥ ಬರುವಂತೆ ಅವಿವೇಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಇವೆಲ್ಲದರ ಮುಂದೆ ಮೌಲ್ಯಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಭಾರತ ಮೌಲ್ಯಗಳಿಗೆ ಬೆಲೆಕೊಟ್ಟ ರಾಷ್ಟ್ರ. ಸತ್ಯಕ್ಕಾಗಿ, ಅಪ್ಪನ ಮಾತಿಗೆಂದು ಇಡೀ ರಾಜ್ಯ ಅಧಿಕಾರವನ್ನು ತ್ಯಜಿಸಿ  ಅರಣ್ಯಕ್ಕೆ ತೆರಳಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶಗಳನ್ನು ಪಾಲಿಸಿದ ದೇಶ ನಮ್ಮದು. ಆದರೆ ಇಂದು ನಮ್ಮವರಿಗೆ ಒಳಿತು ಕೆಡಕಿನ ಅರಿವೆ ಇಲ್ಲ. ಸತ್ಯ, ಅಹಿಂಸೆ,ನ್ಯಾಯ, ಮಾನವೀಯತೆ ಇವೆಲ್ಲ ಗೊತ್ತೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ಫಲದಿಂದ ಇವೆಲ್ಲ ಮರೀಚಿಕೆಯಾಗಿಬಿಟ್ಟಿವೆ.
ಪ್ರಸ್ತುತ ಭಾರತದಲ್ಲಿ ಪ್ರತಿ ದಿನವೂ ಹಲವು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಾಮುಕರ ಅಟ್ಟಹಾಸಕ್ಕೆ ಪ್ರತಿ ದಿನವೂ ಮುಗ್ಧ ಹೆಣ್ಣು ಜೀವಗಳು ಬಲಿಯಾಗುತ್ತಿವೆ. ಇದೆಕ್ಕೆಲ್ಲ ಶಾಶ್ವತ ಪರಿಹಾರವಿಲ್ಲವೇ? ಈಗ ಬೆಳಕಿಗೆ ಬಂದಿರುವ ನಂದಿತಾ ಪ್ರಕರಣ ಜನರ ತಾಳ್ಮೆಯ ಕಟ್ಟಳೆಯನ್ನು ಮೀರಿ ಜನ ಆಂದೋಲನವಾಗಿದೆ. ಜನ ಬೀದಿಗೆ ಇಳಿದಿದ್ದಾರೆ. ನಿರ್ಭಯ ಪ್ರಕರಣದಲ್ಲೂ ಇದೇ ಆಯಿತು. ಒಂದಷ್ಟು ವ್ಯಾಪಕ ಪ್ರತಿಭಟನೆಗಳು ನಡೆದವು. ಆದರೆ ಅತ್ಯಾಚಾರಗಳು ಕಡಿಮೆಯಾದವೇ? ಕೇವಲ ಕಾನೂನಿಂದ ಮಾತ್ರ ಅತ್ಯಾಚಾರಗಳನ್ನು ನಿಲ್ಲಿಸಲು ಸಾಧ್ಯವೇ? ಜನ ಮನಸ್ಸು ಬದಲಾಗಬೇಕಲ್ಲವೇ?
ಅತ್ಯಾಚಾರಕ್ಕೆ ಕಾರಣ ಹುಡುಕುವಾಗ ನಾವು ಹೆಣ್ಣನ್ನೇ ದೂಷಿಸುತ್ತೇವೆ. ಹೆಣ್ಣಿನಲ್ಲೆ ಕಾರಣಗಳನ್ನು ಹುಡುಕುತ್ತೇವೆ. ಆಕೆಯ ವಸ್ತ್ರ ಸಂಹಿತೆಯೇ ಇದಕ್ಕೆಲ್ಲ ಕಾರಣ ಎನ್ನುತ್ತೇವೆ. ಹಸುಳೆಗಳ ಮೇಲೆ ಆತ್ಯಾಚಾರವಾಗುತ್ತಿವೆ. ಮುಗ್ಧ ಆರು ವರ್ಷದ ಕಂದಮ್ಮ ಮೈಮಾಟವನ್ನು ಪ್ರದರ್ಶಿಸುತ್ತದೆಯೇ? ಇದೆಲ್ಲ ಕಾರಣಗಳು ನೆಪವಷ್ಟೇ. 
ಅತ್ಯಾಚಾರಗಳು ನಿಲ್ಲಬೇಕಾದರೆ ಜನರ ಮನಸ್ಥಿತಿ ಬದಲಾಗಬೇಕು. ಹೆಣ್ಣನ್ನು ನೋಡುವ ದೃಷ್ಟಿ  ಬದಲಾಗಬೇಕು. ಹೆಣ್ಣನ್ನು ಭೋಗದ ವಸ್ತು ಎಂದುಕೊಳ್ಳುವುದನ್ನು ಮೊದಲು ಬಿಡಬೇಕು.  ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ಮನಸ್ಥಿತಿ ಬೆಳೆಯಬೇಕು. ಇದೆಲ್ಲ ಶಾಶ್ವತ ಪರಿಹಾರ "ಭಾರತೀಯತೆ" ಭಾರತೀಯ ಮೌಲ್ಯಧಾರಿತ ಶಿಕ್ಷಣ ಮಕ್ಕಳಿಗೆ ದೊರೆಯುವಂತಾಗಬೇಕು. ಜಪಾನ್ ನಲ್ಲಿ ಅಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ಹೇಳಿಕೊಡಲಾಗುತ್ತದೆ. ಅದನ್ನು ಮರೆಯದೆ ಅವರು ಪಾಲಿಸುತ್ತಾರೆ. ವಿಶ್ವಕಪ್ ಪಂದ್ಯವಾಳಿ ವೀಕ್ಷಿಸಿದ ಜಪಾನಿಗರು ಜಪಾನ್ ಸೋತರೂ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದರು. ಹಾಗೆಯೇ ಭಾರತದಲ್ಲೂ ಮೌಲ್ಯಧಾರಿತ ಶಿಕ್ಷಣ ಕಡ್ಡಾಯವಾಗಬೇಕು.
ಇದು ನಾವು ಎಚ್ಚೆತ್ತುಕೊಳ್ಳುವ ಸಮಯ.  ಪ್ರತಿನಿತ್ಯ ಭಾರತದಲ್ಲಿ 93 ಮಹಿಳೆಯರು ಅತ್ಯಾಚಾರಿಗಳಿಗೆ ಬಲಿಯಾಗುತ್ತಿದ್ದಾರೆ. ನಾವು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಠಿಣ ಕಾನೂನು ರೂಪಿಸಿ ಅತ್ಯಾಚಾರಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮತನವಾದ ಭಾರತೀಯತೆಯನ್ನು ನಾವು ಬೆಳೆಸಿಕೊಳ್ಳಬೇಕು ಇಲ್ಲದೇ ಹೋದರೆ ಮುಂದೊಂದು ದಿನ ಭಾರತ ಅತ್ಯಾಚಾರಿಗಳ ದೇಶವಾಗಿಬಿಟ್ಟೀತು ಎಚ್ಚರ!
ರವಿತೇಜ ಶಾಸ್ತ್ರೀ

Saturday, November 8, 2014

ಮತ್ತೊಮ್ಮೆ ಅನುಭವ ಮತ್ತು ಯುವ ಪ್ರತಿಭೆಯ ಸೆಣಸಾಟ

 
ಕಳೆದ ವರ್ಷ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿವನ್ನು ಅನುಭವ ಮತ್ತು ಯುವ ಪ್ರತಿಭೆಯ ಸೆಣಸಾಟ ಎಂದೇ ವಿಶ್ಲೇಷಿಸಿಲಾಗಿತ್ತು.  ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಯುವ ಪ್ರತಿಭೆ ವಿಶ್ವ ನಂಬರ್ ಒನ್ ನಾರ್ವೆಯ ಮಾಗ್ನಸ್ ಕಾರ್ಲಸನ್ ನಡುವೆ ನಡೆದ ಪಂದ್ಯವಾಳಿಗಲ್ಲಿ ಯುವ ಪ್ರತಿಭೆ ಕಾರ್ಲಸನ್ ಆನಂದ್ ರನ್ನು ಸೋಲಿಸಿ ಪ್ರಪ್ರಥಮ ಬಾರಿಗೆ ಚೆಸ್ ವಿಶ್ವ ಚಾಂಪಿಯನ್ ಪಟ್ಟ ಆಲಂಕರಿಸಿದರು.
 
ಯುವಪ್ರತಿಭೆಯ ಆಟದ ಮೋಡಿಗೆ ಮಂಕಾದ ಆನಂದ್ 12 ಪಂದ್ಯಾವಳಿಗಳಲ್ಲಿ ಒಂದೂ ಪಂದ್ಯ ಗೆಲ್ಲದೆ 3.5 - 6.5 ಅಂಕಗಳ ಅಂತರದಲ್ಲಿ ಸುಲಭವಾಗಿ ಶರಣಾದರು.

ಚೆಸ್ ವಿಮರ್ಶಕರು ಆನಂದ ಯುಗ ಅಂತ್ಯವಾಗಿ ಕಾರ್ಲಸನ್ ಯುಗ ಆರಂಭವಾಗಿದೆ. ಆನಂದ್ ಇನ್ನು ವಿದಾಯ ಹೇಳುವುದಕ್ಕೆ ಸೂಕ್ತ ಸಮಯ ಎಂದು ಟೀಕಿಸಿದರು.\
 

ಆದರೆ ನಂತರ ನಡೆದ ಕ್ಯಾಂಡೀಡೇಟ್ ಪಂದ್ಯಾವಳಿಯಲ್ಲಿ ಪುಟಿದೆದ್ದ ಆನಂದ್ ಮತ್ತೊಮ್ಮೆ ವಿಶ್ವ ಚಾಂಪಿಯನ್‌ಶಿಪ್ ಗೆ ಅರ್ಹತೆಗಳಿಸಿದರು. ತಾನು ಮಾಡಿದ ತಪ್ಪುಗಳಿಂದ ಕಲಿಯುವ ಆನಂದ್ ಈಗ ಮತ್ತೊಮ್ಮೆ ಕಾರ್ಲಸನ್ ರೊಡನೆ ಸೆಣಸಾಟ ನಡೆಸಲು ಸಿದ್ದರಾಗಿದ್ದಾರೆ. ಯುವಪ್ರತಿಭೆ ಮತ್ತು ಅನುಭವದ ಸೆಣಸಾಟಕ್ಕೆ ರಷ್ಯಾದ ಸೋಚಿಯಲ್ಲಿ ವೇದಿಕೆ ಸಿದ್ಧವಾಗಿದೆ.
 
ಇಂದಿನಿಂದ ಚೆಸ್ ಪಂದ್ಯಾವಳಿಗಳು ಆರಂಭವಾಗಲಿವೆ. ಚೆಸ್ ಪಂಡಿತರು ಕಾರ್ಲಸನ್ ಪ್ರಶಸ್ತಿ ಗೆಲ್ಲುವ ಫೇವರೇಟ್ ಎಂದು ವಿಮರ್ಶಿಸುತ್ತಿದ್ದಾರೆ. ಪಿಢೆ ರ್ಯಾಂಕ್ ಪ್ರಕಾರ ಕಾರ್ಲಸನ್ ಆನಂದ್ ಗಿಂತಲೂ ಹೆಚ್ಚು ರೇಟಿಂಗ್ ಹೊಂದಿದ್ದಾರೆ. ಆದರೂ ಪೀನಿಕ್ ಹಕ್ಕಿಯಂತೆ ಪುಟಿದೇಳುವ ಆನಂದ್ ರನ್ನು ನಿರ್ಲಕ್ಷ್ಯಿಸುವಂತಿಲ್ಲ.
ಭಾರತೀಯ ಕ್ರಿಕೆಟ್ ಗೆ ಸಚಿನ್ ಹೇಗೂ ಹಾಗೇ ಭಾರತೀಯ ಚೆಸ್ ಗೆ ಆನಂದ್. ಐದು ಬಾರಿ ಚಾಂಪಿಯನ್ ಆಗಿರುವ ಆನಂದ್ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಲಿ.

ನಾವೆಲ್ಲ ಆನಂದ್ ರನ್ನು ಬೆಂಬಲಿಸೋಣ.
 
ಶುಭವಾಗಲಿ ವಿಶಿ.
 
ರವಿತೇಜ ಶಾಸ್ತ್ರೀ

Thursday, October 2, 2014

ಶಾಸ್ತ್ರೀಜಿಯವರ ಸಾವಿನ ಸುತ್ತ ಅನುಮಾನಗಳ ಹುತ್ತ!!

ಭಾರತ ಕಂಡ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪ್ರಧಾನಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಗ್ರಗಣ್ಯರು. ತತ್ವ, ಆದರ್ಶ ಸಹಿತ ರಾಜಕಾರಣವನ್ನು ಮಾಡಿದ ವಾಮನಮೂರ್ತಿ ಅವರು. ಕಳಂಕರಹಿತ ರಾಜಕಾರಣಕ್ಕೆ ಮತ್ತೊಂದು ಹೆಸರು ಶಾಸ್ತ್ರೀಜಿ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ.

ದೇಶದ ಎರಡನೇ ಪ್ರಧಾನಿಯಾಗಿ, ಶ್ರೇಷ್ಠ ಸ್ವಾಭಿಮಾನಿಯಾಗಿ ಭಾರತವನ್ನು ಶಾಸ್ತ್ರೀಜಿ ಮುನ್ನೆಡೆಸಿಡ ರೀತಿ ಅದ್ಭುತ. ಕೀಟಲೆ ಬುದ್ದಿಯ ಪಾಕಿಸ್ತಾನದ ವಿರುದ್ದ ಯುದ್ದ ಸಾರಿ ಪಾಕ್ ಪ್ರಧಾನಿ ಆಯುಬ್ ಖಾನ್ ನ  ಸೊಕ್ಕನನ್ನು ಅಡಗಿಸಿದ ಶಾಸ್ತ್ರೀಜಿ ಭಾರತದ ತಾಕತ್ತನ್ನು ಇಡೀ ಜಗತ್ತಿಗೆ ಅಂದು ತೋರಿಸಿದ್ದರು.


ಸ್ವಂತ ಗೃಹವನ್ನು ಮಾಡಿಕೊಳ್ಳದ ಏಕೈಕ ಗೃಹ ಮಂತ್ರಿ, ಹಣವನ್ನೇ ಮಾಡದ ನೀತಿವಂತ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರೀಜಿ. ಇಂದು ಲೂಟಿ ಮಾಡಲೆಂದೇ ರಾಜಕೀಯಕ್ಕೆ ಬರುವ ಕಪಟ ರಾಜಕಾರಣಿಗಳಿಗೆ ಶಾಸ್ತ್ರೀಜಿ ಆದರ್ಶವಾಗಬೇಕು. ಗಾಂಧಿಯ ತತ್ವಗಳನ್ನು ಕೊನೆಯ ಉಸಿರು ಪಾಲಿಸಿದ ಸಜ್ಜನ ಅವರು. ಸ್ವಚ್ಛ  ರಾಜಕಾರಣದ  ಈ ಮಾಣಿಕ್ಯ ಮರೆಯಾಯಿತು, ತೆರೆಮರೆಗೆ ಸರಿದು ಬಿಟ್ಟಿತು. ತಮ್ಮ ಹೆಸರಿಗೆ ‘ಗಾಂಧಿ’ ಪದವನ್ನು ಸಿಕ್ಕಿಸಿಕೊಂಡ ಡೋಂಗಿ ಗಾಂಧಿಗಳು ಮರೆಮಾಚುವ ಕೆಲಸವನ್ನು ನಾಜೂಕಾಗಿ ಮಾಡಿ ಮುಗಿಸಿಬಿಟ್ಟರು.

ಶಾಸ್ತ್ರೀಜಿಯವರ ಸಾವಿನ ಅಧ್ಯಾಯದ ಸತ್ಯಗಳು ಮರೀಚಿಕೆಯಾಗಿಯೇ ಉಳಿದುಬಿಟ್ಟಿದೆ.  ದೇಶಕ್ಕಾಗಿ ಶ್ರಮಿಸಿದ ಆ ಪುಣ್ಯಾತ್ಮನ ಸಾವು ಒಂದು ದುರಂತವೇ ಸರಿ. ಅವರ ಸಾವಿನ ಸತ್ಯಗಳನ್ನು ಮುಚ್ಚಿಟ್ಟು ಮಹಾನ್ ನಾಯಕನಿಗೆ ಮಾಡಿದ ಅವಮಾನ ಬಹಳ ಖೇದಕರ ವಿಚಾರ.
ಶಾಸ್ತ್ರೀಜಿ ಇಹಲೋಕ ಲೋಕ ತ್ಯಜಿಸಿ 48 ವರ್ಷಗಳಾದರೂ ಅವರ ಸಾವಿನ ಕಾರಣ ಇಂದಿಗೂ ನಿಗೂಢ. ಹಲವು ಒಳಸಂಚಿನ ಸಿದ್ದಾಂತಗಳಿವೆ. ಒಂದೊಂದು ಸಿದ್ದಾಂತಗಳು ಒಂದೊಂದು ರೀತಿಯಲ್ಲಿ ತಿಳಿಸುತ್ತವೆ.  ಯಾವುದು ಸತ್ಯ ಎಂದು  ನಿರ್ಧರಿಸುವುದು ಬಹಳ ಕಷ್ಟ.  ಮಹಾನ್ ನಾಯಕನ ಸಾವಿನ ಸತ್ಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವಿದು. ಅವರ ಹುಟ್ಟುಹಬ್ಬದ ಈ ಹೊತ್ತಿನಲ್ಲಿ ಸತ್ಯಗಳನ್ನು ಅರಿಯುವುದು ಬಹುಮುಖ್ಯವೆಂಬುದು ನನ್ನ ಭಾವನೆ.
ತಾಷ್ಕೆಂಟ್ ಒಪ್ಪಂದದ ನಂತರ ಜನವರಿ 11 1966 ರಂದು ಲಾಲ್ ಬಹದ್ದೂರ್ ಶಾಸ್ತ್ರೀ ಹೃದಯಾಘಾತದಿಂದ ಮೃತಪಟ್ಟರು ಎಂದು ಇತಿಹಾಸ ನಮ್ಮನ್ನು ನಂಬಿಸುತ್ತದೆ. ಆದರೆ ಈ ಕೆಳಗಿನ  ಸಂಗತಿಗಳು ಇದು ಸುಳ್ಳು ಎನ್ನುವುದಕ್ಕೆ ಪುಷ್ಟಿ ನೀಡುತ್ತವೆ.
·         ಒಬ್ಬ ವ್ಯಕ್ತಿ ಮೃತ ಪಟ್ಟರೆ ಅವರ ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಆದರೆ ಶಾಸ್ತ್ರೀಜಿಯವರ ಮರಣೋತ್ತರ ಪರೀಕ್ಷೆ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಒಬ್ಬ ಪ್ರಭಾವಿ ವ್ಯಕ್ತಿ, ಒಂದು ದೇಶದ ಪ್ರಧಾನಿಯ ಮರಣೋತ್ತರ ಪರೀಕ್ಷೆ ನಡೆಯದಿರುವುದು ಬಹಳಷ್ಟು ಅನುಮಾನಗಳನ್ನು ಸೃಷ್ಟಿಸುತ್ತದೆ.
·         1965 ಭಾರತ- ಪಾಕ್ ಯುದ್ದದಲ್ಲಿ ಭಾರತ ಮುಕ್ಕಾಲು ಭಾಗ ಗೆದ್ದುಬಿಟ್ಟಿತ್ತು. ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿತ್ತು. ಈ ಸಂಧರ್ಭದಲ್ಲಿ ಶಾಂತಿ ಮಾತುಕತೆ ನಡೆದು ಯುದ್ದ ನಿಂತಿತ್ತು. ಯುದ್ದದ ಹೀರೋ ಶಾಸ್ತ್ರೀಜಿಯಾಗಿದ್ದರು. ರಷ್ಯಾಗೆ ಹೋಗುವ ಮುನ್ನ ಶಾಸ್ತ್ರೀಜಿ ಆರೋಗ್ಯವಾಗಿದ್ದರು. ಆರೋಗ್ಯವಾಗಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿತು ಎಂದರೆ ನಂಬುವುದು ಅಸಾಧ್ಯ.
·         ಶಾಸ್ತ್ರೀಜಿಯವರ ಸಾವಿನ ಬಗ್ಗೆ ಮೊದಲ ಬಾರಿಗೆ ತನಿಖೆ ನಡೆಸಿದ ರಾಜ್ ನರೈನ್ ತನಿಖೆಯ ಯಾವುದೇ ಆಧಾರಗಳು ಇಂದಿಗೂ ಸರ್ಕಾರದ ಬಳಿ ಇಲ್ಲ. ಇದು ಮರೆಯಾಯಿತೋ? ಮರೆಮಾಚಲಾಯಿತೋ?
·         2009ರಲ್ಲಿ ಲೇಖಕ ಅನೂಜ್ ಧರ್ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯ ಮೂಲಕ ಶಾಸ್ತ್ರೀಜಿಯವರ ಸಾವಿನ ಕುರಿತು ಸೂಕ್ತ ದಾಖಲೆ ನೀಡಿ ಎಂದು ಪ್ರಧಾನಿಯ ಕಚೇರಿಗೆ ಕೇಳಿಕೊಂಡಾಗ “ನಮ್ಮ ಬಳಿ ಕೇವಲ ಒಂದು ದಾಖಲೆ ಇದೆ, ಆದರೆ ಅದನ್ನು ನೀಡಿದರೆ ದೇಶದ ಏಕತೆ ಮತ್ತು ಸಾರ್ವಭೌಮತೆ, ಸುರಕ್ಷೆತೆಗೆ ದಕ್ಕೆಯಾಗುತ್ತದೆ” ಎಂದು ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿತ್ತು. ಪ್ರಧಾನಿಯ ಸಾವಿಗೆ ಒಂದು ದಾಖಲೆ ಸಾಕೇ? ಎಂಬುದೇ ಇಲ್ಲಿ ಪ್ರಶ್ನೆ.
·         ಶಾಸ್ತ್ರೀಜಿ ಅವರ ಪತ್ನಿ ಲಲಿತಾ ಶಾಸ್ತ್ರೀ  ಶಾಸ್ತ್ರೀಜಿಯವರು ಆರೋಗ್ಯವಂತರಾಗಿದ್ದರು ಅವರಿಗೆ ಹೃದಯಾಘಾತವೆಂದರೆ ನಂಬುವುದು ಆಸಾಧ್ಯ. ಮತ್ತು ಶಾಸ್ತ್ರೀಜಿಯವರ ಮೃತ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ಆರೋಪಿಸಿದ್ದರು. ಶಾಸ್ತ್ರೀಜಿಯವರಿಗೆ ವಿಷವೂಣಿಸಿ ಕೊಲೆ ಮಾಡಲಾಯಿತೆ?
·         ಶಾಸ್ತ್ರೀಜಿಯವರ ಸಾವಿನ ಕುರಿತು ಸಾಕ್ಷಿ ಹೇಳಲು ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರು. ಒಬ್ಬರು ಆರ್. ಎನ್ ಚಾಗ್ ಶಾಸ್ತ್ರೀಜಿಯವರ ಅರೋಗ್ಯ ನೋಡಿಕೊಳ್ಳಲು ತಾಷ್ಕೆಂಟ್ ಗೆ ಹೋಗಿದ್ದ ವೈದ್ಯ. ಮತ್ತೊಬ್ಬರು ರಾಮ್ ನಾಥ್, ಶಾಸ್ತ್ರೀಜಿಯವರ ಸೇವಕ. ಆರ್. ಎನ್ ಚಾಗ್ ದೆಹಲಿಯಲ್ಲಿ ಸಾಕ್ಷಿ ಹೇಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿರುವಾಗ ಟ್ರಾಕ್ ಅವರ ವಾಹನಕ್ಕೆ ಒಡೆದು ಮೃತಪಟ್ಟರು. ರಾಮ್ ನಾಥ್ ಸಹ ಸಾಕ್ಷಿ ಹೇಳಲು ಪ್ರಯಾಣಿಸುತ್ತಿರುವಾಗ ಚಲಿಸುತ್ತಿದ್ದ ವಾಹನ ಅವರ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ನೆನಪಿನ ಶಕ್ತಿಯನ್ನೇ ಕಳೆದುಕೊಳ್ಳಬೇಕಾಯಿತು. ಇದು ಕಾಕತಾಳೀಯವೇ? ಕಾಕತಾಳೀಯ ಎಂದು ನಂಬುವುದು ಮೂರ್ಖತನವೇ ಸರಿ.

ಈ ಎಲ್ಲ ಸಂಗತಿಗಳು ಶಾಸ್ತ್ರೀಜಿಯವರ ಸಾವು ಸಹಜ ಸಾವಲ್ಲ ಎಂದು ಹೇಳುತ್ತವೆ. ಅರೋಗ್ಯಕರವಾಗಿದ್ದ ವ್ಯಕ್ತಿ ಹೇಗೆ ಸಾಯಲು ಸಾಧ್ಯ? ತಮ್ಮ ಜೀವಮಾನದಲ್ಲಿ ಒಮ್ಮೆಯೂ ಶಾಸ್ತ್ರೀಜಿಯವರಿಗೆ ಹೃದಯಾಘಾತವಾಗಿರಲಿಲ್ಲ. ಅಂತಹವರಿಗೆ ಹೃದಯಘಾತವಾಯಿತೇ? ಅವರಿಗೆ ವಿಷ ನೀಡಿ ಕೊಲೆ ಮಾಡಿರಬಹುದೆಂಬ ವದಂತಿಗಳೆ ಸತ್ಯದಂತೆ ಕಾಣಿಸುತ್ತದೆ. ಸಾಕ್ಷಿಗಳು ಅಸಹಜ ಸಾವೆಂದು ದೃಡಪಡಿಸುತ್ತವೆ ಆದರೆ ಕೊಂದವರು ಯಾರು? ಮರಣೋತ್ತರ ಪರೀಕ್ಷೆ ನಡೆಸದೇ ಇರುವುದು, ಸಾವಿನ ಸೂಕ್ತ ತನಿಖೆಯ ಅನುಪಸ್ಥಿತಿ. ಸಾಕ್ಷಿಗಳ ಅಸಹಜ ಸಾವು ಇವೆಲ್ಲವೂ ಸಾಕಷ್ಟು ಪ್ರಶ್ನೆ, ಅನುಮಾನ, ಗೊಂದಲಗಳನ್ನು ಹುಟ್ಟುಹಾಕುತ್ತದೆ.

ಇಂದಿರೆಯ ಕೈವಾಡವೋ? ಅಥವಾ ಸಿ.ಐ.ಎ ನ ಕುತಂತ್ರವೋ?    

ಶಾಸ್ತ್ರೀಜಿಯವರನ್ನು ಕೊಂದವರು ಯಾರು ಎಂದಾಗ ಸಹಜವಾಗಿಯೇ ನೆಹರೂವಿನ ಏಕ ಮಾತ್ರ ಪುತ್ರಿ ಇಂದಿರಾ ಗಾಂಧಿಯತ್ತ ಬೆರಳು ತೋರಿಸುತ್ತದೆ. ಪ್ರಧಾನಿ ಪಟ್ಟವನ್ನು ಗಳಿಸಲು ಇಂದಿರಾ ಗಾಂಧಿ ಶಾಸ್ತ್ರೀಜಿಯವರನ್ನು ಕೊಲ್ಲಿಸಿದರು ಎಂಬ ಅನುಮಾನ ಉಂಟಾಗುತ್ತದೆ. ಆದರೆ 1965 ರಲ್ಲಿ ಇಂದಿರಾ ಕ್ಯಾಬಿನೆಟ್ ಮಂತ್ರಿ ಸಹ ಆಗಿರಲಿಲ್ಲ. ಆಕೆ ಪ್ರಭಾವಿಯಾಗಿದ್ದು ಪ್ರಧಾನಿಯಾದ ನಂತರ. ಅಧಿಕಾರ ಏನು ಇಲ್ಲದೇ ವಿದೇಶದಲ್ಲಿ ಒಬ್ಬ ವ್ಯಕ್ತಿಯನ್ನು, ಪ್ರಧಾನಿಯನ್ನು ಕೊಲೆ ಮಾಡಿಸುವುದು ಸುಲಭದ ಕೆಲಸವಲ್ಲ. ಆಗಾಗಿ ಇಂದಿರಾಗಾಂಧಿಯ ಕೈವಾಡ ಈ ಕೊಲೆಯಲ್ಲಿಲ್ಲ ಎಂದು ನಂಬಬಹುದು.   
    
ರಾಬರ್ಟ್ ಕ್ರೌಲಿ ಎಂಬಾತ ತನ್ನ ಒಂದು ಸಂದರ್ಶನದಲ್ಲಿ ಶಾಸ್ತ್ರೀಜಿಯವರನ್ನು ಕೊಲೆ ಮಾಡಿದ್ದು ಅಮೇರಿಕಾದ  ಗುಪ್ತಚರ ಸಂಸ್ಥೆ ಸಿ.ಐ.ಎ  ಎಂದು ಆರೋಪಿಸಿದ್ದಾನೆ. 1965ರ ಯುದ್ದದಲ್ಲಿ ಪಾಕಿಸ್ತಾನಕ್ಕೆ ಅಮೇರಿಕ ಬೆಂಬಲ ನೀಡಿತ್ತು. ಅಮೇರಿಕಾದ ವಿರೋಧಿ ರಷ್ಯಾ ಭಾರತವನ್ನು ಬೆಂಬಲಿಸಿತ್ತು. ಭಾರತ ಮುಕ್ಕಾಲು ಭಾಗ ಪಾಕಿಸ್ತಾನವನ್ನು ಸೋಲಿಸಿತ್ತು. ಯುದ್ದದ ಗೆಲುವಿನ ರೂವಾರಿ ಶಾಸ್ತ್ರೀಜಿಯವರೆ ಆಗಿದ್ದರು. ಶಾಸ್ತ್ರೀಜಿ ಅಮೇರಿಕಾಗೆ ಶತ್ರುವಿನಂತೆ ಕಂಡಿದ್ದರು. ಪರಮಾಣು ಒಪ್ಪಂದವನ್ನು ಶಾಸ್ತ್ರೀಜಿ ನಿರಾಕರಿಸಿದ್ದರು. ತನ್ನ ಎದುರಾಳಿಗಳನ್ನು ಮುಗಿಸುವ ಕೆಲಸವನ್ನು ಅಮೇರಿಕಾ ಗುಪ್ತಚರ ಸಂಸ್ಥೆ ಸಿ.ಐ.ಎ ಗೆ ವಹಿಸಿತ್ತು. ರಷ್ಯದಲ್ಲಿ ತನ್ನ ಪ್ರಭಾವ ಬಳಿಸಿದ ಸಿ.ಐ.ಎ ಶಾಸ್ತ್ರೀಜಿಯವರಿಗೆ ವಿಷ ನೀಡಿ ಕೊಲೆ ಮಾಡಿರಬಹುದು.   
                                                     

ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಈ ಸತ್ಯ ಅವರಿಗೆ ಗೊತ್ತಾಯಿತು. ಆದರೆ ತನ್ನ ಕುರ್ಚಿಗೆ ಇದರಿಂದ ತೊಂದರೆ ಎಂದು ಭಾವಿಸಿ ಎಲ್ಲ ಸತ್ಯಗಳನ್ನು ಮರೆಮಾಚಿದರು. ಆಧಾರಗಳನ್ನು ನಾಶಪಡಿಸಿದರು. ಶಾಸ್ತ್ರೀಜಿಯವರಿಗೆ ಹುತಾತ್ಮ ಪದವಿ ಸಿಗಬಾರದು ಎಂದು ವ್ಯವಸ್ಥಿತ ಸಂಚು ರೂಪಿಸಿದ ಇಂದಿರಾ ಶಾಸ್ತ್ರೀಜಿಯವರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಪ್ರಯತ್ನಿಸಿದರು. ಇದಕ್ಕಾಗಿ ಇಂದಿರಾಗಾಂಧಿ ಸರ್ಕಾರ ಶಾಸ್ತ್ರೀಜಿಯವರ ಸಾವಿನ ತನಿಖೆಯನ್ನು ಮಾಡಲಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.

ಶಾಸ್ತ್ರೀಜಿಯವರ ಸಾವಿನ ನಿಜ ಕಾರಣ ತಿಳಿಯಬೇಕಾದರೆ ಸೂಕ್ತ ತನಿಖೆಯಾಗಬೇಕು ಆಧಾರಗಳಿಲ್ಲದೆ ಇದೇ ನಿಜವೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಸೂಕ್ತ ತನಿಖೆ ಮಾತ್ರ ಎಲ್ಲ ಅನುಮಾನ, ಗೊಂದಲಗಳಿಗೆ ಉತ್ತರ ನೀಡಬಲ್ಲದು. ಶಾಸ್ತ್ರೀಜಿಯವರ ಸಾವಿನ ಕುರಿತು ತನಿಖೆ ನಡೆಸಿ ಅವರ ಸಾವಿನ ಕಾರಣವನ್ನು ಜಗತ್ತಿಗೆ ತಿಳಿಯಪಡಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
ಈಗ ಹೊಸ ಸರ್ಕಾರ ಬಂದಿದೆ. ಮೋದಿಯಂತ ಶ್ರೇಷ್ಠ ನಾಯಕ ನಮಗೆ ದೊರಕಿದ್ದಾರೆ. ಅವರು ಸೂಕ್ತ ತನಿಖೆಗೆ ಆದೇಶಿಸುತ್ತಾರೆ ಎಂಬ ನಂಬಿಕೆ ನನಗಿದೆ .

ಆ ನೀರಿಕ್ಷೆಯಲ್ಲಿ

ರವಿತೇಜ ಶಾಸ್ತ್ರೀ

                             

Saturday, September 27, 2014

ಭಗತ್ ಸಿಂಗ್ ನ ಭವ್ಯ ವ್ಯಕ್ತಿತ್ವದ ಅನಾವರಣ

“ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ಕ್ರಾಂತಿಯ ಕತ್ತಿಯು ವಿಚಾರಗಳ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ”. ಹೀಗೆಂದವನು ಭಗತ್ ಸಿಂಗ್. ತನ್ನ ಇಪ್ಪತ್ಮೊರನೆ ವಯಸ್ಸಿಗೆ ಸ್ವರ್ವಸ್ವವನ್ನು ತೊರೆದು, ಹಸನ್ಮುಖಿಯಾಗಿ ಗಲ್ಲಿಗೇರಿ ಕೋಟ್ಯಾಂತರ ಯುವಜನತೆಯ ಸ್ಪೂರ್ತಿಯಾದ ಭಗತ್ ಸಿಂಗ್ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಶೇಷ ಸ್ಥಾನವನ್ನು ಆಲಂಕರಿಸಿದ್ದಾನೆ, ಅಂದಿನ ಯುವಜನತೆಯ ಆಶಾಕಿರಣವಾಗಿದ್ದ ಭಗತ್ ಸಿಂಗ್ ನ ವ್ಯಕ್ತಿತ್ವ ಬಲು ಆಕರ್ಷಕ. ಆತನ  ವ್ಯಕ್ತಿತ್ವ ಇಂದಿನ ಯುವಜನತೆಗೂ ಆದರ್ಶ. ಭಗತ್ ಸಿಂಗ್ ನ ವ್ಯಕ್ತಿತ್ವದ ನಾನಾ ಮಜಲುಗಳನ್ನು ಅನಾವರಣಗೊಳಿಸುವ ಪುಟ್ಟ ಪ್ರಯತ್ನವಿದು.
ಜನ್ಮಜಾತ ಕ್ರಾಂತಿಕಾರಿ: 
ಭಗತ್ ಸಿಂಗ್ ಹುಟ್ಟಿದ್ದೇ ಕ್ರಾಂತಿಕಾರಿಯಾಗಲು, ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು, ಎಂದರೆ ಅತಿಶಯೋಕ್ತಿಯಲ್ಲ. ಭಗತ್ ಸಿಂಗ್ ನ ಇಡೀ ಕುಟುಂಬವೇ ಕ್ರಾಂತಿಕಾರಿ ಕುಟುಂಬವಾಗಿತ್ತು, ಭಗತ್ ಸಿಂಗ್ ರ ತಾತ ಅರ್ಜನ್ ಸಿಂಹ ಆರ್ಯ ಸಮಾಜದ ಸದಸ್ಯರಾಗಿದ್ದರು. ರಣಜಿತ್ ಸಿಂಹನ ಸೈನ್ಯದಲ್ಲಿದ್ದರು. ತಂದೆ ಕಿಶನ್ ಸಿಂಹರು ಸಹ ತಂದೆಯ ಹಾದಿಯನ್ನೇ ಹಿಡಿದ್ದರು. ಚಿಕ್ಕಪ್ಪಂದಿರಾದ ಅಜಿತ್ ಸಿಂಹ ಮತ್ತು ಸ್ವರ್ಣ ಸಿಂಹರು ಶ್ರೇಷ್ಠ ಕ್ರಾಂತಿಕಾರಿಗಳಾಗಿದ್ದರು. ಇಂತಹ ಕುಟುಂಬದಲ್ಲಿ ಮತ್ತೊಬ್ಬ  ಕ್ರಾಂತಿಕಾರಿ ಹುಟ್ಟದೇ ಮತ್ಯಾರು ಹುಟ್ಟಲು ಸಾಧ್ಯ?
ಅರ್ಜುನನ ಮಗ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವುದನ್ನು ಹೇಗೆ ಕಲಿತಿದ್ದನೋ ಹಾಗೆಯೇ ಭಗತ್ ಸಿಂಗ್ ಗರ್ಭದಲ್ಲಿರುವಾಗಲೇ ಕ್ರಾಂತಿಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ಭಗತ್ ಸಿಂಗ್ ಜನ್ಮಜಾತ ಕ್ರಾಂತಿಕಾರಿಯಾಗಿದ್ದ.


ಕರುಣಾಮಯಿ ಮತ್ತು ಸ್ನೇಹಮಯಿ:

ಭಗತ್ ಸಿಂಗ್ ನ ಕ್ರಾಂತಿಕಾರಿ ಸ್ವಭಾವವನ್ನು  ಬದಿಗಿಟ್ಟು ಆತನ ಸ್ವಭಾವವನ್ನು ವಿಶ್ಲೇಷಿಸಿದರೆ ಆತ ಕರುಣಾಮಯಿ, ಸ್ನೇಹಮಯಿ ಮತ್ತು ಹಾಸ್ಯ ಪ್ರವೃತ್ತಿಯುಳ್ಳನಾಗಿದ್ದನೆಂದು ತಿಳಿಯುತ್ತದೆ.
ಭಗತ್ ಸಿಂಗ್ ಕ್ರಾಂತಿ ಮಾರ್ಗವನ್ನು ಹಿಡಿದಿದ್ದ ಆದರೆ ಆತ ಅಹಿಂಸಾವಾದದಲ್ಲಿ ನಂಬಿಕೆ ಹೊಂದಿದ್ದ. ಪ್ರಾಣಿಗಳನ್ನು ಮನುಷ್ಯರಂತೆ ಕಾಣುತ್ತಿದ್ದ. ಭಗತ್ ಸಿಂಗ್ ರ ಜಮೀನಿನಲ್ಲಿ ಕೆಲಸ ಮಾಡಲು ತುಂಬಾ ಬಡತನವಿದ್ದ  ಆಳುಗಳು ಬರುತ್ತಿದ್ದರು. ಭಗತ್ ಸಿಂಗ್ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದ, ಅವರೊಂದಿಗೆ ಬೆರೆಯುತ್ತಿದ್ದ.  ಕಷ್ಟದಲ್ಲಿರುವರಿಗೆ ಹಣದ  ಸಹಾಯವನ್ನೂ ಮಾಡುತ್ತಿದ್ದ. ಮಂಗಳಸಿಂಹ ಎಂಬ ಆಳು ತುಂಬಾ ಸಾಲ ಮಾಡಿ ಅದನ್ನು ಪಾವತಿಸಲು ಆಗದೆ ಕಷ್ಟಪಡುತ್ತಿದ್ದ. ಈ ಸಾಲವನ್ನು ಭಗತ್ ಸಿಂಗ್  ತೀರಿಸಿ  ಹೆಚ್ಚು ಸಾಲಮಾಡಬೇಡ ಎಂದು ಮಂಗಳಸಿಂಹನಿಗೆ ಬುದ್ದಿ ಹೇಳಿದ್ದ.
ಶತ್ರುವಿನಲ್ಲೂ ಸ್ನೇಹವನ್ನು ಬಯಸುವ ಶ್ರೇಷ್ಠ ವ್ಯಕ್ತಿತ್ವ ಭಗತ್ ಸಿಂಗ್ ಅವರದ್ದಾಗಿತ್ತು. ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಮಾತುಗಳಿಂದ ಎಲ್ಲರನ್ನು ತನ್ನ ಮಿತ್ರರನ್ನಾಗಿಸುತ್ತಿದ್ದ ಭಗತ್  ಸ್ನೇಹಮಯಿಯಾಗಿದ್ದ. ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಸಾಕಷ್ಟು ಬ್ರಿಟಿಷ್ ಪುರುಷ ಮತ್ತು ಸ್ತ್ರೀಯರು ಅವನನ್ನು ಭೇಟಿ ಮಾಡಲು ಬರುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಭಗತ್ ಸಿಂಗ್ ನೊಂದಿಗೆ ಕಟ್ಟುನಿಟ್ಟಾಗಿರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ತನ್ನ 
ಹಾಸ್ಯಮಯ ಸ್ವಭಾವದಿಂದ ಅವರ ಮನವನ್ನು ಗೆಲ್ಲುತ್ತಿದ್ದ ಭಗತ್ ಸಿಂಗ್.

ಶ್ರೇಷ್ಠ ಮಾನವತಾವಾದಿ:

ಭಗತ್ ಸಿಂಗ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿದ ಪ್ರಕರಣದಲ್ಲಿ ತನಗೆ ಗಲ್ಲು ಶಿಕ್ಷೆಯಾಗುತ್ತದೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿದಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ  ನನ್ನಂತವರ ಬಲಿದಾನ ಅವಶ್ಯಕವೆಂದು ಆತ ಭಾವಿಸಿದ್ದ. ಆದರೆ ತನ್ನಿಂದ ಮತ್ತೊಬ್ಬರಿಗೆ ತೊಂದರೆಯಾಗುವುದನ್ನು ಭಗತ್ ಸಿಂಗ್ ಸಹಿಸುತ್ತಿರಲಿಲ್ಲ. ಅಸೆಂಬ್ಲಿ ಸ್ಪೋಟದ ನಂತರ ಭಗತ್ ಸಿಂಗ್ ಮತ್ತು ಆತನ ಗುಂಪಿನ ಎಲ್ಲ ಕ್ರಾಂತಿಕಾರಿಗಳ ಬಂಧನವಾಯಿತು. ಬ್ರಿಟಿಷರು ಈ ಕ್ರಾಂತಿಕಾರಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದರು. ಇದರಿಂದ ತೀವ್ರ ದುಃಖಿತನಾಗಿದ್ದ ಭಗತ್ ಸಿಂಗ್ “ ನನ್ನಿಂದ ನನ್ನ ಅಮಾಯಕ ಸ್ನೇಹಿತರು ದುಃಖಕ್ಕೆ ಒಳಗಾಗುತ್ತಿದ್ದಾರೆ “  ಎಂದು ಮರುಕಪಡುತ್ತಿದ್ದ.
ಒಮ್ಮೆ ಕೋರ್ಟಿನಲ್ಲಿ ಸರ್ಕಾರಿ ಸಾಕ್ಷಿ ಹಂಸರಾಜ್ ಬೊಹರಾ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದ. ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆಯೇ ಸರಿ ಎಂದು ಅವನು ಹೇಳಿಕೆ ನೀಡುತ್ತಿದ್ದ. ಭಗತ್ ಸಿಂಗ್ ಅವನನ್ನೇ ದಿಟ್ಟಿಸಿ ನೋಡುತ್ತಿದ್ದ.  ಸ್ವಲ್ಪ ಸಮಯದ ನಂತರ ಭಗತ್ ಸಿಂಗ್ ನ ಕಣ್ಣಿನಲ್ಲಿ ಅಶ್ರುಧಾರೆ. ಮಹಾನ್ ಕ್ರಾಂತಿಕಾರಿ ಕಣ್ಣಿರು ಸುರಿಸಿದ. ಇದಕ್ಕೆ ಪ್ರತಿಯಾಗಿ ಹಂಸರಾಜನು ಕಣ್ಣಿರು ಸುರಿಸಿದ್ದ. ಭಗತ್ ಸಿಂಗ್ ಗಲ್ಲು ಶಿಕ್ಷೆಯನ್ನು ನೆನೆದು ಅತ್ತನೆ? ಮೃತ್ಯುವನ್ನು ವರದಾನದ ರೂಪದಲ್ಲಿ ಪಡೆದ ಆತ ಆಳಲು ಸಾಧ್ಯವೇ ? ಭಗತ್ ಸಿಂಗ್ ಹಂಸರಾಜನ ಸ್ಥಿತಿಯನ್ನು ಕಂಡು ಅತ್ತಿದ್ದ. ಬ್ರಿಟಿಷರು ಅವನಿಂದ ಸಾಕ್ಷಿ ಹೇಳಿಸಲು ಕೊಟ್ಟ ಭೀಕರ ಶಿಕ್ಷೆಯನ್ನು ನೆನೆದು ನನ್ನ ತಪ್ಪಿನಿಂದ ಹಂಸರಾಜ ನೋವು ಅನುಭವಿಸಬೇಕಾಯಿತು ಎಂದು ಪಶ್ಚಾತಾಪದಿಂದ ಅವನು ಕಣ್ಣಿರು ಸುರಿಸಿದ್ದ.


ಕ್ರಾಂತಿಯ ದಾರ್ಶನಿಕ:

ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಜನರು ಹೋರಾಡಿದರು. ಆದರೆ ಬಹಳಷ್ಟು ಹೋರಾಟಗಾರರು ಸ್ವಾತಂತ್ರ್ಯ ಭಾರತದ ಕನಸನಷ್ಟೇ ಕಂಡಿದ್ದರು. ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕೆಂಬುದರ ಬಗ್ಗೆ ಅವರು ಯೋಚಿಸಿರಲಿಲ್ಲ. ವೀರ ಸಾವರ್ಕರ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಈ ಕುರಿತು ಯೋಚಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸಮೃದ್ದ ರಾಷ್ಟ್ರವಾಗಬೇಕೆಂದು ಭಗತ್ ಸಿಂಗ್  ಬಯಸಿದ್ದ. ಸಾಮ್ರಾಜ್ಯವಾದವನ್ನು ಕಿತ್ತೆಸೆದು ಸಮಾಜವಾದವನ್ನು ಪ್ರತಿಷ್ಟಾಪಿಸಬೇಕು, ಸರ್ವರೂ ಸುಖದಿಂದ ಬಾಳಬೇಕೆಂದು ಭಗತ್ ಸಿಂಗ್ ಯೋಚಿಸಿದ್ದ. ಅತಿ ಚಿಕ್ಕ ವಯಸ್ಸಿನಲ್ಲೆಯೇ ಅಮೋಘ ದೂರದೃಷ್ಟಿಯ ಯೋಚನಾಲಹರಿಯನ್ನು  ಹೊಂದಿದ್ದ ಭಗತ್ ಸಿಂಗ್ ನನ್ನು ಭಾರತದ ಕ್ರಾಂತಿಯ ದಾರ್ಶನಿಕನೆಂದು ಕರೆಯಬಹುದು.
                            
ಉತ್ತಮ ಲೇಖಕ:

23 ನೇ ವಯಸ್ಸಿಗೆಯೇ ತನ್ನ ಆತ್ಮಕತೆ ಬರೆದವವನು ಭಗತ್ ಸಿಂಗ್! ಅಲ್ಪಾವಧಿಯಲ್ಲಿಯೇ ಇಂತಹ ಸಾಧನೆಗೈದ ಭಗತ್ ಸಿಂಗ್ ನನ್ನು ಶ್ರೇಷ್ಠ ಲೇಖಕನೆನ್ನಬಹುದು. 300ಕ್ಕೂ ಹೆಚ್ಚು ಕೃತಿಗಳನ್ನು ಓದಿದ್ದ ಭಗತ್ ಸಿಂಗ್, ಹಲವು ಲೇಖನಗಳು ಮತ್ತು  ಗ್ರಂಥಗಳನ್ನು ರಚಿಸಿದ್ದ. ‘ ಐಡಿಯಲ್ ಆಫ್ ಸೋಷಿಯಲಿಸಂ’ , ‘ ದಿ ಡೋರ್ ಟು ಡೆತ್’ , ‘ದಿ ರೆವೆಲ್ಯೂಷನರೀಸ್ ಆಫ್ ಇಂಡಿಯಾ ವಿತ್ ದಿ ಶಾರ್ಟ್ ಬಯಾಗ್ರಾಫಿಕ್ ಸ್ಕೆಚಸ್ ಆಫ್ ದಿ ರೆವೆಲ್ಯೂಷನರೀಸ್’ ಈ ಕೃತಿಗಳನನ್ನು  ಭಗತ್ ಸಿಂಗ್ ಬರೆದಿದ್ದ . ತನ್ನ ಬರವಣಿಗೆಯ ಮೂಲಕ ದೇಶವನ್ನು ಬಡಿದೆಬ್ಬಿಸಬೇಕೆಂದು ಭಗತ್ ಸಿಂಗ್ ಬಯಸಿದ್ದ ಆದರೆ ಆತನ ಆಸೆ ಈಡೇರಲಿಲ್ಲ. ಈ ಯಾವ ಕೃತಿಗಳು ಪ್ರಕಟವಾಗಲೇ ಇಲ್ಲ. ಆ ಕೃತಿಗಳು ದೊರತಿದ್ದರೆ ಭಗತ್ ಸಿಂಗ್ ನ ಬಗ್ಗೆ ಮತ್ತಷ್ಟು ತಿಳಿಯಬಹುದಿತ್ತೇನೋ ಆದರೆ ಅದು ಸಾಧ್ಯವಾಗಲಿಲ್ಲ. ಇದು ದೌರ್ಭಾಗ್ಯದ ಸಂಗತಿ.
  
ಇಷ್ಟೇ ಅಲ್ಲದೇ ಭಗತ್ ಸಿಂಗ್ ಶ್ರೇಷ್ಠ ನಾಯಕನೂ ಆಗಿದ್ದ  ನೌ ಜವಾನ್ ಭಾರತ್ ಸಭಾ ಮತ್ತು ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಎಂಬ ಸಂಘಟನೆಗಳನ್ನು  ಮುನ್ನೆಡೆಸಿದ ರೀತಿ ಆತನ ಶ್ರೇಷ್ಠ ನಾಯಕತ್ವ ಗುಣಕ್ಕೆ ಸಾಕ್ಷಿ. ಭಗತ್ ಸಿಂಗ್ ಉತ್ತಮ ನಾಟಕ ಕಲಾವಿದ ಮತ್ತು ಹಾಡುಗಾರನೂ ಸಹ ಆಗಿದ್ದ. ಲಾಹೋರ್ ನ ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ ನಾಟಕಗಳಲ್ಲಿ ಅಭಿನಯಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದ. ಸುಂದರವಾಗಿ ಮತ್ತು ಅದ್ಭುತವಾಗಿ ಹಾಡುವ ಕಲೆಯನ್ನೂ ಭಗತ್ ಸಿಂಗ್ ರೂಡಿಸಿಕೊಂಡಿದ್ದ.

ಬಾಲ್ಯದಲ್ಲಿ ಹೊಲದಲ್ಲಿ ಬಂದೂಕು ಬೆಳೆಯುತ್ತೆನೆಂದ ಹೊತ್ತಿನಿಂದ ಹಿಡಿದು ಕೊನೆಗೆ ನಗುನಗುತ್ತಾ ಗಲ್ಲುಗಂಬವೇರುವರೆಗೂ ಭಗತ್ ಸಿಂಗ್ ಮಾಡಿದ್ದು ಸ್ವಾತಂತ್ರ್ಯ ಲಕ್ಷ್ಮಿಯ ಜಪ. ಇಂತಹ ಮಹಾನ್ ಕ್ರಾಂತಿಕಾರಿಯ ಗುಣಗಳನ್ನು ಅರಿಯುವುದೇ ನಾವು ಆತನಿಗೆ ಸಲ್ಲಿಸುವ ನಿಜವಾದ ಗೌರವ.

ಇಂದು ಸೆಪ್ಟೆಂಬರ್ 28. ಕ್ರಾಂತಿ ಶಿರೋಮಣಿ ಭಗತ್ ಸಿಂಗ್ ಜನಿಸಿದ ಪುಣ್ಯ ದಿನ. ಆ ಹುತಾತ್ಮ ಜನಿಸಿ ಇಂದಿಗೆ 107 ವರ್ಷಗಳಾಯಿತು. ಆ ಧೀರ ಹುತಾತ್ಮನನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಗತ್ ಸಿಂಗ್ ಗೆ ನುಡಿನಮನಗಳು.

ಇಂಕ್ವಿಲಾಬ್ ಜಿಂದಾಬಾದ್ 
       
ರವಿತೇಜ ಶಾಸ್ತ್ರೀ
ಉತ್ತಿಷ್ಠ ಭಾರತ                                                                                          

                                                              

Wednesday, September 17, 2014

ಸಿಂಧೂರದಿಂದ ಬುರ್ಖಾದವರೆಗಿನ ಮಹಿಳೆಯ ಪಯಣ ಇದು ಲವ್ ಜಿಹಾದ್!!

ಲವ್ ಜಿಹಾದ್ ಇದು ತುಂಬಾ ಹಳೆ ವಿಷಯ ಆದರೆ ಪದಬಳಕೆ ಹೊಸತು ಅಷ್ಟೇ. ಲವ್ ಜಿಹಾದ್ ನನ್ನು ಅರ್ಥೈಸುಕೊಳ್ಳುವ ಮೊದಲು ನಾವು “ ಜಿಹಾದ್ ” ಎಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಇಸ್ಲಾಂ ಧರ್ಮ ಗ್ರಂಥಗಳ ಪ್ರಕಾರ ಜಿಹಾದ್ ಎಂದರೆ ಧರ್ಮ ಯುದ್ದ ಅಥವಾ ಧರ್ಮಕ್ಕಾಗಿ ಹೋರಾಟ ಎಂದರ್ಥ. ಕ್ರಿ.ಶಕ 1600 ರಲ್ಲಿ ಇದು ಪ್ರಚಲಿತದಲ್ಲಿತ್ತು. ಅರಬ್ ದೊರೆಗಳು ಧರ್ಮದ ಹೆಸರಲ್ಲಿ ಯುದ್ದ ಮಾಡಿ ಅನ್ಯಧರ್ಮಿಯರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದರು ಇದಕ್ಕೆ ಒಪ್ಪದಿದ್ದವರ ಮಾರಣಹೋಮ ಮಾಡುತ್ತಿದ್ದರು.
ಮೊಘರ ಆಳ್ವಿಕೆಯ ಕಾಲದಲ್ಲಿ ಹಿಂದುಗಳ  ಮತಾಂತರ ಬಹಳ ಹೆಚ್ಚಿತ್ತು. ಎಲ್ಲ ಮೊಘಲ್ ರಾಜರು ಹಿಂದೂ ಧರ್ಮದ ವಿರೋಧಿಗಳಾಗಿದ್ದರಿಂದ ಇದು ಭರದಿಂದ ಸಾಗಿತ್ತು.  ಸಮಸ್ತ ಹಿಂದೂ ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸಬೇಕೆಂಬುದು  ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಅನೇಕ ದೇವಾಲಯಗಳನ್ನು ನಾಶಗೊಳಿಸಿದರು, ದೇವರ ಮೂರ್ತಿಗಳನ್ನು ಧ್ವಂಸಮಾಡಿದರು. ವೇದಗಳ ಗ್ರಂಥಗಳನ್ನು ಸುಟ್ಟುಹಾಕಿದರು. ಬ್ರಿಟಿಷರು ಮೊಘರನ್ನು ಸೋಲಿಸಿದ ನಂತರ ಇವುಗಳ ಅಂತ್ಯವಾಯಿತು.
ಲವ್ ಜಿಹಾದ್ ಎಂದರೆ ಮುಸ್ಲಿಂ ಯುವಕರು ಪ್ರೀತಿಯ ಹೆಸರಲ್ಲಿ ಅನ್ಯ ಧರ್ಮೀಯ ಹುಡುಗಿಯನ್ನು ಗುರಿ ಮಾಡಿಕೊಂಡು ಮೋಸದಿಂದ ಪ್ರೀತಿಯ ಬಲೆಗೆ ಸಿಲುಕಿಸಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುವುದು.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಹಿಂದುಗಳೇ ಬಹುಸಂಖ್ಯಾತರು. ಇಲ್ಲಿ ಬಲವಂತವಾಗಿ ಮತಾಂತರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳು ಲವ್ ಜಿಹಾದ್ ನ್ನು ಅಸ್ತ್ರವಾಗಿ ಬಳಸಿಕೊಂಡು ಇಸ್ಲಾಂ ಪ್ರಾಬಲ್ಯವನ್ನು ಭಾರತದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ.
ಅನ್ಯಧರ್ಮಿಯ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಸಿಲುಕಿಸಲು ಅವರು ಅನೇಕ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಅವರು ಮನಪರಿವರ್ತನೆ ಮಾಡಿ ಮೋಸದ ಜಾಲಕ್ಕೆ ಅಮಾಯಕ ಯುವತಿಯರನ್ನು ಸಿಲುಕಿಸುತ್ತಿದ್ದಾರೆ.
ಹದಿಹರೆಯದವರೆ ಇವರ ಟಾರ್ಗೆಟ್ :
ಹದಿಹರೆಯದ ಯುವತಿಯರೇ ಇವರ ಟಾರ್ಗೆಟ್. ಈ ವಯಸ್ಸಿನ ಯುವತಿಯರಿನ್ನು ಪ್ರಬುದ್ಧರಾಗಿರುವುದಿಲ್ಲ. ಹಣ ಮತ್ತು ವ್ಯಾಮೋಹಕ್ಕೆ ಇವರು ಸುಲಭವಾಗಿ ತುತ್ತಾಗುತ್ತಾರೆ. ಮುಸ್ಲಿಂ ಯುವಕರು ಸಾಕಷ್ಟು ಶ್ರಿಮಂತರಾಗಿರುವುದಿಲ್ಲ, ಇವರಿಗೆ ಅನೇಕ ಸಂಘಟನೆಗಳು ಈ ಕಾರ್ಯಕ್ಕೆಂದೇ ಹಣವನ್ನು ಒದಗಿಸುತ್ತವೆ. ಬಂದ ಹಣದ ಮೂಲಕ ಒಳ್ಳೆ ಉಡುಪು ಮತ್ತು ಬೈಕ್ ಮುಂತಾದ ಆಕರ್ಷಕ ವಸ್ತುಗಳನ್ನು ಖರೀದಿಸಿ ಉತ್ತಮ ಸ್ನೇಹ ಮತ್ತು ಸಂಬಂಧವನ್ನು ಸಂಪಾದಿಸುತ್ತಾರೆ. ಇವರ ಮೋಸಕ್ಕೆ ಬಲಿಯಾಗುವ ಯುವತಿಯರು ತಮ್ಮ ಕುಟುಂಬವನ್ನು ತೊರೆಯಲು ಸಿದ್ದರಾಗುತ್ತಾರೆ. “ಅವರ ಸಂಗಾತಿಯನ್ನು ಅರಿಸಿಕೊಳ್ಳಲು ಅವರೇ ಸ್ವತಂತ್ರರು” ಎಂಬ ಭಾರತೀಯ ಕಾನೂನು ಸಹ ಇದಕ್ಕೆ ಪೂರಕವಾಗಿದೆ. 
ನಕಲಿ ಮುಖವಾಡ:          
ಇತ್ತೀಚಿಗೆ ಒಂದು ಪ್ರಕರಣ ನಡೆಯಿತು. ಇಡೀ ದೇಶವೇ ಆ ಪ್ರಕರಣದಿಂದ ಆಘಾತಕ್ಕೆ ಒಳಗಾಗಿತ್ತು. ರಾಷ್ಟೀಯ ಶೂಟರ್ ತಾರ ಸಹದೇವ್ ಲವ್ ಜಿಹಾದ್ ಗೆ ಬಲಿಯಾಗಿದ್ದಳು. ರಂಜಿತ್ ಸಿಂಗ್ ಎಂಬ ಯುವಕನ್ನು ವಿವಾಹವಾದ ನಂತರ ಆಕೆಗೆ ಆತ ರಂಜಿತ್ ಸಿಂಗ್ ಅಲ್ಲ ರಖಿಬುಲ್ ಹಸನ್ ಎಂಬ ಸಂಗತಿ ಗೊತ್ತಾಗಿತ್ತು. ಆಕೆ ಅವನು ಪಂಜಾಬಿ ಎಂದು ತಿಳಿದಿದ್ದಳು ಆದರೆ ಅಸಲಿ ವಿಷಯವೇ ಬೇರೆಯಾಗಿತ್ತು. ರಕಿಬುಲ್ ತಾರಗೆ ಚಿತ್ರ ಹಿಂಸೆ ನೀಡಿ ಮತಾಂತರಗೊಳಿಸಲು ಪ್ರಯತ್ನಿಸಿದ್ದ. ಒಬ್ಬ ರಾಷ್ಟೀಯ ಕ್ರೀಡಾಪಟುವಿಗೆ ಇಂತಹ ಪರಿಸ್ಥಿತಿ ಬಂದಿತ್ತು ಇನ್ನು ಸಾಮಾನ್ಯರ ಬಗ್ಗೆ ಒಮ್ಮೆ ಯೋಚಿಸಿನೋಡಿ.
ಅಪಹರಿಸುವಿಕೆ ಮತ್ತು ಆತ್ಯಾಚಾರಗೊಳಿಸುವುದು:
ಇದೊಂದು ಕ್ರೂರ ಕೃತ್ಯ. ಇದನ್ನು “ ರೇಪ್ ಜಿಹಾದ್ “ ಅಂತಲೂ ಕರೆಯುತ್ತಾರೆ. ಹಿಂದೂ ಯುವತಿಯನ್ನು ಅಪಹರಿಸುವ ಮುಸ್ಲಿಂ ಯುವಕರು ಅವರನ್ನು ಆತ್ಯಾಚಾರಗೊಳಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡುತ್ತಾರೆ. ಪ್ರತಿ ವರ್ಷ ಕೇರಳ ರಾಜ್ಯದಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿದೆ. ಸಾವಿರಾರು ಯುವತಿಯರನ್ನು ಮನಪರಿವರ್ತನೆ ಮಾಡಿ ಅವರನ್ನು ನರಕದ ಕೂಪಕ್ಕೆ ತಳ್ಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಂತ ಪ್ರದೇಶದಲ್ಲಿ ಈ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಉತ್ತರ ಪ್ರದೇಶ, ಬಿಹಾರ ಜಾರ್ಖಂಡ್ ಮುಂತಾದ ಮುಸ್ಲಿಂ ಪ್ರಾಬಲ್ಯವುಳ್ಳ ಮತ್ತು ಬಡ ರಾಜ್ಯಗಳಿಗೂ ಇದು ಈಗ ವ್ಯಾಪಿಸಿದೆ.
ಮೋದಿಯವರ ಪಾಟ್ನಾ ರ್ಯಾಲಿಯ ಪ್ರಕರಣದಲ್ಲಿ  ಅಯೇಷಾ ಭಾನು ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದರು. ಆಕೆ ಸ್ಪೋಟದ ರೂವಾರಿಗಳಿಗೆ ಹಣಕಾಸನ್ನು ಒದಗಿಸಿದ್ದಳು. ಈಕೆಯೂ ಸಹ ಲವ್ ಜಿಹಾದ್ ಗೆ ಬಲಿಯಾದವಳು. ಅಯೇಷಾಳ ಮೂಲ ಹೆಸರು ಆಶಾ ಆಗಿತ್ತು. ಈಕೆ ಮೂಲತಃ ಹಿಂದೂ. ಮಡಿಕೇರಿಯ ನಿವಾಸಿ. ಜುಬೈರ್ ಎಂಬಾತನ್ನು ವಿವಾಹವಾದ ಮೇಲೆ ಆಶಾ ಅಯೇಷಾ ಆಗಿ ಬದಲಾಗಿ ಇಸ್ಲಾಂ ಗೆ ಮತಾಂತರಗೊಂಡು ಮಂಗಳೂರಿನಲ್ಲಿ ವಾಸವಾಗಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಮೂಲಗಳ ಪ್ರಕಾರ ಅಯೇಷಾ 35ಕ್ಕೂ ಬ್ಯಾಂಕ್ ಖಾತೆಗಳ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಹಣವನ್ನು ಒದಗಿಸುತ್ತಿದ್ದಳು.   
 
ಮಾಟ ಮಂತ್ರ ಮತ್ತು ಹಿಪ್ನಾಟಿಸಂ:          
ಈ ಆಧುನಿಕ ಪ್ರಪಂಚದಲ್ಲೂ ಇಂತವುಗಳನ್ನು ಮಾಡುತ್ತಾರೆಂದರೆ ಆಶ್ಚರ್ಯವಾಗುತ್ತದೆ ಮತ್ತು ಒಮ್ಮೆಗೆ ಗಾಬರಿಯಾಗುತ್ತದೆ. ಸಾಕಷ್ಟು ಇಂತಹ ಪ್ರಕರಣಗಳು ವರದಿಯಾಗಿವೆ. ಮಾಟ ಮಂತ್ರ ಮತ್ತು ಹಿಪ್ನಾಟಿಸಂ ಮೂಲಕ ಯುವತಿಯನ್ನು ಕುಟುಂಬದಿಂದ ದೂರಗೊಳಿಸುತ್ತಾರೆ.
ಕೇರಳದಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಹಿಂದೂ ಕಾರ್ಯಕರ್ತರ ಕುಟುಂಬದ ಯುವತಿ ಕಾಣೆಯಾಗಿದ್ದಳು. ಅದೃಷ್ಟವಶಾತ್ ಆಕೆ ತಿರುಗಿ ಸಿಕ್ಕಳು. ಆದರೆ ಆಕೆಯ ವರ್ತನೆ ವಿಚಿತ್ರವಾಗಿತ್ತು. ಆಸ್ಪತ್ರೆಗೆ ಸೇರಿಸಿದರು ಪ್ರಯೋಜನವಾಗಲಿಲ್ಲ. ನಂತರ ದೇವಸ್ಥಾನದಲ್ಲಿ ನಾನಾ ಪೂಜೆಗಳನ್ನು ಮಾಡಿಸಿದ ನಂತರ ಯುವತಿ ಪಾರಾದಳು. ಇವಕೆಲ್ಲ ದೃಢವಾದ ಸಾಕ್ಷಿ ಆಧಾರವಿಲ್ಲದಿದ್ದರೂ ಇಂತಹ ಕೃತ್ಯಗಳನ್ನು ಸಾಕಷ್ಟು ಜನ ಕಣ್ಣಾರೆ ಕಂಡಿದ್ದಾರೆ. ಈ ಕೃತ್ಯಗಳು ಅಮಾನವೀಯ ಮತ್ತು ಖಂಡನೀಯ.
ಹೀಗೆ ಮನಪರಿವರ್ತನೆ ಮಾಡುವುದು, ದೈಹಿಕ ಹಿಂಸೆ, ಅತ್ಯಾಚಾರ ಮುಂತಾದ ಕೃತ್ಯಗಳ ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ.
 ಲವ್ ಜಿಹಾದ್ ಅನ್ಯ ಧರ್ಮಿಯರನ್ನು ಮತಾಂತರಗೊಳಿಸಲು ಮುಸ್ಲಿಂ ಮತಾಂಧರು ಅನುಸರಿಸುತ್ತಿರುವ ಮಾರ್ಗ. ಲವ್ ಜಿಹಾದ್ ನ ಮೂಲಕ ಇಡೀ ಭಾರತವನ್ನು ಇಸ್ಲಾಂಗೊಳಿಸಲು ಇಸ್ಲಾಂ ಸಂಘಟನೆಗಳು ಸಂಚುರೂಪಿಸಿದ್ದಾರೆ. ಲಕ್ಷಾಂತರ ಯುವತಿಯರು ಈ ಕೂಪಕ್ಕೆ ಬಿದ್ದು ನರಕಯಾತನೆ ಅನುಭವಿಸುತ್ತಿದ್ದಾರೆ. ಯುವತಿಯ ಅಮೂಲ್ಯ ಜೀವನ ಧರ್ಮದ ಹೆಸರಲ್ಲಿ ನಾಶವಾಗುತ್ತಿದೆ. ಅಮಾಯಕ ಹಿಂದೂ ಮಹಿಳೆಯರು ಇದರಿಂದ ನೋವು ತಿಂದಿದ್ದಾರೆ. ಇದನ್ನು ತಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಿಂದೂ ರಾಷ್ಟ್ರವಾದ ಭಾರತದಲ್ಲಿ ಹಿಂದೂ ಅಲ್ಪಸಂಖ್ಯಾತರಾಗಬೇಕಾದ ಸ್ಥಿತಿ ಎದುರಿಸಬೇಕಾದಿತು.

ಕೇರಳದಲ್ಲಿ ಪ್ರತಿ 45 ದಿನಕ್ಕೆ 200 ರಿಂದ 300 ಮಹಿಳೆಯರು ಲವ್ ಜಿಹಾದ್, ರೇಪ್ ಜಿಹಾದ್ ಮುಂತಾದವುಗಳಿಂದ ಇಸ್ಲಾಂಗೆ ಮತಾಂತರಗೊಳ್ಳುತ್ತಿದ್ದಾರೆ. ಆರ್.ಎಸ್.ಎಸ್, ಶಿವಸೇನೆ ಮುಂತಾದ ಹಿಂದೂ ಸಂಘಟನೆಗಳು ಲವ್ ಜಿಹಾದ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಈ ಹೋರಾಟಕ್ಕೆ ಜಯವಾಗಿ ಅಮಾಯಕ ಯುವತಿಯರ ಜೀವನ ಉಳಿಯುವಂತಾಗಲಿ ಎಂದು ಹಾರೈಸುತ್ತೇನೆ.

ಸಿದ್ಧಾರ್ಥ ಕಿಣಿ  (ಮೂಲ ಲೇಖನ ಇಂಗ್ಲಿಷ್)
ಕನ್ನಡಕ್ಕೆ: ರವಿತೇಜ ಶಾಸ್ತ್ರೀ
ಉತ್ತಿಷ್ಠ ಭಾರತ                                                                              

Monday, September 15, 2014

ಜನಕೋಟಿಯ ಬದುಕು ಬೆಳಗಿದಾತ ಮೋಕ್ಷಗುಂಡಂ ವಿಶ್ವೇಶ್ವರಯ್ಯ!

ಒಬ್ಬ ಹುಡುಗ ಇಂಜಿನಿಯರಿಂಗ್  ಅನ್ನು ಅತ್ಯುತ್ತಮ ದರ್ಜೆಯಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಮುಗಿಸಿದ. ವಿಶ್ವವಿದ್ಯಾಲಯಕ್ಕೆ ರ್ಯಾಂಕ್  ಪಡೆದುದರಿಂದ, ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ತಕ್ಷಣ ಕೆಲಸ ಸಿಕ್ಕಿತು. ಅವನಿಗೆ ನೀರಾವರಿ ಕಾಲುವೆಗಳ ಉಸ್ತುವಾರಿಯ ಕೆಲಸ ನಿಗದಿಪಡಿಸಿದರು. ತರುಣ ಇಂಜಿನಿಯರ್ ಜಾಣ್ಮೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ.

ಒಮ್ಮೆ ಈ ಹುಡುಗನಿಗೆ ಒಂದು ಯೋಜನೆಯನ್ನು ನೀಡಿದರು. ಯೋಜನೆ ಆರಂಭಿಸಲು ಪ್ರತಿಕೂಲ ಹವಾಮಾನ ಇದ್ದುದರಿಂದ ಅ ತರುಣ ಇಂಜಿನಿಯರ್ ಎಲ್ಲವನ್ನೂ ಸರಿಯಾಗಿ ಪರೀಕ್ಷಿಸಿ ತನ್ನ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಈಗ ಕೆಲಸ ಆರಂಭ ಮಾಡುವುದು ಬೇಡ ವೆಚ್ಚ ಹೆಚ್ಚಾಗುತ್ತದೆ ಎಂದು ಯೋಚಿಸಿ ಒಂದು ವರದಿಯನ್ನು ತನ್ನ ಮೇಲಿನ ಅಧಿಕಾರಿಗೆ ಕೊಟ್ಟ.  ಅದಕ್ಕೆ ಅವನ ಮೇಲಿನ ಅಧಿಕಾರಿ, ಕೆಲಸ ನಿಲ್ಲಿಸುವುದು ಬೇಡ ಎಂದು ಅಪ್ಪಣೆ ಮಾಡಿ ಆಜ್ಞೆ ಪಾಲನೆ, ಅವಿಧೇಯತೆ ಮತ್ತು ಕಾರ್ಯನಿರ್ವಹಣೆಯಲ್ಲಿ ಅದಕ್ಷ ನಡತೆಯಿಂದ ವೃತ್ತಿ ಜೀವನವನ್ನು ಈ ಇಂಜಿನಿಯರ್ ಪ್ರಾರಂಭಿಸಿದ್ದಾನೆ ಎಂದು ಪತ್ರ ಬರೆದ.
ಆಮೇಲೆ ತರುಣ ಇಂಜಿನಿಯರ್ “ ನಾನು ಕೆಲಸ ಮಾಡುವಾಗ ಯಾವುದೇ ಅಡಚಣೆಗಳು ಉಂಟಾಗದೇ ಇದ್ದಲ್ಲಿ, ಕಡಿಮೆ ವೆಚ್ಚದಲ್ಲಿ ಯೋಜನೆ ಮುಗಿಸಲು ಪ್ರಯತ್ನಿಸುತ್ತೇನೆ ” ಎಂದು ಆ ಬ್ರಿಟಿಷ್ ಅಧಿಕಾರಿಗೆ ಪತ್ರ ಬರೆದು ಎರಡು ತಿಂಗಳ ಅವಧಿಯಲ್ಲಿ ಯೋಜನೆ ಮುಗಿಸಿದ.  ಆ ತರುಣ ಇಂಜಿನಿಯರ್ ಮತ್ತಾರು ಅಲ್ಲ “ ಮೋಕ್ಷಗುಂಡಂ ವಿಶ್ವೇಶ್ವರಯ್ಯ” .

ಭಾರತಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಭಾಗೀರಥ, ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರ, ಭಾರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಆಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿವೃದ್ದಿಗೆ ಶ್ರಮಿಸಿದ ಚಾಣಕ್ಯ, ಅತ್ತಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯಸಾಧನೆ ಮಾಡಿದ ಭೀಷ್ಮ, ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರೆದ ಮಹಾನ್ ದೇಶ ಭಕ್ತ, ಭರತ ಖಂಡಕ್ಕೆ ಅಲ್ಲದೇ ಇಡೀ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿದ ವಿಶ್ವಮಾನವ, ಜನಕೋಟಿಯ ಬದುಕು ಬೆಳಗಿಸಿದಾತ. ಕಾಯಕ ಯೋಗಿ, ಆಧುನಿಕತೆಯ ನೇತಾರ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಆ ದಿವ್ಯ ಚೇತನವನ್ನು ವರ್ಣಿಸಲು ಪದಗುಚ್ಛಗಳೇ ಸಾಲದು. ಸರಳತೆ, ಸೌಜನ್ಯತೆ , ಗೌರವ, ದೇಶಭಕ್ತಿ, ಸಮಚಿತ್ತ ಮನಸ್ಸು ಇವೆಲ್ಲಕ್ಕೆ ಸಮಾನಾರ್ಥಕ ಪದವೇ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಈ ಪುಣ್ಯಾತ್ಮ ಜನಿಸಿದ್ದು ಸೆಪ್ಟೆಂಬರ್ 15 ರಂದು. ಮಹಾನ್ ವ್ಯಕ್ತಿಗೆ ಈ ಲೇಖನ ಅರ್ಪಿತ.
                                
ಬಾಲ್ಯ ಮತ್ತು ಶಿಕ್ಷಣ:

1860 ರಲ್ಲಿ ಮೈಸೂರು ಪ್ರಾಂತ್ಯ(ಈಗ ಕರ್ನಾಟಕ) ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸಂಸ್ಕೃತ ಪಂಡಿತರಾಗಿದ್ದ ಶ್ರೀನಿವಾಸ ಶಾಸ್ತ್ರೀ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ  ದಂಪತಿಗಳ ಮಗನಾಗಿ ಸೆಪ್ಟೆಂಬರ್ 15 ರಂದು ವಿಶ್ವೇಶ್ವರಯ್ಯನವರು ಜನಿಸಿದರು. ಚಿಕ್ಕಬಳ್ಳಾಪುರದ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ತಮ್ಮ ವಿಧ್ಯಾಭ್ಯಾಸ ಆರಂಭಿಸಿ ನಂತರದ ಪ್ರೌಢ ಶಿಕ್ಷಣವನ್ನು  ಬೆಂಗಳೂರಿನಲ್ಲಿ ಮುಗಿಸಿದರು. 1881ರಲ್ಲಿ ಬಿ.ಎ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು 1883 ರಲ್ಲಿ ರ್ಯಾಂಕ್ ಪಡೆಯ ಮೂಲಕ ಸಾಧನೆಯ ಹೆಜ್ಜೆಯಿಟ್ಟರು.  ಬಾಂಬೆ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ  ಜೀವನ ಪ್ರಾರಂಭಿಸಿದರು. 1912 ರಲ್ಲಿ ಮೈಸೂರಿನ ದಿವಾನರಾದ ವಿಶ್ವೇಶ್ವರಯ್ಯನವರು ಹಿಂದಿರುಗಿ ನೋಡಲೇ ಇಲ್ಲ. ತಮ್ಮ ದೂರದೃಷ್ಟಿ, ಚಿಂತನಶೀಲತೆ, ದಕ್ಷ ಕಾರ್ಯಕ್ಷಮತೆಯಿಂದ ಸಾಕಷ್ಟು ಜನೋಪಕಾರಿ ಕಾರ್ಯಗಳನ್ನು ಮಾಡಿ ಭಾಗ್ಯವಿದಾತನೆನಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ, ಸರ್. ಎಂ. ವಿ ಸೇವೆ ಸಲ್ಲಿಸದ ಕ್ಷೇತ್ರವಿಲ್ಲ ! :

ವಿಶ್ವೇಶ್ವರಯ್ಯ  ಮೈಸೂರಿನ ದಿವಾನರಾದ ನಂತರ ನೀರಾವರಿ, ಕೈಗಾರಿಕೆ, ಶಿಕ್ಷಣ, ಸಾಹಿತ್ಯ, ಆರ್ಥಿಕತೆ, ತಂತ್ರಜ್ಞಾನ, ಬ್ಯಾಂಕಿಂಗ್ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಜನೋಪಕಾರಿ ಯೋಜನೆಗಳನ್ನು ರೂಪಿಸಿ ಮೈಸೂರು ರಾಜ್ಯದ ಪ್ರಗತಿಗೆ ಶ್ರಮಿಸಿದರು.
ನೀರಾವರಿ ಕ್ಷೇತ್ರದಲ್ಲಿ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಅವರನ್ನು “ ಕರ್ನಾಟಕದ ಭಾಗೀರಥ ” ಎಂದು ಕರೆಯಬಹುದು. ಕಾವೇರಿ ನದಿಗೆ ಕೃಷರಾಜ ಸಾಗರ (ಕನ್ನಂಬಾಡಿ) ಅಣೆಕಟ್ಟನ್ನು ನಾಲ್ಕು ವರ್ಷದ ಅವಧಿಯಲ್ಲಿ ಮುಗಿಸಿ ಮೈಸೂರು, ಮಂಡ್ಯ, ಬೆಂಗಳೂರಿಗೆ ಜೀವಜಲ ನೀಡಿದ ವಾಸ್ತು ಶಿಲ್ಪಿಯಾದರು.  ಈ ಅಣೆಕಟ್ಟು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಸುರತ್ ನಲ್ಲಿ ವಿಶ್ವೇಶ್ವರಯ್ಯನವರು ನಿರ್ಮಿಸಿದ ಕಾಮಗಾರಿ ಎಷ್ಟು ಅತ್ಯುತ್ತಮವಾಗಿದೆ ಎಂದರೆ ಅದು ನಿರ್ಮಿತವಾಗಿ ನೂರು ವರ್ಷದ ನಂತರ ಭೂಕಂಪ ಸಂಭವಿಸಿದರೂ ಕಾಮಗಾರಿ ಇನ್ನು ಸುಭದ್ರವಾಗಿದೆ! ಜಯಶಯಕ್ಕೆ ಸ್ವಯಂಚಾಲಿತ ಗೇಟ್ ಅಳವಡಿಸುವ ತಂತ್ರಜ್ಞಾನ ಕಂಡುಹಿಡಿದ ಏಕೈಕ ವ್ಯಕ್ತಿ ವಿಶ್ವೇಶ್ವರಯ್ಯ.
ಕರ್ನಾಟಕದ  ಕೈಗಾರಿಕಾ ಕ್ರಾಂತಿಯ ಜನಕ ಎಂದು ಸರ್.ಎಂ.ವಿ ಅವರನ್ನು ಕರೆಯಬಹುದು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರ್ ಸ್ಯಾಂಡಲ್ ಸೋಪ್ ಕಾರ್ಖಾನೆ, ಶ್ರೀ ಗಂಧ ಮತ್ತು ಎಣ್ಣೆ ತಯಾರಿಕಾ ಸ್ಥಾಪಿಸಿದ ಮಹಾನುಭಾವ ಸರ್. ಎಂ.ವಿ. ಈ ಕಾರ್ಖಾನೆಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿತು. ಇಂದಿಗೂ ಅವರು ಲಕ್ಷಾಂತರ ಕುಟುಂಬಗಳ ಅನ್ನದಾತ. ಹಿಂದುಸ್ತಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ, ಮೈಸೂರು ಸಕ್ಕರೆ ಕಾರ್ಖಾನೆ ಇವೆಲ್ಲವೂ ವಿಶ್ವೇಶ್ವರಯ್ಯನವರ ಕೊಡುಗೆಯೇ.
   
ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಕನ್ನಡಿಗರು ಮದ್ರಾಸಿಗೆ ಹೋಗಬೇಕಿತ್ತು ಕಾರಣ ಕರ್ನಾಟಕದಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಇದನ್ನು  ಅರ್ಥೈಸಿಕೊಂಡ ಸರ್. ಎಂ. ವಿ ದೇಶದ ಮೊದಲ ವಿಶ್ವವಿದ್ಯಾಲಯ ಮೈಸೂರು ವಿದ್ಯಾಲಯವನ್ನು ಸ್ಥಾಪಿಸಿದರು. ಮೈಸೂರು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರ್ಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೊತ್ತುಕೊಟ್ಟ ಅವರು ವಿಧ್ಯಾರ್ಥಿನಿಯರಿಗೆ ಮೊದಲ ಬಾರಿಗೆ ಹಾಸ್ಟೆಲ್ ಕಟ್ಟಿಸಿದರು.
ತಾಂತ್ರಿಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಮೈಸೂರು ಮಹಾರಾಣಿ ಕಾಲೇಜ್, ಬೆಂಗಳೂರಿನ ಗ್ರಂಥಾಲಯಗಳ  ನಿರ್ಮಾತೃ ಸರ್. ಎಂ ವಿಶ್ವೇಶ್ವರಯ್ಯನವರು.
ವಿಶ್ವೇಶ್ವರಯ್ಯನವರು ಕೇವಲ ಇಂಜಿನಿಯರ್ ಆಗಿರದೆ ಶ್ರೇಷ್ಠ ಅರ್ಥಿಕತಜ್ಞ ಸಹ ಆಗಿದ್ದರು. ನಷ್ಟದಲ್ಲಿದ್ದ ಕರಾಚಿ ಮತ್ತು ಮುಂಬೈ ಪುರಸಭೆಗೆ ಸಲಹೆ  ನೀಡಿ ಸಂಕಷ್ಟದಿಂದ ಪಾರು ಮಾಡಿದರು. ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ನಷ್ಟದಿಂದ ನಲುಗಿತ್ತು. ಇದನ್ನು ಮೇಲಕ್ಕೆತ್ತಿದವರು ಸರ್. ಎಂ. ವಿ.ದೇಶ ಅರ್ಥಿಕತೆಯ ಸುಸ್ಥಿತಿಗೆ ಮೈಸೂರು ಬ್ಯಾಂಕ್  ಮತ್ತು ಚೇಂಬರ್ ಆಫ್ ಕಾಮರ್ಸ್ ಸ್ಥಾಪಿಸಿದರು.      


ಜನರನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ :

ವಿಶ್ವೇಶ್ವರಯ್ಯನವರು ಜನತೆಗೆ ಶಾಶ್ವತ ನೀರಾವರಿ ಒದಗಿಸಲು ಕನ್ನಂಬಾಡಿ ಕಟ್ಟುವ ಪ್ರಸ್ತಾಪ ಮಹಾರಾಜರ ಮುಂದೆ ಇಟ್ಟರು. ಆಗ ಸರ್.ಎಂ.ವಿ ಗೆ ಆಗದವರು ಇದೊಂದು ಹುಚ್ಚು ಯೋಜನೆಯೆಂದು ಹೇಳಿ ಮಹಾರಾಜರಿಂದ ಅನುಮತಿ ಸಿಗದ ಹಾಗೇ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ಸರ್.ಎಂ.ವಿ ರಾಜೀನಾಮೆ ನೀಡುವ ಪ್ರಸ್ತಾಪ ಇಟ್ಟಾಗ ಮಹಾರಾಜರು ಯೋಚಿಸಿ ಅನುಮತಿ ನೀಡಿದರು. ಆದರೆ ಮದ್ರಾಸ್ ಪ್ರಾಂತ್ಯ  ತಮಗೆ ಎಲ್ಲಿ ನೀರು ಸಿಗುವುದಿಲ್ಲವೂ ಎಂದು ಯೋಜನೆಯನ್ನು  ವಿರೋಧಿಸಿತು. ಇದಕ್ಕೆ ಕುಗ್ಗದ ಸರ್. ಎಂ.ವಿ ಪ್ರಖರ ವಾದ ಮಂಡಿಸಿ ಆಣೆಕಟ್ಟು ಕಟ್ಟಿದರು. ಅಂದು ವಿಶ್ವೇಶ್ವರಯ್ಯನವರು ಅಣೆಕಟ್ಟು ಕಟ್ಟದೆ ಇದ್ದಿದ್ದರೇ ಇಂದು ನೀರಿಗಾಗಿ ಬೆಂಗಳೂರು ಪರದಾಡ ಬೇಕಾಗಿತ್ತು. ಬೆಂಗಳೂರು ಸಕಲ ಸೌಲಭ್ಯ ಕೂಡಿದೆ ಹಾಗಾಗಿಯೇ ಇಂದು ಸಾಕಷ್ಟು ಉದ್ಯಮಗಳು ಐ.ಟಿ, ಬಿ.ಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ನೀರಿನ ಕೊರತೆ ಉಂಟಾಗಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನ  ನಿರ್ಮಾತೃ ವಿಶ್ವೇಶ್ವರಯ್ಯ ಎಂದರೆ ತಪ್ಪಿಲ್ಲ ವೆನಿಸುತ್ತದೆ.
ಬೆಂಗಳೂರಿಗಿಂತಲೂ ಹೆಚ್ಚು ಕನ್ನಂಬಾಡಿ ಕಟ್ಟೆಗೆ ಅವಲಂಬಿತವಾದ ಜಿಲ್ಲೆ ಮಂಡ್ಯ ಜಿಲ್ಲೆ. ಮಂಡ್ಯದ ರೈತರ ಕೃಷಿಗೆ ಈ ಕನ್ನಂಬಾಡಿ ಕಟ್ಟೆಯಿಂದ ಬರುವ ನೀರೆ ಆಧಾರ. ಮಂಡ್ಯದ ರೈತರ ನಿಜ ಅನ್ನದಾತ ವಿಶ್ವೇಶ್ವರಯ್ಯನವರೇ.         
 ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಮೈಸೂರು ಸರ್ಕಾರಿ ಸಕ್ಕರೆ ಕಾರ್ಖಾನೆ  ಇಂದು ಲಕ್ಷಾಂತರ ಜನರಿಗೆ ಅನ್ನ ನೀಡುತ್ತಿದೆ. ಅಂದಿನ  ಸರ್. ಎಂ.ವಿಯವರ  ದೂರದೃಷ್ಟಿ ಚಿಂತನೆ ಇಂದು  ಬಹಳಷ್ಟು  ಕುಟುಂಬಗಳಿಗೆ ನೆರವಾಗಿದೆ.
ಜೋಗದ ಜಲ ವಿದ್ಯುತ್ ಸ್ಥಾವರದ ರೂವಾರಿ ವಿಶ್ವೇಶ್ವರಯ್ಯ . ಈ ಸ್ಥಾವರ ವಿದ್ಯುತ್ ತಯಾರಿಸಿ ಜನಕೋಟಿಗೆ ಬೆಳಕು ನೀಡುತ್ತಿದೆ.  ಸರ್. ಎಂ. ವಿ ಜನರನ್ನು ಉದ್ದರಿಸಲು ಅವತರಿಸಿದ ಪುಣ್ಯಪುರುಷನೇ ಸರಿ.                                                                        
    
ದೇಹಕ್ಕೆ ಮಾತ್ರ ಮುಪ್ಪು, ಮನಸ್ಸಿಗಲ್ಲ :

 ಒಮ್ಮೆ ಒರಿಸ್ಸಾ ರಾಜ್ಯ ಮಹಾನದಿಯ ಪ್ರವಾಹದಿಂದ ತತ್ತರಿಸಿತ್ತು. ಆಗ ಸರ್.ಎಂ.ವಿ ತಮ್ಮ 75 ನೇ ವಯಸ್ಸಿನಲ್ಲಿ ನದಿಗೆ  ಅಡ್ಡಲಾಗಿ ಜಯಶಯ ನಿರ್ಮಿಸಲು ನೀಲ ನಕ್ಷೆಯನ್ನು ಸಿದ್ದಪಡಿಸಿದ್ದರು. 1953ರಲ್ಲಿ  ತಮ್ಮ 92 ರ ಹರೆಯದಲ್ಲಿ ಬಿಹಾರದ ಪಾಟ್ನಾ ನಗರದ ಗಂಗಾ ನದಿಯ ಸೇತುವೆಗೆ ನೀಲ ನಕ್ಷೆ ತಯಾರಿಸಲು ಯೋಜನೆಯ ಅನುಷ್ಠಾನ ಮಾಡುವ ಸ್ಥಳಕ್ಕೆ ಸುಡು ಬಿಸಿಲನ್ನು ಲೆಕ್ಕಿಸದೆ ನಡೆದೆ ಹೋಗಿ ಯೋಜನೆ ಸಿದ್ದಪಡಿಸಿದ್ದರು. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿಗೆ ಸಲಹೆ ನೀಡಿದಾಗ ಅವರಿಗೆ 86 ರ ಪ್ರಾಯ. ಅವರು ತಮ್ಮ ಆತ್ಮಚರಿತ್ರೆ ಬರೆದದ್ದು 91 ನೇ ವಸಂತದಲ್ಲಿ.

ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿಗೆ ಮತ್ತೊಂದು ಹೆಸರೇ ವಿಶ್ವೇಶ್ವರಯ್ಯ :

ಸರ್.ಎಂ.ವಿ ಶಿಸ್ತಿನ ಸಿಪಾಯಿಯಾಗಿದ್ದರು. ಅವರ ವೇಷಭೂಷಣಗಳಲ್ಲಿ ಅದು ಎದ್ದು ಕಾಣುತ್ತಿತ್ತು. ಸರ್.ಎಂ.ವಿ ಎಂದಿಗೂ ತಮ್ಮ ಖಾಸಗಿ ಕೆಲಸಕ್ಕೆ ಸರ್ಕಾರಿ ವಾಹನ ಉಪಯೋಗಿಸುತ್ತಿರಲಿಲ್ಲ. ಮನೆಯಲ್ಲಿ ರಾತ್ರಿ ವೇಳೆ ಸರ್ಕಾರಿ ಕೆಲಸ ಮಾಡುವಾಗ ಸರ್ಕಾರ ನೀಡಿದ ದೀಪವನ್ನು ಉಪಯೋಗಿಸುತ್ತಿದ್ದರು. ನಂತರ ತಮ್ಮ ಸ್ವಂತ ಕೆಲಸಕ್ಕೆ ತಮ್ಮ ದೀಪವನ್ನೇ ಬಳಸುತ್ತಿದ್ದರು.
ಸರ್.ಎಂ,ವಿ ಮಹಾನ್ ದೇಶಭಕ್ತರಾಗಿದ್ದರು. ಯೆಮೆನ್ ರಾಷ್ಟ್ರದ ನೀರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ,ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಸರ್. ಎಂ.ವಿ ಮುಖ್ಯವಾದ ಒಂದು ಕಲ್ಲಿನಲ್ಲಿ “ಮೇಡ್ ಇನ್ ಇಂಡಿಯಾ” ಕೆತ್ತಿಸಿ ಇಟ್ಟಿದ್ದಾರೆ. ಯಾರಾದರೂ ಭಾರತದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸ್ತು 
ಶಿಲ್ಪ ಕುಸಿದುಬೀಳುತ್ತದೆ ಅಂತಹ ಭಾರತೀಯ ತಂತ್ರಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ಅವರು ತೋರಿಸಿಕೊಟ್ಟಿದ್ದಾರೆ.

ಉಪಸಂಹಾರ:
     
ಸರ್.ಎಂ.ವಿ ಅವರ ಅಪಾರ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡ ಸರ್ಕಾರ  ಅವರಿಗೆ ಭಾರತದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಭಾರತ ರತ್ನವನ್ನು 1955 ರಲ್ಲಿ ನೀಡಿ ಗೌರವಿಸಿತು.   
ದೇಶ ಕಂಡ ಈ ಮಹಾನ್ ಚೇತನ 102 ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆ ಮಾಡಿ ತಮ್ಮ ಶಿಸ್ತಿನ ಜೀವನವನ್ನು ಏಪ್ರಿಲ್ 12. 1962 ರಲ್ಲಿ ಅಂತ್ಯಗೊಳಿಸಿದರು. ಅಧಿಕಾರ ಇರುವುದು ಅನುಭವಿಸಲು ಅಲ್ಲ ಜನರ ಸೇವೆ ಮಾಡಲು ಎಂದು ನಂಬಿದ್ದ ಸರ್.ಎಂ.ವಿ ತಮ್ಮ ಸಂಪೂರ್ಣ ಜೀವನವನ್ನು ಜನರ ಸೇವೆಗೆ ಅರ್ಪಿಸಿದರು.
ಗೌರವಾರ್ಥವಾಗಿ  ಅವರ ಜನ್ಮದಿನವನ್ನು “ ರಾಷ್ಟೀಯ ಇಂಜಿನಿಯರ್ ಗಳ ದಿವಸ ” ವೆಂದು ಆಚರಿಸುತ್ತೇವೆ.
ಇತಿಹಾಸವಿರುವುದೇ ಮರೆಯಲು ಎಂದು ಬಹುಮಂದಿ ಭಾರತೀಯರು ಭಾವಿಸಿಬಿಟ್ಟಿದ್ದಾರೆ. ಭಾರತದ ಕೀರ್ತಿ ಪಾತಕೆ ಯನ್ನು ಹಾರಿಸಿದ ಭಾಗ್ಯವಿಧಾತ ಸರ್.ಎಂ.ವಿ ಅವರನ್ನು ಮರೆತರೆ ಹೇಗೆ? ಅವರ ಜನ್ಮ ದಿನದ ಈ ಸುಸಂದರ್ಭದಲ್ಲಿ  ಅವರನ್ನು ನೆನಪು  ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಆದರ್ಶಗಳನ್ನು ಪಾಲಿಸಿದರೆ ಈ ಪವಿತ್ರ ಭಾರತದ ನೆಲದಲ್ಲಿ ಪಡೆದ ನಮ್ಮ ಜನ್ಮ ಸಾರ್ಥಕ.

ರವಿತೇಜ ಶಾಸ್ತ್ರೀ
ಉತ್ತಿಷ್ಠ ಭಾರತ