Wednesday, April 6, 2011

Lokpal bill

ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ?
* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.
* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.
* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.
* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.
* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.
* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೊಲೀಸ್ ಲಂಚ ಕೇಳಿದರು,ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೋರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.
* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.
* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣಭದ್ರತೆ ದೊರೆಯುತ್ತದೆ.

No comments:

Post a Comment