Tuesday, April 12, 2011

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ

ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.
 “ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನುಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವುಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.
ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.
ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ|| ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”
ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||
ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯವ ಯವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’
ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”
ಈ ಭಾಷಣ ಅಂದಿನ ಅತ್ಯಂತಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.
ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರುಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.

Sanskrit and Indian culture

Every country has a unique culture, heritage and tradition, which sets it apart from its other counterparts. Likewise India has got its own special culture, a very rich heritage and world-renowned traditions. The great language Sanskrit is the foundation that supports our culture. The uniqueness of our Indian culture is due to the fact that no other country’s culture is so deeply affected by a language. In fact our entire culture is built around the morals and rules set by Sanskrit.
When we come in contact with a person of loose morals, we saythat his elders have not given him good ‘Samskruthi’ i.e. culture. The very word samskruthi is derived from the word ‘Samskrutham’. So Sanskrit is not just a language; it is the way of an Indian’s life; it is the culture of India. Thefollowing saying fits aptly to the context above: -
Bharathiaikatatha sadhakam samskrutham
Bharathiyathva sampadhakam samskrutham |
Jnanapunjaprabhadharshkam samskrutham
Sarvadhananda sandhohadham samskrutham ||
[The unity of India lies on Sanskrit. It inspires our nationality and it is the key to the treasure of great knowledge. It brings pleasure to the readers.

Bindi: The Great Indian Forehead Art

The bindi is arguably themost visually fascinating of all forms of body decoration. Hindus attach great importance to this ornamental mark on theforehead between the two eyebrows -- a spotconsidered a major nerve point in human body since ancient times. Also loosely known as 'tika', 'pottu', 'sindoor', 'tilak', 'tilakam',and 'kumkum', a bindi is usually a small or a big eye-catching round mark made on the forehead as adornment.
That Red Dot In southern India, girls choose to wear a bindi, while in other parts of India it is the prerogative of the married woman. A red dot on the forehead is an auspicious sign of marriage and guarantees the social status and sanctity of the institution of marriage. The Indian bride steps over the threshold of her husband's home, bedecked in glittering apparels and ornaments, dazzling thered bindi on her forehead that is believed to usher in prosperity, and grants her a place as the guardian of the family's welfare and progeny.
A Hot Spot! The area between the eyebrows, the sixth chakra known as the 'agna' meaning 'command', is the seat of concealed wisdom. Itis the centre point wherein all experience isgathered in total concentration. Accordingto the tantric cult, when during meditation the latent energy ('kundalini') rises from the base of the spine towards the head, this 'agna' is the probable outlet for this potent energy. The red 'kumkum' between the eyebrows is said to retain energy in the human body and controlthe various levels of concentration. It is also the central point of the base of the creation itself — symbolizing auspiciousness and good fortune.
How to Apply Traditional bindi is red ormaroon in color. A pinch of vermilion powder applied skillfully with practiced fingertip makethe perfect red dot. Women who are not nimble-fingered take great pains to get the perfect round. They usesmall circular discs or hollow pie coin as aid. First they apply a stickywax paste on the empty space in the disc.This is then covered with kumkum or vermilion and then the disc is removed to get aperfect round bindi. Sandal, 'aguru', 'kasturi', 'kumkum' (made of red turmeric) and 'sindoor' (made of zinc oxide and dye) make this special red dot. Saffron ground together with 'kusumba' flower can also create the magic!

Monday, April 11, 2011

Interesting facts about India

*.India never invaded any country in her last 100000 years of history.
*.When many cultures were only nomadic forest dwellers over 5000 years ago, Indians established Harappan culture in Sindhu Valley (Indus Valley Civilization)
*.The name 'India' is derived from the River Indus, the valleys around which were the home of the early settlers. The Aryan worshippers referred tothe river Indus as the Sindhu.
*.The Persian invaders converted it into Hindu. The name 'Hindustan' combines Sindhu and Hindu and thus refers to the land of the Hindus.
*.Chess was invented in India.
*.Algebra, Trigonometry and Calculus are studies, which originated in India.
*.The 'Place Value System' and the 'Decimal System' were developed in India in 100B.C.
*.The World's First Granite Temple is the Brihadeswara Temple at Tanjavur, Tamil Nadu. The shikhara of the temple is made from a single 80-tonne piece of granite. This magnificent temple was built in just five years, (between 1004 AD and 1009 AD) during the reign of Rajaraja Chola.
*.India is the largest democracy in the world,the 7 th largest Country in the world, and one of the most ancient civilizations.
*.The game of Snakes& Ladders was created by the 13th century poet saint Gyandev. It was originally called 'Mokshapat'. The ladders in the game represented virtues andthe snakes indicated vices. The game was played with cowrie shells and dices. In time,the game underwent several modifications, but its meaning remained the same, i.e. good deeds take people to heaven and evil to a cycle of re-births.
*.The world's highest cricket ground is in Chail,Himachal Pradesh. Built in 1893 after leveling a hilltop, this cricket pitch is 2444 meters above sea level.
*.Until 1896, India was the only source of diamonds in the world
(Source: Gemological Institute of America) .
*.The Baily Bridge is thehighest bridge in the world. It is located in the Ladakh valley between the Dras and Suru rivers in the Himalayan mountains. Itwas built by the Indian Army in August 1982.
*.Sushruta is regarded as the Father of Surgery. Over2600 yearsago Sushrata & his team conducted complicated surgeries like cataract, artificial limbs, cesareans, fractures, urinary stones, plastic surgery and brain surgeries.
*.Usage of anaesthesiawas well known in ancient Indian medicine. Detailed knowledge of anatomy, embryology, digestion, metabolism,physiology, etiology, genetics and immunity is also found in many ancient Indian texts.
*.India exports software to 90 countries.
*.The four religions born in India - Hinduism, Buddhism, Jainism, and Sikhism, are followed by25% of the world's population.
*.Jainism and Buddhismwere founded in India in600 B.C. and 500 B.C. respectively.
*.Islam is India's and the world's second largest religion.
*.There are 300,000 active mosques in India,more than in any other country, including the Muslim world.
*.The oldest European church and synagogue inIndia are in the city of Cochin. They were built in 1503 and 1568 respectively.
*.Jews and Christians have lived continuously in India since 200 B.C. and 52 A.D. respectively
*.The largest religious building in the world is Angkor Wat, a Hindu Temple in Cambodia built at the end of the 11th century.
*.The Vishnu Temple inthe city of Tirupathi built in the 10th century, is the world's largest religious pilgrimage destination. Larger than either Romeor Mecca, an average of 30,000 visitors donate$6 million (US) to the temple everyday.
*.Sikhism originated in the Holy city of Amritsar in Punjab. Famous for housing the Golden Temple, the city was founded in 1577.
*.Varanasi, also known as Benaras, was called"the Ancient City" whenLord Buddha visited it in 500 B.C., and is the oldest, continuously inhabited city in the world today.
*.India provides safety for more than 300,000 refugees originally from Sri Lanka, Tibet, Bhutan,Afghanistan and Bangladesh, who escaped to flee religiousand political persecution.
*.His Holiness, the DalaiLama, the exiled spiritual leader of Tibetan Buddhists, runshis government in exile from Dharmashala in northern India.
*.Martial Arts were first created in India, and later spread to Asiaby Buddhist missionaries.
*.Yoga has its origins in India and has existed for over 5,000 years.

Friday, April 8, 2011

Great Man Hazare

ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು ಹಣ್ಣು ಮುದುಕರೊಬ್ಬರು, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ, ನ್ಯಾಯಬೇಕು ಎಂದು ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗ - ಉಪವಾಸ ಮಾಡುತ್ತೇನೆಂದು ಕೂತರೆ, ನಮ್ಮನ್ನು ಆಳುವ ಮಹಾನ್ ನಾಯಕರು ಅಂಥವರ ಹಿಂದೆ ಆರೆಸ್ಸೆಸ್ ಕೈವಾಡ, ಸಂಘ ಪರಿವಾರದ ಸಂಚು ಇದೆ, ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೆಲ್ಲಾ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ!
ಮಹಾರಾಷ್ಟ್ರದಲ್ಲಿ ಆಳುತ್ತಿದ್ದ ಸರಕಾರಗಳನ್ನೆಲ್ಲಾ ಗಡಗಡ ನಡುಗಿಸಿದ್ದ, ಇದೇ ಕೇಂದ್ರ ಕೃಷಿ ಮಂತ್ರಿ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಸರಕಾರಿ ಮಟ್ಟದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಹೆಸರು ಮಾಡಿದವರು ಅಣ್ಣಾ ಹಜಾರೆ. ಇದೀಗ 3 ದಶಕಗಳಿಂದ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಲೇ ಕೇಂದ್ರದಲ್ಲಿ ದೊಡ್ಡ ದೊಡ್ಡ, ಪ್ರಭಾವೀ ಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ಶರದ್ ಪವಾರ್. ಆದರೋ, ಅಣ್ಣಾ ಹಜಾರೆಯಂತೂ ಭ್ರಷ್ಟಾಚಾರ ವಿರುದ್ಧ ಇನ್ನೂ ಹೋರಾಡುತ್ತಲೇ ಇದ್ದಾರೆ! ಇದು ವಿಪರ್ಯಾಸ.
ಓದಿದ್ದು 7ನೇ ಕ್ಲಾಸು, ಸೇನೆಯಲ್ಲಿ ಚಾಲಕ...
1940 ರ ಜನವರಿ 15ರಂದು ಬಡ ಕುಟುಂಬದಲ್ಲಿ ಜನಿಸಿದ ಹಜಾರೆ ಓದನ್ನು ಕೇವಲ 7ನೇ ತರಗತಿಗೇ ನಿಲ್ಲಿಸಬೇಕಾಗಿತ್ತು. ಆದರೂ, ಭಾರತೀಯ ಸೇನೆಯನ್ನು ಸೇರಿ, ಚಾಲಕನಾಗಿ ಕಾಲ ಕಳೆದಿದ್ದ ಅವರಿಗೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತುಆಚಾರ್ಯ ವಿನೋಬಾ ಭಾವೆಆದರ್ಶ.ಇಂಡೋ-ಪಾಕ್ ಯುದ್ಧದಲ್ಲಿ ತಂಡದ ಮೇಲೆ ದಾಳಿ ನಡೆದಾಗ ಅಲ್ಲಿ ಬದುಕುಳಿದ ಶಿಸ್ತಿನ ಸಿಪಾಯಿ ಅವರು. ಅಂದಿನ ಈ ದುರಂತವು ಅವರ ಜೀವನದ ಚರ್ಯೆಯನ್ನೇ ಬದಲಿಸಿತು. ಸೇನೆಯಿಂದಸ್ವಯಂ ನಿವೃತ್ತಿ ಪಡೆದು ಜನರ ಜೀವನದ ಬಗೆಗೆ.ಯೋಚಿಸತೊಡಗಿದರು ಅವರು.
ಖಾದಿ ಬಟ್ಟೆ ಮಾತ್ರವೇಧರಿಸುತ್ತಿರುವ ಅವರಿಗೆ ಕುಟುಂಬವಾಗಲೀ, ಆಸ್ತಿಪಾಸ್ತಿಯಾಗಲೀ ಏನೂ ಇಲ್ಲ. ರಾಲೆಗಣ ಸಿದ್ಧಿಯ ಯಾದವಬಾಬಾ ಮಂದಿರವನ್ನು ಆತುಕೊಂಡಿರುವ 100 ಚದರಡಿಯ ಒಂದು ಪುಟ್ಟ ಕೊಠಡಿಯಲ್ಲಿ ಅವರ ವಾಸ. ಅವರಿಗೆ ಇಬ್ಬರು ವಿವಾಹಿತ ಸಹೋದರಿಯರಿದ್ದಾರೆ. ಅವರ ತಾಯಿ 2002ರಲ್ಲಿ ತೀರಿಕೊಂಡಿದ್ದರು. ಆದರೆ ರಾಲೆಗಣ ಸಿದ್ಧಿಯ ತಮ್ಮ ಕೌಟುಂಬಿಕ ಮನೆಗೆ ಅವರು ಯಾವತ್ತೂ ಕಳೆದ 35 ವರ್ಷಗಳಿಂದ ಭೇಟಿ ಕೊಟ್ಟಿಲ್ಲ, ಸಹೋದರಿಯರನ್ನೂ ಭೇಟಿಯಾಗಿಲ್ಲ. ತಮ್ಮನ್ನು ಭೇಟಿಯಾದವರಲ್ಲಿ ಐದೋ ಹತ್ತೋ ರೂಪಾಯಿ ಕೊಡಿ ಎನ್ನುತ್ತಾ ಜೀವನ ಸಾಗಿಸುತ್ತಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯ ರೂವಾರಿ...
2000 ದಶಕದ ಆದಿಭಾಗದಲ್ಲಿ, ಹಿಂದಿನ ದುರ್ಬಲ ಮಾಹಿತಿ ಹಕ್ಕು ಕಾಯ್ದೆಯನ್ನು ರದ್ದುಪಡಿಸಿ, ಮತ್ತಷ್ಟು ಬಲಯುತವಾದ ಕಾಯಿದೆಯನ್ನು ಮಹಾರಾಷ್ಟ್ರ ಸರಕಾರವು ಜಾರಿಗೆ ತರುವಂತೆ ಮಾಡುವಲ್ಲಿ ಅಣ್ಣಾ ಹಜಾರೆಯವರ ಹೋರಾಟವೇ ಪ್ರಧಾನ ಪಾತ್ರ ವಹಿಸಿತ್ತು. ಇಂದು ಇದೇ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಕೇಂದ್ರೀಯಮಟ್ಟದಲ್ಲಿಯೂ ಜಾರಿಗೊಳಿಸಲಾಗಿ, ಹಲವಾರು ಹಗರಣಗಳು ಹೊರಬರಲು ಕಾರಣವಾಗುತ್ತಿರುವುದು ಸುಳ್ಳೇನಲ್ಲ.
ಗ್ರಾಮವನ್ನು ಬೆಳಗಿದ 'ಪದ್ಮಭೂಷಣ'...
ಮಹಾರಾಷ್ಟ್ರ ಅಹಮದ್‌ನಗರ ಜಿಲ್ಲೆಯ ರಾಲೆಗಣ ಸಿದ್ಧಿ ಎಂಬ ಗ್ರಾಮವನ್ನು ಮದ್ಯ ಮುಕ್ತವಾಗಿ, ಶ್ರಮದಾನದ ಮೂಲಕ ಜನರನ್ನು ಸೇರಿಸಿಕೊಂಡು ಕಾಲುವೆಗಳು, ಸಣ್ಣ ಪುಟ್ಟ ನಾಲೆಗಳು, ನೀರಿನ ಟ್ಯಾಂಕುಗಳು ಮತ್ತು ಶಾಲೆ ಮುಂತಾದವನ್ನು ನಿರ್ಮಿಸಿ, ಅತ್ಯಂತ ಸಮೃದ್ಧವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಿಸಾನ್ ಬಾಪಟ್ ಬಾಬುರಾವ್ ಹಜಾರೆಯವರ ಕೊಡುಗೆ ಪರಿಗಣಿಸಿ ಕೇಂದ್ರ ಸರಕಾರವು ಇದೇಹಜಾರೆಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.
ಅವರಿಗೆ ಪದ್ಮಭೂಷಣ, 1990ರಲ್ಲಿ ಪದ್ಮಶ್ರೀ, 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (ಸ್ವತಃ ರಾಜೀವ್ ಗಾಂಧಿ ಕೈಯಿಂದ), ವಿಶ್ವ ಬ್ಯಾಂಕ್ ಪ್ರಶಸ್ತಿ ಮುಂತಾದವುಗಳೆಲ್ಲವೂ ಸಂದಿವೆ.
ಜೈಲಿಗಟ್ಟಿದರೂ ಜನ ಬೆಂಬಲದಿಂದ ಹೊರಬಂದರು...
1999 ರಲ್ಲಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದಡಿ ಪವಾರ್ ಮತ್ತೆ ಅಧಿಕಾರಕ್ಕೆ ಬಂದಾಗ ಹಜಾರೆ ಅವರ ಬೆನ್ನು ಬಿಡಲಿಲ್ಲ. ಮೂರು ಮಂದಿ ಎನ್‌ಸಿಪಿ ಸಚಿವರ ವಿರುದ್ಧ ತಮ್ಮಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ, ಸರಕಾರವನ್ನು ನಡುಗಿಸಿದ್ದರು. ಮುಖ್ಯವಾಗಿ ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿನ ಅವ್ಯವಹಾರವಿದು. ಕೊನೆಗೆ ಸುರೇಶ್ ಜೈನ್, ನವಾಬ್ ಮಲಿಕ್ ಮತ್ತು ವಿಜಯ್ ಗವಿಟ್ ಎಂಬ ಮೂವರು ಸಚಿವರು ಪದತ್ಯಾಗ ಮಾಡಬೇಕಾಯಿತು. ಉಪವಾಸಸತ್ಯಾಗ್ರಹದಿಂದಾಗಿ ಸರಕಾರವು ವರ್ಗಾವಣೆಗೆ ಹೊಸ ನೀತಿಯೊಂದನ್ನು ಜಾರಿಗೊಳಿಸಬೇಕಾಯಿತು. ಆದರೆ, ಸೇಡು ತೀರಿಸಿಕೊಂಡ ಸರಕಾರ, ಹಜಾರೆ ಅವರು ನಡೆಸುತ್ತಿರುವ ಟ್ರಸ್ಟ್‌ನಲ್ಲೇ ಅವ್ಯವಹಾರ ನಡೆದಿದೆ ಎಂದು ಕೇಸು ಜಡಿಯಿತು. ಹಜಾರೆ ಜೈಲಿಗೂ ಹೋದರು. ಆದರೆ ಜನರ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಸರಕಾರವು ಯಾವುದೇ ಷರತ್ತು ಒಡ್ಡದೆ ಅವರನ್ನು ಬಿಡುಗಡೆಗೊಳಿಸಬೇಕಾಯಿತು.
ಇಂಥ ಸನ್ಯಾಸಿಯಂತಹಾ ಜೀವನ ನಡೆಸುತ್ತಿರುವ,ಭ್ರಷ್ಟಾಚಾರ-ವಿರೋಧಿಹೋರಾಟ ಎಂದಾಕ್ಷಣೆ ಕಣ್ಣಮುಂದೆ ನೆನಪಾಗುವ ಅಣ್ಣಾ ಹಜಾರೆ ಪ್ರತಿಭಟನೆಗೆ ಇಳಿದರೆಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಾರೆ.ದೇಶಾದ್ಯಂತ ಜನಾಂದೋಲನ ಸೃಷ್ಟಿಸಿ ಸರಕಾರವನ್ನು ನಡುಗಿಸುವ ಶಕ್ತಿ ಇರುವ ಏಕೈಕ ವ್ಯಕ್ತಿ ಎಂಬುದನ್ನು ಎಲ್ಲ ರಾಜಕಾರಣಿಗಳೂ ಪಕ್ಷಭೇದವಿಲ್ಲದೆ ಒಪ್ಪಿಕೊಳ್ಳುತ್ತಾರೆ.
ಈಗ ಲೋಕಪಾಲ ಮಸೂದೆಯ ಹೋರಾಟದಲ್ಲಿ ಜಯ ಗಳಿಸದೆ, ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದು ಪಣ ತೊಟ್ಟಿದ್ದಾರೆ ಹಜಾರೆ. 'ನನಗಾಗಿ ರೋದಿಸಲು ನನಗೆ ಯಾವುದೇ ಕುಟುಂಬ ಇಲ್ಲ. ಹೀಗಾಗಿ ಸಾವಿಗೆ ಹೆದರುವುದಿಲ್ಲ. ನನ್ನಹತ್ಯೆಗೆ ಮಹಾರಾಷ್ಟ್ರದಲ್ಲಿ ಹಿಂದೊಮ್ಮೆ 35 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದರು. ಈಗಿನ ಈ ಯುವ ಜನಾಂಗದವರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬೆಂಬಲ ದೊರೆಯುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಬನ್ನಿ, ಗುರಿಮುಟ್ಟುವವರೆಗೆ ಹೋರಾಡೋಣ' ಎಂದಿದ್ದಾರೆ ಅಣ್ಣಾ ಹಜಾರೆ. ಟ್ವಿಟ್ಟರ್, ಫೇಸ್‌ಬುಕ್ ಮುಂತಾಗಿ ಆನ್‌ಲೈನ್ ಮಾಧ್ಯಮಗಳಲ್ಲಿಯೂ ಅಣ್ಣಾ ಹಜಾರೆಗೆ ಬೆಂಬಲ ಹೆಚ್ಚುತ್ತಿದೆ. ಸುದ್ದಿ ಚಾನೆಲ್‌ಗಳೆಲ್ಲವೂ ಅಭೂತಪೂರ್ವವಾಗಿ ಬೆಂಬಲಕ್ಕೆ ನಿಂತಿವೆ.ಎಲ್ಲೆಲ್ಲಿಂದಲೂ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜನಾಂದೋಲನವೊಂದು ರೂಪುಗೊಳ್ಳುತ್ತಿದೆ. ಇಂಧದ್ದೊಂದು ಜನಾಂದೋಲನ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ, ಜನರ ಅಭಿವೃದ್ಧಿ ಮರೆತ ಸರಕಾರಗಳಿಗೆ ಖಂಡಿತವಾಗಿಯೂ ಕಂಟಕಪ್ರಾಯವಾಗಲಿದೆ. ಈಜಿಪ್ಟ್, ಟ್ಯುನಿಷಿಯಾ, ಸಿರಿಯಾ, ಲಿಬಿಯಾ, ಯೆಮೆನ್, ಗಲ್ಫ್ ರಾಷ್ಟ್ರಗಳಲ್ಲಿ ಜನ ಆಳ್ವಿಕೆಯ ವಿರುದ್ಧ ರೊಚ್ಚಿಗೆದ್ದಿರುವ ದೃಶ್ಯಾವಳಿಗಳು ಕಣ್ಮುಂದೆ ಬರುತ್ತಿದೆ.
ಸ್ವಾತಂತ್ರ್ಯ ಬಂದು 62 ವರ್ಷಗಳಾದರೂ ಭ್ರಷ್ಟಾಚಾರವು ವರ್ಷದಿಂದ ವರ್ಷ ಪೆಡಂಭೂತವಾಗಿ ಬೆಳೆಯುತ್ತಿದೆ. ಸಣ್ಣಕೆಲಸವಾಗಬೇಕಿದ್ದರೂ ಲಂಚವಿಲ್ಲದೆ ಕೆಲಸವಾಗುವುದಿಲ್ಲ ಎಂಬ ಪರಿಸ್ಥಿತಿ ಹಲವೆಡೆ ನೋಡುತ್ತಿದ್ದೇವೆ. ಸರಕಾರಗಳು ಕಟ್ಟುನಿಟ್ಟಿನ ಕಾನೂನು ತರಲು ಹಿಂದೇಟು ಹಾಕುತ್ತಿದೆ. ಜನ ಲೋಕಪಾಲ ಮಸೂದೆಯಲ್ಲಿರುವಂತೆ, ಭ್ರಷ್ಟರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿರುವ ಕಾಯಿದೆ ನಮಗೆ ಬೇಕಿದೆ. ಈ ಕುರಿತಾಗಿನ ಅಣ್ಣಾ ಹಜಾರೆಯವರ ಈ ಅಹಿಂಸಾ ಹೋರಾಟವು ಸರಕಾರೀ ಮಟ್ಟದ ಭ್ರಷ್ಟಾಚಾರ ತೊಡೆಯುವಲ್ಲಿ ಪೂರಕವಾಗಲಿ ಎಂಬುದು ನಮ್ಮ ಆಸೆ. ನೀವೇನಂತೀರಿ?

Thursday, April 7, 2011

Support Hazare's fight against corruption

ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು  ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಭ್ರಷ್ಟಾಚಾರವೆಂಬ ಮಹಾಪಿಡುಗು: ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವುರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳುಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.
ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿರೂಪಿಸಿ ಜಾರಿಗೊಳಿಸಲುಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದುಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಇಂದು ಸತ್ಯಾಗ್ರಹ ಆರಂಭಿಸಿದ್ದಾರೆ.
ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ"ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ"ಜನ್ ಲೋಕ್‍ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದನ್ಯಾಯವಾದಿ ಪ್ರಶಾಂತ್ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದುಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ.

Wednesday, April 6, 2011

Lokpal bill

ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ?
* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.
* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.
* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.
* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.
* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.
* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೊಲೀಸ್ ಲಂಚ ಕೇಳಿದರು,ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೋರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.
* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.
* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣಭದ್ರತೆ ದೊರೆಯುತ್ತದೆ.