ನಾವು ಶಾಲೆಯಲ್ಲಿ ಓದುವಾಗ
‘ಮಹಾತ್ಮಾ ಗಾಂಧಿಯನ್ನು ನಾಥುರಾಮ ಗೋಡ್ಸೆ ಎಂಬುವವನು ಗುಂಡಿಕ್ಕಿ ಕೊಂದ’ ಎಂದು ಓದಿದಾಗ ಗೋಡ್ಸೆ ಗೆ ಹಿಡಿಶಾಪ ಹಾಕಿದ್ದೇವೆ. ನಂತರ ನಾಥುರಾಮ ಬರೆದ
“ಗಾಂಧಿಯನ್ನು ನಾನೇಕೆ ಕೊಂದೆ” ಪುಸ್ತಕ ಓದಿ ನಾಥುರಾಮ ಮಹಾನ್ ದೇಶಭಕ್ತ ಎಂದು ಕೆಲವರು ಆತನನ್ನು
ಹೊಗಳಿದ್ದೇವೆ, ಇನ್ನು ಕೆಲವರು ಹತ್ಯೆಯೇ ಎಲ್ಲ ಸಮಸ್ಯೆ ಪರಿಹಾರವಲ್ಲ ಗೋಡ್ಸೆ ದೇಶಭಕ್ತನಾಗಿದ್ದರೂ
ಆತನು ಮಾಡಿದ್ದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಆದರೆ ಅಸಲಿ ವಿಷಯವೆಂದರೆ
ಗಾಂಧಿಯನ್ನು ನಿಜವಾಗಿ ಕೊಂದದ್ದು ಗೋಡ್ಸೆಯಲ್ಲ! ಹೌದು ಇದು ನಿಜ ಗಾಂಧಿಯನ್ನು ಕೊಂದದ್ದು
ಗೋಡ್ಸೆಯಲ್ಲ.ನಾವು ಭಾರತೀಯರು ಸತ್ಯವನ್ನು ಬೇಗ
ಒಪ್ಪುವುದಿಲ್ಲ, ಸುಳ್ಳನ್ನೇ ಸತ್ಯವೆಂದು ನಂಬಿಬಿಡುತ್ತೇವೆ.
ಹಾಗಾದರೆ ಮತ್ಯಾರು ? ಗೋಡ್ಸೆಯೇ ತಾನೇ ಗಾಂಧಿಯನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾನಲ್ಲ? ಕೋರ್ಟ್
ಗಾಂಧಿಯನ್ನು ಗೋಡ್ಸೆಯೇ ಕೊಂದಿದ್ದು ಎಂದು ತೀರ್ಪು ನೀಡಿದೆಯಲ್ಲ? ಹೀಗೆ
ಮುಂತಾದ ಗೊಂದಲಗಳು ನಿಮಗೆ ಹುಟ್ಟಿದ್ದರೆ
ಈ ಲೇಖನವನ್ನು ಪೂರ್ತಿ ಓದಿ.
ಬಿ.ಜಿ ಕೇಸ್ಕರ್ ಎಂಬ ಒಬ್ಬ ಹಿರಿಯ ವಕೀಲರು ಗಾಂಧಿ ಹತ್ಯೆಯ ಪ್ರಕರಣವನ್ನು
ಆಳವಾಗಿ ಅಧ್ಯಯನ ಮಾಡಿ ನಮಗೆ ತಿಳಿಯದ ಹಲವು ವಿಚಾರಗಳನ್ನು” Who Killed Gandhiji? Not Godse Who Then?” ಎಂಬ ಲೇಖನದಲ್ಲಿ ತಿಳಿಸಿದ್ದಾರೆ. ಈ ಲೇಖನದ ಬಹಳಷ್ಟು ಸಂಗತಿಗಳು ಗಾಂಧಿಯನ್ನು
ಕೊಂದದ್ದು ಗೋಡ್ಸೆಯಲ್ಲ ಎಂಬ ಸತ್ಯವನ್ನು ನಂಬುವಂತೆ ಮಾಡುತ್ತವೆ. ಲೇಖನದ ಕುತೂಹಲಕಾರಿ ಮತ್ತು
ನಾವು ಅರಿಯದ ಅಂಶಗಳು ಹೀಗಿವೆ.
1. ಯಾವುದೇ ಒಂದು ಪ್ರಕರಣದಲ್ಲಿ
ವಿಚಾರಣೆ ಆರಂಭವಾಗುವ ಮುನ್ನ ಪ್ರಕರಣದ ಎಲ್ಲ ಸಾಕ್ಷಿದಾರರ ಹೇಳಿಕೆಗಳನ್ನು ಕೋರ್ಟ್ ಗೆ
ಹಾಜರುಪಡಿಸಿ ಆರೋಪಿಗಳಿಗೆ ಅದನ್ನು ಕೊಟ್ಟು ‘ಪಾಟೀ ಸವಾಲು (Cross Examination) ಅವರೇನು ಹೇಳುತ್ತಾರೋ ಅದನ್ನು ದಾಖಲಿಸುಕೊಳ್ಳುವುದು ವಾಡಿಕೆ. ಆದರೆ ಗಾಂಧಿ
ಹತ್ಯಾ ಪ್ರಕರಣದಲ್ಲಿ ಇಬ್ಬರು ಪ್ರತ್ಯಕ್ಷ, ಅತೀ ಮುಖ್ಯ ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು
ಕೋರ್ಟ್ ಗೆ ಕೊಡಲಿಲ್ಲ. ಮುಚ್ಚಿಟ್ಟರು. ಅವರು ಯಾರು ಅವರೇ ಗಾಂಧಿಯ ಸಹಾಯಕಿಯರು. ಗಾಂಧಿಜೀ ಪ್ರಾರ್ಥನಾ ಸಭೆಗೆ ಬರುವಾಗ ಯಾರ ಭುಜಗಳ ಮೇಲೆ ಎರಡು ಕೈ
ಗಳನ್ನಿಟ್ಟು ಬರುತ್ತಿದ್ದರೋ ಆ ಹುಡುಗಿಯರು. ಆ
ಹುಡುಗಿಯರ ಹೇಳಿಕೆ ಏನು ಗೊತ್ತೇ? ‘ಗೋಡ್ಸೆ ಗಾಂಧಿಗೆ ಎರಡು ಕೈಗಳನ್ನು ಎತ್ತಿ ನಮಸ್ಕರಿಸುತ್ತಿದ್ದ
ಅಷ್ಟರಲ್ಲಿ ಮತ್ತೊಬ್ಬ ಖಾದಿಧಾರಿ, ಕುರ್ತಾ ಪೈಜಾಮ ಧರಿಸಿದ್ದವನು ಗೋಡ್ಸೆಯ ಹಿಂದಿನಿಂದ ಬಂದು,
ನಾಥುರಾಮನ ಬಲ ತೋಳ ಕೆಳಗಿನಿಂದ ಗುಂಡು
ಹಾರಿಸಿದ’ ಎಂದು ಹೇಳಿಕೆ ನೀಡಿದ್ದರು. ಆದರೆ ಈ
ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ಗೆ ಕೊಡಲಿಲ್ಲ. ಹತ್ಯೆ ನಡೆದ ಸ್ಥಳದಲ್ಲೇ ಇದ್ದ ಈ ಹುಡುಗಿಯರ
ಹೇಳಿಕೆಗಳನ್ನು ಪರಿಗಣಿಸದೆ ಗೋಡ್ಸೆಯೇ ಕೊಲೆಗಾರ ಎಂದು ತೀರ್ಪು ನೀಡಿರುವುದು ಸರಿಯಲ್ಲ ಅಲ್ಲವೇ?
2. ಗೋಡ್ಸೆ ನಮಸ್ತೆ ಮಾಡಿದ ಮೇಲೆ ಪಿಸ್ತೂಲನ್ನು ತೆಗೆದು ಗುರಿ ಇಡುವ ಮೊದಲೇ,
ಹತ್ತಿರವಿದ್ದ ಅಧಿಕಾರಿ ಅವನನ್ನು ಬಲವಾಗಿ ಹಿಡಿದುಕೊಂಡ, ಮತ್ತೊಬ್ಬ ಅವನ ಹಿಂಬದಿಯ ತಲೆಗೆ
ಬಲವಾಗಿ ಹೊಡೆದ. ಗೋಡ್ಸೆಗೆ ಗಾಯವಾಗಿತ್ತು. ಈ ಕುರಿತು ಪೋಲೀಸರ ವರದಿಯಲ್ಲೇ ಇದೆ. ಪೊಲೀಸರು
ವಶಪಡಿಸಿಕೊಂಡ ಪಿಸ್ತೂಲಿನಲ್ಲಿ ಪೂರ್ತಿ ಬುಲೆಟ್
ಗಳಿದ್ದವು ಆದರೆ ಒಂದೂ ಸಿಡಿಯಲಿಲ್ಲ. ಗೋಡ್ಸೆಯ
ಪಿಸ್ತೂಲು ಚಾಲಿಸಲಿಲ್ಲ!
3. ಗಾಂಧಿ ಹತ್ಯಾ ಪ್ರಕರಣದಲ್ಲಿ ನ್ಯಾಯಮೂರ್ತಿಯಾಗಿದ್ದವರು ಯಾರು ಗೊತ್ತಾ? ಜಿ.ಡಿ
ಖೊಸ್ಲಾ! ನೇತಾಜಿ ಮರಣ ಕುರಿತ ಆಯೋಗದಲ್ಲಿ ನ್ಯಾಯಮೂರ್ತಿಯಾಗಿದ್ದವರು. ನಮ್ಮ ಚಾಚ(?) ನೆಹರೂಗೆ
ಹತ್ತಿರವಾಗಿದ್ದವರು. ಈ ಸಾಹೇಬರು ಹತ್ಯೆಯ ಪ್ರತ್ಯಕ್ಷ ಸಾಕ್ಷಿಗಳನ್ನು ಹಾಜರುಪಡಿಸಿ ಎಂದು
ಆದೇಶಿಸಲಿಲ್ಲ. ನಿಷ್ಪಕ್ಷಪಾತ ವಿಚಾರಣೆ ಈ ಪ್ರಕರಣದಲ್ಲಿ ನಡೆಯಲಿಲ್ಲ.
4. ಗಾಂಧಿ ಹತ್ಯೆಯಾಗುವ 10 ದಿನಗಳ ಮುನ್ನ ಅಂದರೆ ಜನವರಿ 20 1948 ರಂದು ಬಿರ್ಲಾ ಭವನ(ಗಾಂಧಿ
ಹತ್ಯೆಯಾದ ಸ್ಥಳ) ದಲ್ಲಿ ಬಾಂಬ್ ಸ್ಪೋಟವಾಗಿತ್ತು . ಈ ಘಟನೆಯಾದ ನಂತರ ಬಿರ್ಲಾ ಭವನದಲ್ಲಿ
ಗಾಂಧಿಯವರ ರಕ್ಷಣೆಗೆಂದು ರಕ್ಷಣಾ ಪಡೆಯ ತುಕಡಿಯೊಂದನ್ನು ನೇಮಿಸಲಾಗಿತ್ತು. ಇದಾಗ್ಯೂ ಗಾಂಧಿಯ
ಕೊಲೆ ಹೇಗಾಯಿತು? ಇದರಲ್ಲಿ ಸರ್ಕಾರದ ಹುನ್ನಾರವಿತ್ತೆ? ಬಾಂಬ್ ಸ್ಪೋಟದಲ್ಲಿ ಆರೋಪಿಯಾಗಿ ಬಂಧಿತನಾದ
ಮದನ್ ಲಾಲ್ ಪಹವಾ ಎಂಬುವವನ್ನು ಹತ್ತು
ದಿನವಾದರೂ ವಿಚಾರಣೆ ಮಾಡಿರಲಿಲ್ಲ.
5. ಇನ್ನೊಂದು ಬಹಳ ಆಶ್ಚರ್ಯಕರ ವಿಚಾರವೆ೦ದರೆ ಗಾಂಧಿ ಹತ್ಯೆಯಾದ ನಂತರ ಶವವನ್ನು
ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿಲ್ಲ. ಮರಣೋತ್ತರ ಪರೀಕ್ಷೆ ಮುಖ್ಯವೆಂದು ಪೊಲೀಸರಿಗೆ ತಿಳಿಯಲಿಲ್ಲವೇ? ಆಗಿನ
ಕಾಲದಲ್ಲಿ ಗಾಂಧಿ ಬಹಳಷ್ಟು ಪ್ರಸಿದ್ದರಾಗಿದ್ದರು. Gandhi was the most Popular Man after the god during those
days. ಗಾಂಧಿ ಹೇಗೆ ಸತ್ತರು ಎಂಬುದು ಮರಣೋತ್ತರ ಪರೀಕ್ಷೆಯಿಂದ
ತಿಳಿಯುತ್ತಿತ್ತು. ಏಕೆ ಮಾಡಲಿಲ್ಲ ಎಂಬುದೇ ಪ್ರಶ್ನೆ?
6. ನಾಥುರಾಮ ಗೋಡ್ಸೆ ಉಪಯೋಗಿಸಿದ ಪಿಸ್ತೂಲ್ ‘ಇಟಾಲಿಯನ್ ಪಿಸ್ತೂಲ್’. ಗಾಂಧಿಯ
ಹತ್ಯೆಯ ಸಂದರ್ಭದಲ್ಲಿ ಇದ್ದ ಪೋಲಿಸ್ ಅಧಿಕಾರಿ ‘ ನಾನು ಗುಂಡಿನ ಶಬ್ದ ಕೇಳಿದೆ, ಆ ಶಬ್ದ ಬಂದತ್ತ
ತಿರುಗಿ ನೋಡಿದೆ. ಗೋಡ್ಸೆಯ ಪಿಸ್ತೂಲ್ ಹೊಗೆಯಾಡುತ್ತಿತ್ತು.’ ಎಂದು ಹೇಳಿಕೆ ನೀಡಿದ್ದಾನೆ. ಆದರೆ
ಅಸಲಿ ವಿಚಾರ ಗೊತ್ತೇ? ಇಟಾಲಿಯನ್ ಪಿಸ್ತೂಲ್ ಶಬ್ದವನ್ನೂ ಮಾಡುವುದಿಲ್ಲ ಮತ್ತು ಹೊಗೆಯನ್ನು
ಬಿಡುವುದಿಲ್ಲ!
7. ಅಪರಾಧ ಸ್ಥಳ, ಸಂಭವಗಳನ್ನು ಗುರುತು ಹಚ್ಚಿ ದಾಖಲೆ ಬರೆಯುವ ಪದ್ದತಿಗೆ “ ಪಂಚನಾಮೆ
ಅಥವಾ ಮಹಜರು”( Inquest) ಎಂದು
ಕರೆಯುತ್ತಾರೆ. ಪಂಚನಾಮೆಯ ಪ್ರಕಾರ ಮೂರು ಗುಂಡುಗಳು ಗಾಂಧಿಯ ಶರೀರದ ಎಡಭಾಗದ ಕೆಳಗಿನಿಂದ
ಹಾದುಹೋಗಿ, ಪಕ್ಕೆಲಬುಗಳನ್ನು ಒಡೆದುಕೊಂಡು ಶರೀರದ ಆಚೆಗೆ ಬಲಗಡೆಯ ಮೇಲುಭಾಗದಿಂದ ತೂರಿ
ಹೋಗಿದ್ದವು. ಆದರೆ ಅಪರಾಧಶೋಧ ಶಾಸ್ತ್ರ ತಜ್ಞ( Ballistic expert) ಗಾಂಧಿ
ಶರೀರದೊಳಗೆ 4 ಗುಂಡುಗಳು ಹೊಕ್ಕಿದವು ಎಂದಿದ್ದಾನೆ. ಇಲ್ಲಿ ಗೊಂದಲವೇಕೆ? ಮೂರು ಗುಂಡುಗಳೋ
ನಾಲ್ಕು ಗುಂಡುಗಳೋ? ಗಾಂಧಿಯ ಅಂತ್ಯ ಸಂಸ್ಕಾರ ಮಾಡಲು ಶರೀರವನ್ನು ತೊಳೆಯುವಾಗ ಅವರ ಪಂಚೆಯಲ್ಲಿ
ಖಾಲಿ ಗುಂಡೊಂದು ಹೊರಬಿದ್ದಿತ್ತು ಆದರೆ ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ. ಇದು ಇಟಾಲಿಯನ್ ಪಿಸ್ತೂಲಿನ ಗುಂಡಾಗಿರಲಿಲ್ಲ!
ಹಾಗಾದರೆ ಗಾಂಧಿಯನ್ನು
ಕೊಂದದ್ದು ಯಾರು ಏಕೆ ಕೊಂದರು?
ಗಾಂಧಿಯನ್ನು ಕೊಂದದ್ದು
ಇಟಾಲಿಯನ್ ಪಿಸ್ತೂಲ್ ಪ್ರಯೋಗಿಸಿದ ಗೋಡ್ಸೆಯಲ್ಲ. ಗಾಂಧಿಯ ಸಹಾಯಕಿ ಹೇಳಿದ ಹಾಗೆ ಖಾದಿಧಾರಿ,
ಕುರ್ತಾ ಧರಿಸಿದ್ದವನು. ಇವನು ಪ್ರಯೋಗಿಸಿದ್ದು ರಿವಾಲ್ವರ್. ಆತ 1978ರ ವರೆಗೂ ಪುಣೆಯಲ್ಲಿ ಓಡಾಡಿಕೊಂಡಿದ್ದ. ನಿರಪರಾಧಿಯಂತೆ! ( ಆ ಖಾದಿಧಾರಿ ಯಾರು ಎಂಬುದಕ್ಕೆ
ಬಿ,ಜಿ ಕೇಸ್ಕರ್ ಅವರ ಬಳಿಯೂ ಉತ್ತರವಿಲ್ಲ, ನನ್ನಲ್ಲೂ ಅದಕ್ಕೆ ಉತ್ತರವಿಲ್ಲ).
ಗಾಂಧಿಯನ್ನು ಯಾಕಾಗಿ
ಕೊಂದರು? ದೇಶ ವಿಭಜನೆ, ಗಾಂಧಿಯ ನೀತಿಗಳನ್ನು ವಿರೋಧಿಸಿದ್ದ ಗೋಡ್ಸೆಗೆ ಗಾಂಧಿಯನ್ನು ಕೊಲ್ಲಲು
ನಿರ್ಧಿಷ್ಟ ಕಾರಣವಿದ್ದವು. ಗೋಡ್ಸೆ ಕೊಲೆ ಮಾಡಿಲ್ಲ ಎಂದ ಮೇಲೆ ಮತ್ತೊಬ್ಬರು ಗಾಂಧಿಯನ್ನು
ಕೊಂದದ್ದು ಯಾಕೆ?
ಉತ್ತರವಿಷ್ಟೇ. ನೆಹರೂಗೆ
ಗಾಂಧಿ ಸಾಯುವುದು ಬೇಕಾಗಿತ್ತು. ಗಾಂಧಿ ನೆಹರೂಗೆ ತೊಡಕಾಗಿದ್ದರು. ಸ್ವಾತಂತ್ರ್ಯ ಬಂದ ನಂತರ
ಕಾಂಗ್ರೆಸ್ ಮಾಡಿದ ಪಾಪಗಳಲ್ಲಿ ನೆಹರೂದೇ ಸಿಂಹ ಪಾಲು.
ಸ್ವಾತಂತ್ರ್ಯ ಪಡೆದ
ನಂತರ ಗಾಂಧಿ ಪ್ರಾರ್ಥನಾ ಸಭೆಯ ಭಾಷಣಗಳಲ್ಲಿ “ ಕಾಂಗ್ರೆಸ್ ಸ್ವಾತಂತ್ರ್ಯ ಆಂದೋಲನದ ಸಂಸ್ಥೆ,
ಅದರ ಗುರಿ ಈಡೇರಿದೆ ಇನ್ನು ಕಾಂಗ್ರೆಸ್ಸನ್ನು ವಿಸರ್ಜಿಸುವುದು ಸೂಕ್ತ” ಎನ್ನುತಿದ್ದರು. ಇದು
ನೆಹರೂಗೆ ಇಷ್ಟವಿರಲಿಲ್ಲ. ಕಾಂಗ್ರೆಸ್ ಪಕ್ಷ ವಿಭಜಿಸಿ ಬೇರೆ ಪಕ್ಷ ಕಟ್ಟಿದರೆ ಅಲ್ಲಿ ತನ್ನ ಬೇಳೆ
ಬೇಯುವುದಿಲ್ಲ ಎಂದು ನೆಹರೂಗೆ ಗೊತ್ತಿತ್ತು. ಹಾಗೆಯೇ ಗಾಂಧಿ ಸುಮ್ಮನಿರುವ ವ್ಯಕ್ತಿಯಲ್ಲ.
ಸರ್ಕಾರದ ನಿರ್ಧಾರವನ್ನೇ ತಿರಸ್ಕರಿಸಿ ಪಾಕಿಸ್ತಾನಕ್ಕೆ 55 ಕೋಟಿ ಕೊಡಬೇಕೆಂದು ಉಪವಾಸ ಕುಳಿತವರು
ನಮ್ಮ ಮಹಾತ್ಮಾ ಗಾಂಧಿ. ಗಾಂಧಿ ತಮ್ಮ ಹಠ ಸಾಧಿಸಲು ಏನಾದರೂ ಮಾಡುತ್ತಾರೆ ಎಂಬ ಸಂಗತಿ ಗಾಂಧಿಯ
ಡೋಂಗಿ ಶಿಷ್ಯ ನೆಹರೂ ತಿಳಿದಿತ್ತು. ಹಾಗಾಗಿ ಗಾಂಧಿ ಬದುಕುವುದು ನೆಹರೂಗೆ ಬೇಡವಾಗಿತ್ತು. ಈ
ಕಾರಣಕ್ಕೆ ತನ್ನ ಕಾಂಗ್ರೆಸ್ ಪಟಾಲಂನನ್ನು ಬಿಟ್ಟು ಗಾಂಧಿಯನ್ನು ಮುಗಿಸುವ ನಿರ್ಧಾರ ಮಾಡಿದರು
ನಮ್ಮ ಚಾಚಾ ನೆಹರೂ. ಗೋಡ್ಸೆಯೇ ಗಾಂಧಿಯನ್ನು ಕೊಲ್ಲುವಲ್ಲಿ ಯಶಸ್ವಿಯಾದರೆ ಸರಿ ಇಲ್ಲವಾದರೆ ನಾವೇ
ಮುಗಿಸಿಬಿಡುವುದು ಇದು ನೆಹರೂ ಮತ್ತು ಪಟಾಲಂನ ಯೋಜನೆಯಾಗಿತ್ತು. ಕೊಲೆಯಾದ ನಂತರ ಆ ಅಪರಾಧವನ್ನು
ಹಿಂದೂ ಸಂಘಟನೆಗಳ ಮೇಲೆ ಹೊರೆಸಿ, ಹಿಂದೂ ಸಂಘಟನೆಗಳನ್ನು ಶಾಶ್ವತವಾಗಿ ಅಪರಾಧಿ ಸ್ಥಾನದಲ್ಲಿ
ಕೂರಿಸುವುದು ಇದು ನೆಹರೂವಿನ ಹುನ್ನಾರ.
ಗೋಡ್ಸೆ ಹರೆಕೆಯ ಕುರಿಯಾದನೆ?
ಗಾಂಧಿಯ ನಿರ್ಧಾರಗಳಿಂದ
ಬೇಸತ್ತಿದ್ದ ಗೋಡ್ಸೆ ಗಾಂಧಿಯನ್ನು ಕೊಲ್ಲಬೇಕೆಂದು ನಿಶ್ಚಯಿಸಿದ್ದ. ಈ ನಿರ್ಧಾರ ಕೈಗೊಂಡ
ದಿನದಿಂದಲೇ ಅವನು ಸಾವಿನ ದಿನಗಳನ್ನು ಎಣಿಸುತ್ತಿದ್ದ.
ನಾನು ಗಾಂಧಿಯನ್ನು ಕೊಲ್ಲಲು ಸಿದ್ದನಾಗಿದ್ದೆ ಆದರೆ ನಾನು ಗುಂಡು ಹಾರಿಸಲಿಲ್ಲ.
ಪ್ರತ್ಯಕ್ಷ ಸಾಕ್ಷಿಗಳಾದ ಆ ಇಬ್ಬರು ಹುಡುಗಿಯರನ್ನು ವಿಚಾರಿಸಿ ಎಂದು ಎಂದು ಏಕೆ ಗೋಡ್ಸೆ
ಕೇಳಲಿಲ್ಲ? ಮತ್ತು ಈ ಕುರಿತಾಗಿ ಅವನು ನೀಡಿದ ಸುದೀರ್ಘ ಹೇಳಿಕೆಯಲ್ಲಿ ಏಕೆ ಉಲ್ಲೇಖವಿಲ್ಲ?
ನೆಹರೂವಿನ ಕುತಂತ್ರಕ್ಕೆ ಒಳಗಾಗಿ ಗೋಡ್ಸೆ ಹರಕೆಯ ಕುರಿಯಾದನೆ? ಗೋಡ್ಸೆ ಕೃತ್ಯಕ್ಕೆ ತಯಾರಾಗಿ
ಹುತಾತ್ಮನಾಗಲು ಸಿದ್ದನಾಗಿದ್ದ. ಒಟ್ಟಿನಲ್ಲಿ ಕೆಲಸ ಮುಗಿಯಿತಲ್ಲ ಯಾರು ಮಾಡಿದರೇನು? ಹುತಾತ್ಮ
ಪದವಿಯನ್ನು ನಾನೇಕೆ ತಪ್ಪಿಸಿಕೊಳ್ಳಬೇಕು? ಎಂದು ಯೋಚಿಸಿದ್ದನೆ?ಮಹಾನ್ ದೇಶ ಭಕ್ತನಾದ ಗೋಡ್ಸೆ
ಭಗತ್ ಸಿಂಗ್, ಅಜಾದ್, ಧಿಂಗ್ರಾರಂತೆ ತನ್ನ ನೇಣನ್ನು ‘ರಾಷ್ಟ್ರರ್ಪಣೆ’ ಎಂದು ಗೋಡ್ಸೆ ಭಾವಿಸಿದ್ದನೆ? ಪ್ರಶ್ನೆಗಳು ಹಲವು ಆದರೆ ಉತ್ತರ ಅಸ್ಪಷ್ಟ. ಒಂದಂತೂ ನಿಜ
ಗಾಂಧಿಯನ್ನು ಕೊಂದದ್ದು ಗೋಡ್ಸೆಯಲ್ಲ!
ರವಿತೇಜ ಶಾಸ್ತ್ರೀ
ವಿಶೇಷ ಸೂಚನೆ: ಈ ಲೇಖನ
ಓದಿದ ನಂತರ ನಿಮಗೆ ಕೆಲವು ಗೊಂದಲಗಳು ಉಂಟಾಗಬಹುದು. ತಾನೂ ಕೊಲ್ಲದಿದ್ದರೂ ಗೋಡ್ಸೆ ಏಕೆ ತಾನೇ
ಕೊಲೆ ಮಾಡಿದನೆಂದು ಒಪ್ಪಿಕೊಂಡ? ರಿವಾಲ್ವರ್ನಿಂದ ಗಾಂಧಿಗೆ ಗುಂಡು ಹಾರಿಸಿದ ವ್ಯಕ್ತಿ ಯಾರು?
ಆತನ ಹೆಸರೇನು? ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಈ
ಲೇಖನದಲ್ಲಿರುವ ಸತ್ಯಗಳನ್ನು ನಂಬುವುದು ಬಿಡುವುದು ಓದುಗರಿಗೆ ಬಿಟ್ಟ ವಿಚಾರ.
ಆಕರ ಗ್ರಂಥ: 1.
ನಿಜವಾಗಿ ಗಾಂಧಿಯನ್ನು ಕೊಂದವರು ಯಾರು?- ಕೆ.ಎಸ್ ನಾರಾಯಣಚಾರ್ಯ
2. Who Killed Gandhi? Not Godse. Who
then- By B.G Keskar