ಫೆಬ್ರವರಿ 4ರಂದು ವಿಶ್ವದ ಐ.ಟಿ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಹೊಸ ಸಿ.ಇ,ಓ ಆಗಿ
ಭಾರತೀಯ ಮೂಲದವರಾದ ಸತ್ಯ ನಾಡೆಲ್ಲ ಅವರನ್ನು ನೇಮಿಸಿತು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್
ಸತ್ಯ ನಾಡೆಲ್ಲ ನಮ್ಮ ಕಂಪನಿಗೆ ನೀಡಿರುವ ಕೊಡುಗೆ ಮತ್ತು ಅವರ ಪ್ರತಿಭೆಯನ್ನು ಪರಿಗಣಿಸಿ
ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ನಮ್ಮ ಭಾರತೀಯ ಮಾಧ್ಯಮಗಳು ಸತ್ಯ
ನಾಡೆಲ್ಲ ಭಾರತದ ಹೆಮ್ಮೆ ಎಂದು ಬಣ್ಣಿಸಿದವು. ಆದರೆ ಇಲ್ಲಿ ನಾವು ಪರಾಮರ್ಶಿಸುವ ವಿಷಯವೆಂದರೆ
ಸತ್ಯ ನಾಡೆಲ್ಲರಂತ ಪ್ರತಿಭಾವಂತರು ಭಾರತದಲ್ಲೇಕೆ ಯಶಸ್ವಿಯಾಗಲಿಲ್ಲ? ಇದು ನಮ್ಮ ವ್ಯವಸ್ಥೆಯ
ದೌರ್ಬಲ್ಯವಲ್ಲವೇ? ಸತ್ಯ ನಾಡೆಲ್ಲ ಎಷ್ಟು ಪ್ರತಿಭಾವಂತರೆಂದರೆ ಅವರು ಮುಖ್ಯಸ್ಥರಾದ ಪ್ರತಿ ವಿಭಾಗದಲ್ಲೂ ಅವರು ಮೈಕ್ರೋಸಾಫ್ಟ್ ಗೆ ಹೆಚ್ಚು
ಲಾಭ ತಂದುಕೊಟ್ಟಿದ್ದಾರೆ ಹಾಗಾಗಿಯೇ ಬಿಲ್
ಗೇಟ್ಸ್ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು. ಇಂತಹ ವ್ಯಕ್ತಿ ಭಾರತದಲ್ಲೇ ನೆಲಸಿ,
ಅವರಿಗೆ ವಿಪುಲ ಅವಕಾಶಗಳು ದೊರಕಿ ಮೈಕ್ರೋಸಾಫ್ಟ್ ನಂತಹ ಕಂಪನಿಯನ್ನು ಭಾರತದಲ್ಲಿ ಹುಟ್ಟುಹಾಕಿದಿದ್ದರೆ
ಭಾರತ ಐ.ಟಿ ಕ್ಷೇತ್ರದಲ್ಲಿ ಅಮೆರಿಕಾಕ್ಕೆ ಸರಿಸಮನಾಗಿ ನಿಲ್ಲುತ್ತಿರುತ್ತಿಲ್ಲವೇ? ಏಕೆ ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ನಮಗೆ ಸಿಗಲಿಲ್ಲ?
ನಾಡೆಲ್ಲ ಭಾರತದಲ್ಲಿ ಯಶಸ್ವಿಯಾಗದೇ ಇರುವುದಕ್ಕೆ ಕಾರಣ
ನಮ್ಮ ವ್ಯವಸ್ಥೆ, ನಮ್ಮ ವ್ಯವಸ್ಥೆಯ ದೌರ್ಬಲ್ಯ. ನಮ್ಮ ವ್ಯವಸ್ಥೆ ಸತ್ಯ ನಾಡೆಲ್ಲರಂತ
ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಅವರಿಗೆ ವಿಪುಲ ಅವಕಾಶ ನೀಡಿದಿದ್ದರೆ, ಸತ್ಯ ನಾಡೆಲ್ಲ ನಮ್ಮ ಆಸ್ತಿಯಾಗುತ್ತಿದ್ದರು. ಆದರೆ ನಮ್ಮ ಸರ್ಕಾರಗಳು ಐ.ಟಿ ಮತ್ತು ವೈಜ್ಞಾನಿಕ
ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡದೇ ಇರುವುದರಿಂದ ಬಹಳಷ್ಟು ಪ್ರತಿಭಾವಂತರನ್ನು ಭಾರತ ಇಂದು ಕಳೆದುಕೊಳ್ಳುತ್ತಿದೆ.
ನಮ್ಮ ಸರ್ಕಾರಗಳು ಯುವಕರನ್ನು ಪ್ರೋತ್ಸಾಹಿಸಿ,
ಐ.ಟಿ ಉದ್ಯಮಗಳನ್ನು ತೆರೆಯಲು ವಿಪುಲ ಅವಕಾಶಗಳನ್ನು ಕೊಟ್ಟಿದ್ದಿದ್ದೆರೆ ಇಂದು ಆಪಲ್, ಐ.ಬಿ.ಎಂ,
ಮೈಕ್ರೋಸಾಫ್ಟ್, ಸ್ಯಾಮ್ ಸ್ಯಾಂಗ್ ಕಂಪೆನಿಗಳನ್ನು ಮೀರಿಸುವಂತಹ ಕಂಪನಿಗಳು ಭಾರತದಲ್ಲಿರುತ್ತಿದ್ದವು.
ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕಾ ಭಾರತೀಯರ
ಮೇಲೆ ಅವಲಂಬಿತವಾಗಿದೆ. 3.22 ಮಿಲಿಯನ್ ಭಾರತೀಯರು
ಅಮೆರಿಕಾದಲ್ಲಿದ್ದಾರೆ. ಅಮೆರಿಕಾದಲ್ಲಿರುವ 38% ವೈದ್ಯರು, 12% ವಿಜ್ಞಾನಿಗಳು, 36% ನಾಸಾ
ಉದ್ಯೋಗಿಗಳು, 34% ಮೈಕ್ರೋಸಾಫ್ಟ್ ಉದ್ಯೋಗಿಗಳು, 28% ಐ.ಬಿ.ಎಂ ಉದ್ಯೋಗಿಗಳು ಭಾರತದವರು.
ಅಮೇರಿಕಾದ ಆದಾಯದಲ್ಲಿ ಭಾರತೀಯರ ಕೊಡುಗೆಯು ಇದೆ. ಈ ವಿಷಯ ಅರಿತ ಅಮೇರಿಕಾ ಅಧ್ಯಕ್ಷ ಒಬಾಮ ನಾವು ಭಾರತೀಯರನ್ನು ನೋಡಿ ಕಲಿಯಬೇಕೆಂದು ತಮ್ಮ
ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಭಾರತೀಯರು ಸರಸ್ವತಿ ಪುತ್ರರು. ನಾವು ಸರಸ್ವತಿಯನ್ನು ವಿದ್ಯಾ ದೇವಿಯೆಂದು ಪೂಜಿಸುತ್ತೇವೆ.
ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು ಭಾರತದಲ್ಲಿ. 4ನೇ ನಳಂದಾ ವಿಶ್ವವಿದ್ಯಾಲಯದಲ್ಲಿ 4500 ಕ್ಕೂ ಹೆಚ್ಚು
ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಇತರ ದೇಶಗಳು ಕಣ್ತೆರೆಯುವ ಮೊದಲೇ ಭಾರತ ಜಗತ್ತಿಗೆ ಶಿಕ್ಷಣದ
ಬೆಳಕನ್ನು ನೀಡಿತ್ತು. ಮುಂದೆ ಭಾರತವನ್ನು ಆಕ್ರಮಿಸಿದ ಬ್ರಿಟಿಷರು ನಮ್ಮ ಸ್ವಾಭಿಮಾನವನ್ನು
ಹೊಸಕಿ ಹಾಕಲು ನಮ್ಮ ಚರಿತ್ರೆಯನ್ನೇ ತಿರುಚಿದರು.
ನಮ್ಮ ದೇಶವನ್ನು ಬಹುಪಾಲು ಆಳಿದ
ಕಾಂಗ್ರೆಸ್ ಜನರಲ್ಲಿ ಸ್ವಾಭಿಮಾನವನ್ನು ಬೆಳೆಸುವ ಪ್ರಯತ್ನವನ್ನೇ ಮಾಡಲಿಲ್ಲ. ಯುವಕರಿಗೆ ವಿಪುಲ
ಅವಕಾಶ ನೀಡಲಿಲ್ಲ. ಜಾತಿಯ ಆಧಾರದ ಮೇಲೆ ಮೀಸಲಾತಿ ನೀಡಿ ಪ್ರತಿಭಾವಂತರ ಆಸೆಗಳಿಗೆ ಮಣ್ಣೆರಚಿತು. ಮುಂದೆ ಅಟಲ್ ಬಿಹಾರಿ ವಾಜಪೇಯಿ ಮೀಸಲಾತಿಯನ್ನು ತೆಗೆಯಲು ಮುಂದಾದ ಕಾಂಗ್ರೆಸ್ ವಿರೋಧಿಸಿತು. ಕೆಳ ವರ್ಗದ ಜನರನ್ನು ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿತು. ಪ್ರತಿಭೆಯಿದ್ದ ಯುವಜನತೆ
ಅವಕಾಶಕ್ಕಾಗಿ ಪರದೇಶಗಳಿಗೆ ಹೋಗಬೇಕಾಗಿ ಬಂತು. ಸತ್ಯ ನಾಡೆಲ್ಲ ರಂತ ಪ್ರತಿಭಾವಂತರು ಇದೇ
ಹಾದಿಯನ್ನು ಅನುಸರಿಸದರು. ಇದಕ್ಕೆ ಪರಿಹಾರ ಬೇಕೆಂದರೆ ನರೇಂದ ಮೋದಿಯಂತ ದೂರ ದೃಷ್ಟಿ ಉಳ್ಳ ನಾಯಕರು ಪ್ರಧಾನಿಯಾಗಬೇಕು.
ಸುಮ್ಮನೆ ಮಾತಿನಲ್ಲಿ ಬೊಗಳೆ ಬಿಡುವ ನಾಯಕರ
ನಡುವೆ ನರೇಂದ್ರ ಮೋದಿ ವಿಭಿನ್ನವಾಗಿ ಕಾಣುತ್ತಾರೆ. ಮೋದಿ ಭಾರತದಲ್ಲಿ ಮೈಕ್ರೋಸಾಫ್ಟ್, ಆಪಲ್
ನಂತಹ ಕಂಪನಿ ಆರಂಭವಾಗಬೇಕೆಂದು ಬಯಸುತ್ತಾರೆ. ಗುಜರಾತ್ನಲ್ಲಿ ಈಗಾಗಲೇ ಉದ್ಯಮಕ್ಕೆ ಪ್ರೋತ್ಸಾಹ ಮಾಡುವ ಮೂಲಕ ಗುಜರಾತನ್ನು ಉದ್ಯಮ ಸ್ನೇಹಿ ರಾಜ್ಯವನ್ನಾಗಿಸಿದ್ದಾರೆ. ಇಂತಹ ವ್ಯಕ್ತಿ ಭಾರತದ ಪ್ರಧಾನಿಯಾದರೆ
ಸತ್ಯ ನಾಡೆಲ್ಲರಂತ ಪ್ರತಿಭಾವಂತರ ಸೇವೆ ಭಾರತಕ್ಕೆ ಸಿಗುತ್ತದೆ. ಇದರಿಂದಾಗಿ ಮೈಕ್ರೋಸಾಫ್ಟ್,
ಆಪಲ್ ನಂತ ಕಂಪೆನಿಗಳನ್ನು ಮೀರಿಸುವ ಕಂಪನಿಗಳು ಭಾರತದಲ್ಲಿ ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಆಗಾಗಲಿ ಎಂಬ ನೀರಿಕ್ಷೆಯಲ್ಲಿ...
ರವಿತೇಜ ಶಾಸ್ತ್ರೀ
ಇದು ನಮ್ಮ ವ್ಯವಸ್ಥೆಯ ದೌರ್ಬಲ್ಯವೇ
ReplyDeleteಸರಿ,ಸರಿಪಡಿಸಲಿಕ್ಕಾಗದು ಈ ವ್ಯವಸ್ಥೆ,
ಅದಕ್ಕೆ ಕ್ರಾಂತಿ ಆಗಬೇಕೆಂದು ತೋರುತ್ತೆ,
ದೈವೀ ಪುರುಷ ಹುಟ್ಟಿ ಬರಬೇಕು
ಆ ದೈವೀ ಪುರುಷ ನಮೋ ಈಗಾಗಲೇ ಬಂದಿದ್ದಾನೆ. ಅವನನ್ನು ನಾವು ಬೆಂಬಲಿಸೋಣ.
Delete