Thursday, November 28, 2013

"ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ"

ಮಹಾನ್ ಕ್ರಾಂತಿಕಾರಿ ಸುಭಾಷರ ಸಾವಿನ ಬಗೆಗಿನ “ ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ” ಪುಸ್ತಕ ಓದುತ್ತಿದ್ದೇನೆ. ಸುಭಾಷರ ಸಾವಿನ ಇತಿಹಾಸವನ್ನು ತಿರಿಚಿರುವುದು ಬಹಳ ಬೇಸರದ ಸಂಗತಿ. ನೆಹರು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನೆಹರು ದೇಶಕ್ಕೆ ಕಂಟಕವಾಗಿದ್ದರು ಎಂಬುದು ನನ್ನ ಅಭಿಪ್ರಾಯ. ಪುಸ್ತಕದ ಲೇಖಕ  ಡಾ. ಕೆ. ಎಸ್. ನಾರಾಯಣಚಾರ್ಯ ಸುಭಾಷರ  ಬಗ್ಗೆ ನೆಹರುವಿನ  ನಿಲುವು ಹೇಗಿತ್ತು ಎಂದು ಈ ರೀತಿ ಬಣ್ಣಿಸುತ್ತಾರೆ “ ನೆಹರುಗೆ ನೇತಾಜಿ ಬದುಕಿರುವುದೇ ಬೇಡವಾಗಿತ್ತು!  ಭಯ! ತನ್ನ ಸ್ಥಾನಕ್ಕೆ ಚ್ಯುತಿ ಬಂದೀತೆಂದು! ರಷಿಯಾಕ್ಕೆ ನೇತಾಜಿ ಹೋಗಿ ಆಶ್ರಯ ಪಡೆದ ಬಗ್ಗೆ ಬ್ರಿಟಿಷರಿಗೆ ಬರೆದ ಪತ್ರದ ಹಿನ್ನೆಲೆಯು ಇದೆ ಇತ್ತು. ನೇತಾಜಿಯ ಜನಪ್ರಿಯತೆಯ ಮುಂದೆ ತನ್ನ ಮಾರೀಚ ಮಾಯಾಪ್ರಯೋಗ ಏನೂ ಮಾಡದೆಂಬ ಭಯ! ‘ ನೇತಾಜಿ ಎಲ್ಲೇ ಅಡಗಿರಲಿ, ಶಾಶ್ವತವಾಗಿ ಅಲ್ಲೇ ಇರಲಿ. ಸತ್ತ ಸುದ್ದಿಯೇ ಉರ್ಜಿತವಾಗಲಿ. ತಿಳಿದವರು ಬಾಯಿ ಬಿಡದೆ ಬೇರೆ ಎಲ್ಲೆಲ್ಲೋ ಅಡಗಿ ಸಾಯಲಿ. ಬಾಯಿ ಮುಚ್ಚಿಕೊಂಡಿದ್ದರೆ ಅದೇ ಉಪಕಾರ! ಇಂಥವರು ದೂರದಲ್ಲಿದ್ದರೆ ವಾಸಿ. ಭಾರತೀಯರು ಕೆದಕಿದರೂ ಸಮಾಚಾರ ತಿಳಿದಿರಬಾರದು. ಅಮೆರಿಕನ್ನರೂ ಬ್ರಿಟಿಷರೂ ಸಹ ಬಾಯಿ ಬಿಡಬಾರದು ’ ಎಂಬ ತವಕ, ತುಡಿತ, ಆತಂಕ ನೆಹರುರನ್ನು ತಿನ್ನುತ್ತಿತ್ತು.”
                    ನೇತಾಜಿ ಅವರ ಸಾವಿನ ರಹಸ್ಯದ ಬಗ್ಗೆ ಲೇಖಕರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹಲವು ಗ್ರಂಥಗಳನ್ನು ಅಧ್ಯಯನಮಾಡಿ, ಹಲವು ಮಾಹಿತಿ ಸಂಗ್ರಹಿಸಿ ಕೃತಿ ರಚಿಸಿದ್ದಾರೆ. ಭಾರತೀಯರೆಲ್ಲರೂ ಒಮ್ಮೆ ಓದಲೇಬೇಕಾದ ಪುಸ್ತಕ

No comments:

Post a Comment