ಲೂಸಿಯಾ ಚಿತ್ರ ನೋಡಿ ಒಂದು ವಾರವಾದರೂ ಚಿತ್ರದ
ಬಗ್ಗೆ ಬರೆಯಲಿಕ್ಕೆ ಸಾದ್ಯವಾಗಿರಲಿಲ್ಲ ಇವತ್ತು ಅದಕ್ಕೆ ಕಾಲಕೂಡಿಬಂತು.
ಲೂಸಿಯಾ ಕನ್ನಡ ಚಿತ್ರರಂಗದಲ್ಲಿ ವಿನೂತನ
ಪ್ರಯತ್ನವೆನ್ನಬಹುದು.ಪ್ರೇಕ್ಷಕರಿಂದಲೇ ಹಣ ಸಂಗ್ರಹಿಸಿ ಚಿತ್ರ ಮಾಡಿದ ಪವನ್ ಅವರ ಸಾಹಸ
ಮೆಚ್ಚಲೇಬೇಕು. ಲೂಸಿಯಾ ಚಿತ್ರಕ್ಕೆ ಹಣ ಹಾಕಲು ಯಾರು ಮುಂದೆ ಬರಲಿಲ್ಲವೆಂಬುದು ಬೇಸರದ ಸಂಗತಿ,
ಲೂಸಿಯಾ ಚಿತ್ರ ವಾಸ್ತವ ಮತ್ತು ಕನಸನ್ನು ಒಟ್ಟಿಗೆ ಪರದೆಯ ಮೇಲೆ ಹೊತ್ತು ಸಾಗುವ ಅದ್ಭುತ
ಸಿನಿಮಾ. ವಾಸ್ತವವನ್ನು ಕಪ್ಪುಬಿಳುಪಿನಲ್ಲಿ
ಮತ್ತು ಕನಸನ್ನು ಬಣ್ಣದಲ್ಲಿ ತೋರಿಸುವ ನಿರ್ದೇಶಕ ಪವನ್ ಕುಮಾರ್ ರವರ ಜಾಣ್ಮೆ ಶ್ಲಾಘನಿಯ. ಇದರ
ಅರ್ಥ ಕನಸಿನ ಮಾಯಾಲೋಕದಲ್ಲಿರುವರಿಗೆ ಕನಸೇ ವಾಸ್ತವಕ್ಕಿಂತ ಸುಂದರ ಎಂದು. ಒಬ್ಬ ಜನಪ್ರಿಯ ನಟ
ಟಾಕಿಸ್ನಲ್ಲಿ ಬ್ಯಾಟರಿ ಬಿಡುವ ಹುಡುಗನಂತೆ ಕನಸು ಕಾಣುವುದು ವಾಸ್ತವಕ್ಕೆ ದೂರವೆನಿಸಿದರೂ
ನಿರ್ದೇಶಕರ ಕಲ್ಪನೆ ಅದ್ಭುತ. ಲೂಸಿಯಾ ಚಿತ್ರ ಕೇವಲ ನೋಡಿದ ಮಾತ್ರಕ್ಕೆ ಅರ್ಥವಾಗುವುದಿಲ್ಲ
ಚಿತ್ರದ ಕಥಾವಸ್ತುವನ್ನು ಮನಸ್ಸಿನಲ್ಲಿ ವಿಮರ್ಶಿದಾಗ ಮಾತ್ರ ಚಿತ್ರ ಅರ್ಥವಾಗುತ್ತದೆ. ಕನ್ನಡ
ಚಿತ್ರಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ತೆಗೆಳುವವರು ಒಮ್ಮೆ ಲೂಸಿಯಾ ನೋಡಬೇಕು. ಇ
ಚಿತ್ರದ ಕಲಾವಿದರ ನಟನೆ ತುಂಬಾ ಚೆನ್ನಾಗಿದೆ. ನೀನಾಸಂ ಸತೀಶ್ರವರ ನಟನೆ ತಾನು ಕೇವಲ ಕಾಮಿಡಿ ಪಾತ್ರಗಳಿಗೆ ಸೀಮಿತವಲ್ಲ
ಎಂಬುದನ್ನು ನಿರೂಪಿಸುವಂತಿದೆ. ನಿರ್ದೇಶಕ ಪವನ್ ಕುಮಾರ್ ತಮ್ಮ ಪ್ರತಿಭೆಯನ್ನು ಚಿತ್ರಕ್ಕೆ
ದಾರೆಯೆರೆದಿದ್ದಾರೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ
ಮಿಂಚಿದ್ದಾರೆ. ಚಿತ್ರದ ಛಾಯಗ್ರಾಹಣ ಅದ್ಭುತವಾಗಿದೆ . ಇದರ ಸಂಪೂರ್ಣ ಕ್ರೆಡಿಟ್ ಸಿದ್ದಾರ್ಥ
ವರಗೆ ಸಲ್ಲಬೇಕು. ಚಿತ್ರದಲ್ಲಿ ದೋಷಗಳೇ ಇಲ್ಲ ಎಂದರೆ ತಪ್ಪಾಗುತ್ತದೆ. ಚಿತ್ರದ ಕೊನೆಯಲ್ಲಿ
ನಾಯಕಿ ಏಕೆ ನಾಯಕನನ್ನು ಎರೆಡು ಬಾರಿ ಕೊಲೆ ಮಾಡಲು ಪ್ರಯತ್ನಿಸುತ್ತಾಳೆ ಎಂಬ ಪ್ರಶ್ನೆಗೆ
ನಿರ್ದೇಶಕರು ಉತ್ತರ ಕೊಟ್ಟಿದರೆ ಚೆನ್ನಾಗಿರುತಿತ್ತು ಎಂದೆನಿಸುತ್ತದೆ ಮತ್ತು ಚಿತ್ರದ
ಕ್ಲೈಮಾಕ್ಸ್ನನ್ನು ನಿಧಾನವಾಗಿ ತೋರಿಸಿದ್ದರೆ ಚಿತ್ರ ಗೊಂದಲದಿಂದ ವಿಮುಕ್ತಿಯಾಗುತ್ತಿತೇನೋ? ಏನೇ ಅಗಲಿ ಒಂದು ವಿನೂತನ ಸಂಭಾಷಣೆ ಮತ್ತು ಒಳ್ಳೆ ಕತೆ ಇರುವ ಚಿತ್ರ ನೀಡಿರುವ ಪವನ್ ಅವರಿಗೆ
ಅಭಿನಂದನೆಗಳು.
ನೀ ಮಾಯೆಯೊಳಗೋ ಮಾಯೆ ನಿನ್ನೋಳಗೋ .....
ನೀ ಕನಸಿನಳೋಗೋ ಕನಸು ನಿನ್ನೋಳಗೋ.....
ಇಂತಿ
ರವಿತೇಜ ಶಾಸ್ತ್ರೀ
No comments:
Post a Comment