ಭಗತ್ ಸಿಂಗ್ ಅಂದರೆ ಕೇವಲ ವ್ಯಕ್ತಿಯಲ್ಲ ಆತ ಒಂದು
ಚೈತನ್ಯ ಪೂರ್ಣ ಯುವಶಕ್ತಿ. ಭಗತ್ ಸಿಂಗ್ರನ್ನು ನಾವು ಕೇವಲ ಒಂದು ವ್ಯಕ್ತಿಯಾಗಿ ನಮ್ಮ
ಇತಿಹಾಸದಲ್ಲಿ ಬಣ್ಣಿಸಿದ್ದೇವೆ. ಆದರೆ ಭಗತ್ ಸಿಂಗ್ ಅಂದರೆ ಒಂದು ಯುವಶಕ್ತಿ ಎಂದು ತಿಳಿಸುವಲ್ಲಿ
ಸ್ವಾಭಿಮಾನವೇ ಸತ್ತಂತಿರುವ ನಮ್ಮ ಗುಲಾಮಿ ಮಾನಸಿಕತೆಯ ಇತಿಹಾಸ ಸಂಪೂರ್ಣ ಸೋತಿದೆ.
ಭಗತ್ ಸಿಂಗ್ ನೇತಾಜಿ, ಸಾವರ್ಕರ್ ರಂತೆ
ದೂರದೃಷ್ಟಿತ್ವವುಳ್ಳ ನಾಯಕರಾಗಿದ್ದರು. ಭಗತ್ ಸಿಂಗ್ ಬೇರೆ ಎಲ್ಲರಂತೆ ಕೇವಲ ಸ್ವಾತಂತ್ರ್ಯ ಭಾರತದ ಕನಸು ಕಾಣಲಿಲ್ಲ,
ಅವರು ಸ್ವಾತಂತ್ರ್ಯ ನಂತರ ಭಾರತ ಹೇಗಿರಬೇಕೆಂಬ ಕನಸನ್ನು ಕಂಡಿದ್ದರು. ಅವರು ಸದಾ ದೇಶದ ಬಗ್ಗೆ
ಚಿಂತಿಸುತ್ತಿದ್ದರು, ತನ್ನ ದೇಶದ ಮುಂದಿನ
ಪೀಳಿಗೆ ಸುಖವಾಗಿರಬೇಕೆಂದು ಹಂಬಲಿಸುತ್ತಿದ್ದರು. ಹಾಗಾಗಿಯೇ ನಾನು ಅವರರನ್ನು ಒಂದು ಯುವಶಕ್ತಿ
ಎಂದು ಸಂಬೋದಿಸಿದ್ದು. ಇವತ್ತು ನಮ್ಮ ಯುವಜನತೆ ಭಗತ್ಸಿಂಗ್ ಎಂಬ ಶಕ್ತಿಯನ್ನು ಬಿಡಿ, ಅವರ
ಹೆಸರರನ್ನೇ ಮರೆತು ಬಿಟ್ಟಿದ್ದಾರೆ. ಬೆರೆಳೆಣಿಕೆಯ ಜನ ಮಾತ್ರ ಭಗತ್ ಸಿಂಗ್ ರೆಂದರೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ,
ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದರು ಎಂಬದನ್ನು ಅರಿತಿರಬಹುದು. ಆದರೆ ಭಗತ್ ಸಿಂಗ್ ರ ತತ್ವಗಳು,
ಆದರ್ಶಗಳು ಮತ್ತು ಅವರ ಬಗ್ಗೆ ನಾವು ಅರಿಯದ ಸತ್ಯಗಳು ಬಹಳಷ್ಟು ಇದೆ. ಈ ನಿಟ್ಟಿನಲ್ಲಿ ಆ
ಸತ್ಯಗಳನ್ನು ತಿಳಿಸುವುದೆ ನನ್ನ ಈ ಲೇಖನದ ಆಶಯ.
- ಭಗತ್ ಸಿಂಗ್ ಅಪ್ಪಟ ಅಹಿಂಸಾವಾದಿಯಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅವರು ಕ್ರಾಂತಿಯ ಮಾರ್ಗ ಹಿಡಿದರೂ ಅವರು ಹಿಂಸೆ ಮಾಡಲಿಲ್ಲ. ಭಗತ್ ಸಿಂಗರು “ ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ಕ್ರಾಂತಿಯು ವಿಚಾರಗಳ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ “ ಎಂದು ನಂಬಿದ್ದರು. ತಾನೂ ಅಹಿಂಸಾ ಮಾರ್ಗದಿಂದ ಗೆಲ್ಲಬಲ್ಲೆ ಎಂಬುದನ್ನು ತೋರಿಸಲು ಜೈಲಿನಲ್ಲಿ ಭಾರತೀಯ ಕೈದಿಗಳ ಹಕ್ಕು ಗಳಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದವರು.
- ಭಗತ್ ಸಿಂಗ್ ಹಿಂದಿ, ಪಂಜಾಬಿ, ಉರ್ದು,ಇಂಗ್ಲಿಷ್, ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಇಪ್ಪತ್ತರ ಆಸುಪಾಸಿನಲ್ಲೇ ಪಂಚಭಾಷೆಗಳಲ್ಲಿ ಪಾಂಡಿತ್ಯ ಸಾದಿಸಿದ್ದು ಅವರ ದೊಡ್ಡ ಸಾದನೆ.
- ಭಗತ್ ಸಿಂಗ್ ಓದಿನಲ್ಲಿ ಬಹಳ ಚುರುಕಾಗಿದ್ದರು. ಇತಿಹಾಸದ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಶಾಲೆ ಬಿಟ್ಟಿದ್ದ ಭಗತ್ ನೇರವಾಗಿ ’ ಪಂಜಾಬಿನ ಕೇಸರಿ’ ಲಾಲ ಲಜಪತ ರಾಯರ ನ್ಯಾಷನಲ್ ಕಾಲೇಜ್ ಗೆ ಪ್ರವೇಶ ಪಡೆದಿದ್ದು ಅವರ ಇತಿಹಾಸದ ಜ್ಞಾನದಿಂದಾಗಿಯೇ.
- ಭಗತ್ ಸಿಂಗ್ ಅವರಿಗೆ ಓದುವುದೆಂದರೆ ಬಹಳ ಹುಚ್ಚು. ಅವರು
ದೇಶಕ್ಕಾಗಿ ಪ್ರಾಣ ಅರ್ಪಿಸುವಾಗಲು ಒಂದು ಪುಸ್ತಕ ಓದುತ್ತಿದ್ದರು. ಭಗತ್ ಸಿಂಗ್ ಭಾರತ ಕಂಡ
ಅಪ್ರತಿಮ ದೇಶಭಕ್ತ ವಿನಾಯಕ ದಾಮೋದರ ಸಾವರ್ಕರ್ ಅವರ
- ಭಗತ್ ಸಿಂಗ್ ಕಾರ್ಲ್ ಮಾರ್ಕ್ಸ್, ಲೆನಿನ್. ಶಿವಾಜಿ, ರಾಣಾಪ್ರತಾಪ್ ಸಿಂಹ ರ ಬಗ್ಗೆ ಓದಿಕೊಂಡಿದ್ದರು. ಭಗತ್ ಸಿಂಗ್ ಅವರು ತಮ್ಮ ಕಾಲೇಜ್ ನಲ್ಲಿ ತರಗತಿಗಿಂತ ಗ್ರಂಥಾಲಯದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಭಗತ್ ಸಿಂಗ್ ಕಮ್ಯುನಿಸ್ಟ್ ರಾಗಿದ್ದರಾ? ಅಥವಾ ರಾಷ್ಟ್ರೀಯವಾದಿಯಾಗಿದ್ದರಾ? ಎಂಬ ಚರ್ಚೆ ಇಂದಿಗೂ ಇದೆ. ಆದರೆ ಅವರು ಅಪ್ರತಿಮ ದೇಶಭಕ್ತ ರಾಗಿದ್ದರು ಎಂಬುದಂತೂ ಸತ್ಯ. ಅವರು ಕ್ರಾಂತಿಯ ಹೋರಾಟದ ಬಗ್ಗೆ ತಿಳಿಯಲು ಕಮ್ಯುನಿಸ್ಟ್ ಸಿದ್ದಾಂತಗಳನ್ನು ಅದ್ಯಯನ ಮಾಡಿದ್ದರು, ಆದರೆ ಅವರು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಲಿಲ್ಲ. ಅವರು ಆರ್ಯ ಸಮಾಜದ ಸಿದ್ದಾಂತಗಳನ್ನು ನಂಬಿದ್ದರು. ಭಗತ್ ಸಿಂಗ್ ರ ತಾತ ಅರ್ಜುನ್ ಸಿಂಹ ಆರ್ಯ ಸಮಾಜದ ಪ್ರತಿನಿಧಿಯಾಗಿದ್ದರು.
- ಭಗತ್ ಸಿಂಗರ ಕುಟುಂಬ ದೇಶಭಕ್ತರ ಕುಟುಂಬವಾಗಿತ್ತು. ತಾತ ಅರ್ಜುನ್ ಸಿಂಹ, ತಂದೆ ಕಿಶನ್ ಸಿಂಗ್, ಚಿಕ್ಕಪ್ಪಂದಿರಾದ ಅಜಿತ್ ಸಿಂಹ, ಸ್ವರ್ಣ ಸಿಂಹ ಸ್ವಾತಂತ್ರ್ಯ ಹೋರಾಟಗರಾಗಿದ್ದರು. ಅಜಿತ್ ಸಿಂಹ ಮತ್ತು ಸ್ವರ್ಣ ಸಿಂಹ ಜೈಲು ಶಿಕ್ಷೆ ಅನುಭವಿಸಿದವರು.
- ಭಗತ್ ಅಂದರೆ ಭಾಗ್ಯವಂತ ಎಂದರ್ಥ. ಭಗತ್ ಹುಟ್ಟಿದ ದಿನವೇ ಅಜಿತ್ ಸಿಂಹ ಮತ್ತು ಸ್ವರ್ಣ ಸಿಂಹರಿಗೆ ಜೈಲಿನಿಂದ ಬಿಡುಗಡೆಯಾಯಿತು ಹಾಗಾಗಿ ಮಗುವಿಗೆ ಭಗತ್ ಎಂದು ನಾಮಕರಣ ಮಾಡಲಾಯಿತು. ಆದರೆ ಭಗತ್ ಸಿಂಗರು ಮನೆಗೆ ಮಾತ್ರವಲ್ಲದೆ ದೇಶಕ್ಕೆ ಭಾಗ್ಯವಂತರಾಗಿದ್ದರು.
ಹೀಗೆ ಭಗತ್ ಸಿಂಗ್ ಒಂದು
ಉತ್ಸಾಹ ಚಿಲುಮೆಯಾಗಿದ್ದರು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಡ ಬೇಕೆಂಬ ತುಡಿತ ಅವರ ಪ್ರತಿ
ನಡುವಳಿಕೆಯಲ್ಲೂ ವ್ಯಕ್ತವಾಗುತ್ತಿತ್ತು. ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಸತ್ತೂ
ಬದುಕುವುದು ಹೇಗೆ ಎಂದು ತೋರಿಸಿ ಕೊಟ್ಟವರು. ಭಗತ್ ಸಿಂಗ್ ಇಂದಿಗೂ ಯುವಕರ ಆಶಾಕಿರಣದಂತೆ
ಪ್ರಜ್ವಲಿಸುತ್ತಾರೆ. ಅವರ ದೂರದೃಷ್ಟಿತ್ವ, ಓದಿನ ದಾಹ, ದೇಶ ಭಕ್ತಿ , ಇತಿಹಾಸದ ಬಗೆಗಿನ ಆಸಕ್ತಿ
ಇವತ್ತು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಅದರಲ್ಲೂ ಯುವಕರ ಆದರ್ಶ ಪುರುಷನಾಗಬೇಕು. ಭಗತ್ ಸಿಂಗ್
ಎಂಬ ಯುವ ಶಕ್ತಿ ನಮ್ಮ ದೇಹ ಸೇರಬೇಕು. ಆಗ ಮಾತ್ರ ಭಾರತ ಜಗದ್ಗುರುವಾಗಲು ಸಾಧ್ಯ. ಈ ದಿನ ಆ ಕ್ರಾಂತಿಕಾರಿ ಹುತಾತ್ಮನ ಜನ್ಮ ದಿನ. ಆ ಮಹಾನ್
ಚೇತನವನ್ನ ಇವತ್ತು ನೆನೆಯೋಣ.
ಈ ದಿನ ಸುದಿನ ನಿನ್ನ
ಜನುಮ ದಿನ ಮಿಡಿಯಲಿ ನಮ್ಮೆಲ್ಲರ ಆತ್ಮ ಮನ.....
ಓ ಧೀರ ಹುತಾತ್ಮ
ನಿನಗಿದೋ ನನ್ನ ನಮನ.......
ಭಾರತ ಮಾತಾಕಿ ಜೈ
ಇಂಕ್ವಿಲಾಬ್ ಜಿಂದಾಬಾದ್
ವಂದೇ ಮಾತರಂ
ರವಿತೇಜ ಶಾಸ್ತ್ರೀ