Wednesday, January 29, 2014

Artha Krathi- A Economic Revolution

What is “Arthakranti Proposal” & Who hasgiven the proposal ?
“Arthakranti Proposal” has been given by a Pune (Maharashtra) based “Arthakranti Sansthan” which is an Economic Advisory body constituted by a group of Chartered Accountants and Engineers. This funda has been patented by the Sansthan.Arthakranti Proposal is an effective and guaranteed solution of BlackMoney Generation, Price rise & Inflation, Corruption, Fiscal Deficit, Unemployment,Ransom, GDP & industrial growth, terrorism and good governance.
What is in the Proposal
“Arthakranti Proposal has 5 point of actions simultaneously
(1) Scrap all 56 Taxes including income tax excluding import duty.(2) Recall & scrap high denomination currencies of 1000, 500 and 100 rupees
(3) All high value transaction to be made through banking system like cheque, DD, online, electronic.
(4) Fix Limit of cash transaction and no taxing on cash transaction.
(5) For Govt. revenue collection introducesingle point tax system through banking system –“Banking Transaction Tax (2% to 0.7%) on only Credit Amount not withdrawl amount.
Important Points to note:
(1) As on today total banking transaction is more than 2.7Lakh crores perday say more than 800 Lakh Crores Annually.
(2) Less than 20% transaction is made through Banking system as on today andmore than 80% transaction made in cashonly, which is not traceable.
(3)78% of Indian Population spend less than 20/- rupees daily why they need 1000/- rupee note.
What will happen if All 56Taxes includingincome tax scrapped :
(1) Salaried people will bring home more money which will increase purchasing power of the family.
(2) All commodities including Petrol, Diesel, FMCG will become cheaperby 35% to 52% .
(3) No question of Tax evading so no black money generation.
(4) Business sector will get boosted. So self employment.
What will happen if 1000/ 500/ 100 Rupees currency notes recalled and scrapped :
(1) Corruption through cash will stopped 100% .
(2) Black Money will either converted to white or will vanishedas Billions of 1000/500/100 currency notes stored in bags without use will become simple peace of papers.
(3) Unaccounted hidden huge cash is skyrocketing the prices of properties, Land, houses, jewellery etc and hard earnmoney is loosing its value; this trend will get stopped immediately.
(4) Kidnapping& ransom, “Supari Killing” will stopped,
(5)Terrorism supported by cash transactionwill stopped.
(6) Can not buy high value property in cash showing very less registry prices.
(7) Circulation of “Fake Currency” will stopped because fake currency printing for less value notes willnot be viable.
What will happen when Banking Transaction Tax (2% to 0.7%) is implemented :
(1) As on today if BTT is implemented govt can fetch 800x2%=16 Lakh Crore where as current taxing system is generating less than 14 Lakh Crore revenue.
(2) When 50% of total transaction will be covered by BTT sizing2000 to 2500 lakh Crores, Govt will need to Fix BTT as low as 1% to 0.7% and this will boost again banking transaction many fold.
(3) No separate machinery like income tax department is needed and tax amount will directly deposited in State/Central/District administration account same moment.
(4) As transaction tax amount will be very less, public will prefer it instead paying huge amount against directly/indirectly 56 taxes.
(5) There will be no tax evasion and govt will get huge revenue for development and employment generation.
(6) For any special revenue for special projects, govt can slightly raise BTT say from 1% to 1.2% and this 0.2% increase will generate 4,00,000 crores additional fund.
.Effect of “Arthakranti Proposal” if implemented today :
(1) Prices of all things will come down
(2) Salaried people will get more cash in hand.
(3) Purchasing power of Society will increased
(4) Demand will boosted, so is production and industrialisation and ultimately more employment opportunity for youth
(5) Surplus revenue to the govt for effective health/ education/ infrastructure/security/ social works.
(6)Cheaper and easy loans from banks, interest rate will come down. (7) Tendency of society will changes from scarcity to quality.
(8) Spare money for political system for clean politics,
(9) Prices of Land/ property will come down,
(10) No need to export beef to cover up trade deficit
(11) Sufficient fund for research and development.
(12) Society will be free from “Bad elements”.
Jai Hind

Source: SANJAY KUMAR MAURYA-AYODHYA-UP

Wednesday, January 22, 2014

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್


ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು 23, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦  ಜನರ  ‘ಆಜಾದ್ ಹಿಂದ್ ಫೌಜಎಂಬ ಸೇನೆಯನ್ನು ಕಟ್ಟಿ “ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು   ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ನೇತಾಜಿ ಸುಭಾಷ್ ಚಂದ್ರ ಬೋಸ್’.


ಸುಭಾಷರು  1897 ರ ಜನವರಿ 23ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ಸ್ವಾತಂತ್ಯ್ರ ಹೋರಾಟಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ಐ.ಸಿ.ಎಸ್ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ 4 ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

 1938ರಲ್ಲಿ ನಡೆದ 51 ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1939 ರಲ್ಲಿ  ಮತ್ತೊಮ್ಮೆ  ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ಪಟ್ಟಾಭಿ ಸೀತಾರಾಮಯ್ಯಹಾಗೂ ಸುಭಾಷ್ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.

 ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದುಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ  ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ಫಾರ್ವರ್ಡ್ ಬ್ಲಾಕ್ಸ್ಥಾಪಿಸಿದರು.
ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು 1941  ರಲ್ಲಿ , ಬ್ರಿಟಿಷ್ ಸರ್ಕಾರ 11 ನೆ  ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.. ಸ್ವಾತಂತ್ರ್ಯ ವೀರ ಸಾವರ್ಕರ್ ಮಾರ್ಗದರ್ಶನದಂತೆ ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.


ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ಐ.ಎನ್.ಎಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ಭಾರತ ಬಿಟ್ಟು ತೊಲಗಿಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .
ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು  ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು    ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ  ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ಆಜಾದ್ ಹಿಂದ್ ರೇಡಿಯೋಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ  “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.
1943 ರ ಅಕ್ಟೋಬರ್ 23 ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರವನ್ನು ಸ್ಥಾಪಿಸಿ ಮೊದಲ ಪ್ರಧಾನ ಮಂತ್ರಿಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ಜರ್ಮನಿ,ಜಪಾನ್,ಚೀನಾ,ಸಿಂಗಾಪುರಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ  ಸುಭಾಷರು ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ  ‘ಐ.ಎನ್.ಎಅಭಿಯಾನ.. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಸುಭಾಷರ ಪಡೆ  ಅಂಡಮಾನ್ ಹಾಗೂ ನಿಕೋಬಾರ್ದ್ವೀಪಗಳನ್ನು ವಶಪಡಿಸಿಕೊಂಡಿತು. ಸುಭಾಷರು ಈ ಪ್ರದೇಶಗಳಿಗೆ ಸ್ವರಾಜ್ ಹಾಗೂ ಶಹೀದ್ಎಂದು ನಾಮಕರಣ ಮಾಡಿದರು.

 ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ಐ.ಎನ್.ಎಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ಭಾರತ ಬಿಟ್ಟು ತೊಲಗಿಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ಇಂಫಾಲ್ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ  ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ಐ.ಎನ್.ಎಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು 1945 ರ ಆಗಸ್ಟ್ನಲ್ಲಿ  ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು ಅನ್ನುವ ಸುದ್ದಿಗಳು ಬಂದವು. ಬಹಳಷ್ಟು ಐ.ಎನ್ ಎ ಸೈನಿಕರನ್ನು  ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ  ‘ಕೋರ್ಟ್ ಮಾರ್ಷಲ್ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನೇತಾಜಿ ಯವರ ಐ.ಎನ್.ಎ ಮತ್ತು ಸಾವರ್ಕರ್ ರವರು ಭಾರತೀಯ ಯುವಕರನ್ನು ಪ್ರೇರೇಪಿಸಿ ಸೈನ್ಯಕ್ಕೆ ಸೇರಿಸಿದರ ಪರಿಣಾಮವಾಗಿ ಉಂಟಾದ  ನೌಕ ದಳದಬಂಡಾಯ  ಬ್ರಿಟಿಷರಿಗೆ ಚರಮ ಗೀತೆಯಾಯಿತು. ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ 1947 ರ ಆಗಸ್ಟ್ನಲ್ಲಿ  ಇಲ್ಲಿಂದ ತೊಲಗಿದರು. ಆದರೆ ಇದರ ಸಂಪೂರ್ಣ ಕ್ರೆಡಿಟನ್ನು ಅಹಿಂಸಾವಾದಿಗಳಿಗೆ ನೀಡಲಾಯಿತು. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ನೇತಾಜಿಯವರಿಗೆ ಅವಮಾನ ಮಾಡಲಾಯಿತು. ಈ ವ್ಯವಸ್ಥಿತ ಪಿತೂರಿಯ ರೂವಾರಿ ಬೇರಾರು ಅಲ್ಲ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು.

ನೇತಾಜಿಯ ಸಾವಿನ ಇತಿಹಾಸ ಒಂದು ನೋವಿನ ಅಧ್ಯಾಯ


ನೇತಾಜಿ ಸುಭಾಸ್ ಚಂದ್ರ ಬೋಸ್ 1945 ಅಗಸ್ಟ್ 23ರಂದು ಸಿಂಗಪುರದಿಂದ ಹೋರಾಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟರು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಆದರೆ ನೇತಾಜಿ ಅಂದು ಸಾಯಲಿಲ್ಲ. ಅವತ್ತು ಅಲ್ಲಿ ವಿಮಾನವೇ ಹಾರಲಿಲ್ಲ. ಅಗಸ್ಟ್ 23 1945ರಂದು ನೇತಾಜಿ ಸ್ಯೆಗಾನಿನಿಂದ ಬಾಂಬರ್ ವಿಮಾನದಲ್ಲಿ ಹೊರಟು ರಶಿಯಾ ಸೇರಿದ್ದರು. ಆದರೆ ನೆಹರು ನೇತಾಜಿ ಆಪ್ತ ಹಬೀಬುರ್ ರೆಹಮಾನ್ ಅವರಿಂದ ನೇತಾಜಿ ಸತ್ತರು ಎಂದು ಹೇಳಿಸಿದರು. ನಂತರ ನೇತಾಜಿ ರಶಿಯಾದಲ್ಲಿ ನೆಲೆಸಿದ್ದಾರೆ ಎಂದು ನೆಹರು ಬ್ರಿಟಿಷ್ ಪ್ರಧಾನಿ ಆಟ್ಲಿಗೆ ಪತ್ರ ಬರೆದರು. ಮತ್ತು ನೇತಾಜಿಯ ಸಾವಿನ ರಹಸ್ಯದ ಕಡತಗಳನ್ನು ಮರೆಮಾಚಿದರು.ಈ ಕುರಿತು ತಿಳಿದವರನ್ನು ಹೆದರಿಸಿ ಸುಳ್ಳನ್ನೇ ಸತ್ಯವೆಂದು ಜನರಿಗೇ ನಂಬಿಸಿದರು. ಜನರ ಕಣ್ಣೊರೆಸುವ ಪ್ರಯತ್ನವಾಗಿ ಕಾಂಗ್ರೆಸ್ ಸರ್ಕಾರಗಳು  ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ರಚಿಸಿದ  ಷಾ ನವಾಜ್ ಸಮಿತಿ ಮತ್ತು ಖೊಸ್ಲಾ ಸಮಿತಿಗಳು ನೇತಾಜಿ ಅವರು ವಿಮಾನಪಾಘತದಲ್ಲಿ ಮಡಿದರು ಎಂದು ವರದಿ ನೀಡಿದವು.

                   ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ಮುಖರ್ಜಿ ಸಮಿತಿಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ, ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು ನೇತಾಜಿ ನಿಗೂಡ ಅಂತ್ಯವನ್ನು  ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ನೇತಾಜಿ ಏನಾದರು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ.  ಸುಭಾಷರ ಕಣ್ಮರೆ ಅನ್ಯಾಯದ ಅಧ್ಯಾಯ ಪುಸ್ತಕದ ಪ್ರಕಾರ  1955ರಲ್ಲಿ ನೇತಾಜಿ ಭಾರತಕ್ಕೆ ಬಂದು ಯೋಗಿಬಾಬ, ಭಗವಾನ್ ಜಿಯಾಗಿ ಕೊನೆಗೆ 1988ರಲ್ಲಿ ಮಡಿದರು.( ಆದರೆ 1945ರ ನಂತರ ಏನಾದರು ಎಂಬುದಕ್ಕೆ ಸ್ಪಷ್ಟ ಉತ್ತರ ಇಂದಿಗೂ ಸಿಕ್ಕಿಲ್ಲ ).      

 ಜನವರಿ 23 ನೇತಾಜಿ ಸುಭಾಷ ಚಂದ್ರಬೋಸರ ಜನ್ಮ ದಿನ. ಆದರೆ ಜನವರಿ 23ನೇ ತಾರೀಖಿನ ಮಹತ್ವ ಇವತ್ತು ನಮ್ಮ ಶಾಲೆಯ ಮಕ್ಕಳಿಗೆ ತಿಳಿದಿಲ್ಲ. ತಮ್ಮ ಹೆಸರಿಗೆ “ ಗಾಂಧಿ ” ಎಂದು ಸೇರಿಸಿಕೊಂಡಿರುವ ಡೋಂಗಿ ಗಾಂಧಿವಾದಿಗಳ ಜನ್ಮ ದಿನಾಚರಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ಅಪ್ರತಿಮ ದೇಶ ಭಕ್ತ ಸುಭಾಷರನ್ನು ಅವರ ಜನ್ಮ ದಿನದಂದು ನೆನೆಯುವ ಪ್ರಯತ್ನವನ್ನು ಮಾಡುವುದಿಲ್ಲ. ದೇಶಭಕ್ತರನ್ನು ಗೌರವಿಸದೇ ಇರುವುದು ದೇಶ ದ್ರೋಹವೇ ಸರಿ. ನೇತಾಜಿಯಂತ ದೇಶಭಕ್ತರನ್ನು ಗೌರವಿಸುವುದು ಪ್ರತಿಯೊಬ್ಬ ನಿಜವಾದ ಭಾರತೀಯನ ಕರ್ತವ್ಯ. ಇಂದು ಅವರನ್ನು ಸ್ಮರಿಸೋಣ.     

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸರೇ  
ಭಾರತಾಂಬೆಯ ಧೀರ ಪುತ್ರರೆ
ನಿಮಗಿದೋ ನನ್ನ ನಮನ  
         
ಜೈ ಹಿಂದ್

ರವಿತೇಜ ಶಾಸ್ತ್ರೀ         

Saturday, January 4, 2014

ಒಂದೇ ನಾಣ್ಯದ ಎರಡು ಮುಖಗಳು ಎ.ಎ.ಪಿ ಮತ್ತು ಕಾಂಗ್ರೆಸ್

    

             
            ಡಿಸೆಂಬರ್ 8 ರಂದು ಪ್ರಕಟವಾದ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ದೇಶದಲ್ಲಿ ಬದಲಾವಣೆಯ ಗಾಳಿಬೀಸಿತು. 4 ರಾಜ್ಯಗಳಲ್ಲಿ ಬಿ.ಜೆ.ಪಿ ಪ್ರಚಂಡ ವಿಜಯ ಸಾಧಿಸಿದರೆ, ದಿಲ್ಲಿಯಲ್ಲಿ  ಯಾವುದೇ ಪಕ್ಷಕ್ಕೆ ಬಹುಮತಸಿಗದೇ ಅತಂತ್ರ ವಿಧಾನ ಸಭೆ  ಸೃಷ್ಟಿಯಾಯಿತು. 70 ಕ್ಷೇತ್ರಗಳಲ್ಲಿ ಬಿ.ಜೆ.ಪಿ 32, ಎ.ಎ,ಪಿ 28 ಮತ್ತು ಇತರರು 2 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಆಡಳಿತರೂಢ ಕಾಂಗ್ರೆಸ್ ಕೇವಲ 8 ಕ್ಷೇತ್ರಗಳನ್ನು ಗಳಿಸಿ ಹೀನಾಯವಾಗಿ ಸೋತಿತು. ಬಿ.ಜೆ.ಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಮಧ್ಯಮಗಳು ಇದು ಆಮ್ ಆದ್ಮಿ ಪಕ್ಷದ ಗೆಲವು ಎಂದು ಎ.ಎ.ಪಿ ಮತ್ತು ಅರವಿಂದ್ ಕೆಜ್ರಿವಾಲ್ ನನ್ನು ಕೊಂಡಾಡಿತು. ಕೆಜ್ರಿವಾಲ್ ನಾನು ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಘೋಷಿಸಿದರು. ಆದರೆ ಮುಂದೆ ಅಧಿಕಾರದ ಆಸೆಗೆ ಮರುಳಾದ ಕೆಜ್ರಿವಾಲ್ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದರು. ದೇಶದಲ್ಲಿ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆಂದು ಪೊರಕೆ ಹಿಡಿದು ರಾಜಕೀಯಕ್ಕೆ ಬಂದ ಅರವಿಂದ್ ಕೆಜ್ರಿವಾಲ್  ತಮ್ಮ ಆದರ್ಶಗಳನ್ನು ಗಾಳಿಗೆ ತೂರಿದರು. ಆದರೆ ಮಾಧ್ಯಮಗಳು ಎ.ಎ.ಪಿ ಗುಣಗಾನ ಮಾಡುವುದನ್ನು ನಿಲ್ಲಿಸಲಿಲ್ಲ. ಎ.ಎ.ಪಿ ಸರ್ಕಾರ ರಚಿಸಿದ್ದು ದೇಶದ ರಾಜಕೀಯ ಕ್ರಾಂತಿಯೆಂದು ಪುಟ ಗಟ್ಟಲೇ ಬರೆದವು.   ಭ್ರಷ್ಟ ಕಾಂಗ್ರೆಸ್ ಪಕ್ಷದ  ಬೆಂಬಲ ಪಡೆದು ಸರ್ಕಾರ ರಚಿಸಿದ ಕೆಜ್ರಿವಾಲ್ ರ ನಿರ್ಧಾರವನ್ನು ಯಾವುದೇ ಮಾಧ್ಯಮಗಳು ಪ್ರಶ್ನಿಸಲಿಲ್ಲ, ಅದರ ಕುರಿತು ಗಂಟೆಗಟ್ಟಲೆ ಚರ್ಚಿಸಲಿಲ್ಲ. ಎ.ಎ,ಪಿ – ಕಾಂಗ್ರೆಸ್ ಅನೈತಿಕ ಸಂಬಂಧವನ್ನು ಪ್ರಶ್ನಿಸುವ ಗೋಜಿಗೆ ಯಾವ ಮಾಧ್ಯಮಗಳು ಮುಂದಾಗಲಿಲ್ಲ.  ಅಣ್ಣ ಹಜಾರೆಯವರ ಭ್ರಷ್ಟಾಚಾರ ಆಂದೋಲನದಿಂದ ಪ್ರಸಿದ್ದಿ ಪಡೆದು ಚುನಾವಣೆ ಗೆದ್ದ ಅರವಿಂದ್ ಕೆಜ್ರಿವಾಲ್, ಭ್ರಷ್ಟ ಕಾಂಗ್ರೆಸ್ ಜೊತೆ ಕೈ ಜೋಡಿಸಿ  ಜನರಿಗೆ ಮೋಸ ಮಾಡಿದರು.
                                     ಅಧಿಕಾರ ಹಿಡಿದ ಹತ್ತೇ ದಿನದಲ್ಲಿ ಚುನಾವಣ ಪೂರ್ವದಲ್ಲಿ ಘೋಸಿಸಿದ ಎಲ್ಲ ಆಶ್ವಾಸನೆಗಳನ್ನು ಪೂರೈಸುತ್ತೆನೆಂದ ಕೆಜ್ರಿವಾಲ್, ಉಚಿತ ನೀರಿನ ಯೋಜನೆಯನ್ನು ಘೋಷಿಸಿದರು. ಮೊದಲು ಪ್ರತಿ ದಿನ 700 ಲೀಟರ್ ಉಚಿತ ನೀರು ನೀಡುತ್ತೇನೆಂದ ಕೆಜ್ರಿವಾಲ್ ನಂತರ ಯೋಜನೆ ಘೋಸಿಸುವ ವೇಳೆಗೆ 666 ಲೀಟರ್ ಗೆ ಇಳಿಸಿದರು. ಆದರೆ ಈ ಯೋಜನೆಯ ಪಲಾನುಭಾವಿಗಳು ಯಾರು ಗೊತ್ತೇ? ದೆಹಲಿಯ 38% ಕುಟುಂಬಗಳಿಗೆ ಜಲಮಂಡಳಿಯಿಂದ ಬರುವ ನೀರಿನ ಸಂಪರ್ಕವೇ ಇಲ್ಲ. 17.3% ರಷ್ಟು ಅನಧಿಕೃತ ಕಾಲೊನಿಗಳು ದೆಹಲಿಯಲ್ಲಿವೆ. 666 ಲೀಟರ್ ಯೋಜನೆ ಈ ಪ್ರದೇಶಗಳನ್ನು ಒಳಗೊಂಡಿಲ್ಲ. ಉಳಿದ 48.6% ಕುಟುಂಬಗಳು ಶ್ರೀಮಂತ ಕುಟುಂಬಗಳು, ಅಧಿಕಾರಿಗಳುಮತ್ತು  ಮಧ್ಯಮ ವರ್ಗವನ್ನು ಒಳಗೊಂಡ  ಕುಟುಂಬಗಳು. ಈ ಕುಟುಂಬಗಳೇ ಉಚಿತ ನೀರಿನ ಯೋಜನೆಯ ಪಲಾನುಭಾವಿಗಳು. ಆದರೆ ಶ್ರೀ ಸಾಮಾನ್ಯನಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಜನರ ಕಣ್ಣೊರೆಸುವ ತಂತ್ರವಷ್ಟೇ.
                    ಇನ್ನು ಅರವಿಂದ್ ಕೆಜ್ರಿವಾಲ್ ನ ಆಡಳಿತ ವೈಖರಿಯನ್ನು ಒಮ್ಮೆ ಗಮನಿಸಿದರೆ, ಕರ್ತವ್ಯವೆಸಗುವ ವೇಳೆಯಲ್ಲಿ ನಿಧನ ಹೊಂದಿದ ಪೇದೆಗೆ ಕೆಜ್ರಿವಾಲ್ ಸರ್ಕಾರ ಒಂದು ಕೋಟಿ ಪರಿಹಾರವನ್ನು ಘೋಷಿಸಿತು, ಈ ಮೊತ್ತ ಮುಂಬೈ ದಾಳಿಗೆ ಬಲಿಯಾದವರಿಗೆ ನೀಡಿದ ಪರಿಹಾರಕ್ಕಿಂತಲೂ ಹೆಚ್ಚು. ಇಷ್ಟು ಹಣವನ್ನು ಪರಿಹಾರವೆಂದು ಘೋಷಿಸುವ ಅವಶ್ಯಕತೆಯೇನಿತ್ತು? ಹೋದ ಜೀವವನ್ನು ಮರಳಿ ಕೊಡುವುದು ಅಸಾಧ್ಯದ ಮಾತು. ಆದರೆ ಸುಖಾಸುಮ್ಮನೆ ಜನರ ತೆರಿಗೆ ಹಣವನ್ನು ಪೋಲು ಮಾಡಿ ತಾನು ದಾನ ವೀರ ಶೂರ ಕರ್ಣನೆಂದು ಬಿಂಬಿಸಿಕೊಂಡರು ಅರವಿಂದ ಕೆಜ್ರಿವಾಲ್. ಖಂಡಿತ ನೊಂದ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಆದರೆ ವಿನಾಕಾರಣ ಜನರ ಹಣವನ್ನು ಪೋಲು ಮಾಡುವ ಅವಶ್ಯಕತೆ ಇರಲಿಲ್ಲ.ಅಧಿಕಾರ ವಹಿಸಿಕೊಂಡ ಕೊಂಡ ದಿನವೇ ಸರ್ಕಾರಿ ಬಂಗಲೆ, ಕೆಂಪು ಗೂಟದ ಕಾರನ್ನು ಉಪಯೋಗಿಸುವುದಿಲ್ಲವೆಂದ ಕೆಜ್ರಿವಾಲ್ ವಾರದಲ್ಲೇ 10 ಮಲಗುವ  ಕೋಣೆ ಇರುವ ಐಷಾರಾಮಿ ಬಂಗಲೆಗೆ ಹೋಗುವ ನಿರ್ಧಾರ ಮಾಡಿದರು. ಸರ್ಕಾರಿ ಸೌಲಭ್ಯ ಪಡೆಯುವ ಹಕ್ಕು ಮುಖ್ಯಮಂತ್ರಿಗೆ ಇದೆ. ಆದರೆ ನಾನು ಯಾವುದೇ ಸರ್ಕಾರಿ ಸೌಲಭ್ಯ ಪಡೆಯುವುದಿಲ್ಲವೆಂದು ಹೇಳಿ ನಂತರ ಪಡೆಯುವುದು ಜನರಿಗೇ ಮೋಸ ಮಾಡಿದಂತೆಯೇ ಆಗುತ್ತದೆ. 
                         ನಮ್ಮ ಸರ್ಕಾರ ಬಂದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಆದೇಶ ಮಾಡುತ್ತೇನೆಂದ ಕೆಜ್ರಿವಾಲ್ ಈಗ ಶೀಲ ದೀಕ್ಷಿತ್ ಸರ್ಕಾರದ ಭ್ರಷ್ಟಾಚಾರ ಕುರಿತು ದಾಖಲೆಯಿದ್ದರೆ ಕೊಡಿ ಎಂದು ಬಿ.ಜೆ,ಪಿ ಯನ್ನು ಕೇಳುವುದು ಎಂತ ಹಾಸ್ಯಾಸ್ಪದ ವಿಚಾರ. ಆಮ್ ಆದ್ಮಿ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವೆನ್ನುವುದರಲ್ಲಿ ಸಂಶಯವೇ ಇಲ್ಲ.ಕಾಂಗ್ರೆಸ್ ಪಕ್ಷಕ್ಕೆ ತಾವು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲವೆಂಬುದು ಅವರಿಗೆ ಇಗಲೇ ಖಾತ್ರಿಯಾಗಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿ.ಜೆ,ಪಿಯ ವಿಜಯಕ್ಕೆ ಸಂಚಾಕಾರ ತಂದಿಡುವುದೇ ಕಾಂಗ್ರೆಸ್ ನ ಗುರಿ. ಬಿ.ಜೆ.ಪಿ ಯ ಸಾಂಪ್ರದಾಯಿಕ ಮತಗಳಾದ ಸುಶಿಕ್ಷಿತ, ಪ್ರಜ್ಞಾವಂತ ಮತಗಳನ್ನು ವಿಭಜಿಸಲು  ಕಾಂಗ್ರೆಸ್ ಎ,ಎ,ಪಿ ಜೊತೆ ಕೈ ಜೋಡಿಸಿದೆ. ಇತಿಹಾಸವನ್ನು ಒಮ್ಮೆ ಗಮನಿಸಿದರೆ ಕಾಂಗ್ರೆಸ್ಸನ ಕುತಂತ್ರ ನೀತಿ ಬಯಲಾಗುತ್ತದೆ. 2009 ರಲ್ಲಿ ನಡೆದ ಆಂಧ್ರಪ್ರದೇಶ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿದ ಚಿರಂಜೀವಿ 18 ಸ್ಥಾನಗಳನ್ನು ಗೆದ್ದರು ಆದರೆ ಅಧಿಕಾರದ ಆಸೆಗೆ ಬಲಿಯಾದ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ ಜನತೆಗೆ ದ್ರೋಹ ಬಗೆದರು. ಕಾಂಗ್ರೆಸ್ ನಿಂದ ಸಿಡಿದೆದ್ದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ( N,C,P) ರಚಿಸಿದ ಶರದ್ ಪವಾರ್ ಇಂದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದೆ ಹಾದಿಯಲ್ಲಿ ಇಂದು ಎ.ಎ,ಪಿ ಪಕ್ಷ ಸಾಗುತ್ತಿದೆ. 
                       ನರೇಂದ್ರ ಮೋದಿ ಪ್ರಧಾನಿಯಾದರೆ, ತಮಗೆ ಅಧಿಕಾರ ಸಿಗುವುದು ಕನಸಿನ ಮಾತು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಕಾಂಗ್ರೆಸ್, ನರೇಂದ್ರ ಮೋದಿಯವರನ್ನು ಅಧಿಕಾರದಿಂದ ದೂರವಿಡಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನದ ಸಲುವಾಗಿಯೇ ಎ.ಎ.ಪಿ ಯನ್ನು ಅಖಾಡಕ್ಕೆ ಇಳಿಸಿದೆ. ಕಾಂಗ್ರೆಸ್ ಪಕ್ಷ ದೇಶ ಅಭಿವೃದ್ದಿಯನ್ನು ಮಾಡುವುದಿಲ್ಲ ಮತ್ತು ಅಭಿವೃದ್ದಿ ಮಾಡುವವರನ್ನು ಅಭಿವೃದ್ದಿ ಮಾಡಲು ಬಿಡುವುದಿಲ್ಲ ಅದು ಕಾಂಗ್ರೆಸ್ ನ ವಿಕೃತಿ. ಬಿ.ಜೆ .ಪಿ ಯಲ್ಲದೆ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೆ ಅದು ಕೊನೆಗೆ ಸೇರುವುದು ಕಾಂಗ್ರೆಸ್ ಗೆ.ಆದರೆ  ಕಾಂಗ್ರೆಸ್ ಪಕ್ಷದ ಮುಖವಾಡ ಧರಿಸಿರುವ ಎ.ಎ.ಪಿಯ ಕುರಿತು ಜನ ಜಾಗೃತವಾಗಬೇಕು, ನರೇಂದ್ರ ಮೋದಿ ಯೋಬ್ಬರೇ ಈ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ತಾಕತ್ತು ಇರುವ ನಾಯಕ ನಮೋ ಮಾತ್ರ. ಎ.ಎ.ಪಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಗಳೆರಡು ಒಂದೇ ನಾಣ್ಯದ ಎರಡು ಮುಖಗಳು. ಈ ಎರಡು ಪಕ್ಷಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಎ.ಎ.ಪಿ ನಿಜ ಬಣ್ಣ ಈಗಾಗಲೇ ಬಯಲಾಗಿದೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಬಗ್ಗೆ ಜನರಿಗೇ ಅಸಡ್ಡೆ ಉಂಟಾಗುವ ಕಾಲ ಬಹಳ ದೂರವಿಲ್ಲ.